Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಮ್ಡಿಸಿವಿರ್ ಖರೀದಿಸುವಾಗ ಇರಲಿ ಎಚ್ಚರ, ದೇಶಾದ್ಯಂತ ನಡೀತಿದೆ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ದಂಧೆ

ಕೊರೊನಾ ವಿರುದ್ಧ ಈಗ ಇಡೀ ಭಾರತವೇ ಹೋರಾಡುತ್ತಿದೆ. ಆದ್ರೆ, ಈ ಸಂಕಷ್ಟ ಸ್ಥಿತಿಯನ್ನೇ ಬಳಸಿಕೊಂಡು ಕೆಲ ಖದೀಮರು ದಂಧೆ ನಡೆಸ್ತಿದ್ದಾರೆ. ಜೀವ ಉಳಿಸುವ ಔಷಧಿಗಳನ್ನು ನಕಲಿಯಾಗಿ ತಯಾರಿಸಿ ದುಬಾರಿ ಬೆಲೆಗೆ ಮಾರಿ ಸೋಂಕಿತರ ಜೀವ ತೆಗೆಯುತ್ತಿದ್ದು, ಖಾಕಿ ದಂಧೆಕೋರರ ಬೇಟೆಯಾಡಿದೆ.

ರೆಮ್ಡಿಸಿವಿರ್ ಖರೀದಿಸುವಾಗ ಇರಲಿ ಎಚ್ಚರ, ದೇಶಾದ್ಯಂತ ನಡೀತಿದೆ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ದಂಧೆ
ರೆಮ್​ಡಿಸಿವಿರ್​​
Follow us
ಆಯೇಷಾ ಬಾನು
|

Updated on: May 09, 2021 | 8:23 AM

ದೆಹಲಿ: ದೇಶದಲ್ಲಿ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ದಂಧೆ ಜೋರಾಗಿದೆ. ಖದೀಮರು ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನ ತಯಾರಿಸಿ ಅಸಲಿ ರೆಮ್ಡಿಸಿವಿರ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಧ್ಯಪ್ರದೇಶ, ಗುಜರಾತ್ ಪೊಲೀಸರು ಈ ನಕಲಿ ರಹಸ್ಯವನ್ನ ಬಯಲಿಗೆಳೆದಿದ್ದಾರೆ.

ಗುಜರಾತ್ನ ಸೂರತ್ ಬಳಿ ಫಾರ್ಮ್ ಹೌಸ್ನಲ್ಲಿ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ಕಾರ್ಖಾನೆಯೇ ಆರಂಭವಾಗಿತ್ತು. ಕೌಶಲ್ ವೋಹ್ರಾ ಎಂಬಾತನೇ ಇದರ ಕಿಂಗ್ ಪಿನ್.

ನಕಲಿ ದಂಧೆ ರಹಸ್ಯ ಕಿಂಗ್ಪಿನ್ ಕೌಶಲ್ ವೋಹ್ರಾ, ತನ್ನ ಫಾರ್ಮ್ ಹೌಸ್ನಲ್ಲಿ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ತಯಾರಿಸುತ್ತಿದ್ದ. ತಾನು ತಯಾರಿಸಿದ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನು ಒಂದಕ್ಕೆ 1,700 ರೂಪಾಯಿಗೆ ಸುನಿಲ್ ಮಿಶ್ರಾ ಎಂಬಾತನಿಗೆ ಸೇಲ್ ಮಾಡ್ತಿದ್ದ. ಬಳಿಕ ಸುನಿಲ್ ಮಿಶ್ರಾ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನು ದೇಶದ ವಿವಿಧೆಡೆ ಸಾಗಿಸಿ ದುಬಾರಿ ಬೆಲೆಗೆ ಸೋಂಕಿತರಿಗೆ ಮಾರಾಟ ಮಾಡ್ತ್ತಿದ್ದ. ಸುನಿಲ್, ತಾನು 1,700 ರೂಪಾಯಿಗೆ ಖರೀದಿಸಿದ್ದ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ಗಳನ್ನು 35 ರಿಂದ 40 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ. ಮುಂಬೈನಲ್ಲಿ ಇಂಜೆಕ್ಷನ್ ಮೇಲಿನ ಸ್ಟಿಕರ್ಗಳನ್ನ ಪ್ರಿಂಟ್ ಮಾಡಲಾಗುತ್ತಿತ್ತು. ಅವುಗಳನ್ನ ತಂದು ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ಬಾಟಲಿ ಮೇಲೆ ಹಾಕಿ ಮಾರುತ್ತಿದ್ದರು.

ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ಖರೀದಿಸುತ್ತಿದ್ದ ಸುನಿಲ್, ಮಧ್ಯಪ್ರದೇಶದ ಇಂದೋರ್ ಸೇರಿ ವಿವಿಧೆಡೆ ತನ್ನ ಸಹಚರರಿಗೆ ನೀಡಿ ಮಾರಾಟ ಮಾಡಿಸುತ್ತಿದ್ದ. ಇಂದೋರ್ನ ವಿಜಯನಗರದಲ್ಲಿ ವ್ಯಕ್ತಿಯೊಬ್ಬ ಮಹಿಳೆಯರಿಗೆ ಮಾತ್ರ ಮಾರುತ್ತಿದ್ದ. ಪುರುಷರಿಗೆ ಇಂಜೆಕ್ಷನ್ ಮಾರುತ್ತಿರಲಿಲ್ಲ. ರೆಮ್ಡಿಸಿವಿರ್ ಇಂಜೆಕ್ಷನ್ ಬೇಕಾಗಿದ್ದ ಮಹಿಳೆಯೊಬ್ರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ರು. ಈ ಮಾಹಿತಿ ಆಧರಿಸಿ ರಹಸ್ಯ ದಾಳಿ ನಡೆಸಿದ ಖಾಕಿ ಟೀಂ, ಅಸಲಿ ರೆಮ್ಡಿಸಿವಿರ್ ಇಂಜೆಕ್ಷನ್ ಅಲ್ಲ. ನಕಲಿ ಇಂಜೆಕ್ಷನ್ ಅನ್ನೋದನ್ನ ಖಚಿತ ಪಡಿಸಿಕೊಂಡಿದೆ. ತಕ್ಷಣ ದಿನೇಶ್, ಧೀರಜ್ ಎಂಬಿಬ್ಬರನ್ನು ಖೆಡ್ಡಾಗೆ ಕೆಡವಿದೆ. ಈ ವೇಳೆ, ಸುನಿಲ್ ಮಿಶ್ರಾ ಹೆಸರು ರಿವೀಲ್ ಆಗಿದ್ದು, ಪೊಲೀಸರು ಆತನನ್ನೂ ಬಂಧಿಸಿದ್ದಾರೆ. ಸದ್ಯಕ್ಕೆ 1,200 ನಕಲಿ ಇಂಜೆಕ್ಷನ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಧ್ಯಪ್ರದೇಶ, ಗುಜರಾತ್ ಮಾತ್ರವಲ್ಲದೇ,Remdesivir ಭಾರತ-ನೇಪಾಳ ಗಡಿಯಲ್ಲೂ ನಕಲಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ ದಂಧೆ ನಡೆಯುತ್ತಿದ್ದು, ಅಲ್ಲೂ ಇಬ್ಬರನ್ನ ಪೊಲೀಸ್ರು ಬಂಧಿಸಿದ್ದಾರೆ. ದೆಹಲಿಯಲ್ಲಿ 5 ಸಾವಿರ ನಕಲಿ ರೆಮಿಡಿಸಿವಿರ್ ಇಂಜೆಕ್ಷನ್ ಮಾರಾಟ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

ಇದನ್ನೂ ಓದಿ: ರೆಮ್ಡಿಸಿವಿರ್ ಇಂಜೆಕ್ಷನ್ ಅಭಾವ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಘನಾ ಅಧ್ಯಕ್ಷ ಡಾ. ಹೆಚ್ ಎಮ್​ ಪ್ರಸನ್ನ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ