Kotak Mahindra Bank: ಖಾಸಗಿ ಬ್ಯಾಂಕ್ ಷೇರಿನ 10,000 ರೂಪಾಯಿ 20 ವರ್ಷದಲ್ಲಿ 64 ಲಕ್ಷ ರೂ.

ಆರು ತಿಂಗಳಿಗೋ ವರ್ಷಕ್ಕೋ ಒಂದೊಂದು ಮೊಬೈಲ್ ಫೋನ್ ಬದಲಾಯಿಸುವವರಿಗೆ 10- 20 ಸಾವಿರ ಲೆಕ್ಕಕ್ಕೇ ಇಲ್ಲ. ಆದರೆ ಈ ಲೇಖನದಲ್ಲಿದೆ ನೋಡಿ, 10 ಸಾವಿರ ರೂ.ಅನ್ನು 60 ಲಕ್ಷ ರೂಪಾಯಿ ಮಾಡಿಕೊಟ್ಟ ಖಾಸಗಿ ಬ್ಯಾಂಕ್​ ಷೇರಿನ ಕಥನ.

Kotak Mahindra Bank: ಖಾಸಗಿ ಬ್ಯಾಂಕ್ ಷೇರಿನ 10,000 ರೂಪಾಯಿ 20 ವರ್ಷದಲ್ಲಿ 64 ಲಕ್ಷ ರೂ.
ಕೊಟಕ್ ಮಹೀಂದ್ರಾ ಬ್ಯಾಂಕ್ ಈ ಬ್ಯಾಂಕ್​ನಿಂದ ಕೊಟಕ್ ಜೂನಿಯರ್ ಅಕೌಂಟ್​ಗೆ ವಾರ್ಷಿಕ ಶೇಕಡಾ 4ರ ವರೆಗಿನ ಬಡ್ಡಿಯನ್ನು ನೀಡುತ್ತದೆ. ಕೊಟಕ್ ಜೂನಿಯರ್ ಖಾತೆಯು ಮಗುವಿನ ಭವಿಷ್ಯಕ್ಕಾಗಿ ರೆಕರಿಂಗ್ ಡೆಪಾಸಿಟ್​ ಮತ್ತು ಎಸ್‌ಐಪಿ ರೂಪದಲ್ಲಿ ಸುಲಭ ಹೂಡಿಕೆಗೆ ಆಯ್ಕೆಗಳನ್ನು ಹೊಂದಿದೆ. ರೆಕರಿಂಗ್ ಡೆಪಾಸಿಟ್ ಅಥವಾ SIP ಅನ್ನು ಕನಿಷ್ಠ ಮೂರು ವರ್ಷಗಳ ಅವಧಿಗೆ ಆರಿಸಿಕೊಂಡರೆ ಖಾತೆದಾರರು ತಮ್ಮ ಮಗುವಿನ ಖಾತೆಯಲ್ಲಿ ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗಿಲ್ಲ. 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಪೋಷಕರ ಕೋರಿಕೆಯ ಮೇರೆಗೆ ಡೆಬಿಟ್ ಕಾರ್ಡ್‌ಗಳನ್ನು ನೀಡಲಾಗುವುದು ಮತ್ತು ಅವರ ದೈನಂದಿನ ವಿಥ್​ಡ್ರಾ ಮಿತಿಯು ರೂ. 5,000 ಮಾತ್ರ.
Follow us
Srinivas Mata
|

Updated on: May 10, 2021 | 8:09 PM

ಷೇರುಪೇಟೆಯ ಜಾದೂ ವಿವರಿಸುವುದು ಕಷ್ಟ. ಅಲ್ಲಿ 10,000 ರೂಪಾಯಿ ಎರಡು ದಶಕದಲ್ಲಿ ಕೋಟಿ ರೂಪಾಯಿಯೂ ಆಗಬಹುದು. ಅಥವಾ ಕೋಟಿ ರೂಪಾಯಿ ಕೂಡ ಏನೇನು ಮೌಲ್ಯ ಇಲ್ಲದಂತಾಗಬಹುದು. ನಾವು ಆರಿಸಿಕೊಳ್ಳುವ ಕಂಪೆನಿ ಫಂಡಮೆಂಟಲಿ ಬಲಿಷ್ಠವಾಗಿರಬೇಕು. ನಾವು ಅಂದುಕೊಂಡಂತೆಯೇ ರಿಟರ್ನ್ಸ್ ಕೊಡ್ತಾ ಹೋಗಬೇಕು. ಆಗ ನೋಡಿ, ಹತ್ತಾರು ಸಾವಿರ ರೂಪಾಯಿ ಲಕ್ಷಾಂತರ, ಕೋಟ್ಯಂತರ ರೂಪಾಯಿ ಆಗಬಹುದು. ಈ ದಿನ ನಿಮಗೆ ಒಂದು ಬ್ಯಾಂಕ್ ಷೇರಿನ ಬಗ್ಗೆ ಪರಿಚಯ ಮಾಡಿಸುತ್ತಿದ್ದೇವೆ. ಎರಡು ದಶಕಗಳ ಹಿಂದೆ ಯಾರು ಈ ಬ್ಯಾಂಕ್​ ಷೇರಿನ ಮೇಲೆ 10,000 ರೂಪಾಯಿ ಹಾಕಿ, ಇವತ್ತಿಗೂ ಅವುಗಳನ್ನು ಇರಿಸಿಕೊಂಡಿದ್ದರೆ ಅದರ ಮೌಲ್ಯ 64.14 ಲಕ್ಷ ರೂಪಾಯಿ. ಅಂದ ಹಾಗೆ ಆ ಬ್ಯಾಂಕ್​ನ ಹೆಸರು ಕೊಟಕ್ ಮಹೀಂದ್ರಾ ಬ್ಯಾಂಕ್.

ಈ ಅವಧಿಯಲ್ಲಿ ನಿವ್ವಳ ಲಾಭದ ಪ್ರಮಾಣ 140 ಪಟ್ಟು ಹೆಚ್ಚಾಗಿದ್ದರೆ, ಷೇರಿನ ಬೆಲೆಯಲ್ಲಿ ಶೇ 64 ಸಾವಿರದಷ್ಟು ಏರಿಕೆ ಕಂಡಿದೆ. ಮೇ ತಿಂಗಳ 9ನೇ ತಾರೀಕು 2001ನೇ ಇಸವಿಯಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್​ನ ಷೇರಿನ ಬೆಲೆ ರೂ. 2.78. ಅಂದರೆ ಮೂರು ರೂಪಾಯಿಗಿಂತ ಕಮ್ಮಿ. ಅದೇ ಮೇ 7, 2021ರ ಹೊತ್ತಿಗೆ 641 ಪಟ್ಟು ಹೆಚ್ಚಳವಾಗಿ ಅಡ್ಜಸ್ಟಡ್ ಬೆಲೆ 1,779.95 ರೂಪಾಯಿ ಮುಟ್ಟಿದೆ. 2021ರ ಜನವರಿಯಿಂದ ಮಾರ್ಚ್ ಅವಧಿಯಲ್ಲಿ ತ್ರೈಮಾಸಿಕ ಫಲಿತಾಂಶ ಬಂತಲ್ಲ ಅದರ ಪ್ರಕಾರ ವಿಶ್ಲೇಷಕರು ಕೊಟಕ್ ಮಹೀಂದ್ರಾ ಬ್ಯಾಂಕ್​ನ ಷೇರಿನ ಬಗ್ಗೆ ಮಿಶ್ರ ಅಭಿಪ್ರಾಯ ಹೊಂದಿದ್ದಾರೆ.

2019- 20ನೇ ಸಾಲಿನ ಅವಧಿಯ ಜನವರಿಯಿಂದ ಮಾರ್ಚ್ ತಿಂಗಳ ತ್ರೈಮಾಸಿಕಕ್ಕೆ ಹೋಲಿಸಿದರೆ, 2020- 21ನೇ ಸಾಲಿನ ಜನವರಿಯಿಂದ ಮಾರ್ಚ್ ತಿಂಗಳ ಫಲಿತಾಂಶ ಶೇ 32.82ರಷ್ಟು ಹೆಚ್ಚಳ ಆಗಿದೆ. ಮಾರ್ಚ್ 31ರ ಕೊನೆಗೆ 1,682.37 ಕೋಟಿ ಲಾಭ ಬಂದಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1266.60 ಕೋಟಿ ಲಾಭವಾಗಿತ್ತು. ಇನ್ನು ಪ್ರಮುಖ ಬ್ರೋಕರೇಜ್ ಸಂಸ್ಥೆಗಳು ಈ ಬ್ಯಾಂಕ್​ ಷೇರಿನ ಬಗ್ಗೆ ಏನು ಶಿಫಾರಸು ಮಾಡುತ್ತಾರೆ ಅಂತ ನೋಡುವುದಾದರೆ, ಮೋತಿಲಾಲ್ ಓಸ್ವಾಲ್ ನ್ಯೂಟ್ರಲ್ ದೃಷ್ಟಿಕೋನ ಹೊಂದಿದ್ದು, ರೂ. 1900ರ ದರದ ಗುರಿ ಹೊಂದಿದೆ. ಎಚ್​ಡಿಎಫ್​ಸಿ ಸೆಕ್ಯೂರಿಟೀಸ್ ರೆಡ್ಯೂಸ್ ರೇಟಿಂಗ್ ನೀಡಿದೆ. 1747 ರೂಪಾಯಿ (ಈ ಹಿಂದೆ 1707 ರೂಪಾಯಿ ಇತ್ತು)ಗೆ ಗುರಿ ಪರಿಷ್ಕರಣೆ ಮಾಡಿದೆ. ಇನ್ನು ಎಮ್ಕೆ ಗ್ಲೋಬಲ್ ಫೈನಾನ್ಷಿಯಲ್ ಸರ್ವೀಸಸ್ 2000 ರೂಪಾಯಿಯ ದರದ ಗುರಿಯೊಂದಿಗೆ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರು ಹೋಲ್ಡ್ ಶಿಫಾರಸು ಮಾಡಿದೆ.

(ಈ ಲೇಖನವು ಮಾಹಿತಿಗಾಗಿ ಮಾತ್ರ. ಇದರ ಆಧಾರದಲ್ಲಿ ಷೇರು ಖರೀದಿ ಮಾಡಿ, ನಷ್ಟ ಅನುಭವಿಸಿದಲ್ಲಿ ಅದಕ್ಕೆ ಲೇಖಕರಾಗಲೀ ಅಥವಾ ಟಿವಿ9 ನೆಟ್​ವರ್ಕ್​ನ ಯಾವುದೇ ಸಂಸ್ಥೆಯಾಗಲಿ ಜವಾಬ್ದಾರಿ ಅಲ್ಲ. ಹೂಡಿಕೆ ವಿಚಾರದಲ್ಲಿ ಹಣಕಾಸಿನ ಅಪಾಯ ಇರುತ್ತದೆ. ತಜ್ಞರ ಸಲಹೆ ಪಡೆದು, ಆ ನಂತರ ನೀವೇ ತೀರ್ಮಾನ ಕೈಗೊಳ್ಳಿ.)

ಮಾಹಿತಿ: ಮನಿ9.ಕಾಮ್

ಇದನ್ನೂ ಓದಿ: 10,000 ರೂಪಾಯಿ ಹೂಡಿದವರಿಗೆ 20 ವರ್ಷದಲ್ಲಿ 2 ಕೋಟಿ ಮಾಡಿಕೊಟ್ಟ ಕಂಪೆನಿಯ ಕಥೆಯಿದು

(Investment of Rs 10,000 in Kotak Mahindra Bank shares become Rs 60 lakhs in 20 years)

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ