SBI cash withdrawal: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಗದು ವಿಥ್​ಡ್ರಾ ನಿಯಮ ಬದಲಾವಣೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ನಗದು ವಿಥ್​ಡ್ರಾ ನಿಯಮಗಳನ್ನು ಬದಲಾವಣೆ ಮಾಡಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದನ್ನು ಜಾರಿಗೆ ತರಲಾಗಿದೆ.

SBI cash withdrawal: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಗದು ವಿಥ್​ಡ್ರಾ ನಿಯಮ ಬದಲಾವಣೆ
ಸಾಂದರ್ಭಿಕ ಚಿತ್ರ
Follow us
Srinivas Mata
| Updated By: Digi Tech Desk

Updated on:May 28, 2021 | 8:44 PM

ಕೊರೊನಾ ಬಿಕ್ಕಟ್ಟನ್ನು ಗಮನದಲ್ಲಿ ಇಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ನಗದು ವಿಥ್​ಡ್ರಾ ನಿಯಮಗಳನ್ನು ಬದಲಾಯಿಸಿದೆ. ಬ್ಯಾಂಕ್ ಶಾಖೆಗೆ ಹೋಗಿ ಹಣವನ್ನು ಹಿಂಪಡೆಯುವ ನಗದು ಮಿತಿಯನ್ನು ಸಹ ಹೆಚ್ಚಿಸಿದೆ. ವಾಸ್ತವವಾಗಿ, ಹೋಮ್​ ಬ್ರ್ಯಾಂಚ್ ಅಲ್ಲದ (ಖಾತೆ ಹೊಂದಿರದ ಶಾಖೆಯಿಂದ) ಹಣವನ್ನು ಹಿಂತೆಗೆದುಕೊಳ್ಳುವ ಮಿತಿಯನ್ನು ಸಹ ಹೆಚ್ಚಿಸಿದೆ. ಇದರಿಂದಾಗಿ ಅನೇಕ ಗ್ರಾಹಕರು ಅನುಕೂಲ ಪಡೆಯಲಿದ್ದಾರೆ. ಈ ನಿಯಮದಿಂದ, ತಮ್ಮ ನಗರದ ಹೊರಗೆ ವಾಸಿಸುವ ಜನರು ಸಹ ಈಗ ಬ್ಯಾಂಕಿನಿಂದ ಹೆಚ್ಚಿನ ಹಣವನ್ನು ಸುಲಭವಾಗಿ ಹಿಂಪಡೆಯಲು ಸಾಧ್ಯವಾಗುತ್ತದೆ.

ಎಸ್‌ಬಿಐ ನಗದು ಹಿಂಪಡೆಯುವ ಮಿತಿಯನ್ನು 50 ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಿದೆ. ಅಂದರೆ, ಬ್ಯಾಂಕ್ ಈ ಮಿತಿಯನ್ನು ದ್ವಿಗುಣಗೊಳಿಸಿದೆ, ಇದು ಬಹಳಷ್ಟು ಜನರಿಗೆ ಪ್ರಯೋಜನ ನೀಡುತ್ತದೆ. ಮನಿ9.ಕಾಮ್ ವರದಿಯ ಪ್ರಕಾರ, ಎಸ್‌ಬಿಐ ಹೋಮ್ ಬ್ರ್ಯಾಂಚ್ ಅಲ್ಲದ ಶಾಖೆಯ ಮೂಲಕ ಹಿಂಪಡೆಯುವ ಹಣವನ್ನು ದಿನಕ್ಕೆ 1 ಲಕ್ಷ ರೂಪಾಯಿಗೆ ದ್ವಿಗುಣಗೊಳಿಸಿದೆ. ಮೊದಲು ಈ ಮಿತಿ 50 ಸಾವಿರ ರೂಪಾಯಿ ಇತ್ತು. ಸರಳವಾಗಿ ಹೇಳುವುದಾದರೆ, ಮೊದಲಿಗೆ ಒಂದು ದಿನದಲ್ಲಿ ಹೋಮ್ ಬ್ರ್ಯಾಂಚ್ ಆಚೆಯ ಶಾಖೆಯಿಂದ 50,000 ರೂಪಾಯಿ ಹಿಂಪಡೆಯಬಹುದಿತ್ತು. ಆದರೆ ಈಗ 1 ಲಕ್ಷ ರೂಪಾಯಿ ವಿಥ್​ಡ್ರಾ ಮಾಡಬಹುದು.

ಪಾಸ್​ಬುಕ್​ ಮೂಲಕ ಹಣ ಹಿಂಪಡೆಯುವ ಮಿತಿಯೂ ಹೆಚ್ಚಾಗಿದೆ ಚೆಕ್‌ಗಳಿಂದ ಹಣವನ್ನು ಹಿಂಪಡೆಯುವ ಮಿತಿಯನ್ನು ಹೆಚ್ಚಿಸುವುದರ ಜೊತೆಗೆ, ಪಾಸ್‌ಬುಕ್‌ ಮೂಲಕ ಹಣವನ್ನು ಹಿಂಪಡೆಯುವ ಮಿತಿಯನ್ನು ಸಹ ಹೆಚ್ಚಿಸಲಾಗಿದೆ. ಈ ಮೊದಲು, ಉಳಿತಾಯ ಖಾತೆ ಪಾಸ್‌ಬುಕ್ ಮೂಲಕ ದಿನಕ್ಕೆ ಕೇವಲ ಐದು ಸಾವಿರ ರೂಪಾಯಿಗಳನ್ನು ಮಾತ್ರ ಹಿಂಪಡೆಯಬಹುದಿತ್ತು. ಅದನ್ನು ಈಗ ಐದು ಪಟ್ಟು ಹೆಚ್ಚಿಸಲಾಗಿದೆ. ಈಗ ಬ್ಯಾಂಕ್ ಗ್ರಾಹಕರು ಪಾಸ್ ಬುಕ್ ಮೂಲಕ 25 ಸಾವಿರ ರೂಪಾಯಿಗಳನ್ನು ಹಿಂಪಡೆಯಬಹುದು. ಹೋಮ್ ಬ್ರ್ಯಾಂಚ್ ಮತ್ತು ಹೋಮ್ ಬ್ರ್ಯಾಂಚ್​ ಹೊರತಾದ ವಹಿವಾಟಿನ ಮೇಲೆ ಈ ನಿಯಮ ಅನ್ವಯವಾಗುತ್ತದೆ. ಅದೇ ವೇಳೆ, ಥರ್ಡ್ ಪಾರ್ಟಿ ನಗದು ಹಿಂಪಡೆಯುವುದಕ್ಕೆ 50 ಸಾವಿರ ರೂಪಾಯಿಗಳವರೆಗೆ ಅನುಮತಿ ನೀಡಲಾಗಿದೆ. ಕೊರೊನಾ ಕಾಲದಲ್ಲಿ ಜನರು ತಮ್ಮ ಬಳಿ ಹೆಚ್ಚು ಹಣವನ್ನು ಇಟ್ಟುಕೊಳ್ಳುವುದಕ್ಕೆ ಬಯಸುತ್ತಾರೆ. ಆದ್ದರಿಂದ ನಗದು ವಹಿವಾಟು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಎಟಿಎಂನಿಂದ ಹಣ ಹಿಂಪಡೆಯಲು ಶುಲ್ಕ ಲೈವ್ ಮಿಂಟ್ ವರದಿಯ ಪ್ರಕಾರ, ಉಳಿತಾಯ ಖಾತೆದಾರರು ತಿಂಗಳಿಗೆ 4 ಬಾರಿ ಯಾವುದೇ ಶಾಖೆ ಅಥವಾ ಎಟಿಎಂನಿಂದ ಹಣವನ್ನು ಹಿಂಪಡೆಯಲು ಸಾಧ್ಯ. ಆ ನಂತರ ಖಾತೆದಾರರು ಎಸ್‌ಬಿಐ ಎಟಿಎಂನಿಂದ ಅಥವಾ ಎಸ್‌ಬಿಐ ಹೊರತಾಗಿ ಬೇರೆ ಶಾಖೆಯಿಂದ ಹಣ ತೆಗೆದರೂ ಅದಕ್ಕೆ 15 ರೂಪಾಯಿ ಮತ್ತು ಜಿಎಸ್‌ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ನಿಯಮಗಳು ಜುಲೈ 1ರಿಂದ ಜಾರಿಗೆ ಬರಲಿವೆ. ಆರ್‌ಬಿಐ ನಿಯಮಗಳ ಪ್ರಕಾರ, ಬೇಸಿಕ್ ಉಳಿತಾಯ ಖಾತೆಗಳಿಗೆ ಇದರಿಂದ ವಿನಾಯಿತಿ ಇದೆ. ಬೇಸಿಕ್ ಸೇವಿಂಗ್ ಖಾತೆಗಳೆಂದರೆ, ಇದು ಶೂನ್ಯ ಬ್ಯಾಲೆನ್ಸ್ ಖಾತೆಯಾಗಿರುತ್ತದೆ. ಅದನ್ನು ಯಾರಾದರೂ ತೆರೆಯಬಹುದು. ಅದರಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಬೇಕು ಅಂತೇನೂ ಇಲ್ಲ.

ಇದನ್ನೂ ಓದಿ: ಡಿಜಿಟಲ್​ ಪೇಮೆಂಟ್​ನಲ್ಲಿ ಕ್ಯೂಆರ್​ ಕೋಡ್​ ಸ್ಕ್ಯಾನ್ ಮಾಡಲೇಬೇಡಿ; ಗ್ರಾಹಕರನ್ನು ಎಚ್ಚರಿಸಿದ ಎಸ್​ಬಿಐ

(Here is the latest updates from SBI. Cash withdrawal rules has been changed due to corona second wave)

Published On - 8:42 pm, Thu, 27 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ