H-1B Visa: ಅಮೆರಿಕದ ಎಚ್1ಬಿ ವೀಸಾ ಸ್ಕೀಮ್; ಇಂದಿನಿಂದ ಹೊಸ ನಿಯಮಗಳು ಜಾರಿ
H-1B Visa programme: ಅಮೆರಿಕವು ಎಚ್-1ಬಿ ವೀಸಾ ಮೂಲಕ ವಿದೇಶಗಳಿಂದ ಕೌಶಲ್ಯವಂತ ಕೆಲಸಗಾರರನ್ನು ತಾತ್ಕಾಲಿಕವಾಗಿ ಕರೆತರುತ್ತದೆ. ಪ್ರಸಕ್ತ ಆಡಳಿತವು ಈ ವಿಶೇಷ ವೀಸಾದಲ್ಲಿ ಕೆಲ ನಿಯಮಗಳನ್ನು ಪರಿಷ್ಕರಿಸಿದೆ. ಇಂದಿನಿಂದ ಹೊಸ ನಿಯಮಗಳು ಚಾಲ್ತಿಗೆ ಬಂದಿವೆ. ಅಮೆರಿಕ ವಿತರಿಸುವ ಎಚ್-1ಬಿ ವೀಸಾದಲ್ಲಿ ಮುಕ್ಕಾಲು ಪಾಲು ಭಾರತೀಯರಿಗೆ ಸಿಗುತ್ತವೆ.
ನವದೆಹಲಿ, ಜನವರಿ 17: ಭಾರತೀಯರಿಗೆ ಮಹತ್ವ ಎನಿಸುವ ಎಚ್ 1ಬಿ ವೀಸಾ ಯೋಜನೆಯಲ್ಲಿ ಅಮೆರಿಕ ಸರ್ಕಾರ ಕೆಲ ಮಹತ್ವದ ಬದಲಾವಣೆಗಳನ್ನು ತಂದಿದೆ. ಹೊಸ ಎಚ್1ಬಿ ವೀಸಾ ನಿಯಮಗಳು ಇಂದಿನಿಂದ ಜಾರಿಗೆ ಬರಲಿವೆ. ವಿದೇಶಗಳಿಂದ ಸೂಕ್ತವಾದ ಪ್ರತಿಭಾನ್ವಿತ ನೌಕರರನ್ನು ಅಮೆರಿಕಕ್ಕೆ ತರಲು ಈ ನಿಯಮಗಳು ನೆರವಿಗೆ ಬರುವ ನಿರೀಕ್ಷೆ ಇದೆ. 2023ರಲ್ಲಿ ಅಮೆರಿಕದಿಂದ 3,86,000 ಎಚ್ 1ಬಿ ವೀಸಾಗಳನ್ನು ನೀಡಲಾಗಿತ್ತು. ಇದರಲ್ಲಿ ಶೇ. 72.3ರಷ್ಟು ವೀಸಾಗಳು ಭಾರತೀಯರ ಪಾಲಾಗಿದ್ದವು. ಸಾಮಾನ್ಯವಾಗಿ ಎಚ್1ಬಿ ವೀಸಾದಲ್ಲಿ ಹೆಚ್ಚಿನವನ್ನು ಭಾರತೀಯರೇ ಪಡೆಯುತ್ತಾರೆ. ಅಮೆರಿಕಕ್ಕೆ ಅಗತ್ಯವಾಗಿರುವ ವಿಶೇಷ ಕೌಶಲ್ಯಗಳ ಉದ್ಯೋಗಗಳಿಗೆ ಭಾರತೀಯರಿಗೆ ಪ್ರಾಶಸ್ತ್ಯ ನೀಡಲಾಗುತ್ತಿರುವುದು ಇದಕ್ಕೆ ಕಾರಣ.
ಎಚ್1ಬಿ ವೀಸಾ ಯಾಕಿದೆ?
ಎಚ್ 1ಬಿ ವೀಸಾವನ್ನು ಅಮೆರಿಕ ನೀಡುತ್ತದೆ. ವಿದೇಶಗಳಲ್ಲಿರುವ ವಿಶೇಷ ಕೌಶಲ್ಯಗಳಿರುವ ಉದ್ಯೋಗಿಗಳನ್ನು ಸೀಮಿತ ಅವಧಿಯವರೆಗೆ ಅಮೆರಿಕಕ್ಕೆ ತಂದು ಕೆಲಸ ಮಾಡಿಸಲು ಈ ವೀಸಾವನ್ನು ನೀಡಲಾಗುತ್ತದೆ. ತಾತ್ಕಾಲಿಕ ಅವಧಿಯವರೆಗೆ ಮಾತ್ರ ಈ ವೀಸಾದಡಿ ಅಮೆರಿಕದಲ್ಲಿ ಉಳಿಯಲು ಅವಕಾಶ ಇರುತ್ತದೆ. ವರ್ಷಕ್ಕೆ ನಿಗದಿತ ಪ್ರಮಾಣದಲ್ಲಿ ಮಾತ್ರವೇ ಎಚ್-1ಬಿ ವೀಸಾಗಳನ್ನು ಅಮೆರಿಕ ವಿತರಿಸುತ್ತದೆ.
ಇದನ್ನೂ ಓದಿ: ಪಿಎಂ ಇಂಟರ್ನ್ಶಿಪ್ ಸ್ಕೀಮ್; ಶೇ. 80ಕ್ಕೂ ಹೆಚ್ಚು ಭಾರತೀಯ ಕಂಪನಿಗಳಿಂದ ಬೆಂಬಲ
ಎಚ್1ಬಿ ವೀಸಾದಲ್ಲಿ ಹೊಸ ನಿಯಮಗಳೇನಿವೆ?
ಅಮೆರಿಕವು ಎಚ್-1ಬಿ ವೀಸಾ ಯೋಜನೆಯನ್ನು ಆಧುನೀಕರಣಗೊಳಿಸಿದೆ. ವೀಸಾ ಅನುಮೋದನೆ ಪ್ರಕ್ರಿಯೆ ಸರಳಗೊಳಿಸಲು, ಹಾಗೂ ಅಮೆರಿಕನ್ ಕಂಪನಿಗಳು ಕೌಶಲ್ಯವಂತ ತಂಡಗಳನ್ನು ಉಳಿಸಿಕೊಳ್ಳಲು ಅನುವಾಗುವ ರೀತಿಯಲ್ಲಿ ನಿಯಮಗಳನ್ನು ಪರಿಷ್ಕರಿಸಲಾಗಿದೆ.
ಸ್ಪೆಷಲೈಸ್ಡ್ ವರ್ಕ್ ವ್ಯಾಖ್ಯಾನ ಬದಲು
ಒಂದು ಗಮನಾರ್ಹ ಬದಲಾವಣೆ ಎಂದರೆ ಅದು ಎಚ್1ಬಿ ವೀಸಾ ಯೋಜನೆಯಲ್ಲಿನ ವಿಶೇಷ ಕೆಲಸದ ಬಗ್ಗೆ ಇರುವ ವ್ಯಾಖ್ಯಾನದಲ್ಲಿನ ಬದಲಾವಣೆ. ಅದರ ಪ್ರಕಾರ, ನೀವು ಓದಿದ ಡಿಗ್ರಿಗೂ ಮತ್ತು ಮಾಡುವ ಕೆಲಸಕ್ಕೂ ಸಾಮ್ಯತೆ ಇರಬೇಕು. ಅಂದರೆ, ನೀವು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮಾಡಿ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ ಅದನ್ನು ಸ್ಪೆಷಲೈಸ್ಟ್ ವರ್ಕ್ ಎಂದು ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ: ಮೊಬೈಲ್ ನಂಬರ್ ರೀತಿ ನಿಮ್ಮ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಯನ್ನೂ ಪೋರ್ಟ್ ಮಾಡಬಹುದಾ? ಇಲ್ಲಿದೆ ಡೀಟೇಲ್ಸ್
ಸ್ಟುಡೆಂಟ್ ವೀಸಾದಿಂದ ಎಚ್1ಬಿಗೆ ಸುಲಭವಾಗಿ ಬದಲಾವಣೆ
ಅಮೆರಿಕದಲ್ಲಿ ಪೂರ್ಣಪ್ರಮಾಣದಲ್ಲಿ ಓದಲು ಹೋಗಬೇಕಾದರೆ ಎಫ್1 ವೀಸಾ ಪಡೆಯಬೇಕು. ಈ ವೀಸಾದಲ್ಲಿ ಹೋಗಿರುವ ವಿದ್ಯಾರ್ಥಿಗಳು ಓದು ಮುಗಿದ ಬಳಿಕ ಎಚ್1ಬಿ ವೀಸಾಗೆ ಸುಲಭವಾಗಿ ಪರಿವರ್ತನೆ ಹೊಂದಬಹುದು.
ಎಚ್-1ಬಿ ವೀಸಾಗಳ ವಿತರಣೆಯಲ್ಲಿ ಮಿತಿ ಇರುತ್ತದೆ. ಆದರೆ, ಲಾಭದ ಉದ್ದೇಶವಿಲ್ಲದ ಮತ್ತು ಸರ್ಕಾರಿ ಸಂಶೋಧನಾ ಸಂಸ್ಥೆಗಳಿಗೆ ಎಚ್1ಬಿ ಮಿತಿಯಿಂದ ವಿನಾಯಿತಿ ನೀಡಲಾಗುತ್ತದೆ. ಇಂಥ ಸಂಸ್ಥೆ ಮತ್ತು ಸಂಘಟನೆಗಳಲ್ಲಿ ಕೆಲಸ ಮಾಡುವವರಿಗೆ ವೀಸಾ ನಿರ್ಬಂಧ ಇರುವುದಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ