ಮಹಿಳಾ ತೆರಿಗೆ ಪಾವತಿದಾರರು, ಮಹಿಳಾ ಸಂಬಂಧಿತ ಯೋಜನೆಗಳಿಗೆ ಬಜೆಟ್​ನಲ್ಲಿ ಪ್ರೋತ್ಸಾಹ ಸಿಗುವ ಸಾಧ್ಯತೆ

Union Budget 2025: ಕೇಂದ್ರ ಬಜೆಟ್​ನಲ್ಲಿ ಮಹಿಳೆಯರ ಅಭ್ಯುದಯಕ್ಕೆ ಪೂರಕವಾಗಿ ಕೆಲ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಫೆಬ್ರುವರಿ 1ರಂದು ಮಂಡಿಸಲಾಗುವ 2025ರ ಬಜೆಟ್​ನಲ್ಲಿ ಮಹಿಳಾ ತೆರಿಗೆ ಪಾವತಿದಾರರಿಗೆ ಉತ್ತೇಜಕಗಳನ್ನು ನೀಡಬಹುದು. ಮಹಿಳಾ ಸಂಬಂಧಿತ ಯೋಜನೆಗಳಿಗೆ ಟ್ಯಾಕ್ಸ್ ಡಿಡಕ್ಷನ್ ಇತ್ಯಾದಿ ಕ್ರಮ ಪ್ರಕಟಿಸಬಹುದು.

ಮಹಿಳಾ ತೆರಿಗೆ ಪಾವತಿದಾರರು, ಮಹಿಳಾ ಸಂಬಂಧಿತ ಯೋಜನೆಗಳಿಗೆ ಬಜೆಟ್​ನಲ್ಲಿ ಪ್ರೋತ್ಸಾಹ ಸಿಗುವ ಸಾಧ್ಯತೆ
ಮಹಿಳೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 17, 2025 | 5:20 PM

ನವದೆಹಲಿ, ಜನವರಿ 17: ಫೆಬ್ರುವರಿ 1ರಂದು ಮಂಡನೆಯಾಗುವ ಕೇಂದ್ರ ಬಜೆಟ್ ಬಗ್ಗೆ ಸಹಜವಾಗಿ ಸಾಕಷ್ಟು ನಿರೀಕ್ಷೆಗಳಿವೆ. ಕಳೆದ ಬಾರಿಯ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಸರ್ಕಾರದ ಮುಂದಿರುವ ನಾಲ್ಕು ಜಾತಿಗಳನ್ನು ಹೆಸರಿಸಿದ್ದರು. ಅದರಲ್ಲಿ ಮಹಿಳೆ ವರ್ಗವೂ ಒಂದು. ಮಹಿಳೆಯರು, ರೈತರು, ಯುವಕರು ಮತ್ತು ಬಡವರು ಈ ನಾಲ್ಕು ವರ್ಗಗಳು ನಾಲ್ಕು ಜಾತಿಗಳೆಂದು ಸಚಿವೆ ಬಣ್ಣಿಸಿದ್ದರು. ಅಂತೆಯೇ 2024ರ ಜುಲೈನಲ್ಲಿ ಮಂಡಿಸಲಾದ ಬಜೆಟ್​ನಲ್ಲಿ ಮಹಿಳೆಯರು ಮತ್ತು ಬಾಲಕಿಯರಿಗೆ ಅನುಕೂಲವಾಗುವ ಯೋಜನೆಗಳಿಗೆಂದು ಮೂರು ಲಕ್ಷ ಕೋಟಿ ರೂ ಹಣವನ್ನು ನೀಡಲಾಯಿತು. ಈ ಬಾರಿಯೂ ಮಹಿಳೆಯರನ್ನು ಉತ್ತೇಜಿಸಲು ಬಜೆಟ್​ನಲ್ಲಿ ಕೆಲ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ.

ಮಹಿಳಾ ತೆರಿಗೆ ಪಾವತಿದಾರರಿಗೆ ಇನ್ಸೆಂಟಿವ್ಸ್ ನಿರೀಕ್ಷೆ

ಮಹಿಳಾ ತೆರಿಗೆ ಪಾವತಿದಾರರಿಗೆ ಪ್ರೋತ್ಸಾಹ ನೀಡಲು ಈ ಬಜೆಟ್​ನಲ್ಲಿ ಕೆಲ ಕ್ರಮಗಳನ್ನು ಘೋಷಿಸುವ ನಿರೀಕ್ಷೆ ಇದೆ. ವಿಶೇಷ ಟ್ಯಾಕ್ಸ್ ಎಕ್ಸೆಂಪ್ಷನ್ ಅಥವಾ ಟ್ಯಾಕ್ಸ್ ಡಿಡಕ್ಷನ್ ಇತ್ಯಾದಿಯನ್ನು ಮಹಿಳಾ ಸಂಬಂಧಿತ ಯೋಜನೆಗಳಿಗೆ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್; ಠೇವಣಿ ಮೊತ್ತ, ಅವಧಿ, ಬಡ್ಡಿ ಇತ್ಯಾದಿ ವಿವರ

ಮಹಿಳಾ ಉದ್ಯೋಗಿಗಳ ನೇಮಕಾತಿಗೆ ಪ್ರೋತ್ಸಾಹಿಸಲೂ ಕಂಪನಿಗಳಿಗೆ ಇನ್ಸೆಂಟಿವ್ ನೀಡುವ ಸಾಧ್ಯತೆ ಇದೆ. ಸ್ವಂತ ಉದ್ಯೋಗ ಮಾಡುವ ಮಹಿಳೆಯರಿಗೆ ಹೆಚ್ಚಿನ ಸಹಾಯ ಘೋಷಿಸುವ ನಿರೀಕ್ಷೆಯೂ ಇದೆ.

ಒಟ್ಟಾರೆ ಆದಾಯ ತೆರಿಗೆ ದರಗಳಲ್ಲಿ ಇಳಿಕೆಯ ಅಪೇಕ್ಷೆ

ಸರ್ಕಾರ ಆದಾಯ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಲು ಎರಡು ವರ್ಷದ ಹಿಂದೆ ಹೊಸ ಟ್ಯಾಕ್ಸ್ ರೆಜಿಮೆಯನ್ನು ಪರಿಚಯಿಸಿತ್ತು. ಆದರೆ, ಇನ್ನೂ ಕೂಡ ಹೆಚ್ಚಿನ ತೆರಿಗೆ ಪಾವತಿದಾರರು ಹಳೆಯ ಟ್ಯಾಕ್ಸ್ ರೆಜಿಮೆಯಲ್ಲೇ ಐಟಿ ರಿಟರ್ನ್ಸ್ ಸಲ್ಲಿಸುತ್ತಿದ್ದಾರೆ. ಸರ್ಕಾರವೂ ತನ್ನ ಸ್ಟ್ರಾಟಿಜಿ ಬದಲಿಸುವ ಸಾಧ್ಯತೆ ಇಲ್ಲದಿಲ್ಲ.

ಇದನ್ನೂ ಓದಿ: ಪಿಎಂ ಇಂಟರ್ನ್​ಶಿಪ್ ಸ್ಕೀಮ್; ಶೇ. 80ಕ್ಕೂ ಹೆಚ್ಚು ಭಾರತೀಯ ಕಂಪನಿಗಳಿಂದ ಬೆಂಬಲ

ಹಳೆಯ ಟ್ಯಾಕ್ಸ್ ರೆಜಿಮೆಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಫೀಚರ್ ಪ್ರಮುಖ ಆಕರ್ಷಣೆಯಾಗಿದೆ. ಸರ್ಕಾರವು ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಡಿಡಕ್ಷನ್ ಫೀಚರ್ ಸೇರ್ಪಡಿಸಿ, ಹಳೆಯ ಟ್ಯಾಕ್ಸ್ ರೆಜಿಮೆಯನ್ನೇ ನಿಲ್ಲಿಸಿಬಿಡಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?
ಈ ಸೀಸನ್​ನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಗಳ ಮರು ಎಂಟ್ರಿ; ಜಗದೀಶ್​ ಕಥೆ ಏನು?