ಪ್ರಥಮ ‘ಸ್ವದೇಶಿ’ ವಿಮಾನವಾಹಕ ನೌಕೆ ಮುಂದಿನ ವರ್ಷ ಕಾರ್ಯಾರಂಭ: ರಾಜನಾಥ್ ಸಿಂಗ್

ಪ್ರಥಮ ‘ಸ್ವದೇಶಿ' ವಿಮಾನವಾಹಕ ನೌಕೆ ಮುಂದಿನ ವರ್ಷ ಕಾರ್ಯಾರಂಭ: ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

Rajnath Singh: "ಮುಂದಿನ ವರ್ಷ ಈ ಐಎಸಿಯನ್ನು ನಿಯೋಜಿಸುವುದು ಭಾರತದ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಸೂಕ್ತವಾದ ಗೌರವವಾಗಿದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

TV9kannada Web Team

| Edited By: Rashmi Kallakatta

Jun 25, 2021 | 12:46 PM

ಕೊಚ್ಚಿ: : ಭಾರತದ ಮೊದಲ ಮೇಡ್ ಇನ್ ಇಂಡಿಯಾ ವಿಮಾನವಾಹಕ ನೌಕೆ – ಐಎನ್‌ಎಸ್ ವಿಕ್ರಾಂತ್ (INS Vikrant) ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕೇರಳದ ಕೊಚ್ಚಿಯ ದಕ್ಷಿಣ ನೌಕಾಪಡೆಯನ್ನು ಭೇಟಿ ಮಾಡಿದ ಸಿಂಗ್ ಸ್ಥಳೀಯ ವಿಮಾನವಾಹಕ ನೌಕೆ ಅಥವಾ ಐಎಸಿ ನಿರ್ಮಾಣದಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದು “ಭಾರತದ ಹೆಮ್ಮೆ ಮತ್ತು ಆತ್ಮನಿರ್ಭರ ಭಾರತದ ಉತ್ಕೃಷ್ಟ ಉದಾಹರಣೆ” ಎಂದು ಬಣ್ಣಿಸಿದ್ದಾರೆ. ಐಎನ್ಎಸ್ ವಿಕ್ರಾಂತ್ ಅನ್ನು ಸ್ಥಳೀಯ ವಿಮಾನವಾಹಕ ನೌಕೆ 1 ಅಥವಾ ಐಎಸಿ -1 ( IAC-1)ಎಂದೂ ಕರೆಯುತ್ತಾರೆ.

“ಮುಂದಿನ ವರ್ಷ ಈ ಐಎಸಿಯನ್ನು ನಿಯೋಜಿಸುವುದು ಭಾರತದ ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಸೂಕ್ತವಾದ ಗೌರವವಾಗಿದೆ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕೇರಳದ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಿರ್ಮಿಸಲಾಗುತ್ತಿರುವ ಐಎನ್‌ಎಸ್ ವಿಕ್ರಾಂತ್ (ಐಎಸಿ) ಗೆ ಸಿಂಗ್ ಭೇಟಿ ನೀಡಿದರು.

ಐಎಸಿಯ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಿದ ನಂತರ ದಕ್ಷಿಣ ನೌಕಾಪಡೆ ಕಮಾಂಡ್‌ನಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಐಎಸಿಯ ನಿರ್ಮಾಣ ಕಾರ್ಯಗಳನ್ನು ಮೊದಲ ಬಾರಿಗೆ ಪರಿಶೀಲಿಸಲು ಸಂತೋಷವಾಯಿತು. ಈ ಯೋಜನೆಯನ್ನು ಮೂಲತಃ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ ಸರ್ಕಾರವು ಅನುಮೋದಿಸಿತು ಮತ್ತು ಮಹತ್ವದ್ದಾಗಿದೆ. ಕೊವಿಡ್ ಹೊರತಾಗಿಯೂ ಇತ್ತೀಚಿನ ದಿನಗಳಲ್ಲಿ ಪ್ರಗತಿ ಯುಂಟಾಗಿದೆ. ಮುಂದಿನ ವರ್ಷ ಐಎಸಿಯನ್ನು ನಿಯೋಜಿಸುವುದು ಭಾರತದ ಸ್ವಾತಂತ್ರ್ಯದ 75 ವರ್ಷಗಳ ಗೌರವಕ್ಕೆ ಪಾತ್ರವಾಗಲಿದೆ.

ವಿಮಾನವಾಹಕ ನೌಕೆಯ ಯುದ್ಧ ಸಾಮರ್ಥ್ಯ, ರೀಚ್ ಮತ್ತು ಸರ್ವತೋಮುಖ ಸಾಮರ್ಥ್ಯ ನಮ್ಮ ದೇಶದ ರಕ್ಷಣೆಯಲ್ಲಿ ಅಸಾಧಾರಣ ಸಾಮರ್ಥ್ಯಗಳನ್ನು ಸೇರಿಸುತ್ತದ. ಕಡಲು ಕ್ಷೇತ್ರದಲ್ಲಿ ಭಾರತದ ಹಿತಾಸಕ್ತಿಗಳನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಸರ್ಕಾರವು ಬಲವಾದ ನೌಕಾಪಡೆಗೆ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪ್ರತಿಪಾದಿಸಿದ ಅವರು, “ನಿನ್ನೆ, ನಾನು ಕಾರವಾರದಲ್ಲಿನ ಪ್ರಾಜೆಕ್ಟ್ ಸೀಬರ್ಡ್ ಅನ್ನು ಪರಿಶೀಲಿಸಿದ್ದೇನೆ, ಇದು ಭವಿಷ್ಯದಲ್ಲಿ ಭಾರತೀಯ ನೌಕಾಪಡೆಯ ಅತಿದೊಡ್ಡ ನೌಕಾ ನೆಲೆಯಾಗಲಿದೆ. ಹಿಂದೂ ಮಹಾಸಾಗರ ಪ್ರದೇಶ ಮತ್ತು ಅದರಾಚೆ ನೌಕಾಪಡೆಯ ಕಾರ್ಯಾಚರಣೆಗಳಿಗೆ ಇದು ಮೂಲಸೌಕರ್ಯಗಳನ್ನು ಒದಗಿಸುತ್ತದೆ ಎಂದಿದ್ದಾರೆ. ಆಧುನೀಕರಣಕ್ಕೆ ಪ್ರಚೋದನೆ, ಭಾರತದ ಸ್ಥಳೀಯ ಉದ್ಯಮವನ್ನು ಬಳಸುವುದು ಮತ್ತು ತಿಳಿದುಕೊಳ್ಳುವುದು ಒಂದು ಪ್ರಮುಖ ಆದ್ಯತೆಯಾಗಿದೆ. ಭಾರತೀಯ ಹಡಗುಕಟ್ಟೆಗಳಲ್ಲಿ ನಿರ್ಮಿಸಲಾಗುತ್ತಿರುವ 44 ಯುದ್ಧನೌಕೆಗಳಲ್ಲಿ 42 ಇದಕ್ಕೆ ಸಾಕ್ಷಿಯಾಗಿದೆ ಎಂದು ರಕ್ಷಣಾ ಸಚಿವರು ಹೇಳಿದರು.

“ಐಎಸಿ ಸುಮಾರು 75 ಪ್ರತಿಶತದಷ್ಟು ಸ್ವದೇಶಿ ನಿರ್ಮಿತಿ ಹೊಂದಿದೆ, ವಿನ್ಯಾಸದಿಂದ ನಿರ್ಮಾಣಕ್ಕೆ ಬಳಸುವ ಉಕ್ಕಿನವರೆಗೆ, ಪ್ರಮುಖ ಆಯುಧಗಳು ಮತ್ತು ಸಂವೇದಕಗಳವರೆಗೆ ಎಲ್ಲವೂ ಸ್ವದೇಶಿಯಾಗಿದೆ. ಡಿಎಸಿ ಇತ್ತೀಚೆಗೆ ಕಾರ್ಯತಂತ್ರ ಪಾಲುದಾರಿಕೆ ಮಾದರಿಯಲ್ಲಿ ಪ್ರಾಜೆಕ್ಟ್ 75-I ರ ಆರ್‌ಎಫ್‌ಪಿಗೆ ಅನುಮೋದನೆ ನೀಡಿದೆ. ಇದು ಸ್ಥಾಪಿತ ಉತ್ಪಾದನಾ ತಂತ್ರಜ್ಞಾನಗಳ ಸ್ಥಳೀಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ರಾಜನಾಥ್ ಹೇಳಿದರು. ಈ ಕ್ರಮಗಳು ಭಾರತದ ಕಡಲ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ವ್ಯಾಪ್ತಿಯನ್ನು ಮತ್ತು ಪರಾಕ್ರಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು. ಭಾರತೀಯ ನೌಕಾಪಡೆಯು ಯಾವುದೇ ಸವಾಲನ್ನು ಎದುರಿಸಲು ಸಿದ್ಧವಾಗಿದೆ ಮತ್ತು ಯುದ್ಧ-ಸನ್ನದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:  ತುರ್ತು ಪರಿಸ್ಥಿತಿಯ ‘ಕರಾಳ ದಿನಗಳನ್ನು’ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್

(India’s first ‘made-in-India’ Aircraft Carrier INS Vikrant will be commissioned next year says Defence Minister Rajnath Singh)

Follow us on

Related Stories

Most Read Stories

Click on your DTH Provider to Add TV9 Kannada