ತುರ್ತು ಪರಿಸ್ಥಿತಿಯ ‘ಕರಾಳ ದಿನಗಳನ್ನು’ ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್

Emergency1975: ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯ ಅವಧಿಯ ಪರಂಪರೆಯನ್ನು ಹಿಂತಿರುಗಿ ನೋಡಿದ ಪ್ರಧಾನಿ ಮೋದಿ, 1975 ಮತ್ತು 1977 ರ ನಡುವಿನ ಅವಧಿಯು ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳ "ವ್ಯವಸ್ಥಿತ ವಿನಾಶ" ಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು

ತುರ್ತು ಪರಿಸ್ಥಿತಿಯ ‘ಕರಾಳ ದಿನಗಳನ್ನು' ಎಂದಿಗೂ ಮರೆಯಲು ಸಾಧ್ಯವಿಲ್ಲ: ಪ್ರಧಾನಿ ನರೇಂದ್ರ ಮೋದಿ ಟ್ವೀಟ್
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 25, 2021 | 11:27 AM

ದೆಹಲಿ: ಭಾರತದದಲ್ಲಿತುರ್ತು ಪರಿಸ್ಥಿತಿ ಹೇರಿದ ದಿನ ಜೂನ್ 25. ತುರ್ತು ಪರಿಸ್ಥಿತಿಯ 46 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕರಾಳ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ವಿಶೇಷವೆಂದರೆ, 1975 ರಲ್ಲಿ ಈ ದಿನದಂದು ಆಗಿನ ಭಾರತದ ಅಧ್ಯಕ್ಷರಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಕೇಂದ್ರದಲ್ಲಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಶಿಫಾರಸ್ಸಿನ ಮೇರೆಗೆ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದರು. ತುರ್ತು ಪರಿಸ್ಥಿತಿಯು ಜೂನ್ 25, 1975 ರಿಂದ ಮಾರ್ಚ್ 21, 1977 ರವರೆಗೆ ಜಾರಿಯಲ್ಲಿತ್ತು ಮತ್ತು ಆಧುನಿಕ ಭಾರತೀಯ ಇತಿಹಾಸದ ಬಗ್ಗೆ ಮಾತನಾಡುವಾಗ ಶೈಕ್ಷಣಿಕ ಮತ್ತು ರಾಜಕೀಯ ವಲಯಗಳಲ್ಲಿ ಹೆಚ್ಚು ಚರ್ಚಾಸ್ಪದ ಅಧ್ಯಾಯವಾಗಿದೆ ದೇಶದಲ್ಲಿ ಇಂದಿರಾಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ.

ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿಯ ಅವಧಿಯ ಪರಂಪರೆಯನ್ನು ಹಿಂತಿರುಗಿ ನೋಡಿದ ಪ್ರಧಾನಿ ಮೋದಿ, 1975 ಮತ್ತು 1977 ರ ನಡುವಿನ ಅವಧಿಯು ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳ “ವ್ಯವಸ್ಥಿತ ವಿನಾಶ” ಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಭಾರತದ ಪ್ರಜಾಪ್ರಭುತ್ವ ಮನೋಭಾವವನ್ನು ಬಲಪಡಿಸುವುದಾಗಿ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳಿಗೆ ಅನುಗುಣವಾಗಿ ಬದುಕುವುದಾಗಿ ಮೋದಿ ಟ್ವೀಟ್ ಮೂಲಕ ವಾಗ್ದಾನ ಮಾಡಿದ್ದಾರೆ.

ತುರ್ತು ಪರಿಸ್ಥಿತಿಯ ಅವಧಿಯಲ್ಲಿವ ವ್ಯವಸ್ಥಿತ ದಬ್ಬಾಳಿಕೆಯ “ಕರಾಳ ದಿನಗಳನ್ನು”ತೋರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧಿಕೃತ ಹ್ಯಾಂಡಲ್‌ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಇನ್ಫೋಗ್ರಾಫಿಕ್ಸ್ ಸರಣಿಯನ್ನು ಲಿಂಕ್ ಮಾಡಿದ್ದಾರೆ. ಚಿತ್ರಗಳ ಸರಣಿಯತ್ತ ಗಮನ ಸೆಳೆದ ಪ್ರಧಾನಿ ನರೇಂದ್ರ ಮೋದಿ, “ನಮ್ಮ ಪ್ರಜಾಪ್ರಭುತ್ವದ ನೀತಿಗಳನ್ನು ಕಾಂಗ್ರೆಸ್ ರೀತಿ ತುಳಿದಿದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಭಾರತೀಯ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಎಲ್ಲ ಶ್ರೇಷ್ಠರನ್ನು ನಾವು ನೆನಪಿಸಿಕೊಳ್ಳುತ್ತೇವೆ” ಎಂದು ಹೇಳಿದರು.

” The Emergency by Indira Gandhi in 1975: An unbelievable phase in India’s democracy (1975 ರಲ್ಲಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ: ಭಾರತದ ಪ್ರಜಾಪ್ರಭುತ್ವದಲ್ಲಿ ನಂಬಲಾಗದ ಹಂತ)” ಎಂಬ ಶೀರ್ಷಿಕೆಯ ಚಿತ್ರಗಳ ಸರಣಿಯು ತುರ್ತು ಅವಧಿಯಲ್ಲಿ ನಿಷೇಧಿಸಲ್ಪಟ್ಟಂತೆ ತೋರುತ್ತಿದ್ದ ಮಾಧ್ಯಮಗಳು – ಚಲನಚಿತ್ರಗಳು, ಹಾಡುಗಳು ಮತ್ತು ಮುಂತಾದವುಗಳನ್ನು ಉಲ್ಲೇಖಿಸುತ್ತದೆ. ರವೀಂದ್ರನಾಥ ಟ್ಯಾಗೋರ್ ಮತ್ತು ಮಹಾತ್ಮ ಗಾಂಧಿಯವರ ಪ್ರಸಿದ್ಧ ಉಲ್ಲೇಖಗಳಂತೆ ಇಂದಿರಾಗಾಂಧಿ ಹೇರಿದ ತುರ್ತು ಸಂದರ್ಭದಲ್ಲಿ ಚಂದ್ರಶೇಖರ್ ಆಜಾದ್ ಮತ್ತು ಭಗತ್ ಸಿಂಗ್ ಅವರ ಚಲನಚಿತ್ರಗಳನ್ನು ನಿಷೇಧಿಸಲಾಗಿದೆ ಎಂದು ಬಿಜೆಪಿ ಪೋಸ್ಟ್ ಮಾಡಿದ ಪಟ್ಟಿಯಲ್ಲಿ ತಿಳಿಸಲಾಗಿದೆ. “ಇದನ್ನು ನಿಷೇಧಿಸಲಾಗಿದೆ ಎಂದು ನೀವು ನಂಬಬಹುದೇ?” ಭಿನ್ನಾಭಿಪ್ರಾಯದ ಮೇಲೆ ರಾಜ್ಯ ಪ್ರಾಯೋಜಿತ ದಮನವನ್ನು ಮಾಡಲಾಗುತ್ತಿತ್ತು . “ನಮ್ಮ ರಾಷ್ಟ್ರದಲ್ಲಿ ಇದನ್ನು ಮಾಡಿದವರಿಗೆ” ಮತ್ತೆ ಇದೇ ರೀತಿಯ ಕೆಲಸವನ್ನು ಮಾಡುವ ಅಧಿಕಾರವನ್ನು ಎಂದಿಗೂ ಅನುಮತಿಸದ “ಪ್ರತಿಜ್ಞೆ” ಯನ್ನು ನಾಗರಿಕರು ತೆಗೆದುಕೊಳ್ಳಬೇಕೆಂದು ಅದು ಬಿಜೆಪಿ ಕರೆ ನೀಡಿದೆ.

ತುರ್ತು ಪರಿಸ್ಥಿತಿಯನ್ನು ಸ್ವತಂತ್ರ ಭಾರತದ ಇತಿಹಾಸದಲ್ಲಿ ಒಂದು ಕರಾಳ ಘಟ್ಟ ಪರಿಗಣಿಸಲಾಗುತ್ತದೆ ಏಕೆಂದರೆ ಈ ಅವಧಿಯನ್ನು ಕಡಿವಾಣವಿಲ್ಲದ ರಾಜ್ಯ ಸೆರೆವಾಸ, ಭಿನ್ನಾಭಿಪ್ರಾಯವನ್ನು ನಿಗ್ರಹಿಸುವುದು ಮತ್ತು ನಾಗರಿಕ ಸ್ವಾತಂತ್ರ್ಯಗಳ ಮೇಲಿನ ಸರ್ಕಾರದ ದಬ್ಬಾಳಿಕೆಯಿಂದ ಗುರುತಿಸಲಾಗಿದೆ. ಆಗಾಗ್ಗೆ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಪತ್ರಿಕಾ ಮಾಧ್ಯಮಗಳನ್ನು ದಮನಕಾರಿ ಮಟ್ಟಕ್ಕೆ ಸೆನ್ಸಾರ್ ಮಾಡಲಾಗುತ್ತಿತ್ತು ಎಂದು ವರದಿಗಳು ಸೂಚಿಸುತ್ತವೆ.

ಇದನ್ನೂ ಓದಿ:  ಮೋದಿ ಸರ್​ನೇಮ್ ಬಗ್ಗೆ ಹೇಳಿದ್ದು ವ್ಯಂಗ್ಯವಾಗಿತ್ತು: ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಹೇಳಿಕೆ

Published On - 11:25 am, Fri, 25 June 21