Ganesh Chaturthi 2021 Recipe: ಉತ್ತರ ಕರ್ನಾಟಕ ಸ್ಪೆಷಲ್ ಕೊಬ್ಬರಿ ಕಡುಬು ಮಾಡಿ ಸವಿಯಿರಿ
ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಅದರಲ್ಲೂ ಇಂದು ಗಣೇಶ ಹಬ್ಬ. ಹೀಗಾಗಿ ಗಣಪತಿಗೆ ಪ್ರೀಯವಾದ ಕೊಬ್ಬರಿ ಕಡುಬು ಮಾಡಿ ನೈವೇದ್ಯ ಮಾಡಿ.
ಕಾಲಕ್ಕೆ ವಿಶೇಷವಾದ ಒಂದಷ್ಟು ರೆಸಿಪಿಗಳನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸಿಕೊಳ್ಳುತ್ತದೆ. ಏಕೆಂದರೆ ರುಚಿಕರವಾದ ಅಡುಗೆಯನ್ನು ಮಾಡುವುದರ ಜೊತೆಗೆ ಹೊಸತೆನೋ ಒಂದನ್ನು ಪ್ರತಿದಿನವು ಪ್ರಯೋಗ ಮಾಡುವುದು ಭೋಜನ ಪ್ರೀಯರಿಗೆ ಹೆಚ್ಚು ಖುಷಿಯನ್ನು ಕೊಡುವ ವಿಚಾರ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ಅಂತೆಯೇ ಕಾರ ಇಷ್ಟಪಡುವವರು ಇರುತ್ತಾರೆ. ಅದರಲ್ಲೂ ಇಂದು ಗಣೇಶ ಹಬ್ಬ(Ganesh Chaturthi 2021). ಹೀಗಾಗಿ ಗಣಪತಿಗೆ ಪ್ರೀಯವಾದ ಕೊಬ್ಬರಿ ಕಡುಬು ಮಾಡಿ ನೈವೇದ್ಯ ಮಾಡಿ.
ಕೊಬ್ಬರಿ ಕಡುಬು ಮಾಡಲು ಬೇಕಾಗುವ ಸಾಮಾಗ್ರಿಗಳು ಗೋಧಿ ಹಿಟ್ಟು, ಬೆಲ್ಲ, ಕೊಬ್ಬರಿ, ಗಸಗಸೆ, ತುಪ್ಪ, ಉಪ್ಪು.
ಕೊಬ್ಬರಿ ಕಡುಬು ಮಾಡುವ ವಿಧಾನ:
ಮೊದಲು ಗೋಧಿ ಹಿಟ್ಟನ್ನು ತುಪ್ಪದೊಂದಿಗೆ ಹದ ಮಾಡಿಕೊಳ್ಳಿ, ನಂತರ ಉಂಡೆ ಮಾಡಿ. ಒಂದು ಪಾತ್ರೆಗೆ ಜೋಳದ ದಂಟು ಹಾಕಿ ಅದಕ್ಕೆ ನೀರು ಹಾಕಿ ಒಲೆ ಮೇಲೆ ಇಟ್ಟುಕೊಳ್ಳಿ. ಬಳಿಕ ಕೊಬ್ಬರಿ ಮತ್ತು ಬೆಲ್ಲ ತುರಿದು, ಗಸಗಸೆ ಹಾಕಿ ಹೂರ್ಣ ಮಾಡಿ ಇಟ್ಟುಕೊಳ್ಳಿ, ನಂತರ ಗೋಧಿ ಹಿಟ್ಟು ತಟ್ಟಿ ಅದರ ಮಧ್ಯೆ ಹೂರ್ಣ ಹಾಕಿ ಮುಚ್ಚಿ, ಬೇಯಲು ಬಿಡಿ. ಈಗ ರುಚಿಕರವಾದ ಉತ್ತರ ಕರ್ನಾಟಕ ಸ್ಪೆಷಲ್ ಕೊಬ್ಬರಿ ಕಡುಬು ಸವಿಯಲು ಸಿದ್ಧ.
ಇದನ್ನೂ ಓದಿ:
Ganesh Chaturthi 2021 Recipe: ಗಣೇಶನ ಹಬ್ಬಕ್ಕೆ ಉತ್ತರ ಕರ್ನಾಟಕ ಸ್ಪೆಷಲ್ ಮೋದಕ ಮಾಡಿ ಸವಿಯಿರಿ