Viral Video: ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನೊಳಗಿದ್ದ ವೃದ್ಧರನ್ನು ಕಾಪಾಡಿದ ಯುವಕರು; ಶಾಕಿಂಗ್ ವಿಡಿಯೋ ಇಲ್ಲಿದೆ

Shocking Video: ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಾರೊಳಗೆ ಸಿಲುಕಿದ್ದ 90ರ ಆಸುಪಾಸಿನ ಅಜ್ಜ-ಅಜ್ಜಿಯನ್ನು ಯುವಕರಿಬ್ಬರು ಕಾಪಾಡಿದ್ದಾರೆ.

Viral Video: ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನೊಳಗಿದ್ದ ವೃದ್ಧರನ್ನು ಕಾಪಾಡಿದ ಯುವಕರು; ಶಾಕಿಂಗ್ ವಿಡಿಯೋ ಇಲ್ಲಿದೆ
ಸಾಂದರ್ಭಿಕ ಚಿತ್ರ

ಕ್ಯಾಲಿಫೋರ್ನಿಯಾದ ರಸ್ತೆಯಲ್ಲಿ ಕಾರೊಂದು ಹೊತ್ತಿ ಉರಿಯುತ್ತಿತ್ತು. ಆ ಕಾರಿನೊಳಗೆ ಸಿಲುಕಿದ್ದ ಅಜ್ಜ-ಅಜ್ಜಿ ಹೊರಗೆ ಬರಲು ಪರದಾಡುತ್ತಿದ್ದರು. ಆದರೆ, ಬೆಂಕಿಯ ಕೆನ್ನಾಲಿಗೆ ಕಾರನ್ನು ಆವರಿಸಿಕೊಂಡಿತ್ತು. ಅಲ್ಲೇ ಅಕ್ಕಪಕ್ಕದಲ್ಲಿದ್ದವರು ಹಾಗೂ ವಾಹನಗಳಲ್ಲಿ ಹೋಗುತ್ತಿದ್ದವರು ಈ ಆಘಾತಕಾರಿ ದೃಶ್ಯವನ್ನು ನೋಡುತ್ತಾ ನಿಂತಿದ್ದರು. ಆದರೆ, ಆಗ ಸಮಯಪ್ರಜ್ಞೆ ಮೆರೆದ ಯುವಕರಿಬ್ಬರು ಕಾರಿನ ಬಳಿ ಓಡಿ ಹೋಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಆ ವೃದ್ಧ ದಂಪತಿಯನ್ನು ಕಾಪಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಯುವಕರ ಸಾಹಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಾರೊಳಗೆ ಸಿಲುಕಿದ್ದ 90ರ ಆಸುಪಾಸಿನ ಅಜ್ಜ-ಅಜ್ಜಿಯನ್ನು ಯುವಕರಿಬ್ಬರು ಕಾಪಾಡಿದ್ದಾರೆ. ಹೊತ್ತಿ ಉರಿದ ಕಾರಿನೊಳಗಿಂದ ಹೊರಬರಲಾಗದೆ ಚಡಪಡಿಸುತ್ತಿದ್ದ ವೃದ್ಧ ಜೋಡಿಯನ್ನು ಈ ಐವರು ರಕ್ಷಣೆ ಮಾಡಿದ್ದಾರೆ. ವೃದ್ಧರು ಸೀಟ್ ಬೆಲ್ಟ್‌ ಧರಿಸಿದ್ದರು. ಹೀಗಾಗಿ, ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ತಕ್ಷಣ ಕೆಳಗೆ ಇಳಿಯಲು ಸಾಧ್ಯವಾಗಲಿಲ್ಲ.

ವೃದ್ಧರನ್ನು ಕಾಪಾಡಿದ ಯುವಕರಿಗೂ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೃದ್ಧ ದಂಪತಿಯನ್ನು ಕೂಡ ಆಸ್ಪತ್ರೆಗೆ ಸೇರಿಸಲಾಗಿದೆ. ಧಗಧಗನೆ ಹೊತ್ತಿ ಉರಿಯುವ ಕಾರಿನಿಂದ ವೃದ್ಧರನ್ನು ರಕ್ಷಿಸಿದ ಯುವಕರ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಚಮಚದಿಂದ ಜೈಲಿನ ಟಾಯ್ಲೆಟ್​ ನೆಲ ಕೊರೆದು ಹಾಲಿವುಡ್​ ಸ್ಟೈಲಲ್ಲಿ ಉಗ್ರರು ಪರಾರಿ!

Shocking Video: 7 ಮರಿಗಳ ಜೊತೆ ನಾಯಿಗೆ ಬೆಂಕಿ ಹಚ್ಚಿ ಸುಟ್ಟ ಮಹಿಳೆಯರು; ಅಮಾನವೀಯ ವಿಡಿಯೋ ಇಲ್ಲಿದೆ

(Youths rescue elderly couple from burning car in California Shocking Video is here)

Click on your DTH Provider to Add TV9 Kannada