AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಏಸುವನ್ನು ಭೇಟಿಯಾದ ಗಣಪತಿ; ಸ್ಪೇನ್​ನಲ್ಲಿ ನಡೆದ ಈ ವಿಶೇಷ ದೃಶ್ಯ ನೋಡಿ

ಗಣೇಶನ ವಿಗ್ರಹ ಹೊತ್ತ ಭಾರತೀಯ ಗುಂಪು ಚರ್ಚ್​ನ ಧಾರ್ಮಿಕ ಸ್ಥಳದ ಆಡಳಿತ ಮಂಡಳಿಯಿಂದ ಒಳಕ್ಕೆ ಪ್ರವೇಶಿಸಲು ಮತ್ತು ಇದರಿಂದ ಇಬ್ಬರು ದೇವರು ಭೇಟಿಯಾಗಬಹುದು ಎಂದು ಪರವಾನಗಿ ಪಡೆಯಿತು.

Video: ಏಸುವನ್ನು ಭೇಟಿಯಾದ ಗಣಪತಿ; ಸ್ಪೇನ್​ನಲ್ಲಿ ನಡೆದ ಈ ವಿಶೇಷ ದೃಶ್ಯ ನೋಡಿ
ಏಸುವನ್ನು ಭೇಟಿಯಾದ ಗಣಪತಿ
TV9 Web
| Edited By: |

Updated on:Sep 09, 2021 | 3:58 PM

Share

ಸಾಮಾಜಿಕ ಜಾಲತಾಣದಲ್ಲಿ ಸಹೋದರತ್ವ ಸಾರುವ ವಿಡಿಯೋವೊಂದು ವೈರಲ್ ಆಗಿದೆ. ಸ್ಪೇನ್​ನಲ್ಲಿ ನಡೆದ ಅಪರೂಪದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ. ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುವ ಭಾರತೀಯ ಗುಂಪು ಮತ್ತು ಚರ್ಚ್​ನಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಜನರು ಸಹೋದರತ್ವ ಮತ್ತು ಸಹಾನುಭೂತಿಯ ಬಲವಾದ ಸಂದೇಶವನ್ನು ಸಾರಿದ್ದಾರೆ. ಹಳೆಯ ವಿಡಿಯೋ ಗಣೇಶ ಚತುರ್ಥಿಯ ಪ್ರಯುಕ್ತ ಮತ್ತೆ ವೈರಲ್​ ಆಗಿದೆ.

ಚಲನಚಿತ್ರ ನಿರ್ಮಾಪಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ಟ್ವಿಟರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸ್ಪೇನ್​ನಲ್ಲಿ ವಾಸಿಸುತ್ತಿರುವ ಭಾರತದ ಜನರ ಗುಂಪು ಗಣೇಶನ ಮೆರವಣಿಗೆ ಹೊತ್ತು ಹೊರಟಿತ್ತು. ಚರ್ಚ್ ದಾರಿಯಲ್ಲಿಯೇ ಅವರ ಮೆರಣವಣಿಗೆ ಸಾಗಬೇಕಿತ್ತು. ಗಣೇಶನ ವಿಗ್ರಹ ಹೊತ್ತ ಭಾರತೀಯ ಗುಂಪು ಚರ್ಚ್​ನ ಧಾರ್ಮಿಕ ಸ್ಥಳದ ಆಡಳಿತ ಮಂಡಳಿಯಿಂದ ಒಳಕ್ಕೆ ಪ್ರವೇಶಿಸಲು ಮತ್ತು ಇದರಿಂದ ಇಬ್ಬರು ದೇವರು ಭೇಟಿಯಾಗಬಹುದು ಎಂದು ಪರವಾನಗಿ ಪಡೆಯಿತು.

ಸ್ಪೇನ್​ನಲ್ಲಿ ಗಣೇಶ ಹಬ್ಬ ಆಯೋಜಿಸಿದ ಭಾರತೀಯ ಗುಂಪು, ಸ್ಥಳೀಯ​ ಆಡಳಿತ ಮಂಡಳಿಗೆ ಚರ್ಚ್ ಮಾರ್ಗವಾಗಿ ಗಣೇಶನನ್ನು ತೆಗೆದುಕೊಂಡು ಹೋಗಬಹುದೇ ಎಂದು ಕೇಳಿದೆ ಇದರಿಂದ ದೇವರು ಪರಸ್ಪರ ಭೇಟಿಯಾಗಬಹುದು ಎಂದು ಸಹ ಕೇಳಿದೆ ಎಂದು ಅಗ್ನಿಹೋತ್ರಿ ಟ್ವೀಟ್ ಮಾಡುವಾಗ ಬರೆದಿದ್ದಾರೆ.

ಗಣಪತಿ ಬಪ್ಪನನ್ನು ಚರ್ಚ್​ನ ಒಳಗೆ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಚರ್ಚ್ ಒಳಗಿದ್ದ ಜನರು ಹಾಡು ಹೇಳಲು ಪ್ರಾರಂಭಿಸಿದ್ದಾರೆ ಎಂದು ವಿಡಿಯೋ ತೋರಿಸಿದೆ. ನನ್ನ ಸ್ನೇಹಿತನಿಂದ ವಿಡಿಯೋವನ್ನು ತರಿಸಿಕೊಂಡಿದ್ದೇನೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ.

ಇದನ್ನೂ ಓದಿ:

Viral Video: ಹೋಟೆಲ್ ರೂಮಿನಲ್ಲಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದ ಗಂಡ; ಎಲ್ಲರೆದುರೇ ಗ್ರಹಚಾರ ಬಿಡಿಸಿದ ಹೆಂಡತಿ

Viral Video: ಭಾರೀ ಮಳೆಯಿಂದ ಕೊಚ್ಚಿ ಹೋಯ್ತು ಡೆಹ್ರಾಡೂನ್- ಹೃಷಿಕೇಶದ ರಸ್ತೆ; ವಿಡಿಯೋ ವೈರಲ್

(Lord Ganapati met jesus in spain video goes viral)

Published On - 3:57 pm, Thu, 9 September 21

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್