Viral Video: ಭಾರೀ ಮಳೆಯಿಂದ ಕೊಚ್ಚಿ ಹೋಯ್ತು ಡೆಹ್ರಾಡೂನ್- ಹೃಷಿಕೇಶದ ರಸ್ತೆ; ವಿಡಿಯೋ ವೈರಲ್
Uttarakhand Flood: ಡೆಹ್ರಾಡೂನ್ ಮತ್ತು ಹೃಷಿಕೇಶದ ಹೆದ್ದಾರಿಗೆ ಪರ್ಯಾಯ ರಸ್ತೆ ಮಾರ್ಗವನ್ನು ನಿರ್ಮಿಸಲಾಗಿದೆ. ಆ ಪರ್ಯಾಯ ಮಾರ್ಗ ಕೂಡ ಮಳೆಯಿಂದ ಕೊಚ್ಚಿಕೊಂಡು ಹೋಗಿದೆ.
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ಡೆಹ್ರಾಡೂನ್ ಮತ್ತು ಹೃಷಿಕೇಶದ ಹೆದ್ದಾರಿಗೆ ಪರ್ಯಾಯ ರಸ್ತೆ ಮಾರ್ಗವನ್ನು ನಿರ್ಮಿಸಲಾಗಿದೆ. ಆ ಪರ್ಯಾಯ ಮಾರ್ಗ ಕೂಡ ಮಳೆಯಿಂದ ಕೊಚ್ಚಿಕೊಂಡು ಹೋಗಿದೆ. ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಉತ್ತರಾಖಂಡದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದ ಡೆಹ್ರಾಡೂನ್ ಮತ್ತು ಹೃಷಿಕೇಶಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ರಾಣಿಪೋಖರಿ ಫ್ಲೈಓವರ್ನ ಭಾಗ ಮುರಿದು ಬಿದ್ದ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಈ ಮಾರ್ಗವನ್ನು ನಿರ್ಮಿಸಲಾಗಿತ್ತು.
ಪ್ರವಾಹದಲ್ಲಿ ರಸ್ತೆ ಕೊಚ್ಚಿಕೊಂಡು ಹೋಗುವ ವಿಡಿಯೋ ಭಾರೀ ವೈರಲ್ ಆಗಿದೆ. ರಸ್ತೆಯ ಜೊತೆಗೆ ಕೆಲವು ವಾಹನಗಳು ಕೂಡ ಮಳೆ ನೀರಿನಲ್ಲಿ ಕೊಚ್ಚಿ ಹೋಗಿರುವು ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುರಿದು ಬಿದ್ದ ಸೇತುವೆಯ ಕೆಳಭಾಗದಲ್ಲಿ ನುಗ್ಗಿದ ಪ್ರವಾಹದ ನೀರು ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ತಳ್ಳಿಕೊಂಡು ಹೋಗಿದೆ.
ಉತ್ತರಾಖಂಡದಲ್ಲಿ ಪ್ರವಾಹದಿಂದ 5 ಜನರು ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ. ಜುಮ್ಮಾ ಎಂಬ ಹಳ್ಳಿಯಲ್ಲಿ ಎರಡು ಮನೆಗಳು ಕುಸಿದು ಬಿದ್ದಿದೆ. ಜುಮ್ಮಾ ಮತ್ತು ಅದರ ಸುತ್ತಮುತ್ತಲಿನ ಕನಿಷ್ಠ 22 ಕುಟುಂಬಗಳು ಅಪಾಯದ ಅಂಚಿನಲ್ಲಿವೆ. ಪ್ರವಾಹದಿಂದ ಮನೆಗಳ ತುಂಬ ನೀರು ತುಂಬಿ, ಬಿರುಕು ಬಿಟ್ಟಿವೆ. ಯಾವಾಗ ಬೇಕಾದರೂ ಮನೆಗಳು ಕುಸಿದು ಬೀಳುವ ಆತಂಕ ಎದುರಾಗಿದೆ.
#WATCH | Uttarakhand: An alternative route on Dehradun-Ranipokhari-Rishikesh highway created to facilitate movement of people & small vehicles was swept away due to heavy rains last night.
The route was created after parts of a bridge over Jakhan river collapsed on August 27. pic.twitter.com/9HdwZVVLtV
— ANI (@ANI) September 7, 2021
ಕಳೆದ ಕೆಲವು ದಿನಗಳಿಂದ ಉತ್ತರಾಖಂಡ, ಕಾಶ್ಮೀರ, ದೆಹಲಿ ಸುತ್ತಮುತ್ತಲಿನ ರಾಜ್ಯಗಳಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಇದರಿಂದ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಹಲವು ಗ್ರಾಮಗಳು ಜಲಾವೃತವಾಗಿವೆ. ಇನ್ನು ಮೂರು ದಿನ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಕೊಂಕಣ, ಗುಜರಾತ್, ರಾಜಸ್ಥಾನದಲ್ಲಿ ಸೆ. 10ರವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇಂದು ದಕ್ಷಿಣ ಒಡಿಶಾ, ಕರಾವಳಿ ಆಂಧ್ರ ಪ್ರದೇಶ, ತೆಲಂಗಾಣ, ಹರಿಯಾಣ, ವಿದರ್ಭ ಮತ್ತು ದಕ್ಷಿಣ ಛತ್ತೀಸ್‌ಗಢದ ಕಡಿಮೆ ಒತ್ತಡದ ಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
Flood Alert: ಭೀಮಾ ನದಿಪಾತ್ರದ ಜನರೇ ಎಚ್ಚರ: ಉಂಟಾಗಿದೆ ಪ್ರವಾಹ ಭೀತಿ
(Alternate road on Dehradun-Rishikesh highway Wash away amid heavy rain and Uttarakhand Flood)