ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ: ಚತ್ತೀಸ್ಗಢ ಮುಖ್ಯಮಂತ್ರಿಯ ತಂದೆ ನಂದಕುಮಾರ್ ಬಾಘೇಲ್ ಬಂಧನ
ಲಖನೌದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಂದಕುಮಾರ್ ಬಾಘೇಲ್, ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.
ಬ್ರಾಹ್ಮಣರು ವಿದೇಶಿಗರು..ಅವರನ್ನು ಹತ್ತಿರ ಸೇರಿಸಬೇಡಿ. ಬಹಿಷ್ಕರಿಸಿ ಎಂದು ಜನರಿಗೆ ಕರೆ ನೀಡಿದ್ದ, ಚತ್ತೀಸ್ಗಢ ಸಿಎಂ ಭೂಪೇಶ್ ಬಾಘೇಲ್ ತಂದೆ ನಂದಕುಮಾರ್ ಬಾಘೇಲ್ರನ್ನು ರಾಯಪುರ ಪೊಲೀಸರು ಬಂಧಿಸಿದ್ದಾರೆ. ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಂಘಟನೆಗಳು ದೂರು ನೀಡಿ, ಡಿಡಿ ನಗರ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ತಂದೆಯ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಭೂಪೇಶ್ ಬಾಘೇಲ್, ರಾಜ್ಯದಲ್ಲಿ ಸಮುದಾಯಗಳ ನಡುವೆ ಸಾಮರಸ್ಯ ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ. ಅಂಥದ್ದರಲ್ಲಿ ನನ್ನ ತಂದೆಯೇ ಹೀಗೆ ಹೇಳಿದ್ದು ತಪ್ಪು. ಖಂಡಿತ ಹೆಚ್ಚಿನ ತನಿಖೆ ನಡೆಸಿ, ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು.
ಲಖನೌದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಂದಕುಮಾರ್ ಬಾಘೇಲ್, ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ವೈರಲ್ ಆದ ವಿಡಿಯೋ ಅನ್ವಯ ಸರ್ವ ಬ್ರಾಹ್ಮಿಣ್ ಸಮಾಜ, ದೀನ್ ದಯಾಳ್ ವಿಪ್ರ ಸಮಾಜಗಳು ರಾಯ್ಪುರ ಪೊಲೀಸರಿಗೆ ದೂರು ನೀಡಿದ್ದರು. ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ನಂದಕುಮಾರ್ ಅವರನ್ನು ಇಂದು ದೆಹಲಿಯಲ್ಲಿ ಬಂಧಿಸಿದ್ದಾರೆ. ನಂತರ ರಾಯ್ಪುರ ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಇದರ ಬಗ್ಗೆ ಮಾತನಾಡಿದ್ದ ಭೂಪೇಶ್ ಬಾಘೇಲ್, ನನಗೆ ನನ್ನ ತಂದೆಯ ಮೇಲೆ ಅಪಾರ ಗೌರವ ಇದೆ. ಆದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದು ಸರಿಯಾದ ಕ್ರಮವೇ ಆಗಿದೆ ಎಂದೂ ಹೇಳಿದ್ದರು.
ಸೆಪ್ಟೆಂಬರ್ 21ರವರೆಗೆ ನ್ಯಾಯಾಂಗ ಬಂಧನ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ವಿಚಾರಣೆ ನಡೆದಿದ್ದು, ಸೆಪ್ಟೆಂಬರ್ 21ರವರೆಗೆ ನಂದ್ಕುಮಾರ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನಾನು ಜಾಮೀನಿಗೆ ಅರ್ಜಿ ಸಲ್ಲಿಸುವುದಿಲ್ಲ. ಈ ಪ್ರಕರಣದಲ್ಲಿ ನಾನು ಸುಪ್ರೀಂಕೋರ್ಟ್ಗೆ ಹೋಗಿ ಹೋರಾಟ ಮಾಡುತ್ತೇನೆ ಎಂದು 86ವರ್ಷದ ಬಾಘೇಲ್ ತಿಳಿಸಿದ್ದಾರೆ.
ಇದೇ ಮೊದಲಲ್ಲ ಭೂಪೇಶ್ ಬಾಘೇಲ್ ತಂದೆ ನಂದಕುಮಾರ್ ಬಾಘೇಲ್ ಬ್ರಾಹ್ಮಣರ ವಿರುದ್ಧ ಮಾತನಾಡಿದ್ದು ಇದೇ ಮೊದಲಲ್ಲ ಎಂದೂ ಹೇಳಲಾಗಿದೆ. ಕಳೆದ ಬಾರಿ ಉತ್ತರ ಪ್ರದೇಶ ಚುನಾವಣೆ ಪೂರ್ವವೂ ಕೂಡ ಪದೇಪದೆ ಬ್ರಾಹ್ಮಣ ಸಮುದಾಯದ ವಿರುದ್ಧ ಮಾತನಾಡುತ್ತಿದ್ದರು. ಆಗ ಬಿಜೆಪಿ ಕೂಡ ಅದನ್ನು ಟೀಕಿಸಿತ್ತು. ನಂದಕುಮಾರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಮೆಹಬೂಬ ಮುಫ್ತಿಗೆ ಮತ್ತೆ ಗೃಹಬಂಧನ; ಜಮ್ಮು ಕಾಶ್ಮೀರದ ನಕಲಿ ಸಹಜಸ್ಥಿತಿ ಬಯಲಾಯ್ತು ಎಂದ ಮಾಜಿ ಸಿಎಂ
Meeting Point : …ಇದೇ ಕಾರಣಕ್ಕೆ ಹುಡುಗ ಹುಡುಗಿಯರು ಹೆಚ್ಚು ‘ದೈವಭಕ್ತ’ರಾಗುತ್ತಿರುವುದು
Published On - 3:50 pm, Tue, 7 September 21