ಓದಿನ ಹುಚ್ಚು ಹಿಡಿಸಲೆಂದೇ ಈ ರಸ್ತೆಗಳ ಬದಿಯಲ್ಲಿದೆ ಉಚಿತ ಪುಸ್ತಕದ ಬಾಕ್ಸ್​; ಕೇರಳದಲ್ಲಿದೆ ಪುಸ್ತಕ ಗ್ರಾಮ!

TV9 Digital Desk

| Edited By: Sushma Chakre

Updated on:Sep 09, 2021 | 9:06 PM

Book Village | ಕೇರಳದ ಸಣ್ಣ ಹಳ್ಳಿಯಾದ ಪೆರುಂಕುಲಂನಲ್ಲಿ ಈ ರೀತಿಯ ಹಲವಾರು ಪುಸ್ತಕಗಳ ಗೂಡುಗಳನ್ನು ನಿರ್ಮಿಸಲಾಗಿದೆ. ಈ ಬಾಕ್ಸ್​ನಲ್ಲಿ ಹಳೆಯ ಪುಸ್ತಕಗಳು ಓದಲು ಉಚಿತವಾಗಿ ಸಿಗುತ್ತವೆ.

ಓದಿನ ಹುಚ್ಚು ಹಿಡಿಸಲೆಂದೇ ಈ ರಸ್ತೆಗಳ ಬದಿಯಲ್ಲಿದೆ ಉಚಿತ ಪುಸ್ತಕದ ಬಾಕ್ಸ್​; ಕೇರಳದಲ್ಲಿದೆ ಪುಸ್ತಕ ಗ್ರಾಮ!
ಕೇರಳದ ಪುಸ್ತಕ ಗ್ರಾಮ

Follow us on

ಕೇರಳಕ್ಕೆ ಕೇವಲ ದೇವರ ನಾಡು ಎಂಬ ಹೆಸರು ಮಾತ್ರವಲ್ಲದೆ ಅತಿ ಹೆಚ್ಚು ಸಾಕ್ಷರತಾ ರಾಜ್ಯ ಎಂಬ ಖ್ಯಾತಿಗೂ ಪಾತ್ರವಾಗಿದೆ. ಈ ಕೇರಳದಲ್ಲಿ ಶೇ. 96ರಷ್ಟು ಸಾಕ್ಷರತೆಯಿದೆ. ಇಲ್ಲಿ ಓದಲು ರಸ್ತೆ ಬದಿಯ ಗೂಡುಗಳಲ್ಲಿ ಉಚಿತವಾಗಿ ಪುಸ್ತಕಗಳೂ ಸಿಗುತ್ತವೆ!. ಈ ಮೂಲಕ ಕೇರಳದಲ್ಲಿ ಓದಿನ ಅಭಿರುಚಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗುತ್ತಿದೆ. ತಮ್ಮ ಬಳಿ ಇರುವ ಪುಸ್ತಕವನ್ನು ಓದಿದವರು ಅದನ್ನು ರಸ್ತೆಗಳ ಬದಿ ಇರುವ ಗೂಡಿನಲ್ಲಿ ಇಟ್ಟರೆ ಅಗತ್ಯವಿದ್ದರೆ ಆ ಪುಸ್ತಕವನ್ನು ಓದಿ ವಾಪಾಸ್ ತಂದಿಡುತ್ತಾರೆ. ಇದೊಂದು ರೀತಿಯ ಲೈಬ್ರರಿಯಿದ್ದಂತೆ.

ಕೇರಳದ ಸಣ್ಣ ಹಳ್ಳಿಯಾದ ಪೆರುಂಕುಲಂನಲ್ಲಿ ಈ ರೀತಿಯ ಹಲವಾರು ಪುಸ್ತಕಗಳ ಗೂಡುಗಳನ್ನು ನಿರ್ಮಿಸಲಾಗಿದೆ. ಈ ಬಾಕ್ಸ್​ನಲ್ಲಿ ಹಳೆಯ ಪುಸ್ತಕಗಳು ಓದಲು ಉಚಿತವಾಗಿ ಸಿಗುತ್ತವೆ. ಈ ಊರಿಗೆ ಪುಸ್ತಕ ಗ್ರಾಮ ಅಥವಾ ಬುಕ್ ವಿಲೇಜ್ ಎಂಬ ಖ್ಯಾತಿಯೂ ಇದೆ. ಇಲ್ಲಿ ಹಳೆಯ ಪುಸ್ತಕಗಳು, ನ್ಯೂಸ್ ಪೇಪರ್​ಗಳು ಓದಲು ಸಿಗುತ್ತವೆ. ಜನರು ತಮಗೆ ಬೇಕಾದ್ದನ್ನು ತೆಗೆದುಕೊಂಡು ಹೋಗಿ ಓದಬಹುದು. ಓದಿದ ನಂತರ ಅದನ್ನು ಮತ್ತೆ ಬಾಕ್ಸ್​ನಲ್ಲಿ ತಂದಿಟ್ಟರೆ ಬೇರೆಯವರು ಅದನ್ನು ತೆಗೆದುಕೊಂಡು ಹೋಗುತ್ತಾರೆ.

ಈ ಪುಸ್ತಕ ಗ್ರಾಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹಳ್ಳಿಯ ಜನರು ಓದುವ ಉತ್ಸಾಹ, ಓದಿನ ಪ್ರೀತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರೂ ಮೊಬೈಲ್, ಕಂಪ್ಯೂಟರ್​ಗಳಿಗೆ ಅಂಟಿಕೊಂಡು ಕೂರುತ್ತಿರುವ ಇಂದಿನ ಕಾಲದಲ್ಲಿ ಹೀಗೆ ಚಟಕ್ಕೆ ಬಿದ್ದವರಂತೆ ಪುಸ್ತಕಗಳನ್ನು ಓದುವವರೂ ಇದ್ದಾರಾ? ಎಂದು ಅನೇಕರು ಹುಬ್ಬೇರಿಸಿದ್ದಾರೆ.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಈ ರೀತಿಯ ಬುಕ್ ಬಾಕ್ಸ್​ಗಳನ್ನು ನೋಡಿದ್ದೆ. ಕೇರಳದಲ್ಲೂ ಈ ಪರಿಕಲ್ಪನೆ ಇದೆ ಎಂಬುದನ್ನು ತಿಳಿದು ಖುಷಿಯಾಯಿತು. ಈ ಹಳ್ಳಿಯಿಂದ ಪುಸ್ತಕ ಸಂಸ್ಕೃತಿ ಮತ್ತಷ್ಟು ಪಸರಿಸಲಿ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಕೇರಳ ಪ್ರವಾಸೋದ್ಯಮದಿಂದ ಈ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ರಸ್ತೆಗಳ ಬದಿಯಲ್ಲಿ ನಿರ್ಮಿಸಲಾಗಿರುವ ಪುಸ್ತಕ ಗೂಡುಗಳು ಜನರಿಗೆ ಉಚಿತವಾಗಿ ಪುಸ್ತಕ ಸಿಗುವಂತೆ ಮಾಡುತ್ತಿವೆ. ಜನರು ಬಿಡುವಿದ್ದಾಗ ಇಲ್ಲಿನ ಪುಸ್ತಕಗಳನ್ನು ಓದಿ ವಾಪಾಸ್ ತಂದಿಡುತ್ತಾರೆ.

ಇದನ್ನೂ ಓದಿ: Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Viral News: ಬೆಕ್ಕಿಗಾಗಿಯೇ ಈ ಬಂಗಲೆಯಲ್ಲಿದೆ ಎಸಿ ರೂಂ, ಬೆಡ್, ಕಾರ್ಟೂನ್ ಥಿಯೇಟರ್!

(Viral News: In This Kerala Book Village Books Are Available For Free To Read In Roadside Boxes)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada