ಅಮೆರಿಕಾದ ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು; 9/11 ದಾಳಿಯಿಂದ ಅಮೆರಿಕಾ ಕಲಿತ ಪಾಠವೇನು?
Joe Biden Video Message: ಅಮೆರಿಕಾದ ಸಾರ್ವಭೌಮತ್ವ ಮತ್ತು ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು. ಅಮೆರಿಕದ WTC ಮೇಲೆ ಅಲ್ಖೈದಾ ದಾಳಿಗೆ ಇಂದು 20ನೇ ವಾರ್ಷಿಕ. ಈ ಸಂದರ್ಭದಲ್ಲಿ ಮೃತಪಟ್ಟ ಸಾವಿರಾರು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಸಾರ ಭಾಷಣ ಮಾಡಿದ್ದಾರೆ.
ವಾಷಿಂಗ್ಟನ್: ಅಮೆರಿಕಾದ ಸಾರ್ವಭೌಮತ್ವ ಮತ್ತು ಪ್ರತಿಷ್ಠೆಯನ್ನು ಅಕ್ಷರಶಃ ಮಣ್ಣುಪಾಲು ಮಾಡಿದ ಉಗ್ರ ದಿನ ಇಂದು. ಅಮೆರಿಕದ WTC ಮೇಲೆ ಅಲ್ಖೈದಾ ದಾಳಿಗೆ ಇಂದು 20ನೇ ವಾರ್ಷಿಕ. ಈ ಸಂದರ್ಭದಲ್ಲಿ ಮೃತಪಟ್ಟ ಸಾವಿರಾರು ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಸಾರ ಭಾಷಣ ಮಾಡಿದ್ದಾರೆ. 9/11 ದಾಳಿಯಿಂದ ಐಕ್ಯತೆಯೇ ಶಕ್ತಿ ಎಂಬ ಪಾಠ ಕಲಿತೆವು. ಅಮೆರಿಕದ ರಾಷ್ಟ್ರೀಯ ಐಕ್ಯತೆಯೇ ದೊಡ್ಡ ಶಕ್ತಿ ಎಂದು ವಿಡಿಯೋ ಸಂದೇಶದ ಮೂಲಕ ಜೋ ಬೈಡನ್ ಹೇಳಿದ್ದಾರೆ.
2001ರ ಸೆಪ್ಟೆಂಬರ್ 11ರಂದು WTC ಮೇಲೆ ದಾಳಿಯಾಗಿತ್ತು. ಅಲ್ಖೈದಾ ಉಗ್ರರು ವಿಮಾನ ಹೈಜಾಕ್ ಮಾಡಿ ದಾಳಿ ನಡೆಸಿದ್ದರು. ಉಗ್ರರ ದಾಳಿಯಲ್ಲಿ 2,977 ಜನರು ಮೃತಪಟ್ಟಿದ್ದರು. ದಾಳಿಗೆ ಸಂಚು ರೂಪಿಸಿದ ಆರೋಪದ ಮೇಲೆ ಅಮೆರಿಕವು 2011ರ ಮೇ 2ರಂದು ಒಸಾಮಾ ಬಿನ್ ಲಾಡೆನ್ನನ್ನು (Osama bin Laden) ಪಾಕಿಸ್ತಾನದ ಅಬೋಟಾಬಾದ್ದಲ್ಲಿ (Abbottabad) ಹತ್ಯೆಗೈದಿದ್ದ ಪಾಕ್ನ ಅಬೋಟಾಬಾದ್ನಲ್ಲಿ ಅಡಗಿದ್ದವನನ್ನು ಕೊಂದಿತ್ತು. ಅಮೆರಿಕದ ನೇವಿ ಸೀಲ್ ಪಡೆ ಲಾಡೆನ್ನನ್ನು ಹತ್ಯೆಗೈದಿತ್ತು.
ಪರಿಸ್ಥಿತಿಯ ವ್ಯಂಗ್ಯವೆಂಬಂತೆ ಇಂದು (ಸೆಪ್ಟೆಂಬರ್ 11) ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಉದ್ಘಾಟನೆಗೆ ವೇದಿಕೆ ಸಜ್ಜಾಗಿದೆ. ಆದರೆ ತಾಲಿಬಾನ್ ಮೂಲಗಳ ಪ್ರಕಾರ ತಾಲಿಬಾನ್ ಸರ್ಕಾರ ಉದ್ಘಾಟನೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ವಿಡಿಯೋ ಸಂದೇಶ ಇಲ್ಲಿದೆ:
20 years after September 11, 2001, we commemorate the 2,977 lives we lost and honor those who risked and gave their lives. As we saw in the days that followed, unity is our greatest strength. It’s what makes us who we are — and we can’t forget that. pic.twitter.com/WysK8m3LAb
— President Biden (@POTUS) September 10, 2021
Also Read:
ಇಂದು ಅಫ್ಘಾನಿಸ್ತಾನದಲ್ಲಿ ನಡೆಯಬೇಕಿದ್ದ ತಾಲಿಬಾನ್ ಸರ್ಕಾರ ಉದ್ಘಾಟನೆ ಕ್ಯಾನ್ಸಲ್; ಕಾಬೂಲ್ ಏರ್ಪೋರ್ಟ್ ಹೆಸರು ಬದಲಾವಣೆ (September 11 2001 twin tower attack to commemorate 2,977 lives lost US president joe biden video message)