ನಮ್ಮ ಸಿನಿಮಾದಲ್ಲಿ ಸಿಎಂ ಬೊಮ್ಮಾಯಿ ಹೀರೋ, ಯಡಿಯೂರಪ್ಪ ನಿರ್ದೇಶಕ: ಸಚಿವ ಶ್ರೀರಾಮುಲು ವ್ಯಾಖ್ಯಾನ

ಸಾರಿಗೆ ನೌಕರರ ಮುಷ್ಕರ ವೇಳೆ ಅಮಾನತುಗೊಂಡವರನ್ನು, ವಜಾಗೊಂಡವರನ್ನು ಪುನಃ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳುವ ಚಿಂತನೆ ನಡೆದಿದೆ ಎಂದು ಅವರು ತಿಳಿಸಿದರು.

ನಮ್ಮ ಸಿನಿಮಾದಲ್ಲಿ ಸಿಎಂ ಬೊಮ್ಮಾಯಿ ಹೀರೋ, ಯಡಿಯೂರಪ್ಪ ನಿರ್ದೇಶಕ: ಸಚಿವ ಶ್ರೀರಾಮುಲು ವ್ಯಾಖ್ಯಾನ
ಸಾಂಕೇತಿಕ ಚಿತ್ರ
Follow us
TV9 Web
| Updated By: guruganesh bhat

Updated on: Sep 07, 2021 | 9:47 PM

ತುಮಕೂರು: ಸಿನಿಮಾದಲ್ಲಿ ಹೀರೋ ಎಷ್ಟೇ ಒಳ್ಳೆಯ ಅಭಿನಯ ಮಾಡಿ ಜನರನ್ನು ಆಕರ್ಷಿಸಿದರೂ ಅದರಲ್ಲಿ ನಿರ್ದೇಶಕರ ಪಾತ್ರ ಮುಖ್ಯ. ಸಿನಿಮಾದಲ್ಲಿ ಹೀರೋಗಿಂತ ದೊಡ್ಡ ಶಕ್ತಿ ನಿರ್ದೇಶಕರಿಗೆ ಇರುತ್ತದೆ. ನಮ್ಮ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೀರೋ ಇದ್ದಂತೆ. ಬಿ.ಎಸ್.ಯಡಿಯೂರಪ್ಪ ನಿರ್ದೇಶಕರಿದ್ದಂತೆ ಎಂದು ಸಚಿವ ಶ್ರೀರಾಮುಲು ವ್ಯಾಖ್ಯಾನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ. ಇದನ್ನು ನಮ್ಮ ಕೇಂದ್ರ ಗೃಹ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಹಾಗಂತ ಯಡಿಯೂರಪ್ಪರನ್ನು ಸೈಡ್‌ಲೈನ್ ಮಾಡಿಲ್ಲ. ಪಕ್ಷಕ್ಕೆ ಬಿ.ಎಸ್.ಯಡಿಯೂರಪ್ಪ ದೊಡ್ಡ ಶಕ್ತಿ ಇದ್ದಂತೆ. ಬಿಎಸ್‌ವೈ ಮಾರ್ಗದರ್ಶನದಲ್ಲೇ ಚುನಾವಣೆ ನಡೆಯುತ್ತದೆ ಎಂದು ಅವರು ತಿಳಿಸಿದರು.

ಕೊವಿಡ್ ವೇಳೆ ಕಾರ್ಯನಿರತರಾಗಿ ಸೋಂಕಿಗೆ ತುತ್ತಾಗಿ ಮೃತಪಟ್ಟ ಸಾರಿಗೆ ನೌಕರಿಗೆ ಪರಿಹಾರ ಒದಗಿಸಲಾಗುವುದು. ಸಾರಿಗೆ ನೌಕರರ ಮುಷ್ಕರ ವೇಳೆ ಅಮಾನತುಗೊಂಡವರನ್ನು, ವಜಾಗೊಂಡವರನ್ನು ಪುನಃ ಕೆಲಸಕ್ಕೆ ನಿಯೋಜನೆ ಮಾಡಿಕೊಳ್ಳುವ ಚಿಂತನೆ ನಡೆದಿದೆ. ವರ್ಗಾವಣೆಗೊಂಡವರನ್ನೂ ಪುನಃ ಮೂಲ ಡಿಪೋಗೆ ನಿಯೋಜನೆ ಮಾಡುವ ಕುರಿತು ಮಾತುಕತೆ ನಡೆದಿದೆ. ಕೆಎಸ್ಆರ್​ಟಿಸಿ ಅಧ್ಯಕ್ಷರ ಬಳಿ ಈ ಬಗ್ಗೆ ಚರ್ಚಿಸಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: 

ಏಕಾಂಗಿ ಪ್ರವಾಸ ಕೈಬಿಟ್ಟ ಮಾಜಿ ಸಿಎಂ ಯಡಿಯೂರಪ್ಪ; ಬಿಜೆಪಿ ನಿಯಮಗಳೇ ಒಬ್ಬರೇ ಪ್ರವಾಸ ಮಾಡಲು ಅಡ್ಡಿ!

BS Yediyurappa: ರಾಜ್ಯ ಪ್ರವಾಸಕ್ಕೆ 1 ಕೋಟಿ ರೂ. ಬೆಲೆಯ ಐಷಾರಾಮಿ ಕಾರು ಖರೀದಿಸಿದ ಮಾಜಿ ಸಿಎಂ ಯಡಿಯೂರಪ್ಪ

(Transport Minister B Sriramulu says CM Bommai is hero BS Yediyurappa is director in our Karnataka Government)