ಮುಂದಿನ ಬಾರಿ ದಲಿತರೇ ರಾಜ್ಯದ ಸಿಎಂ ಆಗಬೇಕು: ದಲಿತ ಸಿಎಂ ಕೂಗಿಗೆ ಕರೆಕೊಟ್ಟ ಜೆಡಿಎಸ್ ಶಾಸಕ ಗೌರಿಶಂಕರ್

ಛಲವಾದಿ, ಆದಿ ಜಾಂಬವ ಸಮುದಾಯದಲ್ಲಿ ಒಗ್ಗಟ್ಟಿದ್ದಿದ್ರೆ ಡಾ. ಜಿ. ಪರಮೇಶ್ವರ ಕಳೆದ ಬಾರಿ ಮುಖ್ಯಮಂತ್ರಿ ಆಗುತ್ತಿದ್ರು ಎಂದು ತುಮಕೂರಿನಲ್ಲಿ ನಡೆದ ಛಲವಾದಿ-ಆದಿ ಜಾಂಬವ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಗೌರಿಶಂಕರ್ ಹೇಳಿದ್ದಾರೆ.

ಮುಂದಿನ ಬಾರಿ ದಲಿತರೇ ರಾಜ್ಯದ ಸಿಎಂ ಆಗಬೇಕು: ದಲಿತ ಸಿಎಂ ಕೂಗಿಗೆ ಕರೆಕೊಟ್ಟ ಜೆಡಿಎಸ್ ಶಾಸಕ ಗೌರಿಶಂಕರ್
ಮುಂದಿನ ಬಾರಿ ದಲಿತರೇ ರಾಜ್ಯದ ಸಿಎಂ ಆಗಬೇಕು: ದಲಿತ ಸಿಎಂ ಕೂಗಿಗೆ ಕರೆಕೊಟ್ಟ ಜೆಡಿಎಸ್ ಶಾಸಕ ಗೌರಿಶಂಕರ್

ತುಮಕೂರು: ಮುಂದಿನ ಬಾರಿ ದಲಿತರೇ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ದಲಿತ ಸಿಎಂ ಕೂಗಿಗೆ ಜೆಡಿಎಸ್​ ಶಾಸಕ ಗೌರಿಶಂಕರ್ ಕರೆಕೊಟ್ಟಿದ್ದಾರೆ. ಯಾವುದೇ ಪಕ್ಷ ಬರಲಿ, ದಲಿತರೇ ಸಿಎಂ ಆಗಬೇಕು. ದಲಿತ ಸಿಎಂ ಹೋರಾಟಕ್ಕೆ ನನ್ನ ಸಹಮತ ಇದೆ. ದಲಿತರು ಒಗ್ಗಟ್ಟಾಗಿ ಈಗಿನಿಂದಲೇ ಬೇಡಿಕೆ ಇಡಬೇಕು ಎಂದಿದ್ದಾರೆ.

ಛಲವಾದಿ, ಆದಿ ಜಾಂಬವ ಸಮುದಾಯದಲ್ಲಿ ಒಗ್ಗಟ್ಟಿದ್ದಿದ್ರೆ ಡಾ. ಜಿ. ಪರಮೇಶ್ವರ ಕಳೆದ ಬಾರಿ ಮುಖ್ಯಮಂತ್ರಿ ಆಗುತ್ತಿದ್ರು. ಡಾ. ಬಿ.ಆರ್. ಅಂಬೇಡ್ಕರ್ ಕನಸು ನನಸಾಗಬೇಕಾದರೆ ರಾಜ್ಯದ್ಲಲಿ ಒಬ್ಬ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ತುಮಕೂರಿನಲ್ಲಿ ನಡೆದ ಛಲವಾದಿ-ಆದಿ ಜಾಂಬವ ಕಾರ್ಯಕ್ರಮದಲ್ಲಿ ಜೆಡಿಎಸ್ ಶಾಸಕ ಗೌರಿಶಂಕರ್ (JDS MLA DC Gowrishankar) ಹೇಳಿದ್ದಾರೆ.

ಇದರಿಂದ ಮತ್ತೆ ದಲಿತ ಸಿಎಂ ಕೂಗಿಗೆ ಪುಷ್ಟಿ ಬಂದಂತಿದೆ. ಅದರಲ್ಲೂ ಜೆಡಿಎಸ್ ಶಾಸಕ ಡಿಸಿ ಗೌರಿಶಂಕರ್ ಈ ಮಾತು ಹೇಳಿರುವುದು ಸಂಚಲನ ಮೂಡಿಸಿದೆ. ದಲಿತ ಸಿಎಂ ಕೂಗಿಗೆ ನನ್ನ ಸಹಮತ ಇದೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ:
ಡಾ. ಪರಮೇಶ್ವರ್ ಅಜಾತಶತ್ರು- ಸಚಿವ ಅಶೋಕ್ ಹೊಗಳಿಕೆ; ಅಶೋಕ್‌ಗೂ ಮುಖ್ಯಮಂತ್ರಿ ಆಗುವ ಶಕ್ತಿ ಇದೆ- ಪರಮೇಶ್ವರ್ ಹೇಳಿಕೆ

ಇದನ್ನೂ ಓದಿ:

ಮಾಜಿ ಗೃಹ ಸಚಿವರಿಗೆ ಹಾರ ಹಾಕಿ ಜನ್ಮದಿನ ಶುಭಾಶಯ ಕೋರಿದ ರೌಡಿ ಶೀಟರ್, ನೆಲಮಂಗಲದ ಕಡೆ ಹೆಜ್ಜೆ ಹಾಕಿದರಾ ಪರಮೇಶ್ವರ್?

(jds mla gowrishankar calls for next cm from karnataka should be dalit)

Read Full Article

Click on your DTH Provider to Add TV9 Kannada