AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾ. ಪರಮೇಶ್ವರ್ ಅಜಾತಶತ್ರು- ಸಚಿವ ಅಶೋಕ್ ಹೊಗಳಿಕೆ; ಅಶೋಕ್‌ಗೂ ಮುಖ್ಯಮಂತ್ರಿ ಆಗುವ ಶಕ್ತಿ ಇದೆ- ಪರಮೇಶ್ವರ್ ಹೇಳಿಕೆ

R Ashoka: ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿದ್ದರೂ ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಅಗತ್ಯಕ್ಕಿಂತಲೂ ಹೆಚ್ಚಿಗೇ ‘ಮುಂದಿನ ಮುಖ್ಯಮಂತ್ರಿ’ ಸ್ವಘೋಷ ವಾಕ್ಯ ಜೋರಾಗಿ ಸದ್ದು ಮಾಡುತ್ತಿದೆ. ಈ ಮಧ್ಯೆ, ನಗರದಲ್ಲಿಂದು ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಡಾ. ಜಿ ಪರಮೇಶ್ವರ್ ಅವರನ್ನು ಅಜಾತಶತ್ರು ಎಂದು ಕಂದಾಯ ಸಚಿವ ಆರ್​ ಅಶೋಕ್ ಹೊಗಳಿದರು. ಇದಕ್ಕೆ... ಅಲ್ಲೇ ಬಹುಮಾನ ಅಲ್ಲೇ ಡ್ರಾ ಎಂಬಂತೆ ಅಶೋಕ್‌ಗೂ ಮುಖ್ಯಮಂತ್ರಿ ಆಗುವ ಶಕ್ತಿ ಇದೆ ಎಂದು ಹೇಳುವ ಮೂಲಕ ಡಾ. ಪರಮೇಶ್ವರ್ ‘ಮುಯ್ಯಿ’ ತೀರಿಸಿಕೊಂಡರು!

ಡಾ. ಪರಮೇಶ್ವರ್ ಅಜಾತಶತ್ರು- ಸಚಿವ ಅಶೋಕ್ ಹೊಗಳಿಕೆ; ಅಶೋಕ್‌ಗೂ ಮುಖ್ಯಮಂತ್ರಿ ಆಗುವ ಶಕ್ತಿ ಇದೆ- ಪರಮೇಶ್ವರ್ ಹೇಳಿಕೆ
ಡಾ. ಪರಮೇಶ್ವರ್ ಅಜಾತಶತ್ರು- ಸಚಿವ ಅಶೋಕ್ ಹೊಗಳಿಕೆ; ಅಶೋಕ್‌ಗೂ ಮುಖ್ಯಮಂತ್ರಿ ಆಗುವ ಶಕ್ತಿ ಇದೆ- ಪರಮೇಶ್ವರ್ ಹೇಳಿಕೆ
TV9 Web
| Edited By: |

Updated on: Jun 25, 2021 | 2:17 PM

Share

ತುಮಕೂರು: ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿದ್ದರೂ ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಅಗತ್ಯಕ್ಕಿಂತಲೂ ಹೆಚ್ಚಿಗೇ ‘ಮುಂದಿನ ಮುಖ್ಯಮಂತ್ರಿ’ ಸ್ವಘೋಷ ವಾಕ್ಯ ಜೋರಾಗಿ ಸದ್ದು ಮಾಡುತ್ತಿದೆ. ಈ ಮಧ್ಯೆ, ನಗರದಲ್ಲಿಂದು ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಡಾ. ಜಿ ಪರಮೇಶ್ವರ್ ಅವರನ್ನು ಅಜಾತಶತ್ರು ಎಂದು ಕಂದಾಯ ಸಚಿವ ಆರ್​ ಅಶೋಕ್ ಹೊಗಳಿದರು. ಇದಕ್ಕೆ… ಅಲ್ಲೇ ಬಹುಮಾನ ಅಲ್ಲೇ ಡ್ರಾ ಎಂಬಂತೆ ಅಶೋಕ್‌ಗೂ ಮುಖ್ಯಮಂತ್ರಿ ಆಗುವ ಶಕ್ತಿ ಇದೆ ಎಂದು ಹೇಳುವ ಮೂಲಕ ಡಾ. ಪರಮೇಶ್ವರ್ ‘ಮುಯ್ಯಿ’ ತೀರಿಸಿಕೊಂಡರು!

ಮಾಜಿ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್ ಅಜಾತಶತ್ರು ಎಂದು ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಡಾ.ಜಿ. ಪರಮೇಶ್ವರ್‌ರನ್ನು ಸಚಿವ ಆರ್.ಅಶೋಕ್ ಹೊಗಳಿದರು. ಚಿನ್ನ ಎಲ್ಲೇ ಇದ್ದರೂ ಅದು ಚಿನ್ನಾನೆ. ಮಾಜಿ ಡಿಸಿಎಂ ಡಾ.ಪರಮೇಶ್ವರ್ ಸರಳ ಸಜ್ಜನಿಕೆಯ ವ್ಯಕ್ತಿ. ಡಾ.ಜಿ.ಪರಮೇಶ್ವರ್‌ಗೋಸ್ಕರ ಕೊರಟಗೆರೆಗೆ ಬಂದಿದ್ದೇನೆ. ಡಾ.ಜಿ.ಪರಮೇಶ್ವರ್​ಗೆ ಮಾತು ಕೊಟ್ಟಿದ್ದರಿಂದ ಬಂದಿದ್ದೇನೆ ಎಂದು ಅಶೋಕ್​ ಹೇಳಿದರು.

ಕೊರಟಗೆರೆಯಲ್ಲಿ ಉಪನೋಂದಣಿ ಕಚೇರಿ ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವ ಅಶೋಕ್: ಉಪನೋಂದಣಿ ಕಚೇರಿ ಉದ್ಘಾಟಿಸಿ ಮಾತನಾಡಿದ ಕಂದಾಯ ಸಚಿವ ಅಶೋಕ್ ಅವರು ಸ್ಥಳೀಯ ಕಾಂಗ್ರೆಸ್​ ಶಾಸಕ ಡಾ.ಪರಮೇಶ್ವರ್​ ಉಪ ನೋಂದಣಿ ಕಚೇರಿ ನಿರ್ಮಿಸಿದ್ದಾರೆ. ನಾನು ಉಪ ನೋಂದಣಿ ಕಚೇರಿ ಉದ್ಘಾಟನೆ ಮಾಡುತ್ತಿದ್ದೇನೆ. 64 ಲಕ್ಷ ರೂ. ವೆಚ್ಚದಲ್ಲಿ ಉಪ ನೋಂದಣಿ ಕಚೇರಿ ನಿರ್ಮಾಣ ಕೆಲಸ ಮಾಡಿಸಿದವರು ಪರಮೇಶ್ವರ್, ನಾನು ಉದ್ಘಾಟಿಸ್ತಿದ್ದೇನೆ ಅಷ್ಟೇ. ಪರಮೇಶ್ವರ್​ರವರು ಕರೆದಿದ್ದರಿಂದ ಕಾರ್ಯಕ್ರಮಕ್ಕೆ ಬಂದಿರುವೆ ಎಂದರು.

ತದನಂತರ ಮಾತನಾಡಿದ ಡಾ.ಪರಮೇಶ್ವರ್ ಅವರು ಸರ್ಕಾರದ ಮಟ್ಟದಲ್ಲಿ ಆರ್​. ಅಶೋಕ್ ಪ್ರಭಾವಿ ಸಚಿವರಾಗಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್‌ಗೆ ಮತ್ತಷ್ಟು ಒಳ್ಳೆಯದಾಗಲಿ. ಏಕೆಂದರೆ ಎಲ್ಲ ಪಕ್ಷಗಳಲ್ಲಿಯೂ ಸಿಎಂ ಬಗ್ಗೆ ಚರ್ಚೆಯಾಗುತ್ತಿದೆ. ಹೀಗಾಗಿ ಅಶೋಕ್‌ಗೂ ಒಳ್ಳೆಯದಾಗಲಿ. ಅವರಿಗೆ ಮತ್ತಷ್ಟು ಶಕ್ತಿ ಬರಲಿ. ಅಶೋಕ್‌ಗೂ ಸಿಎಂ ಆಗುವ ಶಕ್ತಿ ಇದೆ ಎಂದು ಜಿ.ಪರಮೇಶ್ವರ್ ಮಾರ್ಮಿಕವಾಗಿ ನುಡಿದರು.

(Revenue minister r ashok inaugurates registrar office dr g parameshwara says ashok can become chief minister)