ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣ: ಎಫ್ಐಆರ್ ದಾಖಲು; ಆರೋಪಿಗಳು ಯಾರು ಗೊತ್ತಾ?

ರೇಖಾ ಸಂಬಂಧಿ ಸಂಜಯ್ ದೂರಿನ ಮೇರೆಗೆ ಬೆಂಗಳೂರಿನ ಕಾಟನ್ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾಟನ್ಪೇಟೆಯ ಆಂಜಿನಪ್ಪ ಗಾರ್ಡನ್ ಬಳಿ ಜೂನ್ 24ರ ಬೆಳಗ್ಗೆ 10ರಿಂದ 11 ಗಂಟೆ ನಡುವೆ ದುಷ್ಕೃತ್ಯ ನಡೆದಿತ್ತು. ಈ ಸಂಬಂಧ ಈಗ FIR ದಾಖಲಾಗಿದ್ದು ಪೊಲೀಸರು ಆರೋಪಿಗಳ ಹೆಸರು ನಮೂದಿಸಿದ್ದಾರೆ.

ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣ: ಎಫ್ಐಆರ್ ದಾಖಲು; ಆರೋಪಿಗಳು ಯಾರು ಗೊತ್ತಾ?
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಆಳುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಂಬ ಮಾಯಾವಿಯನ್ನು ಅದರ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಮೂಲಕ ಹರಾಜಿಗಿಟ್ಟಂತಿದೆ. ಕಾರ್ಪೊರೇಟರುಗಳ ಲೆವಲ್ಲಿನಲ್ಲಿ ಈ ಪಾಟಿ ದ್ವೇಷ, ಅಸೂಯೆ, ಹಣಾಹಣಿ. ಹಪಾಹಪಿ ಇದೆಯಾ? ಕೊನೆಗೆ ಇದೆಲ್ಲ ಯಾವುದಕ್ಕೆ? ಎಂಬ ಪ್ರಶ್ನೆಗಳನ್ನು ಅಮಾಯಕ ರಾಜಧಾನಿ ಜನ ಕೇಳುವಂತಾಗಿದೆ. ಪಿಂಚಣಿದಾರರ ಸ್ವರ್ಗ, ಕೆಂಪೇಗೌಡರ ನಾಡು ಎಂಬೆಲ್ಲಾ ವಿಶೇಷತೆಗಳಿಂದ ಕರೆಯಿಸಿಕೊಳ್ಳುತ್ತಿದ್ದ ಬೆಂಗಳೂರು ಎಂಬ ಮಾಯಾವಿ ಇಂತಹ ಪ್ರಸಂಗಗಳಿಗೆ ಸಾಕ್ಷಿಯಾಗುತ್ತಿದೆಯಲ್ಲಾ ಎಂದು ಜನ ತಲೆಯ ಮೇಲೆ ಕೈಹೊತ್ತುಕೊಳ್ಳುವಂತಾಗಿದೆ. ಎಲ್ಲಿಂದಲೋ ಬಂದು ಇಲ್ಲಿನ ಬಿಬಿಎಂಪಿ ಎಂಬ ಸಾಮ್ರಾಜ್ಯದ ಮೇಲೆ ಪ್ರಭುತ್ವ ಸ್ಥಾಪಿಸಲು ಈ ಪುರಪಿತೃಗಳು ಹೀಗೆಲ್ಲಾ ಆಟ ಹೂಡುತ್ತಿದ್ದಾರಾ? ಹಣದ ಮೇಲಿನ ಹಪಾಹಪಿ ಪುರಪಿತೃಗಳನ್ನು ನಿರ್ಲಜ್ಜರನ್ನಾಗಿಸುತ್ತಿದೆಯಾ? ಎಂಬ ಕೂಗು, ಕೊರಗು ಕಾಡುತ್ತದೆ.

ತಾಜಾ ಪ್ರಕರಣದಲ್ಲಿ ನಿನ್ನೆ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ನಡೆದಿದೆ. ಅದರ ಬೆನ್ನು ಹತ್ತಿದರೆ ಅನೇಕ ವಿಕೃತ, ವಿಲಕ್ಷಣ, ಅವಲಕ್ಷಣಗಳು ಕಣ್ಣಿಗೆ ರಾಚುತ್ತದೆ. ರೇಖಾ ಕದಿರೇಶ್ ಪತಿಯೂ ಪುರಪಿತೃವಾಗಿದ್ದು, ಅವನೂ ಹತ್ಯೆಗೀಡಾಗಿದ್ದ ಎಂಬುದು ಬೆಂಗಳೂರು ಇಂತಹ ಸ್ಥಿತಿಗೆ ಬಂದು ಇಂತಿದೆಯಾ? ಎಂದು ಬೇಜಾರಾಗುತ್ತದೆ. ಇನ್ನು ನಿನ್ನೆ ನಡೆದ ಹತ್ಯೆ ಪ್ರಕರಣದಲ್ಲಿ ಇದೇ ಬೆಂಗಳೂರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಗಳು ಯಾರು ಅಂದರೆ… ಪೀಟರ್, ಸೂರ್ಯ ಇವರಿಬ್ಬರ ಮೇಲೆ ಎಫ್​ಐಆರ್ ದಾಖಲಾಗಿದೆ. ಸ್ವತಹ ಕದಿರೇಶ್ ತಮ್ಮ, ಅಕ್ಕ ಅಕ್ಕನ ಮಗ ರೇಖಾ ಕದಿರೇಶ್ರ ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸದ್ಯ ನಾಲ್ವರನ್ನು ಪೊಲೀಸರು ಬಂದಿಸುದ್ದು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆರೋಪಿಗಳಿಗೆ ಅಶ್ರಯ ನೀಡುತ್ತಿದ್ದವನನ್ನೂ ಬಂಧಿಸಲಾಗಿದೆ. ಹಾಗೂ ಪ್ರಮುಖ ಆರೋಪಿಗಳಾದ ಪೀಟರ್, ಸೂರ್ಯನನ್ನೂ ಬಂಧಿಸಲಾಗಿದ್ದು ಉಳಿದ 8-10 ಮಂದಿಗಾಗಿ ಹುಡುಕಾಟ ನಡೆಯುತ್ತಿದೆ.

ಜೊತೆಯಿದ್ದವರಿಂದಲೇ ರೇಖಾ ಕೊಲೆ
ಇನ್ನು ಈ ಪ್ರಕರಣ ಸಂಬಂಧ ರೇಖಾ ಸಂಬಂಧಿ ಸಂಜಯ್ ದೂರಿನ ಮೇರೆಗೆ ಬೆಂಗಳೂರಿನ ಕಾಟನ್ಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕಾಟನ್ಪೇಟೆಯ ಆಂಜಿನಪ್ಪ ಗಾರ್ಡನ್ ಬಳಿ ಜೂನ್ 24ರ ಬೆಳಗ್ಗೆ 10ರಿಂದ 11 ಗಂಟೆ ನಡುವೆ ದುಷ್ಕೃತ್ಯ ನಡೆದಿತ್ತು. ಈ ಸಂಬಂಧ ಈಗ FIR ದಾಖಲಾಗಿದ್ದು ಪೊಲೀಸರು ಆರೋಪಿಗಳ ಹೆಸರು ನಮೂದಿಸಿದ್ದಾರೆ. ಸೂರ್ಯ ಎ 1, ಪೀಟರ್ ಎ 2, ಇತರರ ವಿರುದ್ಧ ಐಪಿಸಿ ಸೆಕ್ಷನ್ 34, 302ರ ಅಡಿ ಪ್ರಕರಣ ದಾಖಲಿಸಿದ್ದಾರೆ.

ನಿನ್ನೆ ಬೆಳಗ್ಗೆ 10 ರಿಂದ 10.30 ಸುಮಾರಿಗೆ ನಾನು ಮನೆಯಲ್ಲಿದ್ದೆ. ಅಕ್ಕ ಕಸ್ತೂರಿ ಏಕಾಏಕಿ ಕೂಗಿಕೊಂಡರು. ರೇಖಾ ಕದಿರೇಶ್ ಅವರ ಕಚೇರಿ ಬಳಿ ಚಾಕುವಿನಿಂದ ಹೊಡೆದು ರಕ್ತಗಾಯ ಮಾಡಿರುವುದಾಗಿ ತಿಳಿಸಿದ್ದರು. ಕೂಡಲೇ ಕಚೇರಿ ಬಳಿ ತೆರಳಿದಾಗ‌ ದೊಡ್ಡಮ್ಮ ರೇಖಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಯಾರೋ ಹರಿತವಾದ ಆಯುಧದಿಂದ ಕುತ್ತಿಗೆ, ಎದೆಭಾಗ, ಹೊಟ್ಟೆಗೆ ಚುಚ್ಚಿದ್ದರು. ಇಸ್ಕಾನ್‌ ನಿಂದ ಬರುವಾಗ ಊಟ ವಿತರಣೆ ಮಾಡಿ ಬರುವಾಗ ಘಟನೆ ನಡೆದಿದೆ. ಸ್ವಲ್ಪ ದೂರ ಹೋಗಿ ನೋಡಿದಾಗ ಸೂರ್ಯ, ಪೀಟರ್, ಕೃತ್ಯ ನಡೆದ ಸ್ಥಳದ ಕೊಂಚ ದೂರದಲ್ಲೇ‌ ಇದ್ದರು ಎಂದು ರೇಖಾ ಸಂಬಂಧಿ ಸಂಜಯ್ ನೀಡಿದ ದೂರಿನಲ್ಲಿ‌ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Rekha Kadiresh ಕೌಟುಂಬಿಕ ಕಲಹಕ್ಕೆ ರೇಖಾ ಕದಿರೇಶ್ ಕೊಲೆ? ಕುಟುಂಬದ ನಾಲ್ವರು ಅರೆಸ್ಟ್

Click on your DTH Provider to Add TV9 Kannada