Rekha Kadiresh ಕೌಟುಂಬಿಕ ಕಲಹಕ್ಕೆ ರೇಖಾ ಕದಿರೇಶ್ ಕೊಲೆ? ಕುಟುಂಬದ ನಾಲ್ವರು ಅರೆಸ್ಟ್

ಕದಿರೇಶ್ ಮರಣದ ನಂತರ ಕದಿರೇಶ್ ಕುಟುಂಬಸ್ಥರು ಸಾಕಷ್ಟು ನೋವು ಅನುಭವಿಸಿದ್ದರು. ಕದಿರೇಶ್ ಸಂಪಾದನೆ ಮಾಡಿದ್ದ ಆಸ್ತಿ, ರಾಜಕೀಯ ಪವರ್ ಎಲ್ಲವೂ ಕದಿರೇಶ್ ಪತ್ನಿ ರೇಖಾಗೆ ಸಿಕ್ಕಿತ್ತು. ಪವರ್ ಸಿಕ್ಕ ಬಳಿಕ ರೇಖಾ ಕದಿರೇಶ್ ಕುಟುಂಬವನ್ನು ಬಿಟ್ಟು ಒಂಟಿಯಾಗಿದ್ದರು.

Rekha Kadiresh ಕೌಟುಂಬಿಕ ಕಲಹಕ್ಕೆ ರೇಖಾ ಕದಿರೇಶ್ ಕೊಲೆ? ಕುಟುಂಬದ ನಾಲ್ವರು ಅರೆಸ್ಟ್
ರೇಖಾ ಕದಿರೇಶ್ ದಂಪತಿ (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on: Jun 25, 2021 | 9:52 AM

ಬೆಂಗಳೂರು: ಹಾಡಹಗಲೇ BBMP ಮಾಜಿ ಸದಸ್ಯೆ ರೇಖಾ ಕದಿರೇಶ್ರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಾಟನ್‌ಪೇಟೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಸಹಕಾರ ನೀಡಿದ ಹಾಗೂ ಸಂಚು ರೂಪಿಸಿದ್ದ ಕಾರಣ ನಾಲ್ವರು ಅರೆಸ್ಟ್ ಆಗಿದ್ದಾರೆ. ಸದ್ಯ ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ.

ಕೌಟುಂಬಿಕ ಕಲಹಕ್ಕೆ ರೇಖಾ ಕದಿರೇಶ್ ಕೊಲೆ? ಇನ್ನು ಕದಿರೇಶ್ ಮರಣದ ನಂತರ ಕದಿರೇಶ್ ಕುಟುಂಬಸ್ಥರು ಸಾಕಷ್ಟು ನೋವು ಅನುಭವಿಸಿದ್ದರು. ಕದಿರೇಶ್ ಸಂಪಾದನೆ ಮಾಡಿದ್ದ ಆಸ್ತಿ, ರಾಜಕೀಯ ಪವರ್ ಎಲ್ಲವೂ ಕದಿರೇಶ್ ಪತ್ನಿ ರೇಖಾಗೆ ಸಿಕ್ಕಿತ್ತು. ಪವರ್ ಸಿಕ್ಕ ಬಳಿಕ ರೇಖಾ ಕದಿರೇಶ್ ಕುಟುಂಬವನ್ನು ಬಿಟ್ಟು ಒಂಟಿಯಾಗಿದ್ದರು. ಕದಿರೇಶ್ ಕುಟುಂಬ ಹಾಗು ಕದಿರೇಶ್ ಜೊತೆಗಿದ್ದ ಯಾರಿಗೂ ಸೊಪ್ಪು ಹಾಕುತ್ತಿರಲಿಲ್ಲ. ಕದಿರೇಶ್ ಜೊತೆಗಿದ್ದ ಯಾರಿಗೂ ಹಣಕಾಸಿನ ಸಹಾಯ ಮಾಡುತ್ತಿರಲಿಲ್ಲ.

ರೇಖಾ ಬಿಜೆಪಿ ಹಿರಿಯ ನಾಯಕರ ಜೊತೆಗೆ ಒಳ್ಳೆಯ ಸಂಪರ್ಕ ಹೊಂದಿದ್ದರು. ಇದು ಎಲ್ಲರಿಗೂ ಕಂಗೆಡುವಂತೆ ಮಾಡಿತ್ತು. ಕದಿರೇಶ್ ತಮ್ಮ ಸುರೇಶ್ ಹಾಗೂ ಅಕ್ಕ ಮಾಲ ಕುಟುಂಬದ ಕಷ್ಟಗಳಿಗೆ ರೇಖಾ ಸಹಾಯ ಮಾಡಿರಲಿಲ್ಲ. ಹೀಗಾಗಿ ಕುಟುಂಬಸ್ಥರಿಗೆ ರೇಖಾ ಮೇಲೆ ಬೇಸರವಿತ್ತು. ಅಲ್ಲದೆ ಮುಂದಿನ ಚುನಾವಣೆಗೆ ನಿಲ್ಲುವ ಪ್ಲಾನ್ ಮಾಡಿಕೊಂಡಿದ್ದ ರೇಖಾ ಚುನಾವಣೆಯಲ್ಲಿ ಗೆದ್ದರೆ ಮತ್ತಷ್ಟು ದೂರವಾಗಿ ಒಬ್ಬಳೇ ಬೆಳೆದುಬಿಡುತ್ತಾಳೆ ಎಂಬ ಕಿಚ್ಚು ಕುಟುಂಬಸ್ಥರಲಿತ್ತು. ಇದೇ ಕಾರಣಕ್ಕೆ ಕದಿರೇಶ್ ಕುಟುಂಬ ಹಾಗೂ ಕದಿರೇಶ್ ಅಪ್ತ ಹುಡುಗರಿಗೆ ರೇಖಾ ವಿರುದ್ಧ ಕೋಪ ಇತ್ತು.

ಎಲ್ಲರೂ ಬೇಸತ್ತಿ ರೇಖಾ ಇದ್ದರೆ ಅವಳು ಬೆಳೆದು ಯಾರ ಕೈಗೂ ಸಿಗದಂತೆ ಅಗ್ತಾಳೆ. ಅವಳನ್ನೆ ಮುಗಿಸಿ ಬಿಡುವ ಎಂದು ಪ್ಲಾನ್ ಮಾಡಿದ್ದಾರೆ. ಕದಿರೇಶ್ ತಮ್ಮ ಸುರೇಶ್, ಅಕ್ಕ ಮಾಲ, ಮಾಲ ಪುತ್ರ ಅರೂಳ್ ಸೇರಿ ರೇಖಾ ಕೊಲೆಗೆ ಪ್ಲಾನ್ ಮಾಡಿದ್ದಾರೆ. ಬಳಿಕ ಪೀಟರ್ ಮತ್ತು ಸೂರಿ ಎಮಬ ಇಬ್ಬರು ಕೃತ್ಯ ಎಸಗಿದ್ದಾರೆ. ಸದ್ಯ ಕದಿರೇಶ್ ಅಕ್ಕ ಮಾಲ, ಮಾಲ ಮಗ ಅರೂಳ್ ಹಾಗು ಕದಿರೇಶ್ ತಮ್ಮ ಸುರೇಶ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ ಪೀಟರ್ ಹಾಗೂ ಸೂರ್ಯನಿಗಾಗಿ ಹುಡುಕಾಟ ಮುಂದುವರೆದಿದೆ.

ಇದನ್ನೂ ಓದಿ: Rekha Kadiresh ಖಾಕಿ ತನಿಖೆಯಲ್ಲಿ ಬಯಲಾಯ್ತಾ ರೇಖಾ ಕದಿರೇಶ್ ಹತ್ಯೆ ಹಿಂದಿನ ಕಾರಣ? ಇಬ್ಬರ ಮೇಲೆ ಅನುಮಾನ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ