ರಾಜಕೀಯ ಶಕ್ತಿ ಕೇಂದ್ರವಾದ ಸುತ್ತೂರು ಮಠ: ಬೆಳಗಾವಿಯಿಂದ ಮೈಸೂರಿಗೆ ರಮೇಶ್ ಜಾರಕಿಹೊಳಿ ಪ್ರಯಾಣ

Ramesh Jarkiholi : ಬೆಳಗಾವಿಯಿಂದ ಮೈಸೂರಿಗೆ ಪ್ರಯಾಣ ಮಾಡಿರುವ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಪಡೆಯುವುದಕ್ಕೆ ಒತ್ತಡ ತಂತ್ರ ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಸ್ತ್ರ ಪ್ರಯೋಗ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸುತ್ತೂರು ಶ್ರೀಗಳ ಭೇಟಿ ಮಾಡಿ, ಬಳಿಕ ತಮ್ಮ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆಯಿದೆ. 

ರಾಜಕೀಯ ಶಕ್ತಿ ಕೇಂದ್ರವಾದ ಸುತ್ತೂರು ಮಠ: ಬೆಳಗಾವಿಯಿಂದ ಮೈಸೂರಿಗೆ ರಮೇಶ್ ಜಾರಕಿಹೊಳಿ ಪ್ರಯಾಣ
ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟ ಸುತ್ತೂರು ಶಾಖಾ ಮಠ: ಬೆಳಗಾವಿಯಿಂದ ಮೈಸೂರಿಗೆ ರಮೇಶ್ ಜಾರಕಿಹೊಳಿ ಪ್ರಯಾಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 25, 2021 | 11:14 AM

ಮೈಸೂರು: ಈ ಮಧ್ಯೆ, ಕೊವಿಡ್​ ಕಾಟ ಕಡಿಮೆಯಾಗುತ್ತಿದ್ದಂತೆ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ರಾಜಕೀಯ ಚಟುವಟಿಕೆಗಳು ತೀವ್ರವಾಗಿವೆ. ಸದ್ಯಕ್ಕೆ ಇಲ್ಲಿನ  ಸುತ್ತೂರು ಶಾಖಾ ಮಠವು ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ. ಇಂದು ಸುತ್ತೂರು ಮಠಕ್ಕೆ ಮಾಜಿ‌ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಶಾಸಕ ರಮೇಶ್ ಜಾರಕಿಹೊಳಿ ರಾಜಕೀಯ ನಡೆ ನಿಗೂಢವಾಗಿದ್ದು, ಇಂದು ಅಥವಾ ನಾಳೆ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. 

ಇಂದು ಬೆಳಗಾವಿಯಿಂದ ಮೈಸೂರಿಗೆ ರಮೇಶ್ ಪ್ರಯಾಣ: ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮರಳಿ ಸಚಿವ ಸ್ಥಾನ ಪಡೆಯಲು ಸುತ್ತೂರು ಮಠದಲ್ಲಿ ಲಾಭಿ ನಡೆಸಲಿದ್ದು, ಸಚಿವ ಸ್ಥಾನಕ್ಕಾಗಿ ಸುತ್ತೂರು ಶ್ರೀಗಳ ಮೂಲಕ ಒತ್ತಡ ಹೇರುವ ಸಾಧ್ಯತೆಯಿದೆ ಎನ್ನಲಾಗಿದೆ.

ಈಗಾಗಲೇ ಸಚಿವ ಸ್ಥಾನ ಪಡೆಯುವುದಕ್ಕೆ ಒತ್ತಡ ತಂತ್ರ ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಸ್ತ್ರ ಪ್ರಯೋಗ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತೂರು ಶ್ರೀಗಳ ಭೇಟಿ ಮಾಡಿ, ಬಳಿಕ ತಮ್ಮ ನಿರ್ಧಾರ ಪ್ರಕಟ ಮಾಡುವ ಸಾಧ್ಯತೆಯಿದೆ.

ramesh jarkiholi visit mysore suttur mutt

ರಾಜಕೀಯ ಶಕ್ತಿ ಕೇಂದ್ರವಾದ ಸುತ್ತೂರು ಮಠ: ಬೆಳಗಾವಿಯಿಂದ ಮೈಸೂರಿಗೆ ರಮೇಶ್ ಜಾರಕಿಹೊಳಿ ಪ್ರಯಾಣ

ಈ ಹಿನ್ನೆಲೆಯಲ್ಲಿ  ರಮೇಶ್ ಜಾರಕಿಹೊಳಿ ಸುತ್ತೂರು ಮಠದ ಭೇಟಿ ಮಹತ್ವ ಪಡೆದುಕೊಂಡಿದೆ. ಸಹೋದರ ಲಖನ್ ಜಾರಕಿಹೊಳಿ ಹಾಗೂ ಅಳಿಯ ಅಂಬಿರಾವ್ ಪಾಟೀಲ್ ಜೊತೆ ಆಗಮಿಸಿ, ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಮಾಧ್ಯಮಗಳಿಗೆ ಸಿಗದೆ ಓಡಾಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ತಮ್ಮ ವಿರುದ್ಧ ಇರುವ ಅತ್ಯಾಚಾರ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿಸಲು ಶತಪ್ರಯತ್ನ ನಡೆಸಿದ್ದಾರೆ ಎಂದೂ ಹೇಳಲಾಗಿದೆ.

ಶಾಸಕ ರಮೇಶ್ ಜಾರಕಿಹೊಳಿ ರಾಜಕೀಯ ನಡೆ ನಿಗೂಢವಾಗಿದ್ದು, ಇಂದು ಅಥವಾ ನಾಳೆ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಮತ್ತೆ ಸಚಿವ ಸಂಪುಟಕ್ಕೆ ಸೇರಲು ಒತ್ತಡ ತಂತ್ರಕ್ಕೆ ಮೊರೆಹೋಗಿರುವ ರಮೇಶ್ ಜಾರಕಿಹೊಳಿ ಈಗಾಗಲೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ,  ದೇವೇಂದ್ರ ಫಡ್ನವಿಸ್ ಅವರನ್ನೂ ಭೇಟಿಯಾಗಿದ್ದಾರೆ.

ಗೋಕಾಕ್‌ನಿಂದ ಮೈಸೂರಿಗೆ ತೆರಳಿದ ರಮೇಶ್ ಜಾರಕಿಹೊಳಿ: ಮಾಜಿ ಸಚಿವ  ರಮೇಶ್ ಜಾರಕಿಹೊಳಿ ಗೋಕಾಕ್‌ನಿಂದ ಬೆಳಗಾವಿಗೆ ಬಂದು ವಿಶೇಷ ವಿಮಾನದಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಿದ್ದಾರೆ. ಮೈಸೂರಿಗೆ ತೆರಳುವುದಕ್ಕೂ ಮುನ್ನ ಸೋದರ ಲಖನ್ ಮನೆಯಲ್ಲಿ ಸಭೆ ನಡೆಸಿದ್ದಾರೆ. ಶಾಸಕ ರಮೇಶ್ ಜತೆ ಸಹೋದರ ಲಖನ್ ಜಾರಕಿಹೊಳಿ, ಅಳಿಯ ಅಂಬಿರಾಯ್ ಪಾಟೀಲ್ ಗೋಕಾಕ್‌ನಿಂದ ಕಾರಿನಲ್ಲಿ ಪ್ರಯಾಣ ಮಾಡಿದ್ದಾರೆ.

ramesh jarkiholi visit mysore suttur mutt gokak

ಗೋಕಾಕ್‌ನಿಂದ ಮೈಸೂರಿಗೆ ತೆರಳಿದ ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿ ಸಿಡಿ ಕೇಸ್: ತನ್ನನ್ನೂ ವಾದಿಯಾಗಿಸಲು ಯುವತಿಯಿಂದ ಹೈಕೋರ್ಟ್​ಗೆ ಮಧ್ಯಂತರ ಅರ್ಜಿ

(ramesh jarkiholi to visit mysore suttur mutt may announce major political decision)

Published On - 10:01 am, Fri, 25 June 21