ತಿಮ್ಮಾಪುರದಲ್ಲಿ ಕಾರ ಹುಣ್ಣಿಮೆಗೆ ಎತ್ತಿನ ಮೇಲೆ ಸಿಂಗಾರಗೊಂಡ ‘ಮುಂದಿನ CM ಸಿದ್ದರಾಮಯ್ಯ’ ಎಂಬ ಮೂಕ ಘೋಷ ವಾಕ್ಯ!

Next Chief Minister Siddaramaiah: ತಿಮ್ಮಾಪುರ ಗ್ರಾಮದಲ್ಲಿ ನಡೆದಿದ್ದ ಕರಿ ಹರಿಯುವ ಕಾರ್ಯಕ್ರಮ ಅದಾಗಿತ್ತು. ಅದರ ಅಂಗವಾಗಿ ಮೆರವಣಿಗೆಗೆ ಸಿದ್ಧಗೊಳಿಸಿದ್ದ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಬರವಣಿಗೆ ಕಾಣಿಸಿಕೊಂಡಿದೆ. ಮುಂದಿನ ಸಿಎಂ ಕ್ಯಾಪೇನ್ ನ ಎತ್ತಿನ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ತಿಮ್ಮಾಪುರದಲ್ಲಿ ಕಾರ ಹುಣ್ಣಿಮೆಗೆ ಎತ್ತಿನ ಮೇಲೆ ಸಿಂಗಾರಗೊಂಡ ‘ಮುಂದಿನ CM ಸಿದ್ದರಾಮಯ್ಯ’ ಎಂಬ ಮೂಕ ಘೋಷ ವಾಕ್ಯ!
ಕಾರಹುಣ್ಣಿಮೆಗೆ ಎತ್ತಿನ ಮೇಲೆ ಸಿಂಗಾರಗೊಂಡ ‘ಸಿಎಂ ಸಿದ್ದರಾಮಯ್ಯ’ ಎಂಬ ಮೂಕ ಘೋಷ ವಾಕ್ಯ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 25, 2021 | 2:06 PM

ಗದಗ: ಕರ್ನಾಟಕ ಕಾಂಗ್ರೆಸ್​​ ಪಕ್ಷದಲ್ಲಿ ‘ಮುಂದಿನ ಮುಖ್ಯಮಂತ್ರಿ’ ಎಂಬುದು ಇತ್ತೀಚೆಗೆ ಹೆಚ್ಚು ಚಾಲ್ತಿಗೆ ಬಂದಿದ್ದು, ಅನೇಕ ಕಾಂಗ್ರೆಸ್​ ನಾಯಕರು ತಮ್ಮ ನೆಚ್ಚಿನ ನಾಯಕರ ಪರ ಬ್ಯಾಟ್​​ ಬೀಸಲು ಅದನ್ನೇ ಘೋಷ ವಾಕ್ಯವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ. ಈ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವೈಯಕ್ತಿಕವಾಗಿ ತೀವ್ರ ಮುಜುಗರ ಅನುಭವಿಸುವಂತಾಗಿದೆ.  ಪಕ್ಷದಲ್ಲಿ ಇತರೆ ಹಿರಿಯ ನಾಯಕರು, ಸಿ ಎಂ ಆಕಾಂಕ್ಷಿಗಳ  ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವತಃ ಅವರೇ  ‘ಮುಂದಿನ ಮುಖ್ಯಮಂತ್ರಿ’  ಘೋಷ ವಾಕ್ಯ ಬಳಸದಂತೆ ತಮ್ಮ ಕಟ್ಟಾ ಅನುಯಾಯಿಗಳಿಗೆ ಕರೆ ನೀಡುವಂರಹ ಪ್ರಸಂಗವೂ ನಡೆದಿದೆ. ಮುಂದಿನ ವಾರ ಈ ವಿಷಯವಾಗಿಯೇ ಅವರು ದೆಹಲಿಗೆ ತೆರಳಿ ಹೈಕಮಾಂಡ್​​ ಅನ್ನೂ ಭೇಟಿಯಾಗುವ ಪ್ರಸಂಗವೊದಗಿ ಬಂದಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಅನಿರೀಕ್ಷಿತವಾಗಿ ಬೇರೆಯದ್ದೇ ಕಡೆಯಿಂದ  ‘ಸಿಎಂ ಸಿದ್ದರಾಮಯ್ಯ’ ಘೋಷ ವಾಕ್ಯ ಮತ್ತೆ ಕಾಣಿಸಿಕೊಂಡಿದೆ. ಅದೂ ಈ ಬಾರಿ ಮೂಕ  ಪ್ರಾಣಿಯ ಮೇಲೆ ರಾರಾಜಿಸುತ್ತಿದೆ! ಹೌದು ಗದಗ ತಾಲೂಕಿನ ತಿಮ್ಮಾಪುರದಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಕಾರಹುಣ್ಣಿಮೆ ನೆಪದಲ್ಲಿ ಎತ್ತಿನ ಮೇಲೆ ‘ಸಿಎಂ ಸಿದ್ದರಾಮಯ್ಯ’ ಎಂದು ಸಿಂಗಾರ ಮಾಡಿದ್ದಾರೆ!

ತಿಮ್ಮಾಪುರ ಗ್ರಾಮದಲ್ಲಿ ನಡೆದಿದ್ದ ಕರಿ ಹರಿಯುವ ಕಾರ್ಯಕ್ರಮ ಅದಾಗಿತ್ತು. ಕಾರ ಹುಣ್ಣಿಮೆ ದಿನ ಎತ್ತುಗಳನ್ನ ಸಿಂಗರಿಸಿ ಮೆರವಣಿಗೆ ಮಾಡುವ ಪದ್ದತಿಯೂ ಇದೆ.  ಅದರ ಅಂಗವಾಗಿ ಮೆರವಣಿಗೆಗೆ ಸಿದ್ಧಗೊಳಿಸಿದ್ದ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಎನ್ನುವ ಬರವಣಿಗೆ ಕಾಣಿಸಿಕೊಂಡಿದೆ. ಮುಂದಿನ ಸಿಎಂ ಕ್ಯಾಪೇನ್ ನ ಎತ್ತಿನ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಹುಡುಕಾಡುವ ಪರಿಸ್ಥಿತಿ ಇದೆ – ಎಚ್ ವಿಶ್ವನಾಥ್ ವ್ಯಂಗ್ಯ: ಈ ಮಧ್ಯೆ, ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಸಿಎಂ ಎಂಬ ಗೊಂದಲ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್ ವಿಶ್ವನಾಥ್ ಅವರು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಹುಡುಕಾಡುವ ಪರಿಸ್ಥಿತಿ ಇದೆ. ಮಾಜಿ ಸಿಎಂ ಸಿದ್ದರಾಮಯ್ಯಗೆ ಇಂತಹ ಸ್ಥಿತಿ ಬರಬಾರದಿತ್ತು ಎಂದು ಬೆಂಗಳೂರಿನಲ್ಲಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಎಂದು ಹೇಳುವುದು ಸರಿಯಲ್ಲ. ಅವರು ಗೆದ್ದು ಬಂದ ಬಳಿಕ ಆ ಬಗ್ಗೆ ಚರ್ಚೆಯಾಗುತ್ತದೆ. ಸಿಎಂ ಆಗಿದ್ದವರೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿದ್ದೇಕೆ? ಶಿಷ್ಯಂದಿರು ಎಲ್ಲವನ್ನೂ ಮಾತನಾಡುತ್ತಾರೆ. ಶಿಷ್ಯಂದಿರು 150 ಸೀಟ್ ಬರುತ್ತೆ ಎಂದು ಕೂಡ ಹೇಳ್ತಾರೆ. ಆದರೆ 130 ಇದ್ದದ್ದು 70 ಆಗಿದ್ದು ಏಕೆಂದು ವಿಶ್ವನಾಥ್ ಪ್ರಶ್ನೆ ಮಾಡಿದ್ದಾರೆ.

ಜಮೀರನ್ನ ಮುಂದಿಟ್ಕೊಂಡು ಹೋಗಬೇಡಿ.. ಸಿದ್ದರಾಮಯ್ಯನವರೇ, ಒಳ್ಳೆದಾಗಲ್ಲ: ವಿಶ್ವನಾಥ್​ ಕಿವಿಮಾತು ಒಬ್ಬ ಮಾಜಿ ಸಿಎಂ ಆದವರು ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ಇಂಥ ಪರಿಸ್ಥಿತಿ ಬರಬಾರದು. ಅವರೇ ಸಿಎಂ ಅನ್ನೋದಕ್ಕೆ ಟೂ ಅರ್ಲಿ ಇದು. ಸಿಎಂ ಸ್ಥಾನ ಪತ್ರಾವಳಿ ಅಲ್ಲ, ಸಿಎಂ ಸ್ಥಾನ ಉಂಡು ಬಿಸಾಡೋದಲ್ಲ. ಅದನ್ನು ಸ್ವಚ್ಚವಾಗಿಟ್ಟು ಮುಂದೆ ಬರುವವರಿಗೆ ಅವಕಾಶ ಕೊಡಬೇಕು. ಬೇರೆ ಪಕ್ಷದಿಂದ ಬಂದರೂ ಸಿದ್ದರಾಮಯ್ಯಗೆ ಸಿಎಂ ಅವಕಾಶ ಕೊಟ್ಟಾಗಿದೆ. ಡಿಕೆ ಶಿವಕುಮಾರ್ ಅದೇ ಪಕ್ಷದಲ್ಲಿ ಇದ್ದವರು, ಅವರಿಗೆ ಅವಕಾಶ ಸಿಗಬೇಕು. ಒಂದ್ಸಲ ಸಿದ್ದರಾಮಯ್ಯಗೆ ಅವಕಾಶ ಸಿಕ್ಕಾಗಿದೆ. ಈಗ ಮಲ್ಲಿಕಾರ್ಜುನ ಖರ್ಗೆ ಇದಾರೆ, ಪರಮೇಶ್ವರ್ ಇದಾರೆ. ಜಮೀರ್ ನ ಮುಂದಿಟ್ಟುಕೊಂಡು ಹೋಗಬೇಡಿ.. ಸಿದ್ದರಾಮಯ್ಯನವರೇ, ಒಳ್ಳೆದಾಗಲ್ಲ ಎಂದೂ ಎಚ್ ವಿಶ್ವನಾಥ್​ ಕಿವಿಮಾತು ಹೇಳಿದರು. ​

Siddaramaiah: ಮಗನಿಗೆ ‘ಸಿದ್ದರಾಮಯ್ಯ’ ಎಂದು ಹೆಸರಿಟ್ಟು ಸಂಭ್ರಮಿಸಿದ ಸಿದ್ದರಾಮಯ್ಯ ಕಟ್ಟಾ ಅಭಿಮಾನಿ! (now next chief minister siddaramaiah projected on bull in gadag)

Published On - 11:33 am, Fri, 25 June 21

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ