Siddaramaiah: ಮಗನಿಗೆ ‘ಸಿದ್ದರಾಮಯ್ಯ’ ಎಂದು ಹೆಸರಿಟ್ಟು ಸಂಭ್ರಮಿಸಿದ ಸಿದ್ದರಾಮಯ್ಯ ಕಟ್ಟಾ ಅಭಿಮಾನಿ!
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಮಂಜುನಾಥ್ ಮುರಡಿ ಎಂಬುವವರು ತಮ್ಮ ಪುತ್ರನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ತಮ್ಮ ಮಗನಿಗೆ ಅವರದ್ದೇ ಹೆಸರನ್ನು (ಸಿದ್ದರಾಮಯ್ಯ) ನಾಮಕರಣ ಮಾಡಿದ್ದಾಗಿ ಅಪ್ಪಟ ಅಭಿಮಾನಿ ಮಂಜುನಾಥ್ ಹೇಳಿದ್ದಾರೆ.
ಕೊಪ್ಪಳ: ಇತ್ತ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ‘ಮುಂದಿನ ಮುಖ್ಯಮಂತ್ರಿ’ ವಿವಾದ ಜೋರಾಗಿಯೇ ಸದ್ದು ಮಾಡುತ್ತಿರುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ಮಗನಿಗೆ ‘ಸಿದ್ದರಾಮಯ್ಯ’ ಎಂದು ಹೆಸರಿಟ್ಟು ಸಂಭ್ರಮಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರ ಗ್ರಾಮದ ಮಂಜುನಾಥ್ ಮುರಡಿ ಎಂಬುವವರು ತಮ್ಮ ಪುತ್ರನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ತಮ್ಮ ಮಗನಿಗೆ ಅವರದ್ದೇ ಹೆಸರನ್ನು (ಸಿದ್ದರಾಮಯ್ಯ) ನಾಮಕರಣ ಮಾಡಿದ್ದಾಗಿ ಅಪ್ಪಟ ಅಭಿಮಾನಿ ಮಂಜುನಾಥ್ ಹೇಳಿದ್ದಾರೆ.
ಮಗ ಜನಿಸಿದ 21 ದಿನಗಳ ಬಳಿಕ ಶಾಸ್ತ್ರೋಕ್ತವಾಗಿ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದೆವು. ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಸರಳವಾಗಿ ಮಗನಿಗೆ ನಾಮಕರಣ ಮಾಡಿದೆವು. ಸಿದ್ದರಾಮಯ್ಯ ಹೆಸರು ನಾಮಕರಣ ಮಾಡೋದಾಗಿ ಯತೀಂದ್ರ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೆ ಎಂದು ಮಂಜುನಾಥ್ ಇದೇ ಸಂದರ್ಭದಲ್ಲಿ ಹೇಳಿದರು.
ಸಿದ್ದರಾಮಯ್ಯ ಜಾರಿಗೆ ತಂದ ಯೋಜನೆಗಳಿಂದ ಪ್ರೇರೇಪಿತನಾಗಿ ಮಗನಿಗೆ ಸಿದ್ದು ಅವರ ಹೆಸರಿಟ್ಟೆ. ಇಡೀ ರಾಜ್ಯಕ್ಕೆ ಅನ್ನ ಹಾಕಿದ್ದು ಸಿದ್ದರಾಮಯ್ಯ. ಆ ಕಾರಣಕ್ಕೆ ನಾನು ನನ್ನ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದೇನೆ ಎಂದು ಮಂಜುನಾಥ್ ತಿಳಿಸಿದರು.
Rahul Gandhi tiger cub adoption: ಹಂಪಿಯಲ್ಲಿ ಹುಲಿ ಮರಿ ದತ್ತು ಪಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
(Siddaramaiah fan manjunath name his son after Siddaramaiah in koppal district)