ಸಿದ್ದರಾಮಯ್ಯ ಸಿಎಂ ಎಂಬ ವಿಚಾರ ಮೂರ್ಖತನದ್ದು.. ಕತ್ತಲೆಕೋಣೆಯಲ್ಲಿ ಇಲ್ಲದ ಕರಿಬೆಕ್ಕನ್ನು ಹುಡುಕುವಂತಿದೆ -ಕೆ.ಎಸ್.ಈಶ್ವರಪ್ಪ
ಈ ಬಗ್ಗೆ ಹೇಳಿಕೆ ನೀಡದಂತೆ ರಾಜ್ಯ ‘ಕೈ’ ಉಸ್ತುವಾರಿ ಸೂಚಿಸಿದ್ದಾರೆ. ಸಿದ್ದರಾಮಯ್ಯ ಮಾತ್ರ ಹೇಳಿಕೆ ನೀಡದಂತೆ ಹೇಳುತ್ತಿಲ್ಲ. ಚುನಾವಣೆಯಲ್ಲಿ ಸಿದ್ದರಾಮಯ್ಯ, ಬೆಂಬಲಿಗರು ಗೆಲ್ಲಬೇಕು. ನಂತರ ಶಾಸಕರು, ಹೈಕಮಾಂಡ್ ಒಪ್ಪಿಗೆ ನೀಡಬೇಕು. ಸಿದ್ದರಾಮಯ್ಯ ಸಿಎಂ ಎಂಬ ವಿಚಾರ ಮೂರ್ಖತನದ್ದು -ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಈ ಹೇಳಿಕೆ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ವಿರೋಧವಿದೆ ಎಂದು ಶಿವಮೊಗ್ಗ ನಗರದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡದಂತೆ ರಾಜ್ಯ ‘ಕೈ’ ಉಸ್ತುವಾರಿ ಸೂಚಿಸಿದ್ದಾರೆ. ಸಿದ್ದರಾಮಯ್ಯ ಮಾತ್ರ ಹೇಳಿಕೆ ನೀಡದಂತೆ ಹೇಳುತ್ತಿಲ್ಲ. ಚುನಾವಣೆಯಲ್ಲಿ ಸಿದ್ದರಾಮಯ್ಯ, ಬೆಂಬಲಿಗರು ಗೆಲ್ಲಬೇಕು. ನಂತರ ಶಾಸಕರು, ಹೈಕಮಾಂಡ್ ಒಪ್ಪಿಗೆ ನೀಡಬೇಕು. ಸಿದ್ದರಾಮಯ್ಯ ಸಿಎಂ ಎಂಬ ವಿಚಾರ ಮೂರ್ಖತನದ್ದು. ಸದ್ಯ ಸಿದ್ದರಾಮಯ್ಯ ಪರಿಸ್ಥಿತಿ ಹೇಗಿದೆ ಎಂದರೆ ಕತ್ತಲೆಕೋಣೆಯಲ್ಲಿ ಇಲ್ಲದ ಕರಿಬೆಕ್ಕನ್ನು ಕಾಂಗ್ರೆಸ್ ಹುಡುಕ್ತಿದೆ. ಸಿಎಂ ಸ್ಥಾನ ಜೇಬಿನಲ್ಲಿದೆ ತೆಗೆದು ಒಂದೊಂದಾಗಿ ಎಲ್ಲರಿಗೂ ಕೊಟ್ಟಬಿಡಿ ಎಂದು ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಹಾಸ್ಯ ಮಾಡಿದ್ದಾರೆ.
ಸಿದ್ದರಾಮಯ್ಯಗೆ ವಿಪಕ್ಷ ಸ್ಥಾನ ಸಿಗುತ್ತಾ ಎಂಬುದೇ ಅನುಮಾನವಾಗಿದೆ. ಅಂಥದ್ದರಲ್ಲಿ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿದ್ದಾರೆ. ಇದು ಜನರ ನಡುವೆ ಹಾಸ್ಯಾಸ್ಪದವಾಗಿದೆ ಎಂದು ಶಿವಮೊಗ್ಗ ನಗರದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕೆ ಮಾಡಿದ್ದಾರೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯೋಕೆ ಇನ್ನೂ 2 ವರ್ಷ ಟೈಂ ಇದೆ. ಎರಡು ವರ್ಷಕ್ಕೂ ಮೊದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ.. ಸಿಎಂ ಆಗೋದ್ಯಾರು ಅನ್ನೋ ಬೆಂಕಿ ಹೊತ್ತಿ ಉರೀತಿದೆ. ಇದೇ ವಿಚಾರಕ್ಕೆ ಸಿದ್ದರಾಮಯ್ಯ ಬೆಂಬಲಿಗರು.. ಡಿಕೆ ಬ್ರದರ್ಸ್ ನಡುವೆ ಜಂಗೀ ಕುಸ್ತಿ ಶುರುವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೇರಿದ್ರೆ ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಜಮೀರ್ ಬಾಂಬ್ ಸಿಡಿಸ್ತಿದ್ದಂತೆ ಎಚ್ಚೆತ್ತ ಕನಕಪುರದ ಬಂಡೆ ದೆಹಲಿಗೆ ಹೋಗಿ ಹೈಕಮಾಂಡ್ಗೆ ದೂರು ಸಲ್ಲಿಸಿದ್ರೂ ಕೂಡ ಸಿದ್ದರಾಮಯ್ಯ ಮುಂದಿನ ಸಿಎಂ ಅನ್ನೋ ಕೂಗು ಮಾತ್ರ ಕಡಿಮೆಯಾಗಿಲ್ಲ. ಇದು ಡಿಕೆ ಬ್ರದರ್ಸ್ ಪಿತ್ತ ನೆತ್ತಿಗೇರುವಂತೆ ಮಾಡಿದೆ.
ಸಿದ್ದರಾಮಯ್ಯ ಬೆಂಬಲಿಗರ ವಿರುದ್ಧ ಡಿಕೆ ಬ್ರದರ್ಸ್ ಸಿಟ್ಟು! ಜಮೀರ್ ಅಹ್ಮದ್ ಖಾನ್ ಅದ್ಯಾವಾಗ ಮುಂದಿನ ಸಿಎಂ ಸಿದ್ದರಾಮಯ್ಯ ಅನ್ನೋ ಹೇಳಿಕೆ ಕೊಟ್ರೋ.. ಅಲ್ಲಿಂದ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಫೈಟ್ ಜೋರಾಗಿದೆ. ಜಮೀರ್ ಬಳಿಕ ಹಲವು ಶಾಸಕರು ಸಿದ್ದರಾಮಯ್ಯ ಪರ ಬ್ಯಾಟ್ ಬೀಸುತ್ತಿದ್ದಾರೆ. ಇವರೆಲ್ಲರಿಗೂ ಡಿಕೆಶಿ ಸರಿಯಾಗೇ ಟಾಂಗ್ ನೀಡ್ತಿದ್ದಾರೆ. ದೆಹಲಿಗೆ ಹೋಗಿ ದೂರು ನೀಡಿ ಬಂದಿದ್ದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಹೇಳಿಕೆ ನೀಡಿದ್ದೋರ ವಿರುದ್ಧ ಗುಡುಗಿದ್ರು. ಕಾಂಗ್ರೆಸ್ನಲ್ಲಿ ಸಿಎಂ ರೇಸ್ ನಡೆಯುತ್ತಲೇ ಅಂತಾ ಕಿಡಿಕಾರಿದ್ರು.
ಇದನ್ನೂ ಓದಿ: ‘ಮೇಲೊಬ್ಬ ಮಾಯಾವಿ’ಗಾಗಿ ಪ್ರಾಣವನ್ನೂ ಲೆಕ್ಕಿಸದೇ ನೀರಿನಲ್ಲಿ ಸಾಹಸ ಮಾಡಿದ್ದ ಸಂಚಾರಿ ವಿಜಯ್
Published On - 1:59 pm, Thu, 24 June 21