ಬಾಲ್ಡ್​ವಿನ್​ ಶಾಲೆಯಿಂದ ಆನ್​ಲೈನ್​ ಕ್ಲಾಸ್ ಆರಂಭ; ಟಿವಿ9ಗೆ ಧನ್ಯವಾದ ತಿಳಿಸಿದ ಪೋಷಕರು

ಶಾಲಾ ಶುಲ್ಕ ಪಾವತಿಸದ ಹಿನ್ನೆಲೆ ಬಾಲ್ಡ್​ವಿನ್ ಶಾಲೆ ಆನ್​ಲೈನ್​ ಕ್ಲಾಸ್ ಸ್ಥಗಿತಗೊಳಿಸಿತ್ತು. ಸುಮಾರು 40 ವಿದ್ಯಾರ್ಥಿಗಳ ಆನ್​ಲೈನ್​ ಕ್ಲಾಸ್ ಸ್ಥಗಿತಗೊಳಿಸಲಾಗಿತ್ತು. ಆನ್​ಲೈನ್​ ಕ್ಲಾಸ್ ಸ್ಥಗಿತಗೊಳಿಸಿದ್ದನ್ನು ಪ್ರಶ್ನಿಸಿ ಪೋಷಕರು ಬಿಇಒ ಮೊರೆ ಹೋಗಿದ್ದರು.

ಬಾಲ್ಡ್​ವಿನ್​ ಶಾಲೆಯಿಂದ ಆನ್​ಲೈನ್​ ಕ್ಲಾಸ್ ಆರಂಭ; ಟಿವಿ9ಗೆ ಧನ್ಯವಾದ ತಿಳಿಸಿದ ಪೋಷಕರು
ವಿಡಿಯೋ ಮೂಲಕ ಟಿವಿ9ಗೆ ಧನ್ಯವಾದ ತಿಳಿಸಿದ ಪೋಷಕರು
Follow us
| Updated By: sandhya thejappa

Updated on: Jun 24, 2021 | 12:47 PM

ಬೆಂಗಳೂರು: ಆನ್​ಲೈನ್​ ತರಗತಿಗಳನ್ನು ಸ್ಥಗಿತಗೊಳಿಸಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಬಾಲ್ಡ್​ವಿನ್ ಖಾಸಗಿ ಶಾಲೆ ಇದೀಗ ಮತ್ತೆ ತರಗತಿಯನ್ನು ಆರಂಭಿಸಿದೆ. ಸ್ಥಗಿತಗೊಂಡಿದ್ದ ಆನ್​ಲೈನ್​ ಕ್ಲಾಸ್ ಆರಂಭವಾಗಿದ್ದಕ್ಕೆ ವಿದ್ಯಾರ್ಥಿಗಳ ಪೋಷಕರು ಟಿವಿ9ಗೆ ಧನ್ಯವಾದ ತಿಳಿಸಿದ್ದಾರೆ. ಬಿಇಒ ಮಾಡದ ಕೆಲಸ ಟಿವಿ9 ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಪೋಷಕರು ವಿಡಿಯೋ ಮಾಡಿ ಟಿವಿ9ಗೆ ಧನ್ಯವಾದ ಹೇಳಿದ್ದಾರೆ.

ಶಾಲಾ ಶುಲ್ಕ ಪಾವತಿಸದ ಹಿನ್ನೆಲೆ ಬಾಲ್ಡ್​ವಿನ್ ಶಾಲೆ ಆನ್​ಲೈನ್​ ಕ್ಲಾಸ್ ಸ್ಥಗಿತಗೊಳಿಸಿತ್ತು. ಸುಮಾರು 40 ವಿದ್ಯಾರ್ಥಿಗಳ ಆನ್​ಲೈನ್​ ಕ್ಲಾಸ್ ಸ್ಥಗಿತಗೊಳಿಸಲಾಗಿತ್ತು. ಆನ್​ಲೈನ್​ ಕ್ಲಾಸ್ ಸ್ಥಗಿತಗೊಳಿಸಿದ್ದನ್ನು ಪ್ರಶ್ನಿಸಿ ಪೋಷಕರು ಬಿಇಒ ಮೊರೆ ಹೋಗಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಮೊರೆ ಹೋಗಿದ್ದರೂ ಪ್ರಯೋಜವಾಗಿಲ್ಲ. ಆದರೆ ಈ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಅಧಿಕಾರಿಗಳು, ಶಾಲೆ ನಡೆ ಬಗ್ಗೆ ಟಿವಿ9 ಪ್ರಶ್ನೆ ಮಾಡಿತ್ತು. ವರದಿ ಪ್ರಸಾರ ಬಳಿಕ ಬಾಲ್ಡ್​ವಿನ್ ಶಾಲೆ ಎಚ್ಚೆತ್ತು ಆನ್​ಲೈನ್​ ಕ್ಲಾಸ್​ಮ ಆರಂಭಿಸಿದೆ.

ಬಾಲ್ಡ್​ವಿನ್ ಶಾಲೆ ಕಳೆದ ವರ್ಷ ಶೇ.70ರಷ್ಟು ಶುಲ್ಕ ಕಟ್ಟಿದ್ದರೂ ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಡ ಹೇರಿತ್ತು. ಪೂರ್ಣ ಶುಲ್ಕ ಕಟ್ಟದ 40ಕ್ಕೂ ಹೆಚ್ಚು ಮಕ್ಕಳ ಆನ್​ಲೈನ್​​ ಕ್ಲಾಸ್ ಬಂದ್ ಮಾಡಿತ್ತು. ಇದನ್ನ ಖಂಡಿಸಿ ನಿನ್ನೆ (ಜೂನ್ 23) ಶಂಕರಪುರಂ ಬಳಿ ಇರುವ ಬೆಂಗಳೂರು ದಕ್ಷಿಣ 1ರ ಬಿಇಒ ಕಚೇರಿ ಮುಂದೆ ಪೋಷಕರು ಪ್ರತಿಭಟನೆಗೆ ಇಳಿದಿದ್ದರು. ಆದರೆ ಬಿಇಒ ಮಾಡದ ಕೆಲಸ ಟಿವಿ 9 ಮಾಡಿದೆ ಅಂತ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ

School Reopening: ಕೊವಿಡ್ ತಾಂತ್ರಿಕ ಸಮಿತಿ ವರದಿ ಬೆನ್ನಲೆ ಶಾಲೆ ಆರಂಭಕ್ಕೆ ಶಿಕ್ಷಣ ತಜ್ಞರ ಸಲಹೆ

School Fees: ಕೋರ್ಟ್ ಆದೇಶಕ್ಕೂ ಮುನ್ನವೇ ಪೂರ್ತಿ ಶುಲ್ಕ ವಸೂಲಿಗಿಳಿದ ಖಾಸಗಿ ಶಾಲೆಗಳು

(Baldwin School begun the online class and parents thanked to Tv9 Kannada)