School Fees: ಕೋರ್ಟ್ ಆದೇಶಕ್ಕೂ ಮುನ್ನವೇ ಪೂರ್ತಿ ಶುಲ್ಕ ವಸೂಲಿಗಿಳಿದ ಖಾಸಗಿ ಶಾಲೆಗಳು
ಈಗಾಗಲೇ ಶುಲ್ಕ ವಿಚಾರ ಹೈಕೋರ್ಟ್ನಲ್ಲಿದೆ. ಇದೇ 29ಕ್ಕೆ ಶುಲ್ಕ ನಿಗದಿ ಕುರಿತು ಕೋರ್ಟ್ನಿಂದ ಮಹತ್ವದ ಆದೇಶ ಹೊರಬೀಳುವ ಸಾಧ್ಯತೆಯಿದೆ. ಶೇ.70ರಷ್ಟು ಶುಲ್ಕ ಪಡೆಯುವಂತೆ ಕಳೆದ ವರ್ಷ ಸರ್ಕಾರ ಆದೇಶ ನೀಡಿತ್ತು.ಇದನ್ನ ಪ್ರಶ್ನಿಸಿ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೋರೆ ಹೋಗಿತ್ತು.
ಬೆಂಗಳೂರು: ಖಾಸಗಿ ಶಾಲೆಗಳ ಫೀಸ್ ಟಾರ್ಚರ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಫೀಸ್ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದು, ಇನ್ನು ಕೊರ್ಟ್ ಆದೇಶವನ್ನು ನೀಡಿಲ್ಲ. ಹೀಗಿದ್ದು ಕೆಲ ಖಾಸಗಿ ಶಾಲೆಗಳು ಪೂರ್ತಿ ಶುಲ್ಕವನ್ನು ಕಟ್ಟುವಂತೆ ಪೋಷಕರಿಗೆ ಒತ್ತಡ ಹೇರಿತ್ತಿವೆ. ಈಗಾಗಲೇ ಕೊರೊನಾದಿಂದ ಜನರು ಜೀವನ ನಡೆಸುವುದು ಕಷ್ಟವಾಗಿದೆ. ಈ ನಡುವೆ ಪೂರ್ತಿ ಶುಲ್ಕವನ್ನು ಕಟ್ಟಬೇಕೆಂದು ಖಾಸಗಿ ಶಾಲೆಗಳು ಪೋಷಕರಿಗೆ ಒತ್ತಡ ಹೇರುತ್ತಿವೆ.
ಬನಶಂಕರಿಯ ಬಿಎನ್ಎಂ ಸ್ಕೂಲ್, ಜೆಹೆಚ್ಎಸ್ ಶಾಲೆ, ಕಲ್ಕೆರೆ ಸಮೀಪದ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಹೊರಮಾವು ಸಮೀಪದ ವೆಬ್ ಗಯಾರ್ ಇಂಟರ್ನ್ಯಾಷನಲ್ ಸ್ಕೂಲ್, ಲಗ್ಗೆರೆಯ ನಾರಾಯಣ್ ಇ-ಟೆಕ್ನೊ ಶಾಲೆ, ನಂದಿನಿ ಲೇಔಟ್ ಸಮೀಪದ ಪ್ರೆಸಿಡೆನ್ಸಿ ಶಾಲೆ, ಚೈತನ್ಯ ಸ್ಕೂಲ್ ಮತ್ತು ರಾಜರಾಜೇಶ್ವರಿ ನಗರದ ಬಾಲ್ಡ್ವಿನ್ ಸ್ಕೂಲ್ ಸೇರಿದಂತೆ ನಗರದ ಹಲವು ಶಾಲೆಗಳಿಂದ ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಡ ಹೇರುತ್ತಿವೆ.
ಜೂನ್ 29ಕ್ಕೆ ಶುಲ್ಕ ನಿಗದಿ ಸಾಧ್ಯತೆ ಈಗಾಗಲೇ ಶುಲ್ಕ ವಿಚಾರ ಹೈಕೋರ್ಟ್ನಲ್ಲಿದೆ. ಇದೇ 29ಕ್ಕೆ ಶುಲ್ಕ ನಿಗದಿ ಕುರಿತು ಕೋರ್ಟ್ನಿಂದ ಮಹತ್ವದ ಆದೇಶ ಹೊರಬೀಳುವ ಸಾಧ್ಯತೆಯಿದೆ. ಶೇ.70ರಷ್ಟು ಶುಲ್ಕ ಪಡೆಯುವಂತೆ ಕಳೆದ ವರ್ಷ ಸರ್ಕಾರ ಆದೇಶ ನೀಡಿತ್ತು.ಇದನ್ನ ಪ್ರಶ್ನಿಸಿ ಕೆಲ ಖಾಸಗಿ ಶಾಲೆಗಳ ಒಕ್ಕೂಟ ಕೋರ್ಟ್ ಮೋರೆ ಹೋಗಿತ್ತು. ಸರ್ಕಾರ ಕೂಡ ಶುಲ್ಕ ನಿಗದಿ ಸಮಿತಿ ರಚನೆ ಪ್ರಸ್ತಾಪ ಕೋರ್ಟ್ ಮುಂದೆ ತರಲಾಗಿತ್ತು. ಸಮಿತಿ ಸೂಚನೆಯಂತೆ ಶುಲ್ಕ ನಿಗದಿಪಡಿಸಲು ಪ್ರಸ್ತಾಪಿಸಿತ್ತು.
ಈ ಬಗ್ಗೆ ಕೋರ್ಟ್ಗೆ ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿದೆ. ಆದರೆ ಪ್ರತಿನಿತ್ಯ ಪೋಷಕರಿಗೆ ಫೀಸ್ ಟಾರ್ಚರ್ ತಪ್ಪಿಲ್ಲ. ನಿತ್ಯ ಬಿಇಒ ಕಚೇರಿ ಮುಂದೆ ಪೋಷಕರು ಪ್ರತಿಭಟನೆ ನಡೆಸುವಂತಾಗಿದೆ. ಧನದಾಹಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕ ಸಂಘಟನೆಗಳು ಒತ್ತಾಯಿಸಿವೆ.
ಇದನ್ನೂ ಓದಿ
School Reopening: ಡಾ.ದೇವಿ ಪ್ರಸಾದ್ ಶೆಟ್ಟಿ ವರದಿಗೆ ಪೋಷಕರ ತೀವ್ರ ವಿರೋಧ
School Reopening: ಶಾಲೆಗಳ ಆರಂಭಕ್ಕೆ ತಜ್ಞರಿಂದ ಸಲಹೆ; ಸಮ, ಬೆಸ ಮಾದರಿಯಲ್ಲಿ ಆರಂಭ
(Private schools are forcing parents to pay the full fee before court order)