School Reopening: ಡಾ.ದೇವಿ ಪ್ರಸಾದ್ ಶೆಟ್ಟಿ ವರದಿಗೆ ಪೋಷಕರ ತೀವ್ರ ವಿರೋಧ

2 ಲಕ್ಷ ಇನ್ಶುರೆನ್ಸ್ ಇಟ್ಟಿದ್ದೀರಾ, ಮಕ್ಕಳ ಜೀವದ ಬೆಲೆ ಅಷ್ಟೇನಾ? 25 ಲಕ್ಷ ಇನ್ಶುರೆನ್ಸ್ ಕೊಟ್ರೂ ನಾವು ನಮ್ಮ ಮಕ್ಕಳನ್ನ ಕಳಿಸಲ್ಲ. ಮಕ್ಕಳ ಸಾವಿನ ಸಮಾಧಿ ಮೇಲೆ ಸೌಧ ಕಟ್ಟೋಕೆ ಇಷ್ಟಪಡಲ್ಲ. ಮಕ್ಕಳಿಗೆ ವ್ಯಾಕ್ಸಿನ್ ಇಲ್ಲ, ಶಿಕ್ಷಕರಷ್ಟೇ ತೆಗೆದುಕೊಂಡ್ರೆ ಹೇಗೆ? ಎಂದು ಪ್ರಶ್ನಿಸಿದ ಪೋಷಕರು ಇನ್ನೂ 2 ವರ್ಷ ಆನ್​ಲೈನ್​ ಮೂಲಕವೇ ಶಿಕ್ಷಣ ನಡೆಯಲಿ.

School Reopening: ಡಾ.ದೇವಿ ಪ್ರಸಾದ್ ಶೆಟ್ಟಿ ವರದಿಗೆ ಪೋಷಕರ ತೀವ್ರ ವಿರೋಧ
ಸಾಂಕೇತಿಕ ಚಿತ್ರ
Follow us
TV9 Web
| Updated By: sandhya thejappa

Updated on: Jun 23, 2021 | 11:10 AM

ಬೆಂಗಳೂರು: ಬಂದ್ ಆಗಿರುವ ಶಾಲೆಗಳನ್ನು ಆರಂಭಿಸುವಂತೆ ಒಂದು ಕಡೆ ಶಾಲೆ ಆಡಳಿತ ಮಂಡಳಿ ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದೆ. ಇನ್ನೊಂದು ಕಡೆ ಶಾಲೆಗಳನ್ನು ಪುನಾರಂಭಿಸಲು ಸಲಹೆ ನೀಡಿದ ಡಾ.ದೇವಿ ಪ್ರಸಾದ್ ಶೆಟ್ಟಿ ವಿರುದ್ಧ ಪೋಷಕರು ಕಿಡಿ ಕಾರಿದ್ದಾರೆ. ಡಾ.ದೇವಿ ಪ್ರಸಾದ್ ಶೆಟ್ಟಿ ಯಾರು? ಅವರು ಹೃದಯ ತಜ್ಞ. ಮಕ್ಕಳ ಆರೋಗ್ಯ ಬಗ್ಗೆ ಡಾ.ದೇವಿ ಪ್ರಸಾದ್ ಶೆಟ್ಟಿಗೇನು? ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಅವರು ಹೊಣೆನಾ? ಅಥವಾ ರಾಜ್ಯ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳುತ್ತಾ? ಎಂದು ಪೋಷಕರು ಡಾ.ದೇವಿ ಪ್ರಸಾದ್ ಶೆಟ್ಟಿ ವರದಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 ಲಕ್ಷ ಇನ್ಶುರೆನ್ಸ್ ಇಟ್ಟಿದ್ದೀರಾ, ಮಕ್ಕಳ ಜೀವದ ಬೆಲೆ ಅಷ್ಟೇನಾ? 25 ಲಕ್ಷ ಇನ್ಶುರೆನ್ಸ್ ಕೊಟ್ರೂ ನಾವು ನಮ್ಮ ಮಕ್ಕಳನ್ನ ಕಳಿಸಲ್ಲ. ಮಕ್ಕಳ ಸಾವಿನ ಸಮಾಧಿ ಮೇಲೆ ಸೌಧ ಕಟ್ಟೋಕೆ ಇಷ್ಟಪಡಲ್ಲ. ಮಕ್ಕಳಿಗೆ ವ್ಯಾಕ್ಸಿನ್ ಇಲ್ಲ, ಶಿಕ್ಷಕರಷ್ಟೇ ತೆಗೆದುಕೊಂಡ್ರೆ ಹೇಗೆ? ಎಂದು ಪ್ರಶ್ನಿಸಿದ ಪೋಷಕರು ಇನ್ನೂ 2 ವರ್ಷ ಆನ್​ಲೈನ್​ ಮೂಲಕವೇ ಶಿಕ್ಷಣ ನಡೆಯಲಿ. ಬೇಕಿದ್ದರೆ 2 ವರ್ಷ ಶಾಲೆಯೇ ಬಂದ್ ಮಾಡಲಿ ಎಂದು ಕಿಡಿ ಕಾರಿದ್ದಾರೆ.

ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುತ್ತೆ ಎನ್ನುತ್ತೀರಿ. ಶಾಲೆ ಆರಂಭಿಸುವಂತೆ ವರದಿಯನ್ನು ಏಕೆ ಕೊಟ್ಟಿದ್ದೀರಾ? ಡಾ.ದೇವಿ ಪ್ರಸಾದ್ ಶೆಟ್ಟಿ ಕೂಡ ಖಾಸಗಿ ಆಸ್ಪತ್ರೆ ವೈದ್ಯರು. ಇಲ್ಲಿ ಖಾಸಗಿ ಶಾಲೆಗಳಿಗೆ ಮಣೆ ಹಾಕುವ ಕೆಲಸ ಆಗುತ್ತಿದೆ. ಶಾಲೆ ಆರಂಭ ಮಾಡಿ ಮಕ್ಕಳನ್ನ ಬಲಿ ಪಡೆಯಬೇಡಿ ಎಂದು ಪೋಷಕರು ಒತ್ತಾಯಿಸಿದ್ದಾರೆ.

ಖಾಸಗಿ ಶಾಲೆಗಳ ವಿರುದ್ಧ ತಿರುಗಿ ಬಿದ್ದ ಪೋಷಕರು ಖಾಸಗಿ ಶಾಲೆಗಳಿಗೆ ಖಜಾನೆ ತುಂಬಿದರೆ ಸಾಕು. ಮಕ್ಕಳ ಆರೋಗ್ಯ ಖಾಸಗಿ ಶಾಲೆಗಳಿಗೆ ಬೇಕಿಲ್ಲ. ಅವರಿಗೆ ದುಡ್ಡಿನ ಚಿಂತೆ, ನಮಗೆ ಮಕ್ಕಳ ಜೀವದ ಚಿಂತೆ. ಎರಡು ವರ್ಷದಿಂದ ಮಕ್ಕಳನ್ನ ಮನೆಯಲ್ಲೇ ಇಟ್ಕೊಂಡು ಸಾಕುತ್ತಿದ್ದೇವೆ. ಕೊರೊನಾ ಎರಡನೇ ಅಲೆಯಲ್ಲಿ ಸರ್ಕಾರದ ಸಾಧನೆ ನೋಡಿದ್ದೀವಿ. ಎಲ್ಲಿ ನೋಡಿದ್ರೂ ಆ್ಯಂಬುಲೆನ್ಸ್ ಸೌಂಡ್. ಮಕ್ಕಳನ್ನ ಸಮಾಧಿಗೆ ಕಳಿಸೋಕೆ ಇಷ್ಟವಿಲ್ಲ. ಸಾವಿನ ದವಡೆಗೆ ನಮ್ಮ ಮಕ್ಕಳನ್ನ ಸಿಲುಕಿಸಲು ಇಷ್ಟ ಇಲ್ಲ. ಸರ್ಕಾರ ಖಾಸಗಿ ಶಾಲೆಗಳ ಲಾಬಿ ಮಣಿಯಬಾರದು. ಶಾಲೆ ಆರಂಭಕ್ಕೂ ಮುನ್ನ ಪೋಷಕರ ಜೊತೆ ಕೂಲಂಕಷವಾಗಿ ಚರ್ಚಿಸಬೇಕು. ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಸಿಗುವವರೆಗೂ ಶಾಲೆ ಬಾಗಿಲು ತೆರೆಯಬಾರದು ಎಂದು ಪೋಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ

ಶಾಲೆಗಳನ್ನು ಪುನಾರಂಭಿಸುವಂತೆ ಒತ್ತಾಯ; ಶಿಕ್ಷಣ ಸಚಿವರಿಗೆ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಪತ್ರ

ಇಡೀ ಬೆಂಗಳೂರಿಗೆ ವ್ಯಾಕ್ಸಿನ್ ಹಂಚಿಕೆ ಮಾಡುವ ಗುರಿ ಹೊಂದಿರುವ ಸರ್ಕಾರ ಆದ್ರೆ 18 ವರ್ಷ ಮೇಲ್ಪಟ್ಟವರಿಗೇ ಸಿಗುತ್ತಿಲ್ಲ ಲಸಿಕೆ

(Parents objected to Dr Devi Prasad Shetty suggestion of starting a school)