ಇಡೀ ಬೆಂಗಳೂರಿಗೆ ವ್ಯಾಕ್ಸಿನ್ ಹಂಚಿಕೆ ಮಾಡುವ ಗುರಿ ಹೊಂದಿರುವ ಸರ್ಕಾರ ಆದ್ರೆ 18 ವರ್ಷ ಮೇಲ್ಪಟ್ಟವರಿಗೇ ಸಿಗುತ್ತಿಲ್ಲ ಲಸಿಕೆ
18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವ ಬಗ್ಗೆ ರಾಜ್ಯ ಸರ್ಕಾರ, ಬಿಬಿಎಂಪಿಗೆ ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ 18 ವರ್ಷದವರಿಗೆ ಉಚಿತ ಲಸಿಕೆ ಸಿಗುತ್ತಿಲ್ಲ. ಇನ್ನು ಲಸಿಕೆ ಹಾಕಿಸಿಕೊಂಡವರ ಬಗ್ಗೆ ಮಾಹಿತಿ ಪಡೆಯಲು ಬೆಂಗಳೂರು ನಗರದಲ್ಲಿ ಮನೆ ಮನೆಗೆ ಹೋಗಿ ಸರ್ವೆ ಮಾಡುವ ಕಾರ್ಯ ನಡೆಯುತ್ತಿದೆ.
ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಜೂನ್ 1 ರಿಂದ ಕೇಂದ್ರ ಸರ್ಕಾರ ಹೊಸ ಲಸಿಕೆ ನೀತಿಯನ್ನು ಜಾರಿ ಮಾಡಿದೆ. ದೇಶಾದ್ಯಂತ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಬಿಬಿಎಂಪಿಗೆ ಸೂಚನೆ ನೀಡದ ಹಿನ್ನೆಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೊನಾ ಲಸಿಕೆ ಸಿಗ್ತಿಲ್ಲ.
18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡುವ ಬಗ್ಗೆ ರಾಜ್ಯ ಸರ್ಕಾರ, ಬಿಬಿಎಂಪಿಗೆ ಯಾವುದೇ ಸೂಚನೆ ನೀಡಿಲ್ಲ. ಹೀಗಾಗಿ 18 ವರ್ಷದವರಿಗೆ ಉಚಿತ ಲಸಿಕೆ ಸಿಗುತ್ತಿಲ್ಲ. ಇನ್ನು ಲಸಿಕೆ ಹಾಕಿಸಿಕೊಂಡವರ ಬಗ್ಗೆ ಮಾಹಿತಿ ಪಡೆಯಲು ಬೆಂಗಳೂರು ನಗರದಲ್ಲಿ ಮನೆ ಮನೆಗೆ ಹೋಗಿ ಸರ್ವೆ ಮಾಡುವ ಕಾರ್ಯ ನಡೆಯುತ್ತಿದೆ. ಕೊರೊನಾದ ಮೂರನೇ ಅಲೆ ದೇಶಕ್ಕೆ ಅಪ್ಪಳಿಸುವ ಮುನ್ನವೇ ಇಡೀ ಬೆಂಗಳೂರಿಗೆ ವ್ಯಾಕ್ಸಿನ್ ಹಂಚಿಕೆ ಮಾಡುವ ಗುರಿಯನ್ನು ಹೊಂದಿದ್ದಾರೆ.
ಲಸಿಕೆ ಹಾಕಿಸಿಕೊಂಡವರ ಬಗ್ಗೆ ಮಾಹಿತಿ ಪಡೆದು ಹಾಗೂ ಕೊವಿಡ್ ಲಸಿಕೆ ಹಾಕಿಸಿಕೊಳ್ಳುವವರಿಗೆ ಸಲಹೆ ನೀಡಿ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಬಿಬಿಎಂಪಿ ಮಾಡುತ್ತಿದೆ. ಈ ರೀತಿ ಮನೆ ಮನೆ ಸರ್ವೆ ಮಾಡುವಾಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಬಿಬಿಎಂಪಿ ಸಿಬ್ಬಂದಿಗೆ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Covid Vaccination: ನಿನ್ನೆ ಒಂದೇ ದಿನ 53 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ; 59 ಮಂದಿಗೆ ಅಡ್ಡಪರಿಣಾಮ
Published On - 10:25 am, Wed, 23 June 21