ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟು, ಬೀದಿಗೆ ಬಿದ್ದ ವೃದ್ದ ದಂಪತಿ: ಬ್ಯಾಂಕ್ ಅಧಿಕಾರಿಗಳ ಈ ಕ್ರಮ ಸಾಧುವೇ?

Nanjangud Canara Bank: ಬ್ಯಾಂಕ್ ಅಧಿಕಾರಿಗಳು ನಿಯಮಾನುಸಾರ ಸಾಲ ವಸೂಲಿ ಮಾಡಬೇಕಿತ್ತು. ಅವಧಿ ಮುಗಿದರೂ ಅಂದರೆ 12 ವರ್ಷಗಳ ನಂತರವೂ ಸಾಲ ವಸೂಲಿಗೆ ಬ್ಯಾಂಕ್ ನವರು ಪ್ರಯತ್ನವೇ ಮಾಡಿಲ್ಲವಂತೆ. ಆದರೆ ಈಗ ಜ್ಞಾನೋದಯವಾದವರಂತೆ ಏಕಾ ಏಕಿ ಬ್ಯಾಂಕ್ ಸಿಬ್ಬಂದಿ ಮನೆಯನ್ನು ವಶಕ್ಕೆ ಪಡೆದಿದ್ದಾರೆ.

ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟು, ಬೀದಿಗೆ ಬಿದ್ದ ವೃದ್ದ ದಂಪತಿ: ಬ್ಯಾಂಕ್ ಅಧಿಕಾರಿಗಳ ಈ ಕ್ರಮ ಸಾಧುವೇ?
ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟು, ಬೀದಿಗೆ ಬಿದ್ದ ವೃದ್ದ ದಂಪತಿ: ಬ್ಯಾಂಕ್ ಅಧಿಕಾರಿಗಳ ಈ ಕ್ರಮ ಸಾಧುವೇ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jun 23, 2021 | 10:54 AM

ಮೈಸೂರು: ಬ್ಯಾಂಕ್​ ಅಧಿಕಾರಿಗಳ  ಎಡವಟ್ಟುಗಳು ಒಂದಲ್ಲಾ,  ಎರಡಲ್ಲಾ… ಇದು ಆಗಾಗ ಘಟಿಸುತ್ತಲೇ ಇರುತ್ತದೆ. ಮತ್ತು ಇದಕ್ಕೆ ಬಲಿಯಾಗುವವರು ಮಾತ್ರ ಅಮಾಯಕ ಜನರು.  ಕೋಟ್ಯಂತರ ರೂಪಾಯಿ ಯಾಮಾರಿಸಿ, ವಿದೇಶಗಳಲ್ಲಿ ವಿಶ್ರಾಂತ ಜೀವನ ನಡೆಸುವವರ ಮಧ್ಯೆ ನಮ್ಮ ಗೋಳು ಕೇಳುವವರು ಯಾರು? ಎಂದು ಬ್ಯಾಂಕ್​ ಗ್ರಾಹಕರು ಆಗಾಗ ತಮ್ಮ ಒಡಲಾಳದ ನೋವನ್ನು ಹೊರಹಾಕುತ್ತಲೇ ಇರುತ್ತಾರೆ… ತಾಜಾ ಪ್ರಕರಣದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು ಎಡವಟ್ಟು ಮಾಡಿರುವುದು ಮೇಲ್ನೋಟಕ್ಕೆ  ಎದ್ದುಕಾಣುತ್ತಿದೆ. ಮತ್ತು ಇದಕ್ಕೆ ಬಲಿಯಾಗಿ,  ಬೀದಿಗೆ ಬಂದಿರುವವರು ವೃದ್ದ ದಂಪತಿ! 

ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿರುವ ಪ್ರಕರಣದಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟಿನಿಂದಾಗಿ ವೃದ್ದ ದಂಪತಿ ಬೀದಿಗೆ ಬಿದ್ದಿದ್ದಾರೆ.  ಸಾಲ ವಾಪಸಾತಿ ನಿಯಮವನ್ನ ಉಲ್ಲಂಘಿಸಿ ಆರೋಪದ ಮೇರೆಗೆ ವೃದ್ದ ದಂಪತಿಗೆ ಕೆನರಾ ಬ್ಯಾಂಕ್​ ಸಿಬ್ಬಂದಿ ಟಾರ್ಚರ್ ನೀಡಿದ್ದಾರೆ ಎನ್ನಲಾಗಿದೆ. ವೃದ್ದ ದಂಪತಿಯ ಆಸ್ತಿಯನ್ನ ಬಲವಂತವಾಗಿ ಬ್ಯಾಂಕ್​ ತನ್ನ ಸ್ವಾಧೀನಕ್ಕೆ ಪಡೆದಿದೆ ಎಂದು ಆರೋಪಿಸಲಾಗಿದೆ.

ಕೆನರಾ ಬ್ಯಾಂಕ್ ಅಧಿಕಾರಿಗಳ ಎಡವಟ್ಟಿನಿಂದಾಗಿ ಸ್ವಂತ ಸೂರಿದ್ದರೂ ನಂಜನಗೂಡಿನ ಶ್ರೀಕಂಠಪುರ ಬಡಾವಣೆಯ ನಿವಾಸಿ ಲಿಂಗರಾಜು ದಂಪತಿಗೆ ಆಶ್ರಯವಿಲ್ಲ ಎಂಬಂತಾಗಿದೆ.  ಈ ಮಧ್ಯೆ, ಜಿಲ್ಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ ಬ್ಯಾಂಕ್​ ಸಿಬ್ಬಂದಿ, ತಮ್ಮ ಮನೆಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ದಂಪತಿ  ಆರೋಪಿಸಿದ್ದಾರೆ.

ಕೆನರಾ ಬ್ಯಾಂಕ್ ಅಧಿಕಾರಿಗಳ ವಿರುದ್ದ ಲಿಂಗರಾಜು  ದಂಪತಿ ಆರೋಪ

Nanjangud canara bank officials confiscate mortgage loan house after 12 years without producing notice 2

ಕೆನರಾ ಬ್ಯಾಂಕ್ ಅಧಿಕಾರಿಗಳ ವಿರುದ್ದ ಲಿಂಗರಾಜು  ದಂಪತಿ ಆರೋಪ

ಕಾಫಿ ಟೀ ಮಾರುವ ಕೆಲಸ ಮಾಡುತ್ತಿದ್ದ ಲಿಂಗರಾಜು 2003 ರಲ್ಲಿ ನಂಜನಗೂಡಿನ ಎಂ.ಜಿ. ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಿಂದ ಮನೆ ನಿರ್ಮಾಣಕ್ಕಾಗಿ 1 ಲಕ್ಷ 40 ಸಾವಿರ (1,40,000) ರೂಪಾಯಿ ಅಡಮಾನ ಸಾಲ ಪಡೆದಿದ್ದರು. ತಮ್ಮ ಸಾಲಕ್ಕಾಗಿ ಶ್ರೀಕಂಠಪುರದ ತಮ್ಮ ಮನೆಯನ್ನ ಮಾರ್ಟ್​​​ಗೇಜ್ ಮಾಡಿದ್ದರಂತೆ. 12 ವರ್ಷಗಳ ಸುದೀರ್ಘ ಕಾಲದ ಸಾಲ ಪಡೆದ ಲಿಂಗರಾಜು ಒಂದು ವರ್ಷದಲ್ಲಿ ಸುಮಾರು 40 ಸಾವಿರ ಹಿಂದಿರುಗಿಸಿದ್ದಾರೆ. ನಂತರ ವೈಯುಕ್ತಿಕ ಕಾರಣದಿಂದ ಸಾಲ ತೀರಿಸಲು ಆಶಕ್ತರಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಈ ವೇಳೆ, ಬ್ಯಾಂಕ್ ಅಧಿಕಾರಿಗಳು ನಿಯಮಾನುಸಾರ ಸಾಲ ವಸೂಲಿ ಮಾಡಬೇಕಿತ್ತು. ಅವಧಿ ಮುಗಿದರೂ ಅಂದರೆ 12 ವರ್ಷಗಳ ನಂತರವೂ ಸಾಲ ವಸೂಲಿಗೆ ಬ್ಯಾಂಕ್ ನವರು ಪ್ರಯತ್ನವೇ ಮಾಡಿಲ್ಲವಂತೆ. ಒಂದು ನೋಟೀಸ್ ಸಹ ಜಾರಿ ಮಾಡಿಲ್ಲ. ಆದರೆ ಈಗ ಜ್ಞಾನೋದಯವಾದವರಂತೆ ಏಕಾ ಏಕಿ ಬ್ಯಾಂಕ್ ಸಿಬ್ಬಂದಿ ಮನೆಯನ್ನು ವಶಕ್ಕೆ ಪಡೆದಿದ್ದಾರೆ. ಇದರಿಂದ ಮನೆಯಿಲ್ಲದೆ ಲಿಂಗರಾಜು ದಂಪತಿ ಬೀದಿಯಲ್ಲಿ ನಿಂತಿದ್ದಾರೆ.

(Nanjangud canara bank officials confiscate mortgage loan house after 12 years without producing notice)