Covid Vaccination: ನಿನ್ನೆ ಒಂದೇ ದಿನ 53 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ; 59 ಮಂದಿಗೆ ಅಡ್ಡಪರಿಣಾಮ
ನಿನ್ನೆ 53 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಅದರಲ್ಲಿ 47,55,674 ಜನರಿಗೆ ಮೊದಲ ಡೋಸ್ ಆಗಿದ್ದು, ಉಳಿದ 6,31,277 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ.
ದೆಹಲಿ: ಜೂನ್ 21ರಿಂದ ಕೇಂದ್ರ ಸರ್ಕಾರದ ಹೊಸ ಲಸಿಕೆ ನೀತಿ ಜಾರಿಯಾಗಿದೆ. ದೇಶಾದ್ಯಂತ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಈ ನೀತಿ ಜಾರಿಗೆ ಬಂದ ಮೊದಲ ದಿನ ಅಂದರೆ ಸೋಮವಾರ ಬರೋಬ್ಬರಿ 88 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ದಾಖಲೆ ಸೃಷ್ಟಿಸಲಾಗಿತ್ತು. ಆದರೆ ಎರಡನೇ ದಿನ ಅಂದರೆ ಮಂಗಳವಾರ ಈ ಸಂಖ್ಯೆ ಕಡಿಮೆಯಾಗಿದೆ. ನಿನ್ನೆ ರಾತ್ರಿ 11.59ರ ಹೊತ್ತಿನ ಕೊವಿನ್ ಆ್ಯಪ್ ಡಾಟಾ ಅನ್ವಯ ಮಂಗಳವಾರ 53,86,951 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಮೊನ್ನೆಗಿಂತ..ನಿನ್ನೆಗೆ ಸುಮಾರು 30 ಲಕ್ಷ ಕಡಿಮೆಯಾಗಿದೆ.
ನಿನ್ನೆ 53 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಅದರಲ್ಲಿ 47,55,674 ಜನರಿಗೆ ಮೊದಲ ಡೋಸ್ ಆಗಿದ್ದು, ಉಳಿದ 6,31,277 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ. ನಿನ್ನೆ ಒಟ್ಟಾರೆ 59 ಜನರಿಗೆ ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗಿದ್ದು ವರದಿಯಾಗಿದೆ. ಇನ್ನು ಮಂಗಳವಾರ 28,55,609 ಪುರುಷರು ಹಾಗೂ 25,30,203 ಮಹಿಳೆಯರು ಲಸಿಕೆ ಪಡೆದಿದ್ದಾರೆ.
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್, ಸೋಮವಾರದ ದಾಖಲೆ ಲಸಿಕೆ ಅಭಿಯಾನದ ಬಗ್ಗೆ ಮಾತನಾಡಿದ್ದರು. ಅಂದು ಶೇ.46ರಷ್ಟು ಮಹಿಳೆಯರು ಮತ್ತು ಶೇ.53 ರಷ್ಟು ಪುರುಷರು ಲಸಿಕೆ ಪಡೆದಿದ್ದಾರೆ. ನಾವು ಈ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದರು.
ಇದನ್ನೂ ಓದಿ: ಮೂರನೆ ಅಲೆ ಸನಿಹವಾಗುತ್ತಿದೆ.. ಆದ್ರೆ ರಾಜ್ಯದಲ್ಲಿ ಮಕ್ಕಳಿಗೆ ಚಿಕಿತ್ಸೆಗೆ ವೈದ್ಯರ ಕೊರತೆ.. 6 ಸಾವಿರ ಮಕ್ಕಳಿಗೆ ಒಬ್ಬ ವೈದ್ಯ