Coronavirus cases in India: ಕಳೆದ 24 ಗಂಟೆಗಳಲ್ಲಿ 50,581 ಹೊಸ ಕೊವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಶೇ 96.56
Covid-19: ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,43,194 ಕ್ಕೆ ಇಳಿದಿದೆ, ಇದು 82 ದಿನಗಳಲ್ಲಿ ಕಡಿಮೆ. ಚೇತರಿಕೆ ಪ್ರಮಾಣವು ಶೇಕಡಾ 96.56 ಕ್ಕೆ ಏರಿದೆ. 1,358 ಹೊಸ ಸಾವುಗಳೊಂದಿಗೆ, ದೇಶದ ಸಾವಿನ ಸಂಖ್ಯೆ 3.9 ಲಕ್ಷಕ್ಕೆ ಏರಿದೆ.
ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 50,581 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 6,43,194 ಕ್ಕೆ ಇಳಿದಿದೆ, ಇದು 82 ದಿನಗಳಲ್ಲಿ ಕಡಿಮೆ. ಚೇತರಿಕೆ ಪ್ರಮಾಣವು ಶೇಕಡಾ 96.56 ಕ್ಕೆ ಏರಿದೆ. 1,358 ಹೊಸ ಸಾವುಗಳೊಂದಿಗೆ, ದೇಶದ ಸಾವಿನ ಸಂಖ್ಯೆ 3.9 ಲಕ್ಷಕ್ಕೆ ಏರಿದೆ. ಹೈದರಾಬಾದ್ ಮೂಲದ ಔಷಧ ಕಂಪನಿ ಭಾರತ್ ಬಯೋಟೆಕ್ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಭೇಟಿಗೆ ಸಜ್ಜಾಗಿದ್ದು, ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆ ಪಟ್ಟಿಗಾಗಿ ತನ್ನ ಪ್ರಸ್ತಾವನೆಯನ್ನು ಸಲ್ಲಿಸುವ ನಿರೀಕ್ಷೆಯಿದೆ.
ಏತನ್ಮಧ್ಯೆ, ಕೇಂದ್ರ ಆರೋಗ್ಯ ಸಚಿವಾಲಯದ ಪರಿಷ್ಕೃತ ಮಾಹಿತಿಯ ಪ್ರಕಾರ ಸೋಮವಾರ 88.09 ಲಕ್ಷ ಡೋಸ್ ಕೊವಿಡ್ -19 ಲಸಿಕೆಗಳನ್ನು ನೀಡಿದ್ದು ಇದು ದಾಖಲೆ ಆಗಿದೆ. ಶೇಕಡಾ 64 ರಷ್ಟು ವ್ಯಾಕ್ಸಿನೇಷನ್ ಗ್ರಾಮೀಣ ಪ್ರದೇಶಗಳಲ್ಲಿ ನೀಡಲಾಗಿದೆ.
India reports 50,848 new #COVID19 cases, 68,817 discharges & 1,358 deaths in last 24 hours as per Union Health Ministry
Total cases: 3,00,28,709 Total discharges: 2,89,94,855 Death toll: 3,90,660 Active cases: 6,43,194 pic.twitter.com/DAkwqQXREF
— ANI (@ANI) June 23, 2021
ದೇಶದ ಮೂರು ರಾಜ್ಯಗಳಲ್ಲಿ ಇದುವರೆಗೆ ಪತ್ತೆಯಾದ ಕೊರೊನಾವೈರಸ್ ಡೆಲ್ಟಾ ಪ್ಲಸ್ ರೂಪಾಂತರವನ್ನು ಕೇಂದ್ರ ಆರೋಗ್ಯ ಸಚಿವಾಲಯವು ಕಾಳಜಿಯ ರೂಪಾಂತರವೆಂದು ವರ್ಗೀಕರಿಸಿದೆ. ರೂಪಾಂತರ ಪತ್ತೆಯಾದ ಕ್ಲಸ್ಟರ್‌ಗಳಲ್ಲಿ ತಕ್ಷಣದ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯಗಳಿಗೆ ನಿರ್ದೇಶಿಸಲಾಗಿದೆ.
India reports 40 cases of Delta Plus variant of the novel coronavirus, most of the cases are from Maharashtra, Madhya Pradesh, Kerala and Tamil Nadu. It is still a variant of interest: Government sources
— ANI (@ANI) June 23, 2021
ಏಕದಿನ ಕೊವಿಡ್ -19 ವ್ಯಾಕ್ಸಿನೇಷನ್‌ಗಳಲ್ಲಿ ಶೇ 40 ಕುಸಿತ ಜೂನ್ 21 ರಂದು 88.09 ಲಕ್ಷ ಡೋಸ್ ವಿತರಣೆ ಮೂಲಕ ದಾಖಲೆ ಸೃಷ್ಟಿಸಿದ್ದರೂ ಲಸಿಕೆ ವಿತರಣೆ ಶೇ.40ರಷ್ಟು ಡೋಸ್ ಕುಸಿತ ಕಂಡಿದೆ. ಇದರೊಂದಿಗೆ ದೇಶದಲ್ಲಿ ಇಲ್ಲಿಯವರೆಗೆ 29,46,39,511 ಲಸಿಕೆ ಡೋಸ್ ನೀಡಲಾಗಿದೆ. ಜೂನ್ 21 ರಂದು 17.14 ಲಕ್ಷ ಡೋಸ್ ನೀಡಿದ್ದ ಮಧ್ಯಪ್ರದೇಶ ಮಂಗಳವಾರ ಕೇವಲ 4,800 ವ್ಯಕ್ತಿಗಳಿಗೆ ಮಾತ್ರ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಸೋಮವಾರ 11.38 ಲಕ್ಷ ವ್ಯಾಕ್ಸಿನೇಷನ್ ಹೊಂದಿರುವ ಕರ್ನಾಟಕ, ಒಂದು ದಿನದ ನಂತರ 3.78 ಲಕ್ಷ ಡೋಸ್ ಲಸಿಕೆ ನೀಡಿತು. ಉತ್ತರ ಪ್ರದೇಶವು ಇದೇ ಮಟ್ಟವನ್ನು ಕಾಯ್ದುಕೊಂಡರೆ, ಬಿಹಾರ (5.75 ಲಕ್ಷದಿಂದ 2.62 ಲಕ್ಷಕ್ಕೆ) ಮತ್ತು ಹರಿಯಾಣ (5.15 ಲಕ್ಷದಿಂದ 75,000 ಪ್ಲಸ್) ವ್ಯಾಕ್ಸಿನೇಷನ್ ಸಂಖ್ಯೆಯಲ್ಲಿ ಸ್ಪಷ್ಟ ಕುಸಿತ ಹೊಂದಿರುವ ರಾಜ್ಯಗಳಲ್ಲಿ ಸೇರಿವೆ.
ಏತನ್ಮಧ್ಯೆ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಂಕಿ ಅಂಶಗಳ ಪ್ರಕಾರ ಮಂಗಳವಾರ 1,901,056 ಮಾದರಿಗಳನ್ನು ಪರೀಕ್ಷಿಸಲಾಗಿದೆ ಜೂನ್ 20 ರಂದು 1,664,360 ಕ್ಕೆ ಹೋಲಿಸಿದರೆ, ಒಟ್ಟು 395,973,198 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
COVID-19 Testing Update. For more details visit: https://t.co/dI1pqvXAsZ @MoHFW_INDIA @DeptHealthRes @PIB_India @mygovindia @COVIDNewsByMIB #ICMRFIGHTSCOVID19 #IndiaFightsCOVID19 #CoronaUpdatesInIndia #COVID19 #Unite2FightCorona pic.twitter.com/uirOyEkdEe
— ICMR (@ICMRDELHI) June 23, 2021
ಕೋವಿಡ್ ಲಸಿಕೆಯ ಒಂದು ಡೋಸ್ ಶೇ 82% ಸಾವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ, 2 ಡೋಸ್ 95% ಪರಿಣಾಮಕಾರಿ: ಐಸಿಎಂಆರ್-ಎನ್ಐಇ ಅಧ್ಯಯನ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ (ICMR-NIE) ಹೊಸ ವಿಶ್ಲೇಷಣೆಯ ಪ್ರಕಾರ, ಕೊವಿಡ್ 19 ಲಸಿಕೆಯ ಒಂದು ಡೋಸ್ ಸಾವುಗಳನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. ಒಂದು ಮತ್ತು ಎರಡು ಡೋಸ್ಗಳೊಂದಿಗೆ ಕೊವಿಡ್ -19 ಸಾವುಗಳನ್ನು ತಡೆಗಟ್ಟುವಲ್ಲಿ ಲಸಿಕೆ ಪರಿಣಾಮಕಾರಿತ್ವ ಶೇ 82 ಮತ್ತು ಶೇ 95 ರಷ್ಟಿದೆ.
‘ತಮಿಳುನಾಡಿನಲ್ಲಿರುವ ಹೆಚ್ಚಿನ ಅಪಾಯಕಾರಿ ಗುಂಪುಗಳಲ್ಲಿ ಸಾವುಗಳನ್ನು ತಡೆಗಟ್ಟುವಲ್ಲಿ ಕೋವಿಡ್ -19 ಲಸಿಕೆ ಪರಿಣಾಮಕಾರಿತ್ವ’ ಎಂಬ ಅಧ್ಯಯನವನ್ನು ಜೂನ್ 21 ರಂದು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ನಲ್ಲಿ ಪ್ರಕಟಿಸಲಾಗಿದೆ.
ಭಾರತವು ಮಂಗಳವಾರ 42,640 ಹೊಸ ಕೊವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಇದು 91 ದಿನಗಳಲ್ಲಿ ಅತಿ ಕಡಿಮೆ. 1,167 ಸಾವುಗಳು ವರದಿ ಆಗಿದ್ದು ಏಪ್ರಿಲ್ 14 ರಿಂದ ಮಂಗಳವಾರ ಅತಿ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಂಗಳವಾರ ವರದಿಯಾದ ಹೊಸ ಪ್ರಕರಣಗಳ ಸಂಖ್ಯೆ ದೆಹಲಿಯಲ್ಲಿ 134, ಮುಂಬೈನಲ್ಲಿ 570, ಬೆಂಗಳೂರಿನಲ್ಲಿ 803, ಕೋಲ್ಕತ್ತಾದಲ್ಲಿ 172 ಮತ್ತು ಚೆನ್ನೈನಲ್ಲಿ 410 ಪ್ರಕರಣಗಳು ಸೇರಿವೆ.
ಇದನ್ನೂ ಓದಿ: ಈಗಲೇ ಶಾಲೆಗಳ ಆರಂಭದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುವ ಸಂಭವ: ಟಾಸ್ಕ್ಫೋರ್ಸ್ ಮುಖ್ಯಸ್ಥ ವಿ.ಕೆ.ಪೌಲ್
(India reported 50,581 new coronavirus cases and 1,358 deaths in the last 24 hours according to Union Health Ministry )
Published On - 10:38 am, Wed, 23 June 21