ಸೆಪ್ಟೆಂಬರ್​ ಹೊತ್ತಿಗೆ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗಲಿದೆ: ಡಾ.ರಣದೀಪ್​ ಗುಲೇರಿಯಾ

ಮಕ್ಕಳಿಗೆ ಲಸಿಕೆ ಹಾಕಿ, ನಂತರ ಶಾಲೆಗಳನ್ನು ತೆರೆಯುವುರಿಂದ ಶಿಕ್ಷಣ ಸಂಸ್ಥೆಗಳು ಕೊರೊನಾ ಸೂಪರ್​ ಸ್ಪ್ರೆಡರ್ ಆಗುವುದು ತಪ್ಪುತ್ತದೆ. ನೀತಿ ನಿರೂಪಕರು ಶಾಲೆಗಳನ್ನು ತೆರೆಯುವತ್ತ ಗಮನಹರಿಸಬೇಕು ಎಂದು ಡಾ. ರಣದೀಪ್​ ಗುಲೇರಿಯಾ ಹೇಳಿದ್ದಾರೆ.

ಸೆಪ್ಟೆಂಬರ್​ ಹೊತ್ತಿಗೆ ಮಕ್ಕಳಿಗೂ ಕೊರೊನಾ ಲಸಿಕೆ ಲಭ್ಯವಾಗಲಿದೆ: ಡಾ.ರಣದೀಪ್​ ಗುಲೇರಿಯಾ
ಡಾ.ರಣದೀಪ್​ ಗುಲೇರಿಯಾ
TV9kannada Web Team

| Edited By: Lakshmi Hegde

Jun 23, 2021 | 11:52 AM

ಸೆಪ್ಟೆಂಬರ್​ ವೇಳೆಗೆ ಮಕ್ಕಳಿಗೂ ಕೊವಿಡ್​ 19 ಲಸಿಕೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ದೆಹಲಿ ಏಮ್ಸ್​ನ ವೈದ್ಯ ರಣದೀಪ್​ ಗುಲೇರಿಯಾ ತಿಳಿಸಿದ್ದಾರೆ. ದೇಶದಲ್ಲಿ ಸದ್ಯ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ. ಮಕ್ಕಳ ಮೇಲೆ ಲಸಿಕೆಯ ಕ್ಲಿನಿಕಲ್​ ಟ್ರಯಲ್​ ನಡೆಯುತ್ತಿದೆ. ಸೆಪ್ಟೆಂಬರ್​ ಹೊತ್ತಿಗೆ ಕ್ಲಿನಕಲ್​ ಟ್ರಯಲ್​​ನ ಎರಡು ಹಾಗೂ ಮೂರನೇ ಹಂತಗಳು ಮುಕ್ತಾಯವಾಗಲಿದ್ದು, ಅದೇ ತಿಂಗಳಿಂದಲೇ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲು ಶುರು ಮಾಡಬಹುದು ಎಂದು ಕೇಂದ್ರ ಸರ್ಕಾರದ ಕೊವಿಡ್ 19 ಟಾಸ್ಕ್​ ಫೋರ್ಸ್​​ನಲ್ಲಿರುವ ಪ್ರಮುಖ ಸದಸ್ಯರು ಈಗಾಗಲೇ ತಿಳಿಸಿದ್ದಾರೆ.

ಇದರ ಬೆನ್ನಲ್ಲೇ ಡಾ. ಗುಲೇರಿಯಾ ಕೂಡ, 2ವರ್ಷಕ್ಕಿಂತ ಹೆಚ್ಚಾಗಿರುವ ಮಕ್ಕಳಿಗೆ ಸೆಪ್ಟೆಂಬರ್​​ ಹೊತ್ತಿಗೆ ಕೊವ್ಯಾಕ್ಸಿನ್​ ಲಸಿಕೆ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಫಿಜರ್​-ಬಯೋಟೆಕ್​​ನ ಲಸಿಕೆಗೆ ಭಾರತದಲ್ಲಿ ಗ್ರೀನ್​ ಸಿಗ್ನಲ್​ ಸಿಕ್ಕರೆ ಅದೂ ಕೂಡ ಮಕ್ಕಳಿಗೆ ಒಂದು ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ.

ಮಕ್ಕಳ ಮೇಲೆ ಟ್ರಯಲ್​ ಇನ್ನು ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಈಗಾಗಲೇ ದೆಹಲಿಯ ಏಮ್ಸ್​ ಕ್ಲಿನಿಕಲ್​ ಟ್ರಯಲ್​ ಶುರು ಮಾಡಿದೆ. 2-17ವರ್ಷದವರ ಮೇಲೆ ಜೂ.7ರಿಂದಲೇ ಪ್ರಯೋಗ ನಡೆಯುತ್ತಿದ್ದು, ಮೂರನೇ ಹಂತ ಮುಗಿಯುತ್ತಿದ್ದಂತೆ ಅವರಿಗೆ ಕೊವಿಡ್​ 19 ಲಸಿಕೆ ನೀಡುವ ಅಭಿಯಾನ ಪ್ರಾರಂಭವಾಗಲಿದೆ. ಮಕ್ಕಳ ಮೇಲೆ ಕೊವ್ಯಾಕ್ಸಿನ್​ ಕೊರೊನಾ ಲಸಿಕೆ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ಮೇ 12ರಂದು ಡಿಸಿಜಿಐ ಅನುಮೋದನೆ ನೀಡಿತ್ತು.

ಮಕ್ಕಳಿಗೆ ಲಸಿಕೆ ಹಾಕಿ, ನಂತರ ಶಾಲೆಗಳನ್ನು ತೆರೆಯುವುರಿಂದ ಶಿಕ್ಷಣ ಸಂಸ್ಥೆಗಳು ಕೊರೊನಾ ಸೂಪರ್​ ಸ್ಪ್ರೆಡರ್ ಆಗುವುದು ತಪ್ಪುತ್ತದೆ. ನೀತಿ ನಿರೂಪಕರು ಶಾಲೆಗಳನ್ನು ತೆರೆಯುವತ್ತ ಗಮನಹರಿಸಬೇಕು..ಹಾಗೇ ಅದನ್ನು ತೆಗೆಯುವ ಮುನ್ನ ಕೊರೊನಾ ನಿಯಂತ್ರಕ ಸಮಗ್ರ ವಿಧಾನವನ್ನೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಹಾಗೇ, ಕಂಟೈನ್​ಮೆಂಟ್​ ಝೋನ್​ಗಳಲ್ಲದ ಪ್ರದೇಶದಲ್ಲಿ ಶಾಲೆಗಳನ್ನು ತೆರೆಯುವತ್ತ ಗಮನಹರಿಸಬಹುದು. ಆದರೆ ಸಮ-ಬೆಸ ಮಾದರಿಯಲ್ಲಿ ಶಾಲೆ ನಡೆಸಬೇಕು. ಅದರಲ್ಲೂ ಯಾವುದೇ ಕೋಣೆಯಲ್ಲಿ ಶಾಲೆ ನಡೆಸದೆ, ತೆರೆದ ಪ್ರದೇಶದಲ್ಲಿ ಶಾಲೆ ನಡೆಸಬೇಕು ಎಂದು ಡಾ. ಗುಲೇರಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: Throwback Video: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಮೆಚ್ಚಿಕೊಂಡ ಸೋನು ನಿಗಮ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada