7 ಕೋಟಿ ರೂ.ಮೌಲ್ಯದ ಚಿನ್ನಾಭರಣ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿದ ರೈಲ್ವೆ ಪೊಲೀಸರು
ರೈಲ್ವೆ ಸ್ಟೇಶನ್ನ ಮುಖ್ಯ ಗೇಟ್ಬಳಿ ಇಳಿದಿದ್ದ ಇವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅನುಮಾನಗೊಂಡು ಅವರನ್ನು ತಡೆಯಲಾಯಿತು. ಠಾಣೆಗೆ ಕರೆತಂದು ಅವರ ಲಗೇಜ್ಗಳನ್ನು ಪರಿಶೀಲಿಸಲಾಯಿತು
ಭೋಪಾಲ್: 7 ಕೋಟಿ ರೂಪಾಯಿ ಮೌಲ್ಯದ 14 ಕೆಜಿ ಚಿನ್ನಾಭರಣಗಳನ್ನು ಗುಜರಾತ್ನ ಸೂರತ್ನಿಂದ ಸಾಗಿಸುತ್ತಿದ್ದ ಮೂವರನ್ನು ಸರ್ಕಾರಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ತಪ್ತಿ ಗಂಗಾ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇವರನ್ನು ಮಧ್ಯಪ್ರದೇಶದ ಕಟ್ನಿ ಸ್ಟೇಶನ್ನಲ್ಲಿ ಬಂಧಿಸಲಾಗಿದೆ. ಇವರು ಚಿನ್ನಾಭರಣಗಳನ್ನು ಬೆನ್ನಿಗೆ ಹಾಕಿದ್ದ ಬ್ಯಾಗ್ನಲ್ಲಿ ಪ್ಲಾಸ್ಟಿಕ್ನಲ್ಲಿ ಇಟ್ಟಿದ್ದರು.
ರೈಲ್ವೆ ಸ್ಟೇಶನ್ನ ಮುಖ್ಯ ಗೇಟ್ಬಳಿ ಇಳಿದಿದ್ದ ಇವರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಅನುಮಾನಗೊಂಡು ಅವರನ್ನು ತಡೆಯಲಾಯಿತು. ಠಾಣೆಗೆ ಕರೆತಂದು ಅವರ ಲಗೇಜ್ಗಳನ್ನು ಪರಿಶೀಲಿಸಲಾಯಿತು. ಆಗ ಅದರಲ್ಲಿ ಬಂಗಾರದ ಚೈನ್, ರಿಂಗ್, ಇಯರ್ರಿಂಗ್ಸ್ ಸೇರಿ ಹಲವು ರೀತಿಯ ಚಿನ್ನಾಭರಣಗಳು ಇದ್ದವು. ಎಲ್ಲ ಸೇಇರಿ ಸುಮಾರು 14 ಕೆಜಿ ಚಿನ್ನಾಭರಣಗಳು ಇದ್ದವು. ಇವುಗಳ ಮೌಲ್ಯ 7 ಕೋಟಿ ರೂ. ಆದರೆ ಇವರ ಬಳಿ ಇದ್ದ ಬಿಲ್ನಲ್ಲಿ 5.5 ಕೋಟಿ ರೂ. ಎಂದು ಬರೆದುಕೊಂಡಿತ್ತೆಂದು ಪೊಲೀಸರು ಹೇಳಿದ್ದಾರೆ.
ಬಿಲ್ ನೋಡಿದರೆ ಇದು ಕಳ್ಳತನ ಮಾಡಿದ್ದಲ್ಲ ಎಂದು ಅನ್ನಿಸುತ್ತದೆ. ಆದರೆ ಇಷ್ಟು ಮೌಲ್ಯದ ಚಿನ್ನವನ್ನು ಇವರ್ಯಾಕೆ ಖರೀದಿಸಿದರು? ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂಬಿತ್ಯಾದಿ ವಿಚಾರವನ್ನು ತನಿಖೆ ನಡೆಸುವುದಾಗಿ ಕಟ್ನಿ ಠಾಣೆಯ ಪೊಲೀಸ್ ಅಧಿಕಾರಿ ಆರ್.ಕೆ. ಪಟೇಲ್ ತಿಳಿಸಿದ್ದಾರೆ.
ಇದನ್ನೂ ಓದಿ: Covid Vaccination: ನಿನ್ನೆ ಒಂದೇ ದಿನ 53 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆ; 59 ಮಂದಿಗೆ ಅಡ್ಡಪರಿಣಾಮ
(Three persons from Surat detained with 14 kg of gold In Madhya Pradesh)