ಮಾಧ್ಯಮಗಳು ತಪ್ಪು ಮಾಹಿತಿ ಹಬ್ಬಿಸುತ್ತಿವೆ; ಪ್ಯಾರಾಸಿಟಮೊಲ್ ಮತ್ತು ಆಂಟಿಬಯೊಟಿಕ್​ ಬಳಸಿ ನಾನು ಕೊವಿಡ್​ನಿಂದ ಚೇತರಿಸಿಕೊಂಡಿದ್ದು: ತೆಲಂಗಾಣ ಸಿಎಂ ಕೆಸಿಆರ್

K Chandrasekhar Rao: ವಾರಂಗಲ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆಸಿಆರ್ ಈ ಕಪ್ಪು ಶಿಲೀಂಧ್ರ ಅಥವಾ ಹಳದಿ ಶಿಲೀಂಧ್ರಗಳ ಬಗ್ಗೆ ಯಾರು (ತಪ್ಪು ಮಾಹಿತಿ) ಹರಡುತ್ತಿದ್ದಾರೆಂದು ತಿಳಿದಿಲ್ಲ. ಅದು ಟಿವಿ ಚಾನೆಲ್, ಪತ್ರಿಕೆ ಅಥವಾ ಬೇರೆ ಯಾವುದೇ ಮಾಧ್ಯಮಕ್ಕೆ ಶಿಲೀಂಧ್ರವು ಜೀವಂತವಾಗಿದೆಯೇ ಅಥವಾ ಸತ್ತಿದೆಯೆ ಎಂದು ತಿಳಿದಿಲ್ಲ,

ಮಾಧ್ಯಮಗಳು ತಪ್ಪು ಮಾಹಿತಿ ಹಬ್ಬಿಸುತ್ತಿವೆ; ಪ್ಯಾರಾಸಿಟಮೊಲ್ ಮತ್ತು ಆಂಟಿಬಯೊಟಿಕ್​ ಬಳಸಿ ನಾನು ಕೊವಿಡ್​ನಿಂದ ಚೇತರಿಸಿಕೊಂಡಿದ್ದು: ತೆಲಂಗಾಣ ಸಿಎಂ ಕೆಸಿಆರ್
ತೆಲಂಗಾಣ ಸಿಎಂ ಕೆಸಿಆರ್
TV9kannada Web Team

| Edited By: Rashmi Kallakatta

Jun 23, 2021 | 11:57 AM

ಹೈದರಾಬಾದ್:  ಮಾಧ್ಯಮಗಳು ಕೊವಿಡ್ -19 ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಮತ್ತು ಜನರಲ್ಲಿ ಭೀತಿ ಉಂಟುಮಾಡುತ್ತಿದ್ದಾರೆ ಎಂದು  ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಆರೋಪಿಸಿದರು. ನಾನು ಪ್ಯಾರಾಸಿಟಮೊಲ್ ಮತ್ತು ಆಂಟಿಬಯೊಟಿಕ್ ತೆಗೆದುಕೊಳ್ಳುವ ಮೂಲಕ ಕೊವಿಡ್ ಕಾಯಿಲೆಯಿಂದ ಚೇತರಿಸಿಕೊಂಡಿದ್ದೆ ಎಂದು ಸೋಮವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ. ಕೆಸಿಆರ್ ಏಪ್ರಿಲ್ ತಿಂಗಳಲ್ಲಿ ಕೊವಿಡ್ ಪಾಸಿಟಿವ್ ಆಗಿದ್ದರು . ಅವರ ಪ್ರಕಾರ, ಅವರು ಕೇವಲ ಎರಡು ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಒಂದು ವಾರದಲ್ಲಿ ಚೇತರಿಸಿಕೊಂಡಿದ್ದಾರೆ. ವಾರಂಗಲ್ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆಸಿಆರ್ ಈ ಕಪ್ಪು ಶಿಲೀಂಧ್ರ ಅಥವಾ ಹಳದಿ ಶಿಲೀಂಧ್ರಗಳ ಬಗ್ಗೆ ಯಾರು (ತಪ್ಪು ಮಾಹಿತಿ) ಹರಡುತ್ತಿದ್ದಾರೆಂದು ತಿಳಿದಿಲ್ಲ. ಅದು ಟಿವಿ ಚಾನೆಲ್, ಪತ್ರಿಕೆ ಅಥವಾ ಬೇರೆ ಯಾವುದೇ ಮಾಧ್ಯಮಕ್ಕೆ ಶಿಲೀಂಧ್ರವು ಜೀವಂತವಾಗಿದೆಯೇ ಅಥವಾ ಸತ್ತಿದೆಯೆ ಎಂದು ತಿಳಿದಿಲ್ಲ, ಆದರೆ ಇವೆಲ್ಲವನ್ನೂ ಕೇಳಿದ ನಂತರ ಜನರು ಸಾಯುತ್ತಿದ್ದಾರೆ. ಈ ಟಿವಿ ಜನರು, ನಾನು ನಿಮಗೆ ಹೇಳುತ್ತಿದ್ದೇನೆ, ಅವರು ಶಪಿಸಲ್ಪಡುತ್ತಾರೆ ಎಂದು ಕೆಸಿಆರ್ ತೆಲುಗಿನಲ್ಲಿ ಹೇಳಿರುವುದಾಗಿ ದಿ ಪ್ರಿಂಟ್ ವರದಿ ಮಾಡಿದೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ ಮಾಡಲು ವಾರಂಗಲ್‌ನಲ್ಲಿದ್ದ ಸಿಎಂ, ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದು ತಪ್ಪು ಮಾಹಿತಿ ಹರಡುವ ಮೂಲಕ ತನ್ನ ಸಾಮಾಜಿಕ ಜವಾಬ್ದಾರಿಯ ವಿರುದ್ಧ ವರ್ತಿಸುತ್ತಿದ್ದಾರೆ ಎಂದು ಹೇಳಿದರು.  ಕೆಸಿಆರ್ ಅವರ ಈ ವಾಗ್ದಾಳಿ ಅವರ ಸರ್ಕಾರವು ರಾಜ್ಯದಲ್ಲಿ ಲಾಕ್​ಡೌನ್ ನಿರ್ಬಂಧ ತೆಗೆದುಹಾಕಿದ ಕೆಲವು ದಿನಗಳ ನಂತರ ಬಂದಿದೆ.

ಜೂನ್ 21 ರಂದು ತೆಲಂಗಾಣದಲ್ಲಿ 1,197 ಹೊಸ ಪ್ರಕರಣಗಳು ವರದಿ ಆಗಿದೆ. ಒಂದು ತಿಂಗಳ ಹಿಂದೆ, ದೈನಂದಿನ ಸಕಾರಾತ್ಮಕ ಪ್ರಕರಣಗಳು 3,464 ಆಗಿದೆ.

ಮಂತ್ರವಾದಿ ಮತ್ತು ಕಾಲೆರಾ ಕತೆ ಈ ಸಂದರ್ಭದಲ್ಲಿ ಕೆಸಿಆರ್ ತಮ್ಮ ಕೊವಿಡ್ ಅನುಭವದ ಬಗ್ಗೆ ಮಾತನಾಡುತ್ತಾ, ಮಾಧ್ಯಮಗಳು ಕೊವಿಡ್ ಬಗ್ಗೆ ಭೀತಿ ಹೆಚ್ಚಿಸುತ್ತಿವೆ ಎಂದಿದ್ದಾರೆ. ನನಗೆ ಕೊವಿಡ್ ಬಂದಾಗ, ವೈರಸ್ ಏನೆಂದು ಅವರು ಪತ್ತೆಹಚ್ಚಬಹುದೇ ಎಂದು ನಾನು ವೈದ್ಯರನ್ನು ಕೇಳಿದೆ. ಅವರು ಇಲ್ಲ ಎಂದು ಹೇಳಿದರು. ನಂತರ ನಾನು ಅವರಲ್ಲಿ ಯಾವ ಔಷಧಿಗಳ ಬಳಸಬೇಕೆಂದು ಕೇಳಿದೆ. ಇದು ಟ್ರಯಲ್ ಆಂಡ್ ಎರರ್ ಎಂದು ಅವರು ಹೇಳಿದರು. ಕೇವಲ ಎರಡು ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ಳಬೇಕು ಎಂದು ವೈದ್ಯರು ಹೇಳಿದ್ದರು – ಒಂದು ದೇಹದ ಉಷ್ಣತೆಯನ್ನು ನಿಯಂತ್ರಿಸಲು ‘ಡೊಲೊ’ ಎಂದು ಕರೆಯಲ್ಪಡುವ ಪ್ಯಾರಾಸಿಟಮೊಲ್ ಮತ್ತು ಒಂದು ಆಂಟಿಬಯೋಟಿಕ್. ಇದು ದೇಹಕ್ಕೆ ಸರಿಹೊಂದುತ್ತದೆ ಎಂದರು. ನಾನು ಎರಡು ಔಷಧಿಗಳನ್ನು ಮಾತ್ರ ತೆಗೆದುಕೊಂಡಿದ್ದೇನೆ. ವೈದ್ಯರು ನನಗೆ ವಿಟಮಿನ್ ‘ಡಿ’ ಎಂಬ ಮತ್ತೊಂದು ಔಷಧಿಯನ್ನು ನೀಡಿದರು, ಇದನ್ನು ವಾರಕ್ಕೊಮ್ಮೆ ತೆಗೆದುಕೊಳ್ಳಬೇಕು, ಆದರೆ ನಾನು ಒಂದು ವಾರದಲ್ಲಿ ಚೇತರಿಸಿಕೊಂಡೆ. ಇಂಥಾ  ವಿಷಯಕ್ಕಾಗಿ ಮಾಧ್ಯಮಗಳು ಜನರನ್ನು ಹೆದರಿಸುತ್ತಿದ್ದಾರೆ, ತುಂಬಾ ಭಯ ಸೃಷ್ಟಿಸುತ್ತಿದ್ದಾರೆ. ಈ ಅನುಪಯುಕ್ತ ಸಂಚಲನ ಸೃಷ್ಟಿಸುವುದರಿಂದ ಯಾರು ಲಾಭ ಪಡೆಯುತ್ತಿದ್ದಾರೆ? ಎಂದು ಕೆಸಿಆರ್ ಪ್ರಶ್ನಿಸಿದ್ದಾರೆ.

ನಂತರ ಅವರು ಕಾಲರಾ ಏಕಾಏಕಿ ನಿಭಾಯಿಸಲು ರಾಜನಿಂದ ಕರೆಸಲ್ಪಟ್ಟ ಮಾಂತ್ರಿಕನ (ಮಂತ್ರವಾದಿ)ನೀತಿಕಥೆಯನ್ನು ಪ್ರೇಕ್ಷಕರಿಗೆ ತಿಳಿಸಿದರು. ಭಯವು ಸಾಂಕ್ರಾಮಿಕ ಬಿಕ್ಕಟ್ಟನ್ನು ಹೇಗೆ ಉಲ್ಬಣಗೊಳಿಸುತ್ತಿದೆ ಎಂಬುದನ್ನು ಅವರು ಹೇಳಿದರು.

“ರೋಗ ಮತ್ತು ಮಂತ್ರವಾದಿ  ಮುಖಾಮುಖಿಯಾದಾಗ,  500 ಜನರನ್ನು ಏಕೆ ಕೊಂದೆ ಎಂದು ಮಂತ್ರವಾದಿ  ರೋಗವನ್ನು  ಕೇಳಿದರು. ಅದಕ್ಕೆ ಅದು ನಾನು ಕೇವಲ 50 ಜನರನ್ನು ಕೊಂದೆ. ಉಳಿದವರು ಹೆದರಿಕೆ ಮತ್ತು ಭೀತಿಯಿಂದ ಸಾವನ್ನಪ್ಪಿದರು ಎಂದು ಉತ್ತರಿಸಿತ್ತು. ಆದ್ದರಿಂದ, ಕಾಯಿಲೆಯಿಂದ (ಕೊವಿಡ್) ಯಾರು ಸತ್ತರು ಮತ್ತು ಭಯದಿಂದ ಯಾರು ಸತ್ತರು ಎಂಬುದು ನಮಗೆ ತಿಳಿದಿಲ್ಲ. ಇದು ತುಂಬಾ ದುಃಖಕರ. ಮಾಧ್ಯಮಗಳು ನಿಜವಾಗಿಯೂ ತಪ್ಪು ಮಾಹಿತಿಯನ್ನು ಹರಡುತ್ತಿವೆ, ”ಎಂದು ಅವರು ಹೇಳಿದರು.

ಮುಂದಿನ ಅಲೆಯಲ್ಲಿ ಮಕ್ಕಳು ಸೋಂಕಿಗೆ ಒಳಗಾಗುವ ಬಗ್ಗೆ ಮಾತನಾಡಿದ ಸಿಎಂ, “ಮುಂದಿನ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಗುಲಲಿದೆ ಎಂದು ಕೊವಿಡ್ ಅವರಿಗೆ (ಮಾಧ್ಯಮಗಳಿಗೆ) ಹೇಳಿದೆಯೇ?”ಎಂದು ಪ್ರಶ್ನಿಸಿದ್ದಾರೆ.

ತೆಲಂಗಾಣದ ಆರೋಗ್ಯ ಮೂಲಸೌಕರ್ಯ ಕುರಿತು, ಮಾಧ್ಯಮಗಳು ಇಲ್ಲಿನ ಪರಿಸ್ಥಿತಿಯನ್ನು ತಪ್ಪಾಗಿ ನಿರೂಪಿಸುತ್ತಿವೆ ಎಂದು ಕೆಸಿಆರ್ ಪ್ರತಿಕ್ರಿಯಿಸಿದ್ದಾರೆ.

ಸಾಮಾನ್ಯ ಸಂದರ್ಭಗಳಲ್ಲಿ ಸಹ ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಖಾಲಿ ಹಾಸಿಗೆಗಳಿವೆಯೇ? ವೈದ್ಯರು ರೋಗಿಗಳಿಗೆ ಚಿಕಿತ್ಸೆಯನ್ನು ಎಂದಿಗೂ ನಿರಾಕರಿಸುವುದಿಲ್ಲ. ಏಕೆಂದರೆ ಬಡವರು ಮಾತ್ರ ಸರ್ಕಾರಿ ಆಸ್ಪತ್ರೆಗಳಿಗೆ ಹೋಗುತ್ತಾರೆ ಎಂದು ಅವರಿಗೆ ತಿಳಿದಿದೆ. ಆದ್ದರಿಂದ, ಹಾಸಿಗೆಗಳಿಲ್ಲದಿದ್ದರೂ ಸಹ, ಅವರು ಸದ್ಯಕ್ಕೆ ಹಾಸಿಗೆಯ ಮೇಲೆ ಮಲಗುವಂತೆ ಮಾಡುತ್ತಾರೆ ಮತ್ತು ಚಿಕಿತ್ಸೆ ನೀಡುತ್ತಾರೆ. ಈ ಮಾಧ್ಯಮದವರು ಏನು ಮಾಡುತ್ತಾರೆ? ಅವರು ಫೋಟೋ ಕ್ಲಿಕ್ ಮಾಡಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಯನ್ನು ನೆಲದ ಮೇಲೆ ಮಲಗುವಂತೆ ಮಾಡಲಾಗಿದೆ ಎಂದು ಬರೆಯುತ್ತಾರೆ.

ರಾಜ್ಯದಲ್ಲಿ ವಿಶ್ವಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ನೀಡಲು  ಸಚಿವರು ಮತ್ತು ಶಾಸಕರ ತಂಡವು ಕೆನಡಾಕ್ಕೆ ಹಾರಾಟ ನಡೆಸಲಿದ್ದು, ಅದರ ಆರೋಗ್ಯ ಮೂಲಸೌಕರ್ಯಗಳು ಹೇಗೆ ನಡೆಯುತ್ತವೆ ಎಂಬುದನ್ನು ನೋಡಿ ತೆಲಂಗಾಣದಲ್ಲಿ ಅದೇ ವ್ಯವಸ್ಥೆ ತರುವಂತೆ ಮಾಡಲಾಗುವುದು ಎಂದಿದ್ದಾರೆ ಕೆಸಿಆರ್.

ತೆಲಂಗಾಣದಲ್ಲಿ ಕೊವಿಡ್ ನಿರ್ಬಂಧ ಇಲ್ಲ ಸುಮಾರು ಒಂದು ತಿಂಗಳ ನಿರ್ಬಂಧಗಳನ್ನು ಹೇರಿದ ನಂತರ ರಾಜ್ಯದ ಸಕಾರಾತ್ಮಕ ದರದಲ್ಲಿನ ಕುಸಿತ ಕಂಡುಕೊಂಡ ಕಾರಣ ಕೆಸಿಆರ್ ಸರ್ಕಾರ ಭಾನುವಾರ ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿತು,. ಜುಲೈ 1 ರಿಂದ ಶಿಕ್ಷಣ ಸಂಸ್ಥೆಗಳು ಮತ್ತೆ ತೆರೆಯುವುದಾಗಿ ಸರ್ಕಾರ ಘೋಷಿಸಿದ್ದು, ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಹಾಜರಾಗಲು ಅವಕಾಶ ಮಾಡಿಕೊಟ್ಟಿತು.

ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಳ್ಳಲಾಗಿಲ್ಲ ಎಂದು ಕೆಸಿಆರ್ ಹೇಳಿದ್ದಾರೆ. ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ “ಕರೋನಾ ಇಲ್ಲ” ಮತ್ತು ಇತ್ತೀಚಿನ ವರದಿಯ ಪ್ರಕಾರ ಸಕಾರಾತ್ಮಕತೆಯ ಪ್ರಮಾಣವು ಶೇಕಡಾ 2 ಕ್ಕಿಂತ ಕಡಿಮೆಯಿದೆ. ಅನ್​ಲಾಕ್ ಮಾಡಿದ ನಂತರ ವೈರಸ್ ಹರಡದಿರಬಹುದು. ಏಕೆಂದರೆ ಲಾಕ್ ಡೌನ್ ಸಡಿಲಿಸಿದಾಗ ಯಾವುದೇ ದೊಡ್ಡ ಹರಡುವಿಕೆ ಕಂಡುಬಂದಿಲ್ಲ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕೆಸಿಆರ್ ಹೇಳಿದ್ದಾರೆ.

ಇದನ್ನೂ ಓದಿCoronavirus cases in India: ಕಳೆದ 24 ಗಂಟೆಗಳಲ್ಲಿ 50,581 ಹೊಸ ಕೊವಿಡ್ ಪ್ರಕರಣ ಪತ್ತೆ, ಚೇತರಿಕೆ ಪ್ರಮಾಣ ಶೇ 96.56

(Media spreading Misinformation about Covid-19 I recovered with paracetamol and antibiotic says Telangana CM K Chandrasekhar Rao)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada