ಏಕಾಏಕಿ ಮನೆಗೆ ನುಗ್ಗಿದವರು 17ವರ್ಷದ ಯುವತಿಯನ್ನು 2ನೇ ಫ್ಲೋರ್​ನಿಂದ ಎತ್ತಿ ಬಿಸಾಕಿದರು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಯುವತಿಯನ್ನು 2ನೇ ಫ್ಲೋರ್​ನಿಂದ ಕೆಳಕ್ಕೆ ಎಸೆದ ಬಗ್ಗೆ ಆಕೆಯ ಸಹೋದರ ನೀಡಿದ್ದರು. ಅದರ ಅನ್ವಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಠಾಣೆ ಪೊಲೀಸರು ತಿಳಿಸಿದ್ದಾರೆ. 

ಏಕಾಏಕಿ ಮನೆಗೆ ನುಗ್ಗಿದವರು 17ವರ್ಷದ ಯುವತಿಯನ್ನು 2ನೇ ಫ್ಲೋರ್​ನಿಂದ ಎತ್ತಿ ಬಿಸಾಕಿದರು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಪ್ರಾತಿನಿಧಿಕ ಚಿತ್ರ

ಮಥುರಾ: 17 ವರ್ಷದ ಯುವತಿಯನ್ನು ಕಟ್ಟಡದ ಎರಡನೇ ಮಹಡಿಯಿಂದ ಮೂವರು ಸೇರಿ ಕೆಳಗೆ ಎಸೆದಿದ್ದು, ಆಕೆಯೀಗ ಮಥುರಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಈ ಮೂವರು ವ್ಯಕ್ತಿಗಳು ಏಕಾಏಕಿ ಮನೆಯಲ್ಲಿ ನುಗ್ಗಿ, ಯುವತಿಯನ್ನು ಕೆಳಕ್ಕೆ ಎಸೆದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಘಟನೆ ಸೋಮವಾರ ರಾತ್ರಿ ಉತ್ತರ ಪ್ರದೇಶದ ಮಥುರಾದ ಚಾತಾ ಪ್ರದೇಶದಲ್ಲಿ ನಡೆದಿದ್ದು, ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿಯನ್ನು 2ನೇ ಫ್ಲೋರ್​ನಿಂದ ಕೆಳಕ್ಕೆ ಎಸೆದ ಬಗ್ಗೆ ಆಕೆಯ ಸಹೋದರ ನೀಡಿದ್ದರು. ಅದರ ಅನ್ವಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಠಾಣೆ ಪೊಲೀಸರು ತಿಳಿಸಿದ್ದಾರೆ.  ಹಾಗೇ, ಯುವತಿಯ ಸಹೋದರ ದಿನೇಶ್​ ಸಿಂಗ್​ ಮಾಧ್ಯಮಗಳೊಟ್ಟಿಗೂ ಮಾತನಾಡಿದ್ದು, ಈ ಮೂವರೂ ಆರೋಪಿಗಳು ಕಳೆದ ಒಂದು ವರ್ಷದಿಂದಲೂ ನನ್ನ ಸಹೋದರಿಗೆ ಹಿಂಸೆ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಸೋಮವಾರ ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ನನ್ನ ತಂದೆಗೆ ಒಂದು ಅಪರಿಚಿತ ನಂಬರ್​ನಿಂದ ಕರೆಬಂತು. ಆ ಕಡೆ ಇದ್ದವರು ನನ್ನ ತಂದೆಯ ಬಳಿಯೇ ಮಾತನಾಡುತ್ತಿರುವವರು ಯಾರು ಮತ್ತು ಇದು ಯಾವ ಪ್ರದೇಶ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಅಪ್ಪ, ನೀವ್ಯಾರು, ಎಲ್ಲಿಂದ ಮಾತನಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅದಾದ ಕೆಲವೇ ಕ್ಷಣಗಳಲ್ಲಿ ಮೂವರು ಬೈಕ್​​ನಲ್ಲಿ ಬಂದು, ಮನೆಯೊಳಗೆ ನುಗ್ಗಿದರು. ನಮ್ಮ ಕುಟುಂಬದ ಎಲ್ಲರನ್ನೂ ಥಳಿಸಿದರು. ನನ್ನ ತಾಯಿ-ತಂಗಿಗೂ ಹೊಡೆದರು ಎಂದು ದಿನೇಶ್ ಸಿಂಗ್ ಹೇಳಿದ್ದಾರೆ. ನೋಡನೋಡುತ್ತಿದ್ದಂತೆ ಇಬ್ಬರು ನನ್ನ ತಂಗಿಯನ್ನು ಮನೆಯಿಂದ ಎಳೆದುಕೊಂಡು ಹೋಗಿ, 2ನೇ ಫ್ಲೋರ್​​ನಿಂದ ತಳ್ಳಿದರು. ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸ್ಪೈನಲ್​ ಕಾರ್ಡ್​ ಮುರಿದಿದೆ ಎಂದು ತಿಳಿಸಿದರು.

ಯುವತಿ ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆ ರಸ್ತೆಗೆ ಬೀಳುತ್ತಿದ್ದಂತೆ ಕೆಲವರು ಓಡಿ ಬಂದು ನೋಡಿಕೊಂಡು ಮತ್ತೆ ಅಲ್ಲಿಂದ ಹೋಗಿದ್ದಾರೆ. ಮತ್ತಿಬ್ಬರು ಆಕೆಯ ಸಹಾಯಕ್ಕೆ ಮುಂದಾಗಿದ್ದಾರೆ. ಈ ಸಿಸಿಟಿವಿ ಫೂಟೇಜ್​​ನ್ನು ಪೊಲೀಸರು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಮಥುರಾದ ಖಾಸಗಿ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಲಾಗಿದ್ದು, ಸ್ಪೈನಲ್​ ಕಾರ್ಡ್​ ಸೇರಿ ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯವಾಗಿದೆ. ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂದು ಆಕೆಯ ತಂದೆ ಪ್ರೇಮ್​ ಪಾಲ್​ ಸಿಂಗ್​ ತಿಳಿಸಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹೊತ್ತಿಕೊಂಡಿತು ದ್ವೇಷದ ಬೆಂಕಿ; ಪ್ರಶಾಂತ್ ಸಂಬರಗಿ ಫೋಟೋ ಸುಟ್ಟ ಸ್ಪರ್ಧಿಗಳು

(17 Year Old Girl Thrown Off Second Floor by three men in Uttar pradesh)