AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Throwback Video: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಮೆಚ್ಚಿಕೊಂಡ ಸೋನು ನಿಗಮ್

Sonu Nigam: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಸಿಂಗರ್​ ಸೋನು ನಿಗಮ್, ತೆಂಡೂಲ್ಕರ್​ ಅವರನ್ನು ಮೆಚ್ಚಿಕೊಂಡಿದ್ದಾರೆ. ಕ್ರಿಕೆಟ್​ ಧಾಟಿಯ ಹಾಡನ್ನು ಸುಶ್ರಾವ್ಯವಾಗಿ ಹಾಡಿರುವ ಸಚಿನ್​, ತಮ್ಮ 24 ವರ್ಷದ ಕ್ರಿಕೆಟ್​ ಜೀವನದಲ್ಲಿ ಸಂಗೀತ ಹಾಸುಹೊಕ್ಕಿದೆ. ಅದು ನನ್ನ ಜೀವಾಳ ಎಂದು ಹೇಳಿಕೊಂಡಿದ್ದಾರೆ.

Throwback Video: ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಮೆಚ್ಚಿಕೊಂಡ ಸೋನು ನಿಗಮ್
ಸೋನು ನಿಗಮ್​ ಜೊತೆ ಸಚಿನ್ ತೆಂಡೂಲ್ಕರ್​ ಯುಗಳ ಗೀತೆ ಕೇಳಿ, ನೋಡಿ ಆನಂದಿಸಿ Throwback Video
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Jun 23, 2021 | 12:28 PM

Share

ಕ್ರಿಕೆಟ್​ ಆಟವನ್ನು ಧರ್ಮವೆಂದು ಜಪಿಸುವ ಭಾರತದಲ್ಲಿ ಕ್ರಿಕೆಟ್​ ದೇವರು ಎಂದೇ ಪರಿಗಣಿತರಾಗಿರುವ ಸಚಿನ್ ತೆಂಡೂಲ್ಕರ್​ ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಒಂದನ್ನು ಅಪ್​ಲೋಡ್​ ಮಾಡಿದ್ದಾರೆ. ಅದು ತಾಜಾತನದಿಂದ ಕೂಡಿದ್ದು, ಚೇತೋಹಾರಿಯಾಗಿದೆ.

ನಿನ್ನೆ ಜೂನ್​ 22ರಂದು ವಿಶ್ವ ಸಂಗೀತ ದಿನ (World Music Day) ಅಂಗವಾಗಿ ಬಾಲಿವುಡ್​​ ಸಂಗೀತ ಸಾಮ್ರಾಜ್ಞ ಸೋನು ನಿಗಮ್ ಜೊತೆ ಸಚಿನ್ ತೆಂಡೂಲ್ಕರ್​ ಹಾಡಿರುವ ಯುಗಳ ಗೀತೆಯದು. ಆ ವಿಡಿಯೋವನ್ನು ಸಚಿನ್ ತೆಂಡೂಲ್ಕರ್​ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದು, ಶ್ರೋತೃಗಳು ಅದನ್ನು ಅಪಾರವಾಗಿ ಮೆಚ್ಚಿಕೊಂಡಿದ್ದಾರೆ. ಸಂಗೀತ ವಿಡಿಯೋ ವೈರಲ್​ ಆಗಿದೆ.

ತೆಂಡೂಲ್ಕರ್​ಗೆ ಬರೀ ಕ್ರಿಕೆಟ್​ ಪಿಚ್​ ಅಷ್ಟೇ ಅಲ್ಲ; ಸಂಗೀತದ ಪಿಚ್​ ಸಹ ಗೊತ್ತಿದೆ ಎಂದು ಸಿಂಗರ್​ ಸೋನು ನಿಗಮ್, ತೆಂಡೂಲ್ಕರ್​ ಅವರನ್ನು ಮೆಚ್ಚಿಕೊಂಡಿದ್ದಾರೆ. ಕ್ರಿಕೆಟ್​ ಧಾಟಿಯ ಹಾಡನ್ನು ಸುಶ್ರಾವ್ಯವಾಗಿ ಹಾಡಿರುವ ಸಚಿನ್​, ತಮ್ಮ 24 ವರ್ಷದ ಕ್ರಿಕೆಟ್​ ಜೀವನದಲ್ಲಿ ಸಂಗೀತ ಹಾಸುಹೊಕ್ಕಿದೆ. ಅದು ನನ್ನ ಜೀವಾಳ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸ್ಟಾರ್​ ಸ್ಪೋರ್ಟ್ಸ್​​ 50 ಮಂದಿಯ ಆಯ್ಕೆ ಮಂಡಳಿಯು ಸಚಿನ್ ತೆಂಡೂಲ್ಕರ್​ ಅವರನ್ನು ಸಾರ್ವಕಾಲಿಕ ಶ್ರೇಷ್ಠ (Greatest of All Time -G.O.A.T) ಎಂದು ಪರಿಗಣಿಸಿದೆ ಎಂಬುದು ಗಮನಾರ್ಹ.

ಸೋನು ನಿಗಮ್​ ಜೊತೆ ಸಚಿನ್ ತೆಂಡೂಲ್ಕರ್​ ಯುಗಳ ಗೀತೆ ಕೇಳಿ, ನೋಡಿ ಆನಂದಿಸಿ Throwback Video:

(Throwback Video Sachin Tendulkar Singing with Sonu Nigam Watch Video on instagram)

Virat Kohli: ಸೆಂಚುರಿಗಳ ಸರದಾರ ವಿರಾಟ್​ ಕೊಹ್ಲಿ ಶತಕವೀರ ತೆಂಡೂಲ್ಕರ್​ರ ಈ ಸಾಧನೆ ಮುರಿಯವಲ್ಲಿ ಯಶಸ್ವಿಯಾಗುವರೇ? ವಿಶ್ಲೇಷಣೆ

Published On - 11:40 am, Wed, 23 June 21

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ