ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಶತಕ ಬಾರಿಸಿ 25 ವರ್ಷಗಳು ಸಂದವು

ಬ್ಯಾಟ್ಸ್​ಮನ್​ ಆಗಿ ಯಶ ಕಂಡ ಗಂಗೂಲಿ 2000 ರಲ್ಲಿ ನಾಯಕತ್ವ ವಹಿಸಿಕೊಂಡು ಭಾರತಕ್ಕೆ ಹಲವಾರು ಸರಣಿಗಳನ್ನು ಗೆದ್ದುಕೊಟ್ಟರು. ಅವರ ನಾಯಕತ್ವದಲ್ಲೇ ಭಾರತ ಪಾಕಿಸ್ತಾನವನ್ನು ಅದರ ನೆಲದಲ್ಲೇ ಮೊಟ್ಟಮೊದಲ ಬಾರಿಗೆ ಮಣಿಸಿ ಸರಣಿ ಗೆದ್ದಿತ್ತು.

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಶತಕ ಬಾರಿಸಿ 25 ವರ್ಷಗಳು ಸಂದವು
ಸೌರವ್ ಗಂಗೂಲಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2021 | 12:52 AM

ಭಾರತ ಕ್ರಿಕೆಟ್​ ತಂಡದ ಮಾಜ ಕ್ಯಾಪ್ಟನ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಾಲಿ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರಂಥ ಸ್ವಾಭಿಮಾನಿ, ಹಟಮಾರಿ, ದಿಟ್ಟ ಮತ್ತು ನೇರ ಸ್ವಭಾವದ ಆಟಗಾರ ಮತ್ತು ನಾಯಕ ಸಿಗೋದು ಬಹಳ ಅಪರೂಪ. ಭಾರತೀಯ ಕ್ರಿಕೆಟ್​ ತಂಡವನ್ನು ಟೀಮ್ ಇಂಡಿಯಾ ಆಗಿ ಪರಿವರ್ತಿಸಿದ ಶ್ರೇಯಸ್ಸು ನಿಸ್ಸಂದೇಹವಾಗಿ ಗಂಗೂಲಿಗೆ ಸಲ್ಲುತ್ತದೆ. ಅವರು ಟೀಮಿನ ನಾಯಕತ್ವ ವಹಿಸಿಕೊಂಡಾಗ ದೇಶದ ಕ್ರಿಕೆಟ್ ವ್ಯವಸ್ಥೆಗೆ ಮ್ಯಾಚ್ ಫಿಕ್ಸಿಂಗ್ ಮಸಿ ಮತ್ತಿಕೊಂಡಿತ್ತು. ಕ್ರಿಕೆಟ್ ಪ್ರೇಮಿಗಳು ಭಾರತದ ಆಟಗಾರನ್ನು ಸಂಶಯದ ದೃಷ್ಟಿಯಿಂದ ನೋಡತೊಡಗಿದ್ದರು. ಟೀಮಿನ ನೈತಿಕ ಸ್ಥೈರ್ಯ ಉಡುಗಿಹೋಗಿತ್ತು.ಗಂಗೂಲಿ ನಾಯಕತ್ವ ವಹಿಸಿಕೊಳ್ಳುವ ಮೊದಲು ಟೀಮನ್ನು ಮುನ್ನಡೆಸಿದ್ದ ಲಿಟ್ಲ್ಲ್ ಮಾಸ್ಟರ್ ಸಚಿನ್​ ತೆಂಡೂಲ್ಕರ್ ಬ್ಯಾಟಿಂಗ್​ನಲ್ಲಿ ವಿಫಲರಾಗದಿದ್ದರೂ ನಾಯಕನಾಗಿ ಬಹಲ ಕೆಟ್ಟದ್ದಾಗಿ ಫೇಲಾಗಿದ್ದರು. ಗಂಗೂಲಿ ಎದುರಿದ್ದ ಸವಾಲು ಸಾಮಾನ್ಯವಾದದ್ದಾಗಿರಲಿಲ್ಲ. ಎಲ್ಲ ಸಮಸ್ಯೆಗಳನನ್ನು ಸಮರ್ಥವಾಗಿ ನಿಭಾಯಿಸಿ ಒಂದು ಬಲಿಷ್ಠ ಮತ್ತು ಚಾಂಪಿಯನ್ ಟೀಮ್ ಇಂಡಿಯಾವನ್ನು ಅವರು ಕಟ್ಟಿದರು.

ಅಂದಹಾಗೆ, ಗಂಗೂಲಿಯವರ ಸಾಧನೆಯನ್ನು ಇಂದು (ಮಂಗಳವಾರ) ನೆನಪಿಸಿಕೊಳ್ಳುವ ಹಿಂದೆ ಕಾರಣವಿದೆ. ಸರಿಯಾಗಿ 25 ವರ್ಷಗಳ ಹಿಂದೆ ಇದೇ ದಿನ ಅವರು ತಾನಾಡಿದ ಮೊದಲ ಟೆಸ್ಟ್​ ಪಂದ್ಯದಲ್ಲೇ ಶತಕ ಬಾರಿಸಿ ಅಂತರರಾಷ್ಟ್ರೀಯ ಕ್ರಿಕೆಟ್​ಗೆ ತಮ್ಮ ಆಗಮನವನ್ನು ಸಾರಿದ್ದರು. 1996ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್​ ಕಾಶಿ ಎಂದು ಕರೆಸಿಕೊಳ್ಳುವ ಲಾರ್ಡ್​ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನವಾಗಿದ್ದ ಜೂನ್ 22 ರಂದು ಈ ಎಡಚ ಅಮೋಘ ಶತಕ ಬಾರಿಸಿದ್ದರು.

ಟಾಸ್ ಗೆದ್ದು ಮೊದಲು ಬ್ಯಾಟ್​ ಮಾಡಿದ್ದ ಅತಿಥೇಯರು 344ರನ್​ ಗಳಿಸಿ ಆಲೌಟಾಗಿದ್ದರು. ಕನ್ನಡಿಗ ವೆಂಕಟೇಶ್ ಪ್ರಸಾದ್ 5 ವಿಕೆಟ್ ಪಡೆಯುವ ಸಾಧನೆಯನ್ನು ಮಾಡಿದ್ದರು. ಈಗ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್​ ಆಗಿರುವ ವಿಕ್ರಮ್ ರಾಠೋಡ್ ಅವರ ಔಟಾದ ನಂತರ ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಗಂಗೂಲಿ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿ 20 ಬೌಂಡರಿಗಳ ನೆರವಿನಿಂದ 131 ರನ್ ಬಾರಿಸಿದ್ದರು. ಅವರಂತೆ ಅದೇ ಪಂದ್ಯದಲ್ಲಿ ಟೆಸ್ಟ್​ ಕ್ರಿಕೆಟ್​ ಪದಾರ್ಪಣೆ ಮಾಡಿದ್ದ ರಾಹುಲ್ ದ್ರಾವಿಡ್​ ಅವರೊಂದಿಗೆ ಗಂಗೂಲಿ 6ನೇ ವಿಕೆಟ್​ಗೆ 94 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು. ಆದರೆ ದ್ರಾವಿಡ್ ಕೇವಲ 5 ರನ್​ಗಳಿಂದ ಶತಕ ವಂಚಿತರಾಗಿದ್ದರು.

ಭಾರತ ಅಂತಿಮವಾಗಿ 429 ರನ್​ ಮೊತ್ತಕ್ಕೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು 85 ರನ್​ಗಳ ಲೀಡ್​ ಸಂಪಾದಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ 9 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿದ ಇಂಗ್ಲೆಂಡ್​ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶ ಕಂಡಿತ್ತು.

ಬ್ಯಾಟ್ಸ್​ಮನ್​ ಆಗಿ ಯಶ ಕಂಡ ಗಂಗೂಲಿ 2000 ರಲ್ಲಿ ನಾಯಕತ್ವ ವಹಿಸಿಕೊಂಡು ಭಾರತಕ್ಕೆ ಹಲವಾರು ಸರಣಿಗಳನ್ನು ಗೆದ್ದುಕೊಟ್ಟರು. ಅವರ ನಾಯಕತ್ವದಲ್ಲೇ ಭಾರತ ಪಾಕಿಸ್ತಾನವನ್ನು ಅದರ ನೆಲದಲ್ಲೇ ಮೊಟ್ಟಮೊದಲ ಬಾರಿಗೆ ಮಣಿಸಿ ಸರಣಿ ಗೆದ್ದಿತ್ತು.

ಒಂದು ದಿನದ ಪಂದಗಳಲ್ಲೂ ಗಂಗೂಲಿ ಟೀಮ್ ಇಂಡಿಯಾವನ್ನು ಅದ್ಭುತವಾಗಿ ಮುನ್ನಡೆಸಿದ್ದರು. 2003 ರ ವಿಶ್ವಕಪ್​ನಲ್ಲಿ ಭಾರತ ತಂಡ ಫೈನಲ್ ತಲುಪಿ ಆಸ್ಟ್ರೇಲಿಯದಿಂದ ಪರಾಭವಗೊಂಡಿತ್ತು. 2007 ರಲ್ಲಿ ನಡೆದ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ನಾಯಕತ್ವ ರಾಹುಲ್ ದ್ರಾವಿಡ್ ವಹಿಸಿದ್ದರು ಮತ್ತು ಕೋಚ್​ ಸ್ಥಾನಕ್ಕೆ ನ್ಯೂಜೆಲೆಂಡ್​ನ ಜಾನ್ ರೈಟ್​ ಸ್ಥಾನದಲ್ಲಿ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ ಬಂದಿದ್ದರು.

ಚಾಪೆಲ್ ಮಾಡಿದ ಹೊಸ ಪ್ರಯೋಗಗಳಿಂದಾಗೇ ಭಾರತ ಮೊದಲ ಸುತ್ತಿನಲ್ಲೇ ವೆಸ್ಟ್​ ಇಂಡೀಸ್​ನಲ್ಲಿ ಅಯೋಜನೆಗೊಂಡಿದ್ದ ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿತ್ತು.

ಭಾರತದ ಪರ 113 ಟೆಸ್ಟ್ ಆಡಿದ ಗಂಗೂಲಿ 42.17 ಸರಾಸರಿಯಲ್ಲಿ 7,212 ರನ್​ ಗಳಿಸಿದರು, ಇದರಲ್ಲಿ 16 ಶತಕ ಮತ್ತು 35 ಅರ್ಧ ಶತಕಗಳಿದ್ದವು. ಹಾಗೆಯೇ, 311 ಒಡಿಐಗಳನ್ನು ಆಡಿದ ಅವರು 41.02 ಸರಾಸರಿಯಲ್ಲಿ 11,363 ರನ್ ಕಲೆಹಾಕಿದರು. ಆ ಆವೃತ್ತಿಯಲ್ಲಿ ಅವರು 22 ಶತಕ ಮತ್ತು 72 ಅರ್ಧ ಶತಕಗಳನ್ನು ಬಾರಿಸಿದರು. ಬಲಗೈ ಮಧ್ಯಮ ವೇಗದ ಬೌಲರ್ ಸಹ ಆಗಿದ್ದ ದಾದಾ, ಟೆಸ್ಟ್​ಗಳಲ್ಲಿ 32 ಮತ್ತು ಒಡಿಐಗಳಲ್ಲಿ 100 ವಿಕೆಟ್ ಪಡೆದರು. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಒಟ್ಟು 18,575 ರನ್​ ಬಾರಿಸಿದರು.

ಗಂಗೂಲಿ 2019 ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿ, ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ 2020 ರ ಇಂಡಿಯನ್ ಪ್ರಿಮೀಯರ್​ ಲೀಗ್ ಸೀಸನ್​ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಯಶಸ್ವೀಯಾಗಿ ಆಯೋಜಿಸಿದರು. 2021 ಐಪಿಎಲ್ ಸೀಸನ್ ಆರ್ಧಭಾಗ ಭಾರತದಲ್ಲಿ ಆಯೋಜನೆಗೊಂಡ ನಂತರ ಭಾರತದಲ್ಲಿ ಕೋವಿಡ್​-19 ಸೋಂಕಿತರ ಸಂಖ್ಯೆ ಹೆಚ್ಚಿ ಕೆಲ ಆಟಗಾರರು ಮತ್ತು ಸಪೋರ್ಟ್ ಸ್ಟಾಫ್​ನವರು ಸಹ ಸೋಂಕಿಗೊಳಗಾಗಿದ್ದರಿಂದ ಟೂರ್ನಿಯನ್ನು ಸ್ಥಗಿತಗೊಳಿಸಲಾಯಿತು. ಉಳಿದರ್ಧ ಭಾದವನ್ನು ಅದೇ ಯುಎಈಯಲ್ಲಿ ಆಯೋಜಿಸುವ ನಿರ್ಧಾರವನ್ನು ಗಂಗೂಲಿ ತೆಗೆದುಕೊಂಡಿದ್ದಾರೆ

ಇದನ್ನೂ ಓದಿ: ಕನಸಿನ ಟೆಸ್ಟ್​ ಪಾದಾರ್ಪಣೆ, ಮಧ್ಯೆ ಶರ್ಟ್​ ಬಿಚ್ಚಿ ಎದೆಗಾರಿಕೆ ತೋರಿದ್ದು.. ಈಗ ಶ್ರೀಮಂತ ಕ್ರಿಕೆಟ್​ ಮಂಡಳಿಯ ಚುಕ್ಕಾಣಿ ಹಿಡಿಯುವವರೆಗೆ ದಾದಾ ಬೆಳೆದುಬಂದಿದ್ದು…

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ