Southampton Weather Update: ಸೌಥಾಂಪ್ಟನ್​ನಲ್ಲಿ ಇಲ್ಲ ಮಳೆ ಕಾಟ! ವಿಶ್ವ ಕ್ರಿಕೆಟ್ ಟೆಸ್ಟ್ ಮ್ಯಾಚ್​​ದೇ ಆಟ… ಏನಾಗಲಿದೆ ಇಂದು?

WTC Final: ಕೊನೆಯದಾದ ಆದರೆ ಮಹತ್ವದ ಸಂಗತಿಯೆದ್ರೆ ಟೆಸ್ಟ್ ಪಂದ್ಯ ಸಮವಾದರೆ (draw) ಅದರೆ, ಅಥವಾ ಸಮ-ಸಮ (tie) ಆದರೆ ಆಗ ಎರಡೂ ತಂಡಗಳನ್ನು ಜಂಟಿಯಾಗಿ ICC World Test Championship Final 2021 ವಿಜಯೀ ಎಂದು ಘೋಷಿಸಲಾಗುವುದು! ಆದರೆ ಇದರಿಂದ ಶಾಸ್ತ್ರೀಯ ಟೆಸ್ಟ್​ ಕ್ರಿಕೆಟ್​ ಪ್ರೇಮಿಗಳಿಗೆ ನಿರಾಸೆಯಾಗುವುದು ಖಚಿತ.  

Southampton Weather Update: ಸೌಥಾಂಪ್ಟನ್​ನಲ್ಲಿ ಇಲ್ಲ ಮಳೆ ಕಾಟ! ವಿಶ್ವ ಕ್ರಿಕೆಟ್ ಟೆಸ್ಟ್ ಮ್ಯಾಚ್​​ದೇ ಆಟ... ಏನಾಗಲಿದೆ ಇಂದು?
ಸೌಥಾಂಪ್ಟನ್​ನಲ್ಲಿ ಇಲ್ಲ ಮಳೆ ಕಾಟ! ವಿಶ್ವ ಕ್ರಿಕೆಟ್ ಟೆಸ್ಟ್ ಮ್ಯಾಚ್​​ದೇ ಆಟ... ಏನಾಗಲಿದೆ ಇಂದು?
Follow us
ಸಾಧು ಶ್ರೀನಾಥ್​
|

Updated on:Jun 23, 2021 | 9:34 AM

ಭಾರತ ಮತ್ತು ನ್ಯೂಜಿಲ್ಯಾಂಡ್​ ತಂಡಗಳ ನಡುವಣ ಚೊಚ್ಚಲ ಟೆಸ್ಟ್​ ಕ್ರಿಕೆಟ್ ವಿಶ್ವ ಚಾಂಪಿಯನ್​ಶಿಪ್​​ ಇಂದು ಡ್ರಾ ಆದರೆ ಅದು ಸಾಂಪ್ರದಾಯಿಕ ಟೆಸ್ಟ್​ ಕ್ರಿಕೆಟ್​ ಕಿಚ್ಚಿಗೆ ತಣ್ಣೀರು ಎರಚಿದಂತೆಯೇ ಸರಿ. ಆದರೆ ಬೇರೆ ದಾರಿಯಿಲ್ಲವಾಗಿದೆ. ಬಹುತೇಕ ಡ್ರಾ ನಿಶ್ಚಿತವಾಗಿದೆ. ಅದರ ಹೊರತಾಗಿಯೂ ಪವಾಡ ನಡೆದರೆ ಯಾವುದಾದರೂ ಒಂದು ತಂಡ ಗೆಲುವು ಕಾಣಬಹುದು. ಇನ್ನು ಸೌಥಾಂಪ್ಟನ್​​ ಕ್ರಿಕೆಟ್​ ಮೈದಾನದ (Ageas Bowl, Southampton) ಆಜುಬಾಜು ನಿನ್ನೆ ಮತ್ತು ಇಂದು ಮಳೆಯ ಕಾಟ ಇಲ್ಲ. ಕ್ರೀಡಾಂಗಣದ ಮೇಲೆ ಸೂರ್ಯನ ಕಿರಣಗಳು ಹೇರಳವಾಗಿ ಬೀಳುತ್ತಿದೆ. ಆಟಗಾರರೂ ಹುಮ್ಮಸ್ಸಿಂದ ಇದ್ದಾರೆ. (ನಾಲ್ಕೈದು ದಿನಗಳಿಂದ ಕಾಡಿದ ಮಳೆಯಿಂದಾಗಿ) ಮೈಚಳಿ ಬಿಟ್ಟು ಕಾದಾಟಕ್ಕೆ ಸಜ್ಜಾಗಿದ್ದಾರೆ. ಶತಾಯಗತಾಯ ಜಯ ಸಾಧಿಸಿ, ಟೆಸ್ಟ್​ ಕ್ರಿಕೆಟ್​​ಗೆ ಜೀವ ತುಂಬಲು ಸನ್ನದ್ಧರಾಗಿದ್ದಾರೆ ಅಂತ ಹೇಳುತ್ತಾ…

World Test Championship Final ಪಂದ್ಯ ವಾಸ್ತವವಾಗಿ ಮುಗಿದು ಹೋಗಿದೆ. ಆದರೆ ಮುಂದಾಲೋಚನೆಯಿಂದ ನಿಗದಿಪಡಿಸಿದ್ದ Reserve Day ಪಂದ್ಯದ ಕೈಹಿಡಿದಿದೆ. ಏನಿದು reserve day ಲೆಕ್ಕಾಚಾರ… ಇಂದು ಗರಿಷ್ಠ 98 ಓವರುಗಳ ಆಟ ಆಡಲೇಬೇಕು. ಇದಕ್ಕೆ ಮಳೆ ಸೇರಿದಂತೆ, ಯಾರದೇ ಅಡ್ಡಿಯಿಲ್ಲ! ಶಾಸ್ತ್ರೀಯ ಟೆಸ್ಟ್​ ಆಟಕ್ಕೆ ಎಳ್ಳುನೀರು ಬಿಟ್ಟು ಏಕ ದಿನ ಪಂದ್ಯದಂತೆ ಆಡಿದರೆ ಫಲಿತಾಂಶ ಬರಬಹುದು.

ಆದರೆ ಎರಡು ತಂಡಗಳೂ ಆ ಮನಃಸ್ಥಿತಿಗೆ ಸಜ್ಜಾಗಿವೆಯಾ ಎಂಬುದೇ ಪ್ರಶ್ನೆ. ಮೇಲ್ನೋಟಕ್ಕೆ ತಂಡಗಳೆರಡೂ ಸೈ ಅಂದಿದ್ದರೂ ಕೊನೆಯಲ್ಲಿ ಸೋಲು ಎಂಬುದು ಎದುರಾಗುವ ಘಳಿಗೆ ಬಂದರೆ ಭಾರತವೇ ಆಗಲಿ ನ್ಯೂಜಿಲ್ಯಾಂಡ್​ ತಂಡವೇ ಆಗಲಿ… ಆಮೆಯಂತೆ ಚಿಪ್ಪಿನೊಳಕ್ಕೆ ಪ್ರವೇಶಿಸಿ, ಭದ್ರತೆ ಕಾಯ್ದುಕೊಳ್ಳಬಹುದು.

ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​ (ICC) ICC World Test Championship ಆರಂಭದಲ್ಲಿ 2018ರಲ್ಲಿಯೇ ಇಂತಹ ಪರಿಸ್ಥಿತಿ ಉದ್ಭವವಾಗಬಹುದು ಎಂದು ಆಲೋಚಿಸಿ, ಫೈನಲ್​ ಪಂದ್ಯಕ್ಕೆ Reserve Day ನಿಗದಿಪಡಿಸಿತು. ಭಾರತೀಯ ಕಾಲಮಾನದಂತೆ ಮಧ್ಯಾಹ್ನ 3 ಗಂಟೆಗೆ Ageas Bowl ಮೈದಾನದಲ್ಲಿ ಭಾರತ ತನ್ನ ಎರಡನೆಯ ಇನ್ನಿಂಗ್ಸ್​​ ಮುಂದುವರಿಸುವ ಮೂಲಕ ಫೈನಲ್​ ಆಟ ಆರಂಭವಾಗಲಿದೆ. ಇಂದು Reserve Day ದಿನ ಕನಿಷ್ಠ 330 ನಿಮಿಷಗಳ ಕಾಲ ಆಟ ನಡೆಯಲಿದೆ. ಜೊತೆಗೆ 60 ನಿಮಿಷದ ಆಟವೂ ನಡೆಯಲಿದೆ ಎಂದು ICC ಈಗಾಗಲೇ ಸ್ಪಷ್ಟಪಡಿಸಿದೆ.

ಈ ಮಧ್ಯೆ, ಇತರೆ ಕಾರಣಗಳಿಂದಾಗಿ ಆಟ ನಿಂತಲ್ಲಿ ಆ ಅವಧಿಯನ್ನು ಪರಿಗಣಿಸಿ, ದಿನದಾಟವನ್ನು ವಿಸ್ತರಿಸಿ ಆ ಅವಧಿಯನ್ನು ಮುಂದುರಿಸಲಾಗುವುದು. ಅಷ್ಟರಮಟ್ಟಿಗೆ 98 ಓವರ್​​ಗಳ ಖಾತ್ರಿ ನೀಡಲಾಗಿದೆ.

ಕೊನೆಯದಾದ ಆದರೆ ಮಹತ್ವದ ಸಂಗತಿಯೆದ್ರೆ ಟೆಸ್ಟ್ ಪಂದ್ಯ ಸಮವಾದರೆ (draw), ಅಥವಾ ಸಮ-ಸಮ (tie) ಆದರೆ ಆಗ ಎರಡೂ ತಂಡಗಳನ್ನು ಜಂಟಿಯಾಗಿ ICC World Test Championship Final 2021 ವಿಜಯೀ ಎಂದು ಘೋಷಿಸಲಾಗುವುದು! ಆದರೆ ಇದರಿಂದ ಶಾಸ್ತ್ರೀಯ ಟೆಸ್ಟ್​ ಕ್ರಿಕೆಟ್​ ಪ್ರೇಮಿಗಳಿಗೆ ನಿರಾಸೆಯಾಗುವುದು ಖಚಿತ.

ಅಂದಹಾಗೆ, ನಿನ್ನೆ ಮಂಗಳವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಐದನೇ ದಿನದಾಟ ಮುಕ್ತಾಯಕ್ಕೆ ಎರಡನೇ ಇನ್ನಿಂಗ್ಸ್​​ನಲ್ಲಿ ಭಾರತ ತಂಡ 30 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 64 ರನ್ ದಾಖಲಿಸಿದೆ. ಆ ಮೂಲಕ, 32 ರನ್​ಗಳ ಲೀಡ್ ಪಡೆದುಕೊಂಡಿದೆ. ಇದಕ್ಕೂ ಮೊದಲು, ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್​ನಲ್ಲಿ 249 ರನ್ ಗಳಿಸಿ ಆಲ್ ಔಟ್ ಆಗಿತ್ತು.

WTC 2021: ನಶಿಸುತ್ತಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್​ಗೆ ಇಂದಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಜೀವ ತುಂಬುವುದೇ?

(Southampton Weather Update no Rain on june 23 possibility of WTC Final test reserve day play)

Published On - 9:24 am, Wed, 23 June 21

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ