WTC 2021: ನಶಿಸುತ್ತಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್​ಗೆ ಇಂದಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಜೀವ ತುಂಬುವುದೇ?

ICC World Test Championship Final 2021: ಅಂದರೆ ಈಗಲೂ ಅಷ್ಟೇ.. ವಿರಾಟ್​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಗೆದ್ದರೆ ಅದು ಟೆಸ್ಟ್​ ಕ್ರಿಕೆಟ್​​ ಜಗತ್ತಿನ ಮೇಲೆ ಅಪಾರ ಪ್ರಭಾವ ಬೀರಲಿದೆ. ಅಂದರೆ ನ್ಯೂಜಿಲ್ಯಾಂಡ್​ ಗೆಲುವು ಸಾಧಿಸುವುದಕ್ಕಿಂತ ಭಾರತ ಯಶಸ್ಸು ಸಾಧಿಸಿದರೆ ಅದು ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್ಕರ. ಏಕೆಂದರೆ ಪುಟ್ಟ ರಾಷ್ಟ್ರ ನ್ಯೂಜಿಲ್ಯಾಂಡ್ ಬೀಗುವುದಕ್ಕಿಂತ ಭಾರತ ಗೆದ್ದರೆ ಅದರ ತೂಕವೇ ಬೇರೆ ಆಗಿರುತ್ತದೆ.

WTC 2021: ನಶಿಸುತ್ತಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್​ಗೆ ಇಂದಿನ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಜೀವ ತುಂಬುವುದೇ?
ನ್ಯೂಜಿಲ್ಯಾಂಡ್​ ಗೆಲುವು ಸಾಧಿಸುವುದಕ್ಕಿಂತ ಭಾರತ ಯಶಸ್ಸು ಸಾಧಿಸಿದರೆ ಅದು ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್ಕರ
Follow us
ಸಾಧು ಶ್ರೀನಾಥ್​
|

Updated on:Jun 18, 2021 | 11:38 AM

ಸೌಥಾಂಪ್ಟನ್​​ ಕ್ರಿಕೆಟ್​ ಮೈದಾನ (Ageas Bowl, Southampton) ಇಂದು ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ (ICC)​ ಮಹತ್ತರ ಉದ್ದೇಶದಿಂದ ಆಯೋಜಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​​ ಇದಾಗಿದೆ. ಇದರ ಸದುದ್ದೇಶ ಇಷ್ಟೇ… ಸೀಮಿತ ಓವರುಗಳ ಆರ್ಭಟದಲ್ಲಿ ನಶಿಸುತ್ತಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್​ಗೆ ಮರುಜೀವ ತುಂಬುವ ಪ್ರಯತ್ನ ಇದಾಗಿದೆ. ಇದರಿಂದ ಟೆಸ್ಟ್ ಕ್ರಿಕೆಟ್​ ಜಗತ್ತಿಗೆ ಏನಾದೀತು!?

1983 World Cup ಮ್ಯಾಜಿಕ್​​ಗೆ ಘಟಿಸುವುದೇ? ಅದಕ್ಕೂ ಮುನ್ನ ಸರಿಯಾಗಿ ಇದೇ ತಿಂಗಳಲ್ಲಿ 1983ರಲ್ಲಿ ಕಪಿಲ್​ ದೇವ್​ ನೇತೃತ್ವದಲ್ಲಿ ಭಾರತ ಗೆದ್ದು ಬೀಗಿದಾಗ ಕ್ರಿಕೆಟ್​ ಜಗತ್ತಿನ ಮೇಲೆ ಅದರ ಪರಿಣಾಮ/ಪ್ರಭಾವಗಳು ಅಗಾಧವಾಗಿದ್ದವು. ಭಾರತಕ್ಕಂತೂ ಕ್ರಿಕೆಟ್​ ಧರ್ಮವಾಗಿ ಪರಿವರ್ತನೆಗೊಂಡಿತು. ಚಿಕ್ಕಪುಟ್ಟ ಮಕ್ಕಳೂ ಬ್ಯಾಟು-ಬಾಲು ಹಿಡಿದು ಆಡತೊಡಗಿದರು. ಅಂದರೆ ಅಷ್ಟರಮಟ್ಟಿಗೆ ಕಪಿಲ್​ ಪಡೆಯ ಗೆಲುವು ಪ್ರಭಾವ ಬೀರಿತ್ತು. ಇನ್ನು ಕ್ರಿಕೆಟ್​ ಆಟವನ್ನು ಪರಿಗಣಿಸಿದಾಗ ಮೈದಾನದ ಆಚೆಗೆ ಅದರ ರೂಪುರೇಷೆಗಳೇ ಬದಲಾದವು. ವಾಣಿಜ್ಯ ರಂಗದಲ್ಲಂತೂ ಅಪರಿಮಿತ ಸಾಧ್ಯತೆಗಳನ್ನು ತೆರೆದಿಟ್ಟಿತು. ಅಂದರೆ ಒಟ್ಟಾರೆಯಾಗಿ ಕ್ರಿಕೆಟ್​​ ಜಗತ್ತಿಗೆ ಜೀವ ಚೈತನ್ಯ ತುಂಬಿತು.

ಧೋನಿ ಪಡೆ ಚೊಚ್ಚಲ T20 ವಿಶ್ವ ಕಪ್ ಗೆದ್ದಾಗಲೂ ಕ್ರಿಕೆಟ್​ ಸ್ವರೂಪವೇ ಬದಲಾಯಿತು ಎಕ್ಸಾಕ್ಟ್​ಲಿ ಈಗಲೂ ಅದೇ ಅವಕಾಶ ಒದಗಿಬಂದಿದೆ. 1983 World Cup ಗೆಲುವು ಟೆಸ್ಟ್​ ಕ್ರಿಕೆಟ್​​ ಅನ್ನು ಮರೆಮಾಚಿ, ಸೀಮಿತ ಓವರುಗಳ ಆರ್ಭಟಕ್ಕೆ ನಾಂದಿ ಹಾಡಿತು ಅನ್ನಬಹುದು. ಆದರೆ ಈಗ ಅದರ ರಿವರ್ಸ್​ ಆ್ಯಕ್ಷನ್​ ಆಗಬೇಕಿದೆ. ಇದೇನು ಈಗ ಸೀಮಿತ ಓವರುಗಳ ಆರ್ಭಟ ನಡೆದಿದೆ, ಅದರ ಜೊತೆಜೊತೆಗೆ ಸಾಂಪ್ರದಾಯಿಕ ಟೆಸ್ಟ್ ​ಕ್ರಿಕೆಟ್​ ಮತ್ತೆ ಜೀವಂತಿಕೆ ಪಡೆಯಬೇಕಿದೆ. ಮತ್ತು 1983ರಲ್ಲಿ ನಡೆದ ಪವಾಡದಂತೆ ಅದು ಈ ಬಾರಿಯೂ ಭಾರತದಿಂದಲೇ ಆಗಬೇಕಿದೆ. 2007ರಲ್ಲಿ ಧೋನಿ ಪಡೆ T20 ವಿಶ್ವ ಕಪ್ ಗೆದ್ದಾಗಲಂತೂ ಕ್ರಿಕೆಟ್​ ಸ್ವರೂಪವೇ ಬದಲಾಗಿಬಿಟ್ಟಿತು. ಐಪಿಎಲ್ ನಂತಹ ಕ್ರಾಂತಿಕಾರಿ ಬದಲಾವಣೆಗಳು ಕಂಡುಬಂದವು.​​

ನ್ಯೂಜಿಲ್ಯಾಂಡ್​ ಗೆಲುವಿಗಿಂತ ಭಾರತ ಯಶಸ್ಸು ಸಾಧಿಸಿದರೆ ಅದು ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್ಕರ ಅಂದರೆ ಈಗಲೂ ಅಷ್ಟೇ.. ವಿರಾಟ್​ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಗೆದ್ದರೆ ಅದು ಟೆಸ್ಟ್​ ಕ್ರಿಕೆಟ್​​ ಜಗತ್ತಿನ ಮೇಲೆ ಅಪಾರ ಪ್ರಭಾವ ಬೀರಲಿದೆ. ಅಂದರೆ ನ್ಯೂಜಿಲ್ಯಾಂಡ್​ ಗೆಲುವು ಸಾಧಿಸುವುದಕ್ಕಿಂತ ಭಾರತ ಯಶಸ್ಸು ಸಾಧಿಸಿದರೆ ಅದು ಟೆಸ್ಟ್​ ಕ್ರಿಕೆಟ್​ಗೆ ಶ್ರೇಯಸ್ಕರ. ಏಕೆಂದರೆ ಪುಟ್ಟ ರಾಷ್ಟ್ರ ನ್ಯೂಜಿಲ್ಯಾಂಡ್ ಬೀಗುವುದಕ್ಕಿಂತ ಭಾರತ ಗೆದ್ದರೆ ಅದರ ತೂಕವೇ ಬೇರೆ ಆಗಿರುತ್ತದೆ. ಇದು ಸ್ವತಃ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್ (ICC)​ ಗೂ ಚೆನ್ನಾಗಿ ಗೊತ್ತಾಗಿದೆ. ಹಾಗಾಗಿಯೇ ಮೊಟ್ಟಮೊದಲ ಬಾರಿಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಇಂತಹ ಪಂದ್ಯಾವಳಿಯನ್ನು ಆಯೋಜಿಸಿದೆ. ಟೆಸ್ಟ್ ಕ್ರಿಕೆಟ್​ ಪುನ:ಶ್ಚೇತನಕ್ಕಾಗಿಯೇ ಇಂತಹ ಚೊಚ್ಚಲ ಚಾಂಪಿಯನ್​ಶಿಪ್​ ಆಯೋಜಿಸಿದೆ ಅಂದರೆ ತಪ್ಪಾಗಲಾರದು. ​

ಸೀಮಿತ ಓವರುಗಳ ಆರ್ಭಟದಲ್ಲಿ ನಶಿಸುತ್ತಿರುವ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್ ಬಾರಿ ಕೊಹ್ಲಿ ಪಡೆ ಗೆದ್ದರೆ ಅನೇಕ ಯುವ ಪೀಳಿಗೆಗಳು ಮತ್ತೆ ದೀರ್ಘಾವಧಿ ಕಾಲ ಆಟದ ಮೈದಾನದಲ್ಲಿ ಬ್ಯಾಟ್​-ಬಾಲ್​ ಹಿಡಿದು ಆಡತೊಡಗುತ್ತಾರೆ. ಇಲ್ಲಾಂದ್ರೆ ಭ್ರಮನಿರಸನಗೊಂಡು ಇಂದಿನ ಫಾಸ್ಟ್​​ ಯುಗಕ್ಕೆ ತಕ್ಕಂತೆ ಅದೇ ಸೀಮಿತ ಓವರುಗಳ ಪಂದ್ಯಗಳಿಗೆ ಜೋತುಬೀಳುತ್ತಾರೆ. ಹಾಗಾಗದಿರಲಿ… ನಮ್ಮ ನೆಚ್ಚಿನ ಭಾರತ ತಂಡ ಗೆದ್ದು ಬೀಗಲಿ ಎಂಬುದೇ ನೂರಾರು ಕೋಟಿ ಭಾರತೀಯರ ಹೃದಯಾಳದ ಬಯಕೆ.

(ICC WTC Final 2021: what does it mean to test cricket if team india win inaugural WTC)

Published On - 11:30 am, Fri, 18 June 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ