WTC Final: ಶಮಿ ಮಾರಕ ದಾಳಿಗೆ ತತ್ತರಿಸಿದ ಕಿವೀಸ್! ಜೂನ್ 22 ಕ್ಕೂ ಶಮಿಗೂ ಇದೆ ಅವಿನಾಭಾವ ಸಂಬಂಧ.. ಏನದು?
WTC Final: ಎರಡು ವರ್ಷಗಳ ಹಿಂದೆ, 2019 ರ ವಿಶ್ವಕಪ್‌ನಲ್ಲಿ ಈ ದಿನ ಅವರು (ಜೂನ್ 22) ಸೌತಾಂಪ್ಟನ್ ಮೈದಾನದಲ್ಲಿ ಹ್ಯಾಟ್ರಿಕ್ ಗಳಿಸಿದರು. ಅವರು ಅಫ್ಘಾನಿಸ್ತಾನ ವಿರುದ್ಧ ಈ ಸಾಧನೆ ಮಾಡಿದರು
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2021 ರಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ನ್ಯೂಜಿಲೆಂಡ್ ವಿರುದ್ಧ ಅದ್ಭುತ ಬೌಲಿಂಗ್ ಮಾಡಿದರು. ಅವರು ನಾಲ್ಕು ವಿಕೆಟ್ ಪಡೆಯುವುದರ ಜೊತೆಗೆ ನ್ಯೂಜಿಲೆಂಡ್ ದೊಡ್ಡ ಸ್ಕೋರ್ ಮಾಡುವುದನ್ನು ತಡೆದರು. ಈ ಸಮಯದಲ್ಲಿ ಅವರು ಭಾರತದ ಕಡೆಯಿಂದ ಅದ್ಭುತ ಸಾಧನೆ ಮಾಡಿದರು. ಐಸಿಸಿ ಪಂದ್ಯಾವಳಿಯ ಫೈನಲ್‌ನಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಗ ಅವರು ಐಸಿಸಿ ಫೈನಲ್‌ನಲ್ಲಿ ಭಾರತಕ್ಕೆ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. 1983 ರ ವಿಶ್ವಕಪ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಮೊಹಿಂದರ್ ಅಮರನಾಥ್ ಅವರ ದಾಖಲೆಯನ್ನು ಶಮಿ ಮೀರಿಸಿದ್ದಾರೆ. ಮೊಹಮ್ಮದ್ ಶಮಿ ಸಣ್ಣ ಅಂತರದಿಂದ ಐದು ವಿಕೆಟ್ ಪಡೆಯುವುದನ್ನು ತಪ್ಪಿಸಿಕೊಂಡರು. ಜೂನ್ 22 ರಂದು ನಾಲ್ಕು ವಿಕೆಟ್ ಗಳಿಸುವ ಸಾಧನೆ ಮಾಡಿದ್ದಾರೆ. ಈ ದಿನಾಂಕವು ಅವರಿಗೆ ತುಂಬಾ ಅದೃಷ್ಟವಾಗಿದೆ.
ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಭಾರತೀಯ ಎರಡು ವರ್ಷಗಳ ಹಿಂದೆ, 2019 ರ ವಿಶ್ವಕಪ್‌ನಲ್ಲಿ ಈ ದಿನ ಅವರು (ಜೂನ್ 22) ಸೌತಾಂಪ್ಟನ್ ಮೈದಾನದಲ್ಲಿ ಹ್ಯಾಟ್ರಿಕ್ ಗಳಿಸಿದರು. ಅವರು ಅಫ್ಘಾನಿಸ್ತಾನ ವಿರುದ್ಧ ಈ ಸಾಧನೆ ಮಾಡಿದರು ಮತ್ತು ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಭಾರತೀಯ ಬೌಲರ್ ಎನಿಸಿಕೊಂಡರು. ಶಮಿಗೂ ಮೊದಲು, ಚೇತನ್ ಶರ್ಮಾ 1987 ರಲ್ಲಿ ಈ ಸಾಧನೆ ಮಾಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಶಮಿ 76 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು. ಯಾವುದೇ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ಗೆ ಅವರ ಮುಂದೆ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ.
ಕಿವಿ ಬ್ಯಾಟ್ಸ್‌ಮನ್‌ಗಳು ಶಮಿ ಎದುರು ಸೋಲೊಪ್ಪಿಕೊಂಡಿದ್ದರು ಶಮಿ ಐದನೇ ದಿನದ ಮೊದಲ ಯಶಸ್ಸನ್ನು ಭಾರತಕ್ಕೆ ನೀಡಿದರು. ಅವರು ರಾಸ್ ಟೇಲರ್ (11) ಅವರನ್ನು ಬಲಿ ಪಡೆದರು. ನಂತರ ಇಶಾಂತ್ ಹೆನ್ರಿ ನಿಕೋಲ್ಸ್ (7) ಅವರನ್ನು ತಮ್ಮ ಬಲೆಗೆ ಬೀಳಿಸಿಕೊಂಡರು. ನಂತರ ಶಮಿ ಕೊನೆಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಾಟ್ಲಿಂಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (13) ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಕೈಲ್ ಜಾಮಿಸನ್ (21) ಅವರನ್ನು ಆಕ್ರಮಣಕಾರಿ ಮನೋಭಾವದಿಂದ ಪೆವಿಲಿಯನ್‌ಗೆ ಕಳುಹಿಸಿದರು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ನಂತರ ಮುಂದಿನ ಶಾರ್ಟ್ ಪಿಚ್ ಚೆಂಡನ್ನು ಬೌಂಡರಿಗೆ ಕಳುಹಿಸಲು ಜೇಮೀಸನ್ ಪ್ರಯತ್ನಿಸಿದರು ಆದರೆ ಜಸ್ಪ್ರೀತ್ ಬುಮ್ರಾ ಅದನ್ನು ಲಾಂಗ್ ಲೆಗ್ ನಲ್ಲಿ ಕ್ಯಾಚ್ ಆಗಿ ಪರಿವರ್ತಿಸಿದರು.
ಇದನ್ನೂ ಓದಿ: India vs New Zealand, WTC Final 2021, Day 5: ದಿನದಾಟ ಮುಕ್ತಾಯ; ಭಾರತಕ್ಕೆ ವಿಕೆಟ್ ಉಳಿಸಿಕೊಂಡು ರನ್ ಗಳಿಸುವ ಸವಾಲು!