India vs New Zealand, WTC Final 2021, Day 5: ದಿನದಾಟ ಮುಕ್ತಾಯ; ಭಾರತಕ್ಕೆ ವಿಕೆಟ್ ಉಳಿಸಿಕೊಂಡು ರನ್ ಗಳಿಸುವ ಸವಾಲು!

India vs New Zealand: ಐದನೇ ದಿನದಾಟ ಇಂದು ಮುಕ್ತಾಯಗೊಂಡಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 30 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 64 ರನ್ ದಾಖಲಿಸಿದೆ. ಆ ಮೂಲಕ, 32 ರನ್​ಗಳ ಲೀಡ್ ಪಡೆದುಕೊಂಡಿದೆ.

India vs New Zealand, WTC Final 2021, Day 5: ದಿನದಾಟ ಮುಕ್ತಾಯ; ಭಾರತಕ್ಕೆ ವಿಕೆಟ್ ಉಳಿಸಿಕೊಂಡು ರನ್ ಗಳಿಸುವ ಸವಾಲು!
ಸೌಥಾಂಪ್ಟನ್ ಮೈದಾನ

ಸೌಥಾಂಪ್ಟನ್: ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಐದನೇ ದಿನದಾಟ ಇಂದು ಮುಕ್ತಾಯಗೊಂಡಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 30 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 64 ರನ್ ದಾಖಲಿಸಿದೆ. ಆ ಮೂಲಕ, 32 ರನ್​ಗಳ ಲೀಡ್ ಪಡೆದುಕೊಂಡಿದೆ. ಇದಕ್ಕೂ ಮೊದಲು, ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್​ನಲ್ಲಿ 249 ರನ್ ಗಳಿಸಿ ಆಲ್ ಔಟ್ ಆಗಿತ್ತು. ಹವಾಮಾನ ಇಂದೂ ಕೂಡ ಸ್ವಲ್ಪ ತೊಂದರೆ ನೀಡಿದೆ. ಇಂದು ಹನಿಮಳೆಯ ಕಾರಣದಿಂದ ಪಂದ್ಯ ವಿಳಂಬವಾಗಿ ಆರಂಭವಾಗಿತ್ತು. ನಿನ್ನೆ, ನಾಲ್ಕನೇ ದಿನದಾಟ ಮಳೆಯ ಕಾರಣದಿಂದ ಸಂಪೂರ್ಣ ರದ್ದಾಗಿತ್ತು. ಮೊದಲ ದಿನದಾಟ ಮಳೆಯ ಕಾರಣದಿಂದ ರದ್ದಾಗಿತ್ತು. ಎರಡನೇ ದಿನ ಮೂರು ಬಾರಿ ಬ್ಯಾಡ್ ಲೈಟ್ ಪಂದ್ಯಕ್ಕೆ ಅಡ್ಡಿಪಡಿಸಿತ್ತು. ಹಾಗಾಗಿ, ಪಂದ್ಯದ ಎಲ್ಲಾ ನಿರೀಕ್ಷೆಗಳಿಗೂ ಮೀರಿ ಕ್ರಿಕೆಟ್ ಅಭಿಮಾನಿಗಳಿಗೆ ಹವಾಮಾನದ ಅಡ್ಡಿಯಿಲ್ಲದೆ, ಪಂದ್ಯ ನಡೆಯಲಿ ಎಂಬ ಆಶಯವೇ ಹೆಚ್ಚಾಗಿದೆ.

ಪಂದ್ಯದ ಸಂಪೂರ್ಣ ಅಪ್ಡೇಟ್​ಗಳು ಈ ಕೆಳಗೆ ಲಭ್ಯವಿದೆ. ಓದಿರಿ..

LIVE Cricket Score & Updates

The liveblog has ended.
 • 22 Jun 2021 23:34 PM (IST)

  ಐದನೇ ದಿನದಾಟ ಮುಕ್ತಾಯ

  ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಐದನೇ ದಿನದಾಟ ಇಂದು ಮುಕ್ತಾಯಗೊಂಡಿದೆ. ನ್ಯೂಜಿಲ್ಯಾಂಡ್ ತಂಡವನ್ನು ಆಲ್ ಔಟ್ ಮಾಡಿದ ಭಾರತ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದೆ. ದ್ವಿತೀಯ ಇನ್ನಿಂಗ್ಸ್​ನಲ್ಲಿ 30 ಓವರ್ ಆಡಿದ ಭಾರತ 2 ವಿಕೆಟ್ ಕಳೆದುಕೊಂಡು 64 ರನ್ ದಾಖಲಿಸಿದೆ. ಈ ಮೂಲಕ 32 ರನ್​ಗಳ ಲೀಡ್ ಸಾಧಿಸಿದೆ. ನಾಳೆ ಪಂದ್ಯದ ಕೊನೆಯ ದಿನವಾಗಿರಲಿದ್ದು, ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ತೀವ್ರ ಹಣಾಹಣಿಯ ನಿರೀಕ್ಷೆ ಇದೆ. ಮಳೆ, ಹವಾಮಾನ ತೊಡಕಾಗದಿರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

  ಇಂದು ನ್ಯೂಜಿಲ್ಯಾಂಡ್ ತಂಡವನ್ನು ಆಲ್ ಔಟ್ ಮಾಡುವ ಮೂಲಕ ಭಾರತೀಯ ಬೌಲರ್​ಗಳು ಪ್ರಾಬಲ್ಯ ಮೆರೆದರು. ಅದರ ಕ್ಷಣಗಳು ಇಲ್ಲಿದೆ..

 • 22 Jun 2021 23:18 PM (IST)

  ಟಿಮ್ ಸೌಥಿಗೆ ಮತ್ತೊಂದು ವಿಕೆಟ್!

  img

  ಆರಂಭಿಕ ಆಟಗಾರ ರೋಹಿತ್ ಶರ್ಮಾ ಟಿಮ್ ಸೌಥಿಗೆ ಎಲ್​ಬಿಡಬ್ಲ್ಯು ಆಗಿದ್ದಾರೆ. ಎರಡನೇ ಇನ್ನಿಂಗ್ಸ್​ನಲ್ಲಿ ಸೌಥಿ ಎರಡನೇ ವಿಕೆಟ್ ಪಡೆದುಕೊಂಡಿದ್ದಾರೆ. 81 ಬಾಲ್​ಗಳಲ್ಲಿ 30 ರನ್ ದಾಖಲಿಸಿ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಕ್ರೀಸ್​ಗೆ ಇಳಿದಿದ್ದಾರೆ. ಪೂಜಾರಗೆ ಜೊತೆಯಾಗಿದ್ದಾರೆ. ವಿಕೆಟ್ ಉಳಿಸಿಕೊಂಡು ಆಡುವುದು ಭಾರತಕ್ಕೆ ಅಗತ್ಯವಾಗಿದೆ.

 • 22 Jun 2021 23:14 PM (IST)

  ಅರ್ಧಶತಕ ಪೂರೈಸಿದ ಭಾರತ

  ಭಾರತ ತಂಡ 26 ಓವರ್​ಗಳನ್ನು ಆಡಿದ್ದು, 1 ವಿಕೆಟ್​ ಕಳೆದುಕೊಂಡು 51 ರನ್ ದಾಖಲಿಸಿದೆ. ಕೊನೆಯ ಓವರ್​ನಲ್ಲಿ ಪೂಜಾರ ಒಂದು ಫೋರ್ ದಾಖಲಿಸಿದ್ದಾರೆ. ಭಾರತ 19 ರನ್​ಗಳ ಲೀಡ್ ದಾಖಲಿಸಿದೆ. ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರಿಷಭ್ ಪಂತ್, ರವೀಂದ್ರ ಜಡೇಜಾ ಇನ್ನು ಬ್ಯಾಟಿಂಗ್​ಗೆ ಬಾಕಿ ಇದ್ದಾರೆ.

 • 22 Jun 2021 23:03 PM (IST)

  ಭಾರತ 45-1 (24 ಓವರ್)

  ಭಾರತ 24 ಓವರ್​ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 45 ರನ್ ದಾಖಲಿಸಿದೆ. ರೋಹಿತ್ ಶರ್ಮಾ ಹಾಗೂ ಚೇತೇಶ್ವರ ಪೂಜಾರ ಕ್ರೀಸ್​ನಲ್ಲಿದ್ದಾರೆ. ರೋಹಿತ್ 2 ಬೌಂಡರಿ ಬಾರಿಸಿದ್ದರೆ, ಪೂಜಾರ 1 ಬೌಂಡರಿ ದಾಖಲಿಸಿದ್ದಾರೆ. 1.88 ರನ್ ರೇಟ್​ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ಪರವಾಗಿ ಟಿಮ್ ಸೌಥಿ, ಟ್ರೆಂಟ್ ಬೋಲ್ಟ್, ಕೈಲ್ ಜಾಮಿಸನ್ ಹಾಗೂ ನೀಲ್ ವಾಗ್ನರ್ ಬೌಲಿಂಗ್ ಮಾಡಿದ್ದಾರೆ.

 • 22 Jun 2021 22:56 PM (IST)

  ಭಾರತ 41-1 (22 ಓವರ್)

  ಭಾರತ ತಂಡ 22 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ದಾಖಲಿಸಿದೆ. 9 ರನ್ ಲೀಡ್ ಪಡೆದುಕೊಂಡಿದೆ. ನ್ಯೂಜಿಲ್ಯಾಂಡ್ ಬೌಲರ್​ಗಳು ಭಾರತದ ವಿಕೆಟ್ ಪಡೆಯುವ ತವಕದಲ್ಲಿ ಇದ್ಧಾರೆ. ಭಾರತ ಒಂದು ವಿಕೆಟ್ ಕಳೆದುಕೊಂಡು ಜಾಗರೂಕತೆಯ ಆಟ ಪ್ರದರ್ಶಿಸುತ್ತಿದೆ.

  ಶುಬ್​ಮನ್ ಗಿಲ್ ವಿಕೆಟ್ ಪಡೆಯುವ ಮೂಲಕ ಟಿಮ್ ಸೌಥಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮ 600ನೇ ವಿಕೆಟ್ ಪಡೆದುಕೊಂಡಿದ್ದಾರೆ. ಆ ಸಂಭ್ರಮವನ್ನು ಐಸಿಸಿ ಟ್ವಿಟರ್ ಖಾತೆ ಹಂಚಿಕೊಂಡಿದೆ.

 • 22 Jun 2021 22:41 PM (IST)

  ಭಾರತ 35-1 (19 ಓವರ್)

  ಎರಡನೇ ಇನ್ನಿಂಗ್ಸ್​ನಲ್ಲಿ 19 ಓವರ್​ಗಳನ್ನು ಆಡಿರುವ ಭಾರತ 19 ಓವರ್​ಗಳಲ್ಲಿ 1 ವಿಕೆಟ್ ಕಳೆದುಕೊಂಡು 35 ರನ್ ದಾಖಲಿಸಿದೆ. ಶುಬ್​ಮನ್ ಗಿಲ್ ಔಟ್ ಆದ ಬಳಿಕ, ರೋಹಿತ್ ಶರ್ಮಾಗೆ ಚೇತೇಶ್ವರ ಪೂಜಾರ ಜೊತೆಯಾಗಿದ್ದಾರೆ. ರೋಹಿತ್ 53 ಬಾಲ್​ಗಳಲ್ಲಿ 22 ಹಾಗೂ ಪೂಜಾರ 29 ಬಾಲ್ 4 ರನ್ ಗಳಿಸಿ ಕ್ರೀಸ್​ನಲ್ಲಿ ಇದ್ದಾರೆ. ಭಾರತ 3 ರನ್ ಲೀಡ್ ಪಡೆದುಕೊಂಡಿದೆ.

 • 22 Jun 2021 22:03 PM (IST)

  ಶುಬ್​ಮನ್ ಗಿಲ್ ಔಟ್

  img

  ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ಶುಬ್​ಮನ್ ಗಿಲ್ ಟಿಮ್ ಸೌಥಿ ಬಾಲ್​ಗೆ ಎಲ್​ಬಿಡಬ್ಲ್ಯು ಆಗಿದ್ದಾರೆ. ಗಿಲ್ 33 ಬಾಲ್​ಗೆ 8 ರನ್ ಗಳಿಸಿ ನಿರ್ಗಮಿಸಿದ್ದಾರೆ. ರೋಹಿತ್ ಶರ್ಮಾ ಹಾಗೂ ಚೇತೇಶ್ವರ ಪೂಜಾರ ಕ್ರೀಸ್​ನಲ್ಲಿದ್ದಾರೆ. ತಂಡದ ಮೊತ್ತ 11 ಓವರ್​ಗೆ 27 ರನ್ ಆಗಿದ್ದು, 1 ವಿಕೆಟ್ ಪತನವಾಗಿದೆ. ನ್ಯೂಜಿಲ್ಯಾಂಡ್ 5 ರನ್​ಗಳ ಲೀಡ್​ನಲ್ಲಿದೆ.

 • 22 Jun 2021 21:51 PM (IST)

  ಭಾರತ 21-0 (9 ಓವರ್)

  ಎರಡನೇ ಇನ್ನಿಂಗ್ಸ್​ನ 9ನೇ ಓವರ್ ಬಳಿಕ ಭಾರತದ ಮೊತ್ತ ವಿಕೆಟ್ ನಷ್ಟವಿಲ್ಲದೆ 21 ರನ್ ಆಗಿದೆ. ರೋಹಿತ್ ಶರ್ಮಾ 13 ಹಾಗೂ ಶುಬ್​ಮನ್ ಗಿಲ್ 8 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ, ನ್ಯೂಜಿಲ್ಯಾಂಡ್​ಗಿಂತ 11 ರನ್ ಹಿಂದಿದೆ. ಇನ್ನು 11 ರನ್​ ಗಳಿಸಿದರೆ ಬಳಿಕ ಭಾರತ ಲೀಡ್ ಪಡೆಯಲಿದೆ. ಇಂದಿನ ದಿನದಾಟದಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ ಆಟವಾಡಿದರೆ ನಾಳಿನ ದಿನ ರೋಚಕವಾಗಿರಲಿದೆ. ಭಾರತದ ಪರವಾಗಿ ಕಂಡುಬರಲಿದೆ.

 • 22 Jun 2021 21:33 PM (IST)

  ಭಾರತ 6-0 (4 ಓವರ್)

  ಭಾರತ ತಂಡ 4 ಓವರ್​ಗಳ ಅಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ 6 ರನ್ ದಾಖಲಿಸಿದೆ. ಭಾರತ, ನ್ಯೂಜಿಲ್ಯಾಂಡ್​ಗಿಂತ 26 ರನ್ ಹಿಂದಿದೆ. ರೋಹಿತ್ ಶರ್ಮಾ 4 ಹಾಗೂ ಶುಬ್​ಮನ್ ಗಿಲ್ 2 ರನ್ ದಾಖಲಿಸಿದೆ. ಇಂದಿನ ದಿನದಾಟ ಅಂತ್ಯಕ್ಕೆ ಸುಮಾರು 2 ಗಂಟೆಗಳಷ್ಟು ಅವಧಿ ಬಾಕಿ ಇದೆ. ಭಾರತ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ನಿರೀಕ್ಷೆ ಇದೆ. ಇಂದಿನ ದಿನದ ಆರಂಭದಲ್ಲಿ ಮಳೆ ಕೊಂಚ ಅಡ್ಡಿಪಡಿಸಿದ್ದರ ಹೊರತಾಗಿ, ಹವಾಮಾನದಿಂದ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ.

 • 22 Jun 2021 21:21 PM (IST)

  ದ್ವಿತೀಯ ಇನ್ನಿಂಗ್ಸ್ ಆರಂಭ

  ಯಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಎರಡನೇ ಇನ್ನಿಂಗ್ಸ್ ಆಟ ಆರಂಭಿಸಿದೆ. ರೋಹಿತ್ ಶರ್ಮಾ ಹಾಗೂ ಶುಬ್​ಮನ್ ಗಿಲ್ ಆರಂಭಿಕರಾಗಿ ಕ್ರೀಸ್​ಗೆ ಇಳಿದಿದ್ದಾರೆ. 2ನೇ ಓವರ್ ಅಂತ್ಯಕ್ಕೆ ಭಾರತದ ಮೊತ್ತ ವಿಕೆಟ್ ನಷ್ಟವಿಲ್ಲದೆ 4 ರನ್ ಆಗಿದೆ. ಭಾರತದ ಸ್ಕೋರ್ ನ್ಯೂಜಿಲ್ಯಾಂಡ್ ರನ್​ಗಿಂತ 28 ರನ್ ಹಿಂದಿದೆ. ಟಿಮ್ ಸೌಥಿ ಹಾಗೂ ಟ್ರೆಂಟ್ ಬೋಲ್ಟ್ ಬೌಲಿಂಗ್ ಮಾಡುತ್ತಿದ್ದಾರೆ.

 • 22 Jun 2021 21:10 PM (IST)

  ಅಲ್ಪ ಮೊತ್ತದ ಲೀಡ್ ಸಾಧಿಸಿದ ನ್ಯೂಜಿಲ್ಯಾಂಡ್

  ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಅಲ್ಪ ಮೊತ್ತದ ಲೀಡ್ ಸಾಧಿಸಿದೆ. 99.2 ಓವರ್​ಗಳನ್ನು ಆಡಿದ ನ್ಯೂಜಿಲ್ಯಾಂಡ್ 10 ವಿಕೆಟ್​ಗಳನ್ನೂ ಕಳೆದುಕೊಂಡು 249 ರನ್ ದಾಖಲಿಸಿದೆ. ಈ ಮೂಲಕ, 32 ರನ್​ಗಳ ಲೀಡ್ ಪಡೆದುಕೊಂಡಿದೆ. ನ್ಯೂಜಿಲ್ಯಾಂಡ್ ಪರ ಡೆವಾನ್ ಕಾನ್ವೆ 54, ಕೇನ್ ವಿಲಿಯಮ್ಸನ್ 49, ಟಾಮ್ ಲತಮ್ 30, ಟಿಮ್ ಸೌಥಿ 30 ಹಾಗೂ ಕೈಲ್ ಜಾಮಿಸನ್ 21 ರನ್​ಗಳನ್ನು ಕೂಡಿಸಿ ತಂಡಕ್ಕೆ ನೆರವಾಗಿದ್ದಾರೆ. ಚಹಾ ವಿರಾಮದ ಬಳಿಕ ಮೂರನೇ ಸೆಷನ್​ನಲ್ಲಿ ಭಾರತ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್​ಗೆ ಇಳಿಯಲಿದೆ.

 • 22 Jun 2021 21:05 PM (IST)

  ನ್ಯೂಜಿಲ್ಯಾಂಡ್ ಆಲ್ ಔಟ್

  img

  ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲ್ಯಾಂಡ್ ತಂಡ ಆಲ್​ಔಟ್ ಆಗಿದೆ. ಟಿಮ್ ಸೌಥಿ 46 ಬಾಲ್​ಗೆ 30 ರನ್ ಗಳಿಸುವ ಮೂಲಕ ಉತ್ತಮ ಆಟವಾಡಿದ್ದರು. ಆದರೆ, ಕೊನೆಯದಾಗಿ ಜಡೇಜಾ ಬಾಲ್​ಗೆ ವಿಕೆಟ್ ಒಪ್ಪಿಸಿದ್ದಾರೆ. ತಂಡದ ಮೊತ್ತ 249 ಆಗಿದೆ. 99.2 ಓವರ್​ಗಳನ್ನು ನ್ಯೂಜಿಲ್ಯಾಂಡ್ ತಂಡ ಆಡಿದೆ. ಭಾರತದ ಪರವಾಗಿ ಮೊಹಮ್ಮದ್ ಶಮಿ 4, ಇಶಾಂತ್ ಶರ್ಮಾ 3, ರವಿಚಂದ್ರನ್ ಅಶ್ವಿನ್ 2 ಹಾಗೂ ರವೀಂದ್ರ ಜಡೇಜಾ 1 ವಿಕೆಟ್ ಪಡೆದಿದ್ದಾರೆ.

 • 22 Jun 2021 20:53 PM (IST)

  ಬಾಲಂಗೋಚಿಗಳ ವೇಗದ ಆಟ!

  img

  ನ್ಯೂಜಿಲ್ಯಾಂಡ್ ತಂಡದ ಬೌಲರ್ಸ್ ವೇಗದ ಆಟಕ್ಕೆ ಮುಂದಾಗಿದ್ದಾರೆ. ಸೌಥಿ, ಜಡೇಜಾ ಬಾಲ್​ಗೆ ಸಿಕ್ಸರ್ ಬಾರಿಸಿದ್ಧಾರೆ.

 • 22 Jun 2021 20:47 PM (IST)

  9ನೇ ವಿಕೆಟ್ ಪತನ

  img

  ನ್ಯೂಜಿಲ್ಯಾಂಡ್ ತಂಡದ 9ನೇ ವಿಕೆಟ್ ಪತನವಾಗಿದೆ. ಅಶ್ವಿನ್​ಗೆ ಮತ್ತೊಂದು ವಿಕೆಟ್ ಲಭ್ಯವಾಗಿದೆ. ವಾಗ್ನರ್ 5 ಬಾಲ್​ಗೆ ರನ್ ಖಾತೆ ತೆರೆಯದೇ ನಿರ್ಗಮಿಸಿದ್ದಾರೆ. ಟಿಮ್ ಸೌಥಿ ಹಾಗೂ ಟ್ರೆಂಟ್ ಬೋಲ್ಟ್ ಕೊನೆಯ ವಿಕೆಟ್ ಜೊತೆಯಾಟ ಆಡುತ್ತಿದ್ದಾರೆ. ಅಲ್ಪ ಮೊತ್ತದ ಲೀಡ್​ನೊಂದಿಗೆ ನ್ಯೂಜಿಲ್ಯಾಂಡ್ ಆಡುತ್ತಿದೆ. ಬೌಲರ್​ಗಳು ವೇಗದ ಆಟವಾಡಿ ರನ್ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ.

 • 22 Jun 2021 20:40 PM (IST)

  ನ್ಯೂಜಿಲ್ಯಾಂಡ್ 234-8 (96 ಓವರ್)

  ನ್ಯೂಜಿಲ್ಯಾಂಡ್ ತಂಡ 96 ಓವರ್​ಗೆ 234 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡಿದೆ. ವಾಗ್ನರ್ ಹಾಗೂ ಟಿಮ್ ಸೌಥಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ಅಲ್ಪಮೊತ್ತದ ಲೀಡ್ ಪಡೆದುಕೊಂಡಿದೆ. ಭಾರತೀಯ ಬೌಲರ್​​ಗಳ ದಾಳಿ ನ್ಯೂಜಿಲ್ಯಾಂಡ್ ವಿಕೆಟ್​ಗಳು ಉದುರುವಂತೆ ಮಾಡಿ, ಹೆಚ್ಚಿನ ರನ್ ಸ್ಕೋರ್ ಮಾಡುವುದರಿಂದ ತಪ್ಪಿಸಿದೆ. ಕೇನ್ ವಿಲಿಯಮ್ಸನ್ ವಿಕೆಟ್​ನ್ನು ಇಶಾಂತ್ ಶರ್ಮಾ ಪಡೆದುಕೊಂಡಿದ್ದಾರೆ. ಇದು ಅವರ ಮೊದಲನೇ ಇನ್ನಿಂಗ್ಸ್​ನ ಮೂರನೇ ವಿಕೆಟ್ ಆಗಿದೆ. ಆ ಸಂಭ್ರಮದ ಝಲಕ್ ಇಲ್ಲಿದೆ.

 • 22 Jun 2021 20:29 PM (IST)

  ಲೀಡ್ ಸಾಧಿಸಿದ ನ್ಯೂಜಿಲ್ಯಾಂಡ್

  ನ್ಯೂಜಿಲ್ಯಾಂಡ್ ತಂಡ 94 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 221 ರನ್ ದಾಖಲಿಸಿದೆ. ಭಾರತಕ್ಕಿಂತ 4 ರನ್ ಲೀಡ್ ಪಡೆದುಕೊಂಡಿದೆ. ಈ ನಡುವೆ ಅರ್ಧಶತಕದ ಅಂಚಿನಲ್ಲಿ ಇದ್ದ ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಔಟ್ ಆಗಿದ್ದಾರೆ. 177 ಬಾಲ್ ಆಡಿ, 49 ರನ್ ದಾಖಲಿಸಿ ವಿಕೆಟ್ ಒಪ್ಪಿಸಿದ್ದಾರೆ. ಟಿಮ್ ಸೌಥಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 22 Jun 2021 20:05 PM (IST)

  ಶಮಿ ಅತ್ಯುತ್ತಮ ದಾಳಿ

  ಮೊಹಮದ್ ಶಮಿ ಐದನೇ ದಿನದಾಟದಲ್ಲಿ ಮಿಂಚಿದ್ದಾರೆ. ನಾಲ್ಕು ವಿಕೆಟ್ ಪಡೆದು ನ್ಯೂಜಿಲ್ಯಾಂಡ್ ತಂಡಕ್ಕೆ ಆಘಾತ ನೀಡಿದ್ದಾರೆ. 89 ಓವರ್​ಗೆ ನ್ಯೂಜಿಲ್ಯಾಂಡ್ 202 ರನ್ ಗಳಿಸಿ 7 ವಿಕೆಟ್ ಕಳಿದುಕೊಂಡಿದೆ.

 • 22 Jun 2021 19:58 PM (IST)

  ಶಮಿಗೆ ಮತ್ತೊಂದು ವಿಕೆಟ್!

  img

  ಮೊಹಮ್ಮದ್ ಶಮಿ ದಾಳಿಗೆ ಮತ್ತೊಂದು ವಿಕೆಟ್ ಪತನವಾಗಿದೆ. ಕೈಲ್ ಜಾಮಿಸನ್ 16 ಬಾಲ್​ಗೆ 21 ರನ್ ಗಳಿಸಿ ಔಟ್ ಆಗಿದ್ದಾರೆ. ನಾಯಕ ವಿಲಿಯಮ್ಸನ್ 37 ರನ್ ಗಳಿಸಿ ಕ್ರೀಸ್ ಕಚ್ಚಿ ನಿಂತಿದ್ದಾರೆ. ಟಿಮ್ ಸೌಥಿ ಬ್ಯಾಟಿಂಗ್​ಗೆ ಇಳಿದಿದ್ದಾರೆ. ಶಮಿ 4ನೇ ವಿಕೆಟ್ ಪಡೆದು ಮಿಂಚಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಮೊತ್ತ 88 ಓವರ್​ಗೆ 7 ವಿಕೆಟ್ ಕಳೆದುಕೊಂಡು 194 ರನ್ ದಾಖಲಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತಕ್ಕಿಂತ 23 ರನ್ ಹಿಂದಿದೆ.

 • 22 Jun 2021 19:28 PM (IST)

  ಗ್ರಾಂಡ್​ಹೊಮ್ ಔಟ್

  img

  ನ್ಯೂಜಿಲ್ಯಾಂಡ್ ತಂಡದ 6ನೇ ವಿಕೆಟ್ ಪತನವಾಗಿದೆ. ಗ್ರಾಂಡ್​ಹೊಮ್ 30 ಬಾಲ್​ಗೆ 13 ರನ್ ಗಳಿಸಿ ಮೊಹಮದ್ ಶಮಿ ಎಲ್​ಬಿಡಬ್ಲ್ಯು ಬಲೆಗೆ ಬಿದ್ದಿದ್ದಾರೆ. ನಾಯಕ ವಿಲಿಯಮ್ಸನ್ ಏಕಾಂಗಿ ಆಟ ನಡೆಯುತ್ತಿದೆ. ಕೈಲ್ ಜಾಮಿಸನ್ ಕ್ರೀಸ್​ಗೆ ಇಳಿದಿದ್ದಾರೆ. ತಂಡದ ಮೊತ್ತ 83 ಓವರ್​ಗೆ 6 ವಿಕೆಟ್ ಕಳೆದುಕೊಂಡು 165 ರನ್ ಆಗಿದೆ. ಭಾರತದ ಪರ ಮೊಹಮದ್ ಶಮಿ 3, ಇಶಾಂತ್ ಶರ್ಮಾ 2 ಹಾಗೂ ಅಶ್ವಿನ್ 1 ವಿಕೆಟ್ ಪಡೆದಿದ್ದಾರೆ. ನ್ಯೂಜಿಲ್ಯಾಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಭಾರತಕ್ಕಿಂತ 52 ರನ್ ಹಿಂದಿದೆ. 1.99 ರನ್ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿದೆ.

 • 22 Jun 2021 19:12 PM (IST)

  150 ರನ್ ಗಡಿ ದಾಟಿದ ನ್ಯೂಜಿಲ್ಯಾಂಡ್

  ನ್ಯೂಜಿಲ್ಯಾಂಡ್ ತಂಡ 79 ರನ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 151 ರನ್ ದಾಖಲಿಸಿದೆ. ಕೇನ್ ವಿಲಿಯಮ್ಸನ್ ಹಾಗೂ ಗ್ರಾಂಡ್​ಹೊಮ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್​ನಲ್ಲಿ ಭಾರತಕ್ಕಿಂತ 65 ರನ್​ಗಳಷ್ಟು ಹಿಂದಿದೆ. ಜಡೇಜಾ ಬೌಲಿಂಗ್​ಗೆ ಇಳಿದಿದ್ದಾರೆ. 7 ಓವರ್​ಗಳನ್ನು ಬೌಲಿಂಗ್ ಮಾಡಿದ್ದಾರೆ. ಜಡೇಜಾ ಮೇಲೆ ವಿಕೆಟ್ ಪಡೆಯುವ ಹೆಚ್ಚಿನ ನಿರೀಕ್ಷೆ ಇದೆ.

 • 22 Jun 2021 18:57 PM (IST)

  ಎರಡನೇ ಸೆಷನ್ ಆರಂಭ; ನ್ಯೂಜಿಲ್ಯಾಂಡ್ 147-5

  ಊಟದ ವಿರಾಮದ ಬಳಿಕ ಎರಡನೇ ಸೆಷನ್ ಆರಂಭವಾಗಿದೆ. ನ್ಯೂಜಿಲ್ಯಾಂಡ್ ತಂಡ 75 ಓವರ್​ಗಳನ್ನು ಆಡಿ 147 ರನ್ ದಾಖಲಿಸಿದೆ. 5 ವಿಕೆಟ್​ಗಳನ್ನು ಕಳೆದುಕೊಂಡಿದೆ. ಕೇನ್ ವಿಲಿಯಮ್ಸನ್ 21 ಹಾಗೂ ಗ್ರಾಂಡ್​ಹೊಮ್ 9 ರನ್ ಪೇರಿಸಿ ಆಡುತ್ತಿದ್ದಾರೆ. ಭಾರತಕ್ಕಿಂತ ನ್ಯೂಜಿಲ್ಯಾಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 70 ರನ್ ಹಿಂದಿದೆ.

 • 22 Jun 2021 18:28 PM (IST)

  ಮೊದಲ ಸೆಷನ್​ನಲ್ಲಿ ಭಾರತದ ಆಟ ಹೇಗಿತ್ತು?

  ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನ ಐದನೇ ದಿನದಾಟದ ಮೊದಲ ಸೆಷನ್​ನಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದೆ. ಗಂಭಿರವಾಗಿ ಆಡುತ್ತಿದ್ದ ನ್ಯೂಜಿಲ್ಯಾಂಡ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಭಾರತದ ಆಟ ಹೇಗಿತ್ತು? ಇಲ್ಲಿದೆ ನೋಡಿ ಮೊದಲ ಸೆಷನ್​ನ ಚುಟುಕು ವಿವರ.

 • 22 Jun 2021 18:18 PM (IST)

  ಊಟದ ವಿರಾಮ; ಮೊದಲ ಸೆಷನ್ ಅಂತ್ಯ

  ಮೊದಲ ಸೆಷನ್​ನ ಅಂತ್ಯದ ವೇಳೆಗ ಭಾರತೀಯ ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ನ್ಯೂಜಿಲ್ಯಾಂಡ್​ನ 5 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ್ಯೂಜಿಲ್ಯಾಂಡ್ ತಂಡವೀಗ 72 ಓವರ್ ಆಟವಾಡಿ 5 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಿದೆ. ಭಾರತಕ್ಕಿಂತ 82 ರನ್ ಹಿಂದಿದೆ. ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಗ್ರಾಂಡ್​ಹೊಮ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಎರಡನೇ ಸೆಷನ್​ನಲ್ಲೂ ಭಾರತ ಇದೇ ಪ್ರದರ್ಶನ ತೋರಿ ಎಲ್ಲಾ ವಿಕೆಟ್ ಕಬಳಿಸಿದರೆ, ಪಂದ್ಯ ರೋಚಕ ಹಂತ ತಲುಪಲಿದೆ.

 • 22 Jun 2021 18:00 PM (IST)

  ವಾಟ್ಲಿಂಗ್ ಔಟ್!

  img

  ನ್ಯೂಜಿಲ್ಯಾಂಡ್ ತಂಡದ ಐದನೇ ವಿಕೆಟ್ ಕೂಡ ಪತನವಾಗಿದೆ. ಮೊಹಮದ್ ಶಮಿ ಬೌಲಿಂಗ್​ಗೆ ವಾಟ್ಲಿಂಗ್ ಕ್ಲೀನ್ ಬೌಲ್ಡ್ ಆಗಿದ್ದಾರೆ. 3 ಬಾಲ್​ಗೆ 1 ರನ್ ಗಳಿಸಿ ವಾಟ್ಲಿಂಗ್ ನಿರ್ಗಮಿಸಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಕ್ರೀಸ್​ನಲ್ಲಿ ಇದ್ದಾರೆ. ಗ್ರಾಂಡ್​ಹೋಮ್ ಕಣಕ್ಕಿಳಿದಿದ್ದಾರೆ. ನ್ಯೂಜಿಲ್ಯಾಂಡ್ ತಂಡದ 5 ವಿಕೆಟ್ ಉರುಳಿರುವುದು ಭಾರತೀಯ ತಂಡಕ್ಕೆ ಉತ್ಸಾಹ ಮೂಡಿಸಿದೆ.
  ನ್ಯೂಜಿಲ್ಯಾಂಡ್ ತಂಡ 71 ಓವರ್​ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 135 ರನ್ ದಾಖಲಿಸಿದೆ.

 • 22 Jun 2021 17:54 PM (IST)

  ನ್ಯೂಜಿಲ್ಯಾಂಡ್ ಮತ್ತೊಂದು ವಿಕೆಟ್ ಪತನ

  img

  ನ್ಯೂಜಿಲ್ಯಾಂಡ್ ತಂಡದ ನಾಲ್ಕನೇ ವಿಕೆಟ್ ಪತನವಾಗಿದೆ. ಹೆನ್ರಿ ನಿಕೊಲಸ್ ಇಶಾಂತ್ ಶರ್ಮಾ ಬಾಲ್​ಗೆ ರೋಹಿತ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. 23 ಬಾಲ್​ಗೆ 7 ರನ್ ಗಳಿಸಿ ಔಟ್ ಆಗಿದ್ದಾರೆ. ಕೇನ್ ವಿಲಿಯಮ್ಸನ್ ಹಾಗೂ ವಾಟ್ಲಿಂಗ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ತಂಡದ ಮೊತ್ತ 70 ಓವರ್​ಗೆ 4 ವಿಕೆಟ್ ಕಳೆದುಕೊಂಡು 135 ರನ್ ಆಗಿದೆ.

 • 22 Jun 2021 17:34 PM (IST)

  ನ್ಯೂಜಿಲ್ಯಾಂಡ್ 128-3 (66 ಓವರ್)

  66ನೇ ಓವರ್ ಆಡಿದ ನ್ಯೂಜಿಲ್ಯಾಂಡ್ ತಂಡ 3 ಮುಖ್ಯ ವಿಕೆಟ್ ಕಳೆದುಕೊಂಡು 128 ರನ್ ಕಲೆಹಾಕಿದೆ. ತಂಡದ ಪರವಾಗಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಹೆನ್ರಿ ನಿಕೊಲಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ತಂಡದ ಮೊತ್ತ ಭಾರತಕ್ಕಿಂತ 89 ರನ್ ಹಿಂದಿದೆ.

  ರಾಸ್ ಟಯ್ಲರ್ ವಿಕೆಟ್ ಪಡೆದ ಸಂಭ್ರಮದಲ್ಲಿ ಶಮಿ

 • 22 Jun 2021 17:20 PM (IST)

  ರಾಸ್ ಟಯ್ಲರ್ ವಿಕೆಟ್ ಪತನ

  img

  37 ಬಾಲ್​ಗೆ 11 ರನ್ ದಾಖಲಿಸಿದ್ದ ರಾಸ್ ಟಯ್ಲರ್ ಮೊಹಮದ್ ಶಮಿ ಬಾಲ್​ಗೆ ಶುಬ್​ಮನ್ ಗಿಲ್​ಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಇದರಿಂದ ನ್ಯೂಜಿಲ್ಯಾಂಡ್ ತಂಡಕ್ಕೆ ಕೊಂಚ ಆಘಾತ ಉಂಟಾಗಿದೆ. ಭಾರತಕ್ಕೆ ಇನ್ನಷ್ಟು ವಿಕೆಟ್ ಪಡೆಯಲು ಉತ್ಸಾಹ ನೀಡಿದೆ. ನ್ಯೂಜಿಲ್ಯಾಂಡ್ ಪರವಾಗಿ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಹೆನ್ರಿ ನಿಕೊಲಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

 • 22 Jun 2021 17:17 PM (IST)

  ನ್ಯೂಜಿಲ್ಯಾಂಡ್ ತಂಡದ ಮೊತ್ತ 117

  ನ್ಯೂಜಿಲ್ಯಾಂಡ್ ತಂಡ 2 ವಿಕೆಟ್ ಕಳೆದುಕೊಂಡು 117 ರನ್ ದಾಖಲಿಸಿದೆ. ಅದರಂತೆ ಭಾರತಕ್ಕಿಂತ 100 ರನ್ ಹಿಂದಿದೆ. 63 ಓವರ್​ಗಳನ್ನು ಆಡಿರುವ ನ್ಯೂಜಿಲ್ಯಾಂಡ್ 1.86ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿದೆ.

 • 22 Jun 2021 16:56 PM (IST)

  ನ್ಯೂಜಿಲ್ಯಾಂಡ್ 112-2 (59 ಓವರ್)

  ಭಾರತ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. 59 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 112 ರನ್ ಗಳಿಸಿದೆ. ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟಯ್ಲರ್ ಜವಾಬ್ದಾರಿಯುತ ಆಟ ಪ್ರದರ್ಶಿಸುತ್ತಿದ್ದಾರೆ. ಭಾರತೀಯ ಬೌಲರ್​ಗಳಾದ ರವೀಂದ್ರ ಜಡೇಜಾ ಹಾಗೂ ಮೊಹಮದ್ ಶಮಿ ಮೇಲೆ ಇಂದು ಹೆಚ್ಚಿನ ನಿರೀಕ್ಷೆ ಇದೆ. ವಿಕೆಟ್ ಉರುಳದೆ ಪಂದ್ಯ ಭಾರತದ ಕಡೆ ವಾಲುವುದು ಕಷ್ಟವಾಗಿದೆ. ನ್ಯೂಜಿಲ್ಯಾಂಡ್ ತಂಡದಲ್ಲಿ ಹೆನ್ರಿ ನಿಕೊಲಸ್, ಬಿಜೆ ವಾಟ್ಲಿಂಗ್, ಗ್ರಾಂಡ್​ಹೊಮ್ ಇನ್ನೂ ಬ್ಯಾಟಿಂಗ್ ಮಾಡಲು ಬಾಕಿ ಇದ್ದಾರೆ.

 • 22 Jun 2021 16:33 PM (IST)

  ನ್ಯೂಜಿಲ್ಯಾಂಡ್ 106/2 (55 ಓವರ್)

  ನ್ಯೂಜಿಲ್ಯಾಂಡ್ ತಂಡ 55 ಓವರ್​ಗಳನ್ನು ಆಡಿ 2 ವಿಕೆಟ್ ಕಳೆದುಕೊಂಡು 106 ರನ್ ದಾಖಲಿಸಿದೆ. ಕೇನ್ ವಿಲಿಯಮ್ಸನ್ 13 ಹಾಗೂ ರಾಸ್ ಟಯ್ಲರ್ 2 ರನ್ ದಾಖಲಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ತಂಡ ಭಾರತಕ್ಕಿಂತ 111 ರನ್ ಹಿಂದಿದೆ. ಭಾರತಕ್ಕೆ ನ್ಯೂಜಿಲ್ಯಾಂಡ್ ದಾಂಡಿಗರ ವಿಕೆಟ್ ಪಡೆಯುವ ಹೆಚ್ಚಿದೆ.

 • 22 Jun 2021 16:05 PM (IST)

  ಮೊದಲ ಸೆಷನ್ ಆರಂಭ

  ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಪಂದ್ಯದ ಐದನೇ ದಿನದ ಮೊದಲ ಸೆಷನ್ ಆರಂಭವಾಗಿದೆ. ಮಳೆ ನಿಂತು, ಮೈದಾನ ಹದವಾದ ಮೇಲೆ ಮ್ಯಾಚ್ ಆರಂಭಿಸಲಾಗಿದೆ. ಬುಮ್ರಾ ಸೆಷನ್​ನ ಹಾಗೂ ದಿನದ ಮೊದಲ ಓವರ್ ಬೌಲಿಂಗ್ ಮಾಡಲು ಇಳಿದಿದ್ದಾರೆ. ನಾಯಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟಯ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ದಿನದ ಆರಂಭಕ್ಕೆ ನ್ಯೂಜಿಲ್ಯಾಂಡ್ ತಂಡ ಭಾರತಕ್ಕಿಂತ 116 ರನ್​ಗಳು ಹಿಂದಿದೆ.

 • 22 Jun 2021 15:13 PM (IST)

  ಮ್ಯಾಚ್ ಆರಂಭ ವಿಳಂಬ

  ಮಳೆಯ ಕಾರಣದಿಂದ ಐದನೇ ದಿನದಾಟ ಆರಂಭವೂ ವಿಳಂಬವಾಗಲಿದೆ. ಈ ಬಗ್ಗೆ ಐಸಿಸಿ ಟ್ವಿಟರ್ ಖಾತೆ ಮಾಹಿತಿ ನೀಡಿ, ಸೌಥಾಂಪ್ಟನ್ ಮೈದಾನದ ಫೋಟೊ ಹಂಚಿಕೊಂಡಿದೆ.

 • 22 Jun 2021 14:52 PM (IST)

  ಸೌಥಾಂಪ್ಟನ್​ನಲ್ಲಿ ಪಂದ್ಯಕ್ಕೆ ತಯಾರಿ; ನಡುವೆ ಹನಿಮಳೆ!

  ಸೌಥಾಂಪ್ಟನ್​ನಲ್ಲಿ ಇಂದು ಬಹುತೇಕ ಪೂರ್ತಿ ದಿನ ಮಳೆಯ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ. ಐದನೇ ದಿನದಾಟ ಹವಾಮಾನದ ಮುನಿಸು ಇಲ್ಲದೆ ಸುಸೂತ್ರವಾಗಿ ನಡೆಯುತ್ತದೆ ಎಂದು ವರದಿಯಿದೆ. ಹೀಗೆ ಪಂದ್ಯ ಆರಂಭಕ್ಕೆ ಕ್ಷಣಗಣನೆ ಎನ್ನುತ್ತಿರುವಾಗಲೇ ಹನಿ ಮಳೆಯಾಗಿದೆ. ಪಿಚ್ ಸಂಪೂರ್ಣ ಕವರ್ ಮಾಡಲಾಗಿದೆ. ಮುಂದೇನು ಎಂದು ಕಾದುನೋಡಬೇಕಿದೆ.

  ಸೌಥಾಂಪ್ಟನ್ ಹೀಗೆ ಕಾಣುತ್ತಿದೆ. ಬಿಸಿಸಿಐ ಟ್ವಿಟರ್ ಖಾತೆ ಹಂಚಿಕೊಂಡ ಫೋಟೊ ಇಲ್ಲಿದೆ ನೋಡಿ.

 • 22 Jun 2021 14:49 PM (IST)

  ಐದನೇ ದಿನದ ಪ್ರಿವ್ಯೂ ಇಲ್ಲಿದೆ

  ಇಂದು ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪಂದ್ಯದ ಐದನೇ ದಿನದಾಟ ನಡೆಯಲಿದೆ. ಆದರೆ, ವಿಶೇಷ ಎಂಬಂತೆ ಇದು ಟೆಸ್ಟ್​ನ ಐದನೇ ದಿನ ಆದರೂ ಇನ್ನೂ ಕೂಡ ಶೇಕಡಾ 30ರಷ್ಟು ಆಟ ಮಾತ್ರ ನಡೆದಿದೆ. ಮೊದಲನೇ ಇನ್ನಿಂಗ್ಸ್​ನಲ್ಲಿ ನ್ಯೂಜಿಲ್ಯಾಂಡ್ ಇನ್ನೂ ಬ್ಯಾಟಿಂಗ್ ಪೂರ್ತಿಗೊಳಿಸಿಲ್ಲ. ಅಂತೂ ಇಂತೂ ಇಂದು ಆಟ ನಡೆಯಲಿದೆ ಎಂಬ ಬಗ್ಗೆ ವರದಿಗಳು ತಿಳಿಸಿವೆ. ಪ್ರಿವ್ಯೂ ಹೇಗಿದೆ ಎಂದು ಇಲ್ಲಿ ವಿವರಿಸಲಾಗಿದೆ. ನೋಡಿ ಬನ್ನಿ.

 • 22 Jun 2021 14:43 PM (IST)

  ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ

  ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಸಂಪೂರ್ಣ ಲೈವ್ ಮಾಹಿತಿಗಳು ಇಲ್ಲಿ ನಿಮಗೆ ಲಭ್ಯವಿರುತ್ತದೆ. ಪಂದ್ಯದ ಕುತೂಹಲವನ್ನು ಅಕ್ಷರಗಳಲ್ಲಿ ನೀವು ಆಸ್ವಾದಿಸಬಹುದು. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ- ನ್ಯೂಜಿಲ್ಯಾಂಡ್ ತಂಡಗಳು ಕಣಕ್ಕಿಳಿದಿದ್ದು. ಯಾರು ಗೆಲ್ಲುತ್ಥಾರೆ, ಪಂದ್ಯದಲ್ಲಿ ಏನೇನು ದಾಖಲೆ, ಬೆಳವಣಿಗೆಗಳು ಆಗುತ್ತವೆ ಎಂದು ಇಲ್ಲಿ ಮಾಹಿತಿ ಪಡೆಯಬಹುದು. ಟಿವಿ9 ಡಿಜಿಟಲ್​ನಲ್ಲಿ ಕ್ರಿಕೆಟ್​ಗಾಗಿ ವಿಶೇಷ ಪುಟ ತೆರೆಯಲಾಗಿದೆ. ಅಲ್ಲಿಯೂ ಕ್ರಿಕೆಟ್ ಬಗ್ಗೆ ಹಲವು ವಿಶೇಷ ಮಾಹಿತಿಗಳನ್ನು ಓದಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ ಟಿವಿ9 ಡಿಜಿಟಲ್- ಕ್ರಿಕೆಟ್

Click on your DTH Provider to Add TV9 Kannada