ಕನಸಿನ ಟೆಸ್ಟ್​ ಪಾದಾರ್ಪಣೆ, ಮಧ್ಯೆ ಶರ್ಟ್​ ಬಿಚ್ಚಿ ಎದೆಗಾರಿಕೆ ತೋರಿದ್ದು.. ಈಗ ಶ್ರೀಮಂತ ಕ್ರಿಕೆಟ್​ ಮಂಡಳಿಯ ಚುಕ್ಕಾಣಿ ಹಿಡಿಯುವವರೆಗೆ ದಾದಾ ಬೆಳೆದುಬಂದಿದ್ದು…

Sourav Ganguly and Rahul Dravid silver jubilee: ಮೊದಲ ಪಂದ್ಯದಲ್ಲೇ ಆಕರ್ಷಕ ಶತಕ (Debut Test Ton). ಮತ್ತೊಂದು ತುದಿಯಿಂದ ಅದನ್ನು ಕಣ್ಣಾರೆ ನೋಡಿ ಆನಂದಿಸಿದ್ದು ನಮ್ಮ ಕನ್ನಡಿಗ ರಾಹುಲ್​ ದ್ರಾವಿಡ್​. ದಾಖಲಾರ್ಹ ಸಂಗತಿಯೆಂದ್ರೆ ಅದು ದ್ರಾವಿಡ್​​ಗೂ ಚೊಚ್ಚಲ ಟೆಸ್ಟ್​. ಆದರೆ ದ್ರಾವಿಡ್​ ಆ ಪಂದ್ಯದಲ್ಲಿ 95 ರನ್​ಗೆ ಔಟ್​ ಆಗಿದ್ದರು. ಅದೆಲ್ಲಾ ಘಟಿಸಿ ಇಂದಿಗೆ 25 ವರ್ಷಗಳಾಗಿವೆ.

ಕನಸಿನ ಟೆಸ್ಟ್​ ಪಾದಾರ್ಪಣೆ, ಮಧ್ಯೆ ಶರ್ಟ್​ ಬಿಚ್ಚಿ ಎದೆಗಾರಿಕೆ ತೋರಿದ್ದು.. ಈಗ ಶ್ರೀಮಂತ ಕ್ರಿಕೆಟ್​ ಮಂಡಳಿಯ ಚುಕ್ಕಾಣಿ ಹಿಡಿಯುವವರೆಗೆ ದಾದಾ ಬೆಳೆದುಬಂದಿದ್ದು...
ಸೌರವ್ ಗಂಗೂಲಿ
Follow us
ಸಾಧು ಶ್ರೀನಾಥ್​
|

Updated on:Jun 22, 2021 | 3:08 PM

ಅದು ಕನಸಿನ ಟೆಸ್ಟ್​ ಪಾದಾರ್ಪಣೆ. ಮೊದಲ ಪಂದ್ಯದಲ್ಲೇ ಆಕರ್ಷಕ ಶತಕ (Debut Test Ton). ಮತ್ತೊಂದು ತುದಿಯಿಂದ ಅದನ್ನು ಕಣ್ಣಾರೆ ನೋಡಿ ಆನಂದಿಸಿದ್ದು ನಮ್ಮ ಕನ್ನಡಿಗ ರಾಹುಲ್​ ದ್ರಾವಿಡ್​. ದಾಖಲಾರ್ಹ ಸಂಗತಿಯೆಂದ್ರೆ ಅದು ದ್ರಾವಿಡ್​​ಗೂ ಚೊಚ್ಚಲ ಟೆಸ್ಟ್​. ಆದರೆ ದ್ರಾವಿಡ್​ ಆ ಪಂದ್ಯದಲ್ಲಿ 95 ರನ್​ಗೆ ಔಟ್​ ಆಗಿದ್ದರು. ಅದೆಲ್ಲಾ ಘಟಿಸಿ ಇಂದಿಗೆ 25 ವರ್ಷಗಳಾಗಿವೆ. ಈ ಮಧ್ಯೆ ಬಹಳ ಸ್ಥಿತ್ಯಂರಗಳಾಗಿವೆ ಜಗತ್ತಿನ ಕ್ರಿಕೆಟ್​ ಅಂಗಳದಲ್ಲಿ. ಮಧ್ಯೆ ಶರ್ಟ್​ ಬಿಚ್ಚಿ ತನ್ನ ಎದೆಗಾರಿಕೆ ತೋರಿದ್ದು, ಈಗ ವಿಶ್ವದ ಶ್ರೀಮಂತ ಕ್ರಿಕೆಟ್​ ಮಂಡಳಿಯ ಚುಕ್ಕಾಣಿ ಹಿಡಿಯುವವರೆಗೆ ದಾದಾ ಸೌರವ್​ ಗಂಗೂಲಿ ಬೆಳೆದು ಬಂದಿದ್ದು ನಿಜಕ್ಕೂ ರೋಚಕ…

ಇಂದಿಗೆ ಸಿಲ್ವರ್​ ಜ್ಯುಬಿಲಿ ಆಚರಿಸುತ್ತಿರುವ ದಾದಾ ಗಂಗೂಲಿ ಈ ಕಾಲಾಂತರದಲ್ಲಿ ವಿಕಸನಗೊಂಡಿದ್ದು ನಿಜಕ್ಕೂ ರೋಚಕ, ಯುವ ಪ್ರತಿಭೆಗಳಿಗೆ ಮಾದರಿ. ಕ್ರಿಕೆಟ್​ ಕಾಶಿ ಎಂದೇ ಪರಿಗಣಿತವಾಗಿರುವ ಇಂಗ್ಲಂಡಿನ ಲಾರ್ಡ್ಸ್​​​ ಮೈದಾನದಲ್ಲಿ ಭಾರತ ಪ್ರವಾಸದ ಎರಡನೆಯ ಟೆಸ್ಟ್​ ಪಂದ್ಯದ ಮೂರನೆಯ ದಿನದಾಟದಲ್ಲಿ ಗಂಗೂಲಿ ಕನಸಿನ ದಾಖಲೆ ನಿರ್ಮಿಸಿದ್ದರು.

ಅದಕ್ಕೂ ಮುನ್ನ ಮತ್ತೊಬ್ಬ ಕನ್ನಡಿಗ, ಮೀಡಿಯಂ ವೇಗದ ಬೌಲರ್ ವೆಂಕಟೇಶ್​ ಪ್ರಸಾದ್ 5 ವಿಕೆಟ್​ ಕಿತ್ತು, ಎದುರಾಳಿ ಇಂಗ್ಲಂಡ್​ ತಂಡವನ್ನು ಮೊದಲ ಇನ್ನಿಂಗ್ಸ್​​ನಲ್ಲಿ 344 ರನ್​ಗೆ ಆಲೌಟ್​​ ಮಾಡಿದ್ದರು. ಅದಾದ ಮೇಲೆ ಮೂರನೆಯ ಕ್ರಮಾಂಕದಲ್ಲಿ ಆಡಲು ಬಂದ ಗಂಗೂಲಿ, 301 ಬಾಲ್​​ಗಳಲ್ಲಿ 131 ರನ್​ ಚಚ್ಚಿದರು. 20 ಬಾರಿ ಬೌಂಡರಿ ಆಚೆ ಚೆಂಡನ್ನು ಬಾರಿಸಿದ್ದರು. ರಾಹುಲ್​ ದ್ರಾವಿಡ್​ ಜೊತೆ 6ನೆಯ ವಿಕೆಟ್​ಗೆ 94 ರನ್​ ಜೊತೆಯಾಟ ಅಡಿದ್ದರು. ಗಂಗೂಲಿ ಔಟ್​​ ಆಗುವ ವೇಳೆಗೆ ಭಾರತದ ಸ್ಕೋರ್​ 296/6. 85 ರ್​ಗಳ ಲೀಡ್​​ ನೊಂದಿಗೆ, ಪ್ರವಾಸಿ ಭಾರತ ತಂಡ ಕೊನೆಗೆ 429 ರನ್​ಗಳಿಗೆ ಆಲ್​ಔಟ್​​ ಆಗಿತ್ತು. ಅಂತಿಮವಾಗಿ ಮ್ಯಾಚ್​ ಡ್ರಾ ಆಗಿತ್ತು.

ಮುಂದೆ ಭಾರತ ತಂಡದ ಕ್ಯಾಪ್ಟನ್​ ಆಗಿ ಬೆಳೆದ ದಾದಾ ಭಾರತವನ್ನು 2003ರ ವರ್ಲ್ಡ್​​ ಕಪ್​ ಫೈನಲ್​​ ವರೆಗೂ ತೆಗೆದುಕೊಂಡು ಹೋಗಿದ್ದರು. 113 ಟೆಸ್ಟ್​ ಪಂದ್ಯಗಳು, 311 ಏಕ ದಿನ ಪಂದ್ಯಗಳನ್ನು ಲೀಲಾಜಾಲವಾಗಿ ಆಡಿದ್ದರು ಸೌರವ್​ ಗಂಗೂಲಿ. ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನದಲ್ಲಿ 18,575 ರನ್ ಬಾರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರತಿಷ್ಠಿತ ಭಾರತೀಯ ಕ್ರಿಕೆಟ್​ ಮಂಡಳಿಯ (Board of Control for Cricket in India -BCCI) ಅಧ್ಯಕ್ಷರಾಗಿ ಯಶಸ್ವಿಯಾಗಿ ಕ್ರಿಕೆಟ್​ ರಾಯಭಾರ ನಡೆಸುತ್ತಿದ್ದಾರೆ ದಾದಾ!

Sourav Ganguly scored his debut Test ton 1

ಅದು ದ್ರಾವಿಡ್​​ಗೂ ಚೊಚ್ಚಲ ಟೆಸ್ಟ್​. ಆದರೆ ದ್ರಾವಿಡ್​ ಆ ಪಂದ್ಯದಲ್ಲಿ 95 ರನ್​ಗೆ ಔಟ್​ ಆಗಿದ್ದರು. ಅದೆಲ್ಲಾ ಘಟಿಸಿ ಇಂದಿಗೆ 25 ವರ್ಷಗಳಾಗಿವೆ.

6 ದಶಕಗಳ ನಂತರ… ಕೆಟ್ಟ ಬಾಲ್​ ಎಸೆದು ಹ್ಯಾಟ್ರಿಕ್ ಸಾಧಿಸಿ, ಆಫ್ರಿಕಾ ತಂಡಕ್ಕೆ ಹ್ಯಾಟ್ರಿಕ್​ ತಂದುಕೊಟ್ಟ ಕೇಶವ ಮಹಾರಾಜ ಬಗ್ಗೆ ಒಂದಿಷ್ಟು…

(25 years ago Sourav Ganguly and Rahul Dravid made Test debut at the Lord’s Cricket Ground England)

Published On - 11:20 am, Tue, 22 June 21