6 ದಶಕಗಳ ನಂತರ… ಕೆಟ್ಟ ಬಾಲ್​ ಎಸೆದು ಹ್ಯಾಟ್ರಿಕ್ ಸಾಧಿಸಿ, ಆಫ್ರಿಕಾ ತಂಡಕ್ಕೆ ಹ್ಯಾಟ್ರಿಕ್​ ತಂದುಕೊಟ್ಟ ಕೇಶವ ಮಹಾರಾಜ ಬಗ್ಗೆ ಒಂದಿಷ್ಟು…

Second Hat trick for South Africa: ದಕ್ಷಿಣ ಆಫ್ರಿಕಾದ 110 ಮಂದಿ ಬೌಲರ್​​ಗಳಿಗೆ ಹ್ಯಾಟ್ರಿಕ್ ಸಾಧನೆ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಎಲ್ಲರೂ ಕೈಚೆಲ್ಲಿದ್ದರು. 111ನೇ ಬಾರಿಗೆ, ಆರು ದಶಕಗಳ ನಂತರ, ಕೇಶವ ಮಹಾರಾಜ ಯಶಸ್ವಿಯಾದರು ಎಂಬುದು ನಿಜಕ್ಕೂ ಸೋಜಿಗವೇ ಸರಿ. ಅಂದಹಾಗೆ ಕೇಶವ ಮಹಾರಾಜ ಅವರ ತಂದೆ ಆತ್ಮಾನಂದ ಮಹಾರಾಜ ಭಾರತದಿಂದ ತೆರಳಿ, ಆಫ್ರಿಕಾದಲ್ಲಿ ಬದುಕು ಕಟ್ಟಿಕೊಂಡವರು.

6 ದಶಕಗಳ ನಂತರ... ಕೆಟ್ಟ ಬಾಲ್​ ಎಸೆದು ಹ್ಯಾಟ್ರಿಕ್ ಸಾಧಿಸಿ, ಆಫ್ರಿಕಾ ತಂಡಕ್ಕೆ ಹ್ಯಾಟ್ರಿಕ್​ ತಂದುಕೊಟ್ಟ ಕೇಶವ ಮಹಾರಾಜ ಬಗ್ಗೆ ಒಂದಿಷ್ಟು...
ದಕ್ಷಿಣ ಆಫ್ರಿಕಾದ ಬೌಲರ್​​ಗಳಿಗೆ ಎರಡನೆಯ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡಲು 110 ಬಾರಿ ಅವಕಾಶ ಸಿಕ್ಕಿತ್ತು!
Follow us
ಸಾಧು ಶ್ರೀನಾಥ್​
|

Updated on:Jun 22, 2021 | 12:40 PM

ದಕ್ಷಿಣ ಆಫ್ರಿಕಾ ತಂಡದ ಪರ ಆಡುವ ಭಾರತೀಯ ಮೂಲದ ಕೇಶವ ಮಹಾರಾಜ ಎಂಬ ಎಡಗೈ ಸ್ಪಿನ್ನರ್​ ಕಮ್ ಕೆಳ ಕ್ರಮಾಂಕದ ಬ್ಯಾಟ್ಸ್​​​ಮನ್​ ಆಫ್ರಿಕಾದಲ್ಲಿ ಸ್ಪಿನ್​ ಬೌಲಿಂಗ್​ಗೆ ಮರುಜೀವ ನೀಡಿದ್ದಾರೆ. ಆತಿಥೇಯ ವೆಸ್ಟ್​ ಇಂಡೀಸ್ ತಂಡದ ವಿರುದ್ಧ​ ಕೆಟ್ಟ ಬಾಲ್​ ಎಸೆದು ಹ್ಯಾಟ್ರಿಕ್ ಸಾಧಿಸಿದ್ದಲ್ಲದೆ 5 ವಿಕೆಟ್​ ಗೌರವ ಸಂಪಾದಿಸಿ ತನ್ನ ತಂಡಕ್ಕೆ ಅಮೋಘ ಗೆಲುವನ್ನೂ ತಂದುಕೊಟ್ಟಿದ್ದಾರೆ. ನಂಬಿ. 60 ವರ್ಷಗಳ ಬಳಿಕ, ದಕ್ಷಿಣ ಆಫ್ರಿಕಾ ತಂಡಕ್ಕೆ ಎರಡನೆಯ ಹ್ಯಾಟ್ರಿಕ್ ಸಾಧನೆ ತಂದುಕೊಟ್ಟಿದ್ದಾರೆ.

ವೆಸ್ಟ್​ ಇಂಡೀಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಅನ್ನು ಧೂಳೀಪಟ ಮಾಡಿದ ಕೇಶವ ಮಹಾರಾಜ ಹ್ಯಾಟ್ರಿಕ್​ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಎರಡನೆಯ ಬೌಲರ್​ ಆಗಿದ್ದಾರೆ. ಅದರೊಂದಿಗೆ ಎರಡು ಮತ್ತು ಕೊನೆಯ ಟೆಸ್ಟ್​​ನಲ್ಲಿ ಸೋಮವಾರ ವಿಂಡೀಸ್​ ವಿರುದ್ಧ 158 ರನ್​ಗಳ ಅಮೋಘ ಗೆಲುವು ತಂದುಕೊಟ್ಟರು. ಮೊದಲ ಟೆಸ್ಟ್​ನಲ್ಲಿ ಇನ್ನಿಂಗ್ಸ್​ ಮತ್ತು 63 ರನ್​ಗಳ ವಿಜಯ ಸಾಧಿಸಿದ್ದ ಸೌತ್​ ಆಫ್ರಿಕಾ ತನ್ಮೂಲಕ ಟೆಸ್ಟ್​ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ವಿಂಡೀಸ್​ ತಂಡ 3 ವಿಕೆಟ್​ ಕಳೆದುಕೊಂಡು 107 ರನ್​ ಕಲೆ ಹಾಕಿತ್ತು. ಪ್ರವಾಸೀ ಆಫ್ರಿಕಾ ತಂಡದ ಭರವಸೆಯ ಸ್ಪಿನ್​ ಬೌಲರ್ ಕೇಶವ ಮಹಾರಾಜ ಅವರು ಕೆರೆನ್​ ಪೊವೆಲ್ ವಿಕೆಟ್​ ಕಬಳಿಸಿದರು. ಪೊವೆಲ್ ಮಿಡ್​ ವಿಕೆಟ್​​​ ಮೂಲಕ ಚೆಂಡನ್ನು ಬೌಂಡರಿಗೆ ಅಟ್ಟಲು ಹೋಗಿ, ಅಲ್ಲಿದ್ದ ಏಕಮೇವ ಫೀಲ್ಡರ್ ಆನ್ರಿಚ್ ನೋರ್ಜೆ​​ ಕೈಗೆ ಸುಲಭದ ಕ್ಯಾಚಿತ್ತು ನಿರ್ಗಮಿಸಿದರು. ಮುಂದಿನ ಬಾಲ್​​ನಲ್ಲಿಯೇ ವಿಶ್ವದ ಟಾಪ್​ ಶ್ರೇಯಾಂಕಿತ ಆಲ್​ರೌಂಡರ್​ ಜಾಸನ್ ಹೋಲ್ಡರ್​ ಶಾರ್ಟ್​​ ಲೆಗ್​​ ಕ್ಷೇತ್ರದಲ್ಲಿ ಕೀಗನ್​ ಪೀಟರ್​​ಸನ್​​ ಗೆ ಕ್ಯಾಚಿಂಗ್​ ಪ್ರಾಕ್ಟೀಸ್​ ಮಾಡಿ ನಿರ್ಗಮಿಸಿದರು.

ಅದಾದ ಮೇಲೆ ಕೆಟ್ಟ ಬಾಲ್​ ಇತಿಹಾಸ ಹೀಗಿತ್ತು… ಅದಾದ ಮೇಲೆ ಕೆಟ್ಟ ಬಾಲ್​ ಎಸೆದ ಕೇಶವ ಮಹಾರಾಜಗೆ ಜೋಷು ಡಾ ಸಿಲ್ವಾ ಲೆಗ್​ ಸ್ಲಿಪ್​​ನಲ್ಲಿ ಬಾಲ್​ಗೆ ಮುತ್ತಿಕ್ಕಿದರು… ಅಲ್ಲಿದ್ದ ವಿಯಾನ್​ ಮೌಲ್ಡರ್​ ಸೂಪರ್ ಡೈವಿಂಗ್​ ಕ್ಯಾಚ್​ ಹಿಡಿದು, ಕೇಶವ ಮಹಾರಾಜಗೆ ಹ್ಯಾಟ್ರಿಕ್​ ತಂದುಕೊಟ್ಟರು! ಹಾಗೆ ನೋಡಿದರೆ ಕೇಶವ ಮಹಾರಾಜಗೆ ಹ್ಯಾಟ್ರಿಕ್​ ಬಾಲ್ ಅನ್ನು ಕೆಟ್ಟದ್ದಾಗಿ​ ಎಸೆಯಿವ ಆಲೋಚನೆ ಇರಲಿಲ್ಲ. ಹ್ಯಾಟ್ರಿಕ್​ ಗಳಿಸುವ ಉದ್ವೇಗದೊಂದಿಗೆ ಸ್ಪಿನ್​ ಆಗುತ್ತದೆ ಎಂದು ಬಾಲ್ ಎಸೆದರು.. ಆದರೆ ಅದು ಸ್ಪಿನ್​ ಆಗಲೇ ಇಲ್ಲ. ನೇರವಾದ ಬಾಲ್​ ಆಗಿತ್ತು. ಆದರೆ ಬ್ಯಾಟ್ಸ್​​ಮನ್​ ಜೋಷು ಡಾ ಸಿಲ್ವಾ ಅದನ್ನು ಅರಿಯದೆ ತಮ್ಮ ಬ್ಯಾಟ್​ನಲ್ಲಿ ಮುತ್ತಿಕ್ಕಿದ್ದರು, ಅಷ್ಟೇ. ​

ದಕ್ಷಿಣ ಆಫ್ರಿಕಾದ ಬೌಲರ್​​ಗಳಿಗೆ ಎರಡನೆಯ ಬಾರಿಗೆ ಹ್ಯಾಟ್ರಿಕ್ ಸಾಧನೆ ಮಾಡಲು 110 ಬಾರಿ ಅವಕಾಶ ಸಿಕ್ಕಿತ್ತು!

ಅದು 1960ರಲ್ಲಿ ಲಾರ್ಡ್ಸ್​​​ ಟೆಸ್ಟ್​​ನಲ್ಲಿ ಆಫ್ರಿಕಾದ ಪರ ಜೆಫ್​ ಗ್ರಿಫಿನ್​​ ಹ್ಯಾಟ್ರಿಕ್ ಸಾಧನೆ ಮಾಡಿದ್ದು, ಅದಾದ ಮೇಲೆ ಈಗ ಕೇಶವ ಮಹಾರಾಜಗೆ ಹ್ಯಾಟ್ರಿಕ್ ದಕ್ಕಿದೆ. ಅದಾದ ಮೇಲೆ, ನಂಬಿ ದಕ್ಷಿಣ ಆಫ್ರಿಕಾದ 110 ಮಂದಿ ಬೌಲರ್​​ಗಳಿಗೆ ಹ್ಯಾಟ್ರಿಕ್ ಸಾಧನೆ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಎಲ್ಲರೂ ಕೈಚೆಲ್ಲಿದ್ದರು. 111ನೇ ಬಾರಿಗೆ, ಆರು ದಶಕಗಳ ನಂತರ, ಕೇಶವ ಮಹಾರಾಜ ಯಶಸ್ವಿಯಾದರು ಎಂಬುದು ನಿಜಕ್ಕೂ ಸೋಜಿಗವೇ ಸರಿ. ಅಂದಹಾಗೆ ಕೇಶವ ಮಹಾರಾಜ ಅವರ ತಂದೆ ಆತ್ಮಾನಂದ ಮಹಾರಾಜ ಭಾರತದಿಂದ ತೆರಳಿ, ಆಫ್ರಿಕಾದಲ್ಲಿ ಬದುಕು ಕಟ್ಟಿಕೊಂಡವರು. ಅವರೂ ಸಹ ಆಫ್ರಿಕಾ ಪರ ಕ್ರಿಕೆಟ್​ ಆಡಿದ್ದಾರೆ.

ಕನಸಿನ ಟೆಸ್ಟ್​ ಪಾದಾರ್ಪಣೆ, ಮಧ್ಯೆ ಶರ್ಟ್​ ಬಿಚ್ಚಿ ಎದೆಗಾರಿಕೆ ತೋರಿದ್ದು.. ಈಗ ಶ್ರೀಮಂತ ಕ್ರಿಕೆಟ್​ ಮಂಡಳಿಯ ಚುಕ್ಕಾಣಿ ಹಿಡಿಯುವವರೆಗೆ ದಾದಾ ಬೆಳೆದುಬಂದಿದ್ದು… (spinner Keshav Maharaj achieve hat trick for South Africa after 6 decades that too with worst ball against west indies)

Published On - 12:37 pm, Tue, 22 June 21