ಬೆಂಗಳೂರಿನಲ್ಲಿ ಗಗನಕ್ಕೇರಿ ಕುಳಿತ ತರಕಾರಿ ರೇಟ್! ಮುಂದೆ ಇನ್ನೂ ದುಬಾರಿ; ಕೊರೊನಾ 3ನೇ ಅಲೆ ಆತಂಕದಲ್ಲಿ ತರಕಾರಿ ಬೆಳೆಯುತ್ತಿಲ್ಲ ರೈತರು

Bangalore Vegetable Prices: ಸದ್ಯದಲ್ಲೇ ತರಕಾರಿ ಬೆಲೆಗಳು ಕಡಿಮೆಯಾಗುತ್ತವಾ? ಅಂದ್ರೆ ಮುಂದಿನ ವಾರದಿಂದ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗಲಿದೆ! ಮಳೆಗಾಲ ಜೋರಾಗಿದ್ದು, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ  ಭಾರೀ ಮಳೆ ಆಗ್ತಿರೋ ಹಿನ್ನೆಲೆ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಅನ್ನುತ್ತಾರೆ ಕೆ ಆರ್​ ಮಾರ್ಕೆಟ್​​ ಸಗಟು ತರಕಾರಿ ದಲ್ಲಾಳಿಗಳು. 

ಬೆಂಗಳೂರಿನಲ್ಲಿ ಗಗನಕ್ಕೇರಿ ಕುಳಿತ ತರಕಾರಿ ರೇಟ್! ಮುಂದೆ ಇನ್ನೂ ದುಬಾರಿ; ಕೊರೊನಾ 3ನೇ ಅಲೆ ಆತಂಕದಲ್ಲಿ ತರಕಾರಿ ಬೆಳೆಯುತ್ತಿಲ್ಲ ರೈತರು
Vegetable Prices skyrocket: ಲಾಕ್​ಡೌನ್ ಮುಗಿಯುತ್ತಿದ್ದಂತೆ ಬೆಂಗಳೂರಿನಲ್ಲಿ ಗಗನಕ್ಕೇರಿ ಕುಳಿತ ತರಕಾರಿ ರೇಟ್! ಮುಂದಿನ ವಾರದಿಂದ ಇನ್ನೂ ಏರಿಕೆ
Follow us
ಸಾಧು ಶ್ರೀನಾಥ್​
|

Updated on:Jun 24, 2021 | 10:29 AM

ಬೆಂಗಳೂರು: ಕೊರೊನಾ ಮಹಾಮಾರಿ ಹುಟ್ಟಡಗಿಸಲು ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಲಾಕ್​ಡೌನ್​ ಮಂತ್ರದಂಡ ಪ್ರಯೋಗಿಸಿತ್ತು. ಆದರೆ ಇದೀಗ ಲಾಕ್​ಡೌನ್ ತೆರವಾಗುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ವೆಜಿಟಬಲ್ಸ್ ರೇಟ್ ಗಗನಕ್ಕೇರುತ್ತಿದೆ! ಸಂಕಷ್ಟದ ಕಾಲದಲ್ಲಿ ತರಕಾರಿ ಬೆಳೆ  ರೈತರನ್ನು ಕೈಹಿಡಿದಿರಲಿಲ್ಲ.  ಕೊಳ್ಳುವವರಿಲ್ಲದೇ ಬೆಳೆಗಾರರು ತರಕಾರಿಯನ್ನ ಬೀದಿಗೆ ಬೀಸಾಡಿದ್ದರು. ಆಗ ಲಾಕ್​ಡೌನ್ ವೇಳೆ ತರಹೇವಾರಿ ತರಕಾರಿಗಳ ಬೆಲೆಗಳು ಗಣನೀಯವಾಗಿ ಇಳಿಕೆ ಕಂಡಿದ್ದವು.  ಆದರೆ ಈಗ ಗಗನಚುಂಬಿಯಾಗಿದೆ…  

ಗಾಂಧೀಬಜಾರ್ ಹಾಗೂ ಮಲ್ಲೇಶ್ವರಂ ಮಾರ್ಕೆಟ್ ನಲ್ಲಿ ತರಕಾರಿ ದುಬಾರಿಯಾಗಿದೆ. ಕೆ ಆರ್​ ಮಾರ್ಕೆಟ್ ದರಕ್ಕಿಂತ 10 ರಿಂದ 20 ರೂಪಾಯಿ ಹೆಚ್ಚಳ ಕಂಡಿದೆ. ಫಸ್ಟ್ ಕ್ವಾಲಿಟಿ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಹೀರೆಕಾಯಿ 50 ರೂಪಾಯಿಯಾಗಿದೆ. ಬದನೆಕಾಯಿ 50 ರೂಪಾಯಿ. ಕ್ಯಾರೆಟ್​ 100 ರೂಪಾಯಿ, ಕ್ಯಾಪ್ಸಿಕಂ 80 ರೂಪಾಯಿ. ಬೀನ್ಸ್ 100 ರೂಪಾಯಿ, ನಾಟಿ ಬಟಾಣಿ 400 ರೂಪಾಯಿ…

ಹೀಗೆ ತರಕಾರಿಯನ್ನು ಜನಸಾಮಾನ್ಯರು ಖರೀದಿ ಮಾಡುವ ಹಾಗಿಲ್ಲ ಎಂಬಂತಾಗಿದೆ.  ಹೋಗಲಿ ಸದ್ಯದಲ್ಲೇ ತರಕಾರಿ ಬೆಲೆಗಳು ಕಡಿಮೆಯಾಗುತ್ತವಾ? ಅಂದ್ರೆ ಮುಂದಿನ ವಾರದಿಂದ ತರಕಾರಿ ಬೆಲೆ ಇನ್ನಷ್ಟು ಹೆಚ್ಚಾಗಲಿದೆ! ಮಳೆಗಾಲ ಜೋರಾಗಿದ್ದು, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ  ಭಾರೀ ಮಳೆ ಆಗ್ತಿರೋ ಹಿನ್ನೆಲೆ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ ಅನ್ನುತ್ತಾರೆ ಕೆ ಆರ್​ ಮಾರ್ಕೆಟ್​​ ಸಗಟು ತರಕಾರಿ ದಲ್ಲಾಳಿಗಳು.

ಹಾಪ್‌ಕಾಮ್ಸ್‌ನ ಮಾಜಿ ಅಧ್ಯಕ್ಷ ಚಂದ್ರೇಗೌಡ ಹೇಳೋದೇನು?

ರಾಜ್ಯದಲ್ಲಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಅನ್ನುತ್ತಾರೆ ಹಾಪ್‌ಕಾಮ್ಸ್‌ನ ಮಾಜಿ ಅಧ್ಯಕ್ಷ ಚಂದ್ರೇಗೌಡ. ಕೊರೊನಾ 2ನೇ ಅಲೆಯಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ. ತರಕಾರಿಗಳಿಗೆ ಸೂಕ್ತ ಬೆಲೆ ಸಿಗದೆ ರೈತರಿಗೆ ನಷ್ಟವಾಗಿದೆ. ರಾಜ್ಯದಲ್ಲಿ ಮುಕ್ಕಾಲು ಪಾಲು (ಶೇ. 70ರಷ್ಟು) ಕೃಷಿ ಚಟುವಟಿಕೆ ಕಡಿಮೆಯಾಗಿದೆ. ಈಗ ಬೆಳೆದಿರುವ ತರಕಾರಿ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಕೊರೊನಾ 3ನೇ ಅಲೆ ಬರುತ್ತೆಂದು ತರಕಾರಿ ಬೆಳೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ತರಕಾರಿ ಉತ್ಪಾದನೆ ಕಡಿಮೆಯಾಗುತ್ತೆ. ಹೀಗಾಗಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಾಪ್‌ಕಾಮ್ಸ್‌ನ ಮಾಜಿ ಅಧ್ಯಕ್ಷ ಚಂದ್ರೇಗೌಡ ಮಾಹಿತಿ ನೀಡಿದ್ದಾರೆ.

ಲಾಕ್ ಡೌನ್ ವೇಳೆ ತರಕಾರಿ ಬೆಲೆ ಎಷ್ಟಿತ್ತು ಅಂತ ನೋಡೋದಾದ್ರೆ: ಟೊಮ್ಯಾಟೊ: 10 ರೂಪಾಯಿ ಈರುಳ್ಳಿ:  20 ರೂಪಾಯಿ ಬೀನ್ಸ್: 40 ರೂಪಾಯಿ ಕ್ಯಾರೆಟ್:  20 ರೂಪಾಯಿ ಆಲೂಗಡ್ಡೆ:  20ರೂಪಾಯಿ ಗೆಡ್ಡೆಕೋಸು:  20 ರೂಪಾಯಿ ಬಿಟ್ರೊಟ್:  20 ರೂಪಾಯಿ

ಇನ್ನು ಲಾಕ್ ಡೌನ್ ತೆರವಾಗ್ತಿದ್ದಂತೆ ಪ್ರಸ್ತುತ ಏರಿಕೆ ಆಗ್ತಿರೋ ತರಕಾರಿ ಬೆಲೆ: ಟೊಮ್ಯಾಟೊ: 10 ರೂಪಾಯಿ ಬೀನ್ಸ್: 100 ರೂಪಾಯಿ ಕ್ಯಾರೆಟ್: 100 ರೂಪಾಯಿ ಆಲೂಗಡ್ಡೆ: 40 ರೂಪಾಯಿ ಈರುಳ್ಳಿ: 40 ರೂಪಾಯಿ ಬಿಟ್ರೋಟ್: 30 ರೂಪಾಯಿ ಗೆಡ್ಡೆಕೋಸು: 40ರೂಪಾಯಿ

ಇಷ್ಟ ಇದ್ರೆ ತಗೋಳಿ, ಇಲ್ಲ ಅಂದ್ರೆ ಹೋಗಿ ಅನ್ನುತ್ತಿರುವ ವ್ಯಾಪಾರಿಗಳು: ತರಕಾರಿ ಬೆಲೆ ಏರಿಕೆ ವಿರುದ್ಧ ಗ್ರಾಹಕರು ಕಂಗಾಲು (Vegetable Prices skyrocket in bangalore after lockdown 2 withdrawal)

Published On - 9:54 am, Thu, 24 June 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್