ಭಾರತದ ಹಣ ಪಡೆದು ಅಮೆರಿಕಾದ ನಕಲಿ ನೋಟ್ ನೀಡಿ ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್.. ಬಂಡಲ್‌ ನಕಲಿ ಡಾಲರ್ಸ್ ವಶ

ಅರೆಸ್ಟ್ ಆದವರಲ್ಲಿ ಒಬ್ಬನ ಬಳಿ ಯಾವುದೇ ಪಾಸ್‌ಪೋರ್ಟ್ ಕೂಡ ಇಲ್ಲ. ಮತ್ತೊಬ್ಬ ಮೆಡಿಕಲ್ ಅಟೆಂಡರ್ ಹೆಸರಿನಲ್ಲಿ ಬಂದಿದ್ದಾನೆ. ವೀಸಾ ಅವಧಿ ಮುಗಿದ್ರೂ ಅಕ್ರಮವಾಗಿ ಈ ಆರೋಪಿಗಳು ನೆಲೆಸಿದ್ದಾರೆ. ಬಂಧಿತರಿಂದ 100 ಡಾಲರ್ ಮುಖಬೆಲೆಯ 9 ಬಂಡಲ್‌ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ಭಾರತದ ಹಣ ಪಡೆದು ಅಮೆರಿಕಾದ ನಕಲಿ ನೋಟ್ ನೀಡಿ ವಂಚಿಸುತ್ತಿದ್ದ ಗ್ಯಾಂಗ್ ಅರೆಸ್ಟ್.. ಬಂಡಲ್‌ ನಕಲಿ ಡಾಲರ್ಸ್ ವಶ
ಬಂಧಿತರಿಂದ ವಶಕ್ಕೆ ಪಡೆದ ನಕಲಿ ಡಾಲರ್ಸ್
Follow us
TV9 Web
| Updated By: ಆಯೇಷಾ ಬಾನು

Updated on: Jun 24, 2021 | 9:23 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ವಿದೇಶಿ ನಕಲಿ ನೋಟ್ ದಂಧೆ ನಡೆಸುತ್ತಿದ್ದ ಗ್ಯಾಂಗ್ ಎಂಟ್ರಿ ಕೊಟ್ಟಿದ್ದು ಬೆಂಗಳೂರು ಸಿಸಿಬಿ ಪೊಲೀಸರು ಗ್ಯಾಂಗ್ನನ್ನು ಲಾಕ್ ಮಾಡಿದ್ದಾರೆ. ವಿದೇಶಿ ಪ್ರಜೆಗಳನ್ನು ಸೆರೆ ಹಿಡಿದಿದ್ದಾರೆ. ಕ್ಯಾಮರೂನ್‌ನ ಇಬ್ಬರನ್ನು ಬಂಧಿಸಿದ್ದಾರೆ. ಲಕ್ಷ ಲಕ್ಷ ಹಣ ನೀಡಿದ್ರೆ ಕೋಟಿ ಕೋಟಿ ಅಮೆರಿಕನ್ ಡಾಲರ್ಸ್ ಕೊಡ್ತಾರೆ. ಪ್ರತಿಷ್ಠಿತ ಹೋಟೆಲ್ಗಳಲ್ಲಿ ಹೈಫೈ ಜೀವನ ನಡೆಸುತ್ತಿದ್ದ ಗ್ಯಾಂಗ್ ಈಗ ಲಾಕ್ ಆಗಿದೆ.

ಅರೆಸ್ಟ್ ಆದವರಲ್ಲಿ ಒಬ್ಬನ ಬಳಿ ಯಾವುದೇ ಪಾಸ್‌ಪೋರ್ಟ್ ಕೂಡ ಇಲ್ಲ. ಮತ್ತೊಬ್ಬ ಮೆಡಿಕಲ್ ಅಟೆಂಡರ್ ಹೆಸರಿನಲ್ಲಿ ಬಂದಿದ್ದಾನೆ. ವೀಸಾ ಅವಧಿ ಮುಗಿದ್ರೂ ಅಕ್ರಮವಾಗಿ ಈ ಆರೋಪಿಗಳು ನೆಲೆಸಿದ್ದಾರೆ. ಬಂಧಿತರಿಂದ 100 ಡಾಲರ್ ಮುಖಬೆಲೆಯ 9 ಬಂಡಲ್‌ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರು ₹10 ಲಕ್ಷ ಕೊಟ್ಟರೆ ಡಾಲರ್ ರೂಪದಲ್ಲಿ 1 ಕೋಟಿ ರೂ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದರು. ಅದರಂತೆ ಹಣ ನೀಡುವವರಿಗೆ ನಕಲಿ ನೋಟುಗಳನ್ನು ಕೊಟ್ಟು ಆರೋಪಿಗಳು ವಂಚಿಸುತ್ತಿದ್ದರು. ಸುಬ್ರಹ್ಮಣ್ಯನಗರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ ಇನ್ನು ಮತ್ತೊಂದೆಡೆ ಬೆಂಗಳೂರಲ್ಲಿ HBR ಲೇಔಟ್‌ನಲ್ಲಿ ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್ ನಡೆದಿದೆ. ಕಾಲಿಗೆ ಗುಂಡು ಹಾರಿಸಿ ಆರೋಪಿ ಮೊಹಮ್ಮದ್ ಸಲೀಂನನ್ನು ಅರೆಸ್ಟ್ ಮಾಡಲಾಗಿದೆ. ಗೋವಿಂದಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮೊಹಮ್ಮದ್ ಅಲಿ ಇಮ್ರಾನ್‌ ಫೈರಿಂಗ್ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

ಜೂ.22ಕ್ಕೆ ರಶೀದ್ ಮಲಬಾರಿ ಗ್ಯಾಂಗ್‌ನ ಕರೀಂ ಅಲಿ ಹತ್ಯೆ ಪ್ರಕರಣ ಸಂಬಂಧ ತನಿಖೆಯ ವೇಳೆ ಆರೋಪಿ ಬಗ್ಗೆ ಸುಳಿವು ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ಆರೋಪಿ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಕಾನ್ಸ್‌ಟೇಬಲ್ ಹಂಝ ಮೇಲೆ ಹಲ್ಲೆ ಮಾಡಿದ್ದ. ಹೀಗಾಗಿ ಶರಣಾಗುವಂತೆ ತಿಳಿಸಿದರೂ ಕೇಳದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಗೋವಿಂದಪುರ ಠಾಣೆ ಎಸ್‌ಐ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಯಾವುದೇ ಗುರುತಿನ ಚೀಟಿ, ಸ್ವಂತ ಮೊಬೈಲ್​ ನಂಬರ್ ಇಲ್ಲದವರು ಕೊರೊನಾ ಲಸಿಕೆ ಪಡೆಯಲು ಹೀಗೆ ಮಾಡಿ: ಆರೋಗ್ಯ ಸಚಿವಾಲಯ ಸ್ಪಷ್ಟನೆ