ರಿಲ್ಯಾಕ್ಸ್ ಆಗಲು ಕುಟುಂಬ ಸಮೇತ ರೆಸಾರ್ಟ್ಗೆ ಹೋಗಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ ರಾತ್ರೋರಾತ್ರಿ ಬೆಂಗಳೂರಿಗೆ ವಾಪಸ್

ಇಂದು ಇಡೀ ದಿನ ರೆಸಾರ್ಟ್‌ನಲ್ಲಿರಲು ಸಿಎಂ ನಿರ್ಧರಿಸಿದ್ದರು. ಹೀಗಾಗಿ 3 ವಿಲ್ಲಾ ಬುಕ್ ಮಾಡಿದ್ದರು. ಫುಲ್ ರಿಲ್ಯಾಕ್ಸ್ ಆಗಿ ಸಂಪೂರ್ಣ ವಿಶ್ರಾಂತಿ ಪಡೆಯಲೆಂದು ಕುಟುಂಬ ಸಮೇತರಾಗಿ ರೆಸಾರ್ಟ್‌ಗೆ ತೆರಳಿದ್ದರು. ನಿನ್ನೆ ರಾತ್ರಿ ಊಟ ಸೇವಿಸಿ, ವಿಶ್ರಾಂತಿ ಪಡೆದು ಇದ್ದಕಿದ್ದಂತೆ ರಾತ್ರೋರಾತ್ರಿ ಪ್ಲ್ಯಾನ್ ಬದಲಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ರಿಲ್ಯಾಕ್ಸ್ ಆಗಲು ಕುಟುಂಬ ಸಮೇತ ರೆಸಾರ್ಟ್ಗೆ ಹೋಗಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪ  ರಾತ್ರೋರಾತ್ರಿ ಬೆಂಗಳೂರಿಗೆ ವಾಪಸ್
ಸರ್ಕಾರಿ ಕಾರು (ಸಂಗ್ರಹ ಚಿತ್ರ)
Follow us
TV9 Web
| Updated By: ಆಯೇಷಾ ಬಾನು

Updated on:Jun 24, 2021 | 8:43 AM

ದೇವನಹಳ್ಳಿ: ಕೆಲ ದಿನಗಳಿಂದ ಬಿಜೆಪಿ ಪಕ್ಷದಲ್ಲಿ ಅನೇಕ ಗೊಂದಲಗಳು ಕಾಣಿಸುತ್ತಿವೆ. ನಾಯಕರಲ್ಲೆ ಅಸಮಾಧಾನ ಮನೆ ಮಾಡಿದೆ. ಸದ್ಯ ಇದೆಲ್ಲದಕ್ಕೂ ತೆರೆಬಿದಿದ್ದು ಸಿಎಂ ಬಿ.ಎಸ್. ಯಡಿಯೂರಪ್ಪ ರಿಲ್ಯಾಕ್ಸ್ ಮೂಡ್ಗೆ ಜಾರಿದ್ದಾರೆ. ರಿಲ್ಯಾಕ್ಸ್ ಆಗಲು ಕುಟುಂಬ ಸಮೇತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಬಳಿಯಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ಗೆ ಬಂದಿದ್ದರು. ಆದ್ರೆ ಯಾವ ಸಮಸ್ಯೆ ಎದುರಾಯ್ತೋ ಏನೋ ರೆಸಾರ್ಟ್‌ನಿಂದ ರಾತ್ರೋರಾತ್ರಿ ಸಿಎಂ ಬಿಎಸ್‌ವೈ ವಾಪಸ್ ಆಗಿದ್ದಾರೆ.

ಇಂದು ಇಡೀ ದಿನ ರೆಸಾರ್ಟ್‌ನಲ್ಲಿರಲು ಸಿಎಂ ನಿರ್ಧರಿಸಿದ್ದರು. ಹೀಗಾಗಿ 3 ವಿಲ್ಲಾ ಬುಕ್ ಮಾಡಿದ್ದರು. ಫುಲ್ ರಿಲ್ಯಾಕ್ಸ್ ಆಗಿ ಸಂಪೂರ್ಣ ವಿಶ್ರಾಂತಿ ಪಡೆಯಲೆಂದು ಕುಟುಂಬ ಸಮೇತರಾಗಿ ರೆಸಾರ್ಟ್‌ಗೆ ತೆರಳಿದ್ದರು. ನಿನ್ನೆ ರಾತ್ರಿ ಊಟ ಸೇವಿಸಿ, ವಿಶ್ರಾಂತಿ ಪಡೆದು ಇದ್ದಕಿದ್ದಂತೆ ರಾತ್ರೋರಾತ್ರಿ ಪ್ಲ್ಯಾನ್ ಬದಲಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸದ್ಯ ಈ ಬಗ್ಗೆ ಸಿಎಂ ಬಿಎಸ್ವೈ ಸ್ಪಷ್ಟನೆ ನೀಡಬೇಕಿದೆ.

ಮತ್ತೊಂದು ಕಡೆ ಕಾಂಗ್ರೆಸ್ ನಾಯಕರ ನಡುವೆ ಸಿಎಂ ಕುರ್ಚಿ ಫೈಟ್ ಶುರುವಾಗಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯೋಕೆ ಇನ್ನೂ 2 ವರ್ಷ ಟೈಂ ಇದೆ. ಎರಡು ವರ್ಷಕ್ಕೂ ಮೊದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಸಿಎಂ ಆಗೋದ್ಯಾರು ಅನ್ನೋ ಬೆಂಕಿ ಧಗಧಗ ಅಂತಾ ಹೊತ್ತಿ ಉರೀತಿದೆ. ಇದೇ ವಿಚಾರಕ್ಕೆ ಸಿದ್ದರಾಮಯ್ಯ ಬೆಂಬಲಿಗರು, ಡಿಕೆ ಬ್ರದರ್ಸ್ ನಡುವೆ ಜಂಗೀ ಕುಸ್ತಿ ಶುರುವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೇರಿದ್ರೆ ಸಿದ್ದರಾಮಯ್ಯ ಮುಂದಿನ ಸಿಎಂ ಅಂತಾ ಜಮೀರ್ ಬಾಂಬ್ ಸಿಡಿಸ್ತಿದ್ದಂತೆ ಎಚ್ಚೆತ್ತ ಕನಕಪುರದ ಬಂಡೆ ದೆಹಲಿಗೆ ಹೋಗಿ ಹೈಕಮಾಂಡ್ಗೆ ದೂರು ಸಲ್ಲಿಸಿದ್ರೂ ಕೂಡ ಸಿದ್ದರಾಮಯ್ಯ ಮುಂದಿನ ಸಿಎಂ ಅನ್ನೋ ಕೂಗು ಮಾತ್ರ ಕಡಿಮೆಯಾಗಿಲ್ಲ. ಇದು ಡಿಕೆ ಬ್ರದರ್ಸ್ ಪಿತ್ತ ನೆತ್ತಿಗೇರುವಂತೆ ಮಾಡಿದೆ.

ಇದನ್ನೂ ಓದಿ: ಮದುವೆ ಆಗಿ 6 ತಿಂಗಳಿಗೆ ವೈರಲ್​ ಆಯ್ತು ಚಹಾಲ್​-ಧನಶ್ರೀ ವಿಡಿಯೋ; ಕ್ರಿಕೆಟಿಗನ ಪತ್ನಿ ಹೇಳಿದ್ದೇನು?

Published On - 8:41 am, Thu, 24 June 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?