ಆರಗ ಜ್ಞಾನೇಂದ್ರ, ಸಿಟಿ ರವಿ ಡ್ರಗ್ಸ್ ತಗೊಂಡಂತೆ ಮಾತಾಡ್ತಾರೆ; ಅವರ ಕೂದಲನ್ನು ಪರೀಕ್ಷೆಗೆ ಕಳಿಸಬೇಕು: ಶಿವರಾಜ್ ತಂಗಡಗಿ
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಹುಟ್ಟಿಸಿದ ಕೂಸಿಗೆ ನೀವು ಏಕೆ ಹೆಸರು ಇಡುತ್ತೀರಿ. ನೀವು ಕೂಸು ಹುಟ್ಟಿಸಿ ನಿಮ್ಮ ಹೆಸರಿಡಿ ಎಂದು ತಂಗಡಗಿ ಸಿ.ಟಿ. ರವಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕೊಪ್ಪಳ: ಡ್ರಗ್ಸ್ ವಿಚಾರದಲ್ಲಿ ಬಿಜೆಪಿಯವರನ್ನ ಚೆಕ್ ಮಾಡಬೇಕು. ಬಿಜೆಪಿಯ ಆರಗ ಜ್ಞಾನೇಂದ್ರ, ಸಿ.ಟಿ. ರವಿ ಡ್ರಗ್ಸ್ ತಗೊಂಡಂತೆ ಮಾತಾಡ್ತಾರೆ. ಹೀಗಾಗಿ ಬಿಜೆಪಿಯವರ ಕೂದಲನ್ನು ಪರೀಕ್ಷೆಗೆ ಕಳುಹಿಸಬೇಕು ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಡ್ರಗ್ಸ್ ತೆಗೆದುಕೊಳ್ತಾರೆಂಬ ಅನುಮಾನ ಇದೆ. ನಟಿ, ಆ್ಯಂಕರ್ ಅನುಶ್ರೀಯನ್ನು ಚೆಕ್ ಮಾಡುವುದಕ್ಕೂ ಮುನ್ನ, ಬಿಜೆಪಿಯವರಿಗೆ ಚೆಕ್ ಮಾಡಬೇಕೆಂದು ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಹುಟ್ಟಿಸಿದ ಕೂಸಿಗೆ ನೀವು ಏಕೆ ಹೆಸರು ಇಡುತ್ತೀರಿ. ನೀವು ಕೂಸು ಹುಟ್ಟಿಸಿ ನಿಮ್ಮ ಹೆಸರಿಡಿ ಎಂದು ತಂಗಡಗಿ ಸಿ.ಟಿ. ರವಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಆ್ಯಂಕರ್ ಅನುಶ್ರೀ ವಿರುದ್ಧ ಸಾಕ್ಷಾಧಾರ ಕೊರತೆಯಿಂದ ಪ್ರಕರಣ ದಾಖಲಿಸಿಲ್ಲ ನಟಿ, ನಿರೂಪಕಿ ಅನುಶ್ರೀ ಡ್ರಗ್ಸ್ ಕೇಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದು, ಟಿವಿ9ನಲ್ಲಿ ಪ್ರಸಾರವಾಗಿರುವ ಚಾರ್ಜ್ಶೀಟ್ನ ಮಾಹಿತಿ ಸತ್ಯ ಎಂದಿದ್ದಾರೆ. ಈಗಾಗಲೇ ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಕೆಯಾಗಿದೆ. ತಾನು ಆಯುಕ್ತನಾಗಿ ಬರುವಷ್ಟರಲ್ಲೇ ತನಿಖೆ ಪೂರ್ಣವಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಅವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.
ನ್ಯಾಯಾಲಯಕ್ಕೆ ಫೈನಲ್ ಚಾರ್ಜ್‌ಶೀಟ್ ಈಗಾಗಲೇ ಸಲ್ಲಿಸಲಾಗಿದೆ. ನಿರೂಪಕಿ ಅನುಶ್ರೀ ವಿರುದ್ಧ ಸಾಕ್ಷ್ಯಾಧಾರದ ಕೊರತೆಯಿಂದಾಗಿ ಅಂದು ಪ್ರಕರಣ ದಾಖಲಿಸಲಾಗಿಲ್ಲ. ಪ್ರಕರಣದ ಸಂಬಂಧ ಮತ್ತೆ ಅನುಶ್ರೀ ವಿಚಾರಣೆಯ ಸಾಧ್ಯತೆ ಕಡಿಮೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಕರಣ 2007ರಲ್ಲಿ ನಡೆದಿದ್ದರಿಂದ ಮತ್ತು ಅನುಶ್ರೀ ವಿರುದ್ಧ ಸಾಕ್ಷಾಧಾರಗಳು ಇಲ್ಲದ್ದರಿಂದ ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿಲ್ಲ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಅನುಶ್ರೀ ಡ್ರಗ್ಸ್ ಕೇಸ್; ಚಾರ್ಜ್ಶೀಟಿನಲ್ಲಿರುವುದು ತನ್ನ ಹೇಳಿಕೆ ಅಲ್ಲ ಎಂದ ಆರೋಪಿ ಕಿಶೋರ್ ಅಮನ್ ಶೆಟ್ಟಿ
ಇದನ್ನೂ ಓದಿ: ಅನುಶ್ರೀ ಡ್ರಗ್ಸ್ ಕೇಸ್; ಅವರ ವಿರುದ್ಧ ಆರೋಪವಿದ್ದರೂ ಹೇರ್ ಸ್ಯಾಂಪಲ್ ಪರೀಕ್ಷೆ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಇಂದ್ರಜಿತ್
Published On - 4:07 pm, Wed, 8 September 21