ಅನುಶ್ರೀ ಡ್ರಗ್ಸ್ ಕೇಸ್; ಚಾರ್ಜ್​ಶೀಟಿನಲ್ಲಿರುವುದು ತನ್ನ ಹೇಳಿಕೆ ಅಲ್ಲ ಎಂದ ಆರೋಪಿ ಕಿಶೋರ್ ಅಮನ್ ಶೆಟ್ಟಿ

ಆ್ಯಂಕರ್ ಅನುಶ್ರೀ ಡ್ರಗ್ಸ್ ಕೇಸ್​ಗೆ ಸಂಬಂಧಪಟ್ಟಂತೆ ಪ್ರಕರಣದ ಎ2 ಕಿಶೋರ್ ಅಮನ್ ಶೆಟ್ಟಿ ಟಿವಿ9ನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಚಾರ್ಜ್​ಶೀಟಿನಲ್ಲಿರುವುದು ತನ್ನ ಹೇಳಿಕೆ ಅಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅನುಶ್ರೀ ಡ್ರಗ್ಸ್ ಕೇಸ್; ಚಾರ್ಜ್​ಶೀಟಿನಲ್ಲಿರುವುದು ತನ್ನ ಹೇಳಿಕೆ ಅಲ್ಲ ಎಂದ ಆರೋಪಿ ಕಿಶೋರ್ ಅಮನ್ ಶೆಟ್ಟಿ
ಕಿಶೋರ್ ಶೆಟ್ಟಿ
TV9kannada Web Team

| Edited By: shivaprasad.hs

Sep 08, 2021 | 1:42 PM


ನಟಿ, ಸ್ಟಾರ್ ಆ್ಯಂಕರ್​ ಅನುಶ್ರೀ ಡ್ರಗ್ಸ್​ ಕೇಸ್​ ವಿಚಾರಕ್ಕೆ ಸಂಬಂಧಪಟ್ಟಂತೆ ಟಿವಿ9ಗೆ ಪ್ರಕರಣದ ಎ2 ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ‘‘ನನಗೆ ಡ್ರಗ್ಸ್​​ ಪ್ರಕರಣದ ಬಗ್ಗೆ ಏನೇನೂ ಗೊತ್ತಿಲ್ಲ. ಚಾರ್ಜ್‌ಶೀಟ್‌ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಟಿ ಅನುಶ್ರೀ ಜೊತೆ ಯಾವುದೇ ಪಾರ್ಟಿ ಮಾಡಿಲ್ಲ. ಚಾರ್ಜ್‌ಶೀಟ್‌ನಲ್ಲಿರುವುದು ನನ್ನ ಹೇಳಿಕೆ ಅಲ್ಲ’’ ಎಂದು ಆರೋಪಿ ಹೇಳಿಕೆ ನೀಡಿದ್ದಾರೆ.

ಅನುಶ್ರೀ ಬಗ್ಗೆ ತಾನು ಏನೂ ಹೇಳಿಲ್ಲ ಎಂದಿರುವ ಕಿಶೋರ್ ಶೆಟ್ಟಿ, ‘‘ಅನುಶ್ರೀ ಹೇಗೆ ಪರಿಚಯ ಎಂದು ಮಾತ್ರ ಕೇಳಿದ್ದರು. ಅದನ್ನು ಸಿಸಿಬಿ ಪೊಲೀಸರಿಗೆ ತಿಳಿಸಿದ್ದೇನೆ. ಡ್ರಿಂಕ್ಸ್ ಬಗ್ಗೆ ಮಾತ್ರ ಗೊತ್ತಿದೆ ಡ್ರಗ್ಸ್ ಬಗ್ಗೆ ನನಗೆ ಗೊತ್ತಿಲ್ಲ’’ ಎಂದು ಅವರು ಹೇಳಿಕೆ ನೀಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಅನುಶ್ರೀಯೊಂದಿಗಿನ ಒಡನಾಟ ವಿವರಿಸಿರುವ ಕಿಶೋರ್, ‘‘ನಾನು ಅವರಿಗೆ ಕೊರಿಯೋಗ್ರಾಫ್ ಮಾಡಿದ್ದೇನೆ ಅಷ್ಟೇ. ಅದರ ಹೊರತಾಗಿ ಅವರೊಂದಿಗೆ ನನ್ನ ಒಡನಾಟ ಅಷ್ಟೊಂದು ಇಲ್ಲ’’ ಎಂದು ಕಿಶೋರ್ ಶೆಟ್ಟಿ ಟಿವಿ9ಗೆ ತಿಳಿಸಿದ್ದಾರೆ.

ಅನುಶ್ರೀ ಅವರೊಂದಿಗೆ ಕೊರಿಯೋಗ್ರಫಿಯಲ್ಲದೇ ಮತ್ಯಾವ ಕಾಂಟ್ಯಾಕ್ಟ್ ಇರಲಿಲ್ಲ ಎಂದು ಕಿಶೋರ್ ತಿಳಿಸಿದ್ದಾರೆ. ತಾನು ಡ್ರಗ್ಸ್ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ಅನುಶ್ರೀಯವರ ಬಗ್ಗೆ ಹೇಳುವುದಾದರೆ, ಚಾರ್ಜ್​ಶೀಟಿನಲ್ಲಿರುವ ಮಾಹಿತಿ ತನಗೆ ಗೊತ್ತಿಲ್ಲ. ಅವರು(ಅನುಶ್ರೀ) ಒಳ್ಳೆಯ ರೀತಿಯಲ್ಲಿ ಮೇಲೆ ಹೋಗುತ್ತಿದ್ದಾರೆ ಎಂದು ಇದೇ ವೇಳೆ ಕಿಶೋರ್ ತಿಳಿಸಿದ್ದಾರೆ.

ಚಾರ್ಜ್​ಶೀಟಿನಲ್ಲಿ ಕಿಶೋರ್ ಹೇಳಿಕೆ ಏನಿತ್ತು?

ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಾರ್ಜ್​ಶೀಟ್​ನಲ್ಲಿ ಎ2 ಕಿಶೋರ್ ಶೆಟ್ಟಿಯನ್ನು ಉಲ್ಲೇಖಿಸಲಾಗಿದೆ. ‘ರಿಯಾಲಿಟಿ ಶೋನ ಕೊರಿಯೋಗ್ರಾಫರ್​ ಆಗಿದ್ದ ತರುಣ್​ ಮುಖಾಂತರ ತನಗೆ ಅನುಶ್ರೀ ಪರಿಚಯವಾಗಿತ್ತು. ತರುಣ್​ ರೂಮ್​ನಲ್ಲಿ ತಡರಾತ್ರಿವರೆಗೂ ಅನುಶ್ರೀಗೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿಸುತ್ತಿದ್ದೆವು. ಡ್ಯಾನ್ಸ್ ಪ್ರಾಕ್ಟೀಸ್​ಗೆ ಬರುವಾಗ ಅನುಶ್ರೀ ಎಕ್ಸ್‌ಟಸಿ ಡ್ರಗ್ಸ್​ ಖರೀದಿಸಿ  ತರುತ್ತಿದ್ದರು. ನಮಗೆ ಎಕ್ಸ್‌ಟಸಿ ಡ್ರಗ್ಸ್ ನೀಡಿ ಅನುಶ್ರೀ ಕೂಡ ಸೇವಿಸುತ್ತಿದ್ದರು. ಅನುಶ್ರೀಗೆ ಡ್ರಗ್ಸ್ ಪೆಡ್ಲರ್​ಗಳ ಪರಿಚಯವಿದೆ. ಡ್ರಗ್ಸ್ ಎಲ್ಲಿ ಸಿಗುತ್ತೆ, ಯಾರು ಪೂರೈಸುತ್ತಾರೆಂದು ಆಕೆಗೆ ಗೊತ್ತಿತ್ತು. ಡ್ರಗ್ಸ್​ ಅಷ್ಟು ಸುಲಭವಾಗಿ ಅನುಶ್ರೀಗೆ ಹೇಗೆ ಸಿಗುತ್ತಿತ್ತೋ ಗೊತ್ತಿಲ್ಲ.’ ಎಂದು ಚಾರ್ಜ್​ಶೀಟ್​​ನಲ್ಲಿ ಎ2 ಕಿಶೋರ್​ ಶೆಟ್ಟಿ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:

Drug Case: ಸಿಸಿಬಿ ಚಾರ್ಜ್​ಶೀಟ್​ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ; ಅವರು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಆರೋಪಿ ಹೇಳಿಕೆ

ನವೆಂಬರ್ 1ಕ್ಕೆ ಶುಗರ್ ಡ್ಯಾಡಿ ಪುಸ್ತಕ ರಿಲೀಸ್; ಶೀಘ್ರವೇ 28 ಸೆಕೆಂಡ್​ಗಳ ಆಡಿಯೊ ಬಾಂಬ್: ಪ್ರಶಾಂತ್ ಸಂಬರಗಿ

(Drug case A2 Kishore Shetty says he did not know anything about charge sheet)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada