ಆ್ಯಂಕರ್ ಅನುಶ್ರೀ ಈಗ ಎಲ್ಲಿದ್ದಾರೆ?; ಅವರ ಮೇಲಿರೋ ಆರೋಪಗಳೇನು?; ಸಂಪೂರ್ಣ ಮಾಹಿತಿ ಇಲ್ಲಿದೆ

ಖ್ಯಾತ ನಿರೂಪಕಿ ಅನುಶ್ರೀ ವಿರುದ್ಧ ಡ್ರಗ್ಸ್ ಕೇಸ್ ಪ್ರಕರಣದ ಎ2 ಕಿಶೋರ್ ಶೆಟ್ಟಿ ಸಿಸಿಬಿ ಪೊಲೀಸರ ಎದುರು ಮಾಡಿರುವ ಆರೋಪಗಳು ಚಾರ್ಜ್​ಶೀಟಿನಲ್ಲಿ ದಾಖಲಾಗಿವೆ. ಆದರೆ ಈ ಕುರಿತು ಅನುಶ್ರೀ ಇನ್ನೂ ಪ್ರತಿಕ್ರಿಯಿಸಿಲ್ಲ. ಪ್ರಸ್ತುತ ಅವರು ಎಲ್ಲಿದ್ದಾರೆ, ಅವರ ಮೇಲಿರುವ ಆರೋಪಗಳೇನು? ಎಂಬ ಮಾಹಿತಿ ಇಲ್ಲಿದೆ.

ಆ್ಯಂಕರ್ ಅನುಶ್ರೀ ಈಗ ಎಲ್ಲಿದ್ದಾರೆ?; ಅವರ ಮೇಲಿರೋ ಆರೋಪಗಳೇನು?; ಸಂಪೂರ್ಣ ಮಾಹಿತಿ ಇಲ್ಲಿದೆ
ಅನುಶ್ರೀ (ಸಂಗ್ರಹ ಚಿತ್ರ)
TV9kannada Web Team

| Edited By: Apurva Kumar Balegere

Sep 15, 2021 | 12:46 PM


ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್​ಶೀಟ್​ನಲ್ಲಿ ಆ್ಯಂಕರ್ ಅನುಶ್ರೀ ಕೂಡ ಡ್ರಗ್ಸ್ ಸೇವನೆ ಹಾಗೂ ಸಾಗಣೆಯಲ್ಲಿ ಭಾಗಿಯಾಗಿದ್ದರು ಎಂದು ಪ್ರಕರಣದ ಎ2 ಕಿಶೋರ್ ಶೆಟ್ಟಿ ಚಾರ್ಜ್​ಶೀಟಿನಲ್ಲಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಅನುಶ್ರೀಗೆ ಸಂಕಷ್ಟ ಎದುರಾಗಿದೆ. 2007-08ರಲ್ಲಿ ಅನುಶ್ರೀ ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧಿಯಾಗಿದ್ದಾಗ ಕೊರಿಯೋಗ್ರಾಫರ್​ಗಳಾದ ತರುಣ್ ಹಾಗೂ ಕಿಶೋರ್ ಅವರೊಂದಿಗೆ ಡ್ರಗ್ಸ್ ಸೇವಿಸಿದ್ದರು ಎಂದು ಆರೋಪಿಸಲಾಗಿದೆ. ಜೊತೆಗೆ ಇದಕ್ಕೆ ಡ್ರಗ್ಸ್ ಅನ್ನು ಪೂರೈಕೆ ಮಾಡಿದ್ದೂ ಕೂಡ ಅನುಶ್ರೀ ಎಂದು ಕಿಶೋರ್ ಗಂಭೀರ ಆರೋಪ ಮಾಡಿದ್ದಾರೆ.

ಸದ್ಯ ಅನುಶ್ರೀ ಬೆಂಗಳೂರಿನ ತಮ್ಮ ಮನೆಯಲ್ಲಿಲ್ಲ. ಅವರು ನಿನ್ನೆ (ಸೆಪ್ಟೆಂಬರ್ 07) ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಗೌರಿ- ಗಣೇಶ ಹಬ್ಬದ ಪ್ರಯುಕ್ತ ಶೂಟಿಂಗ್ ಇರದಿರುವ ಕಾರಣ ಅವರು, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ನಿನ್ನೆ 8.20ರ ವಿಮಾನದಲ್ಲಿ ಅವರು ಮುಂಬೈಗೆ ತೆರಳಿದ್ದಾರೆ ಎಂದು ಹೇಳಲಾಗಿದೆ.

ಅನುಶ್ರೀ ಮೇಲಿರುವ ಆರೋಪಗಳೇನು?
ಪ್ರಕರಣದ ಎ2 ಕಿಶೋರ್ ಶೆಟ್ಟಿ ಅನುಶ್ರೀಯವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ಅನುಶ್ರೀ ಡ್ರಗ್ಸ್ ಸೇವನೆ ಮಾಡಿದ್ದಾರೆ, ಅದನ್ನು ತಂದುಕೊಟ್ಟಿದ್ಧಾರೆ(ಸಾಗಾಟ), ಅವರಿಗೆ ಪೆಡ್ಲರ್​ಗಳ ಪರಿಚಯವಿತ್ತು, ಡ್ರಗ್ಸ್ ಎಲ್ಲಿ, ಹೇಗೆ ಸಿಗುತ್ತದೆ ಎಂಬ ಮಾಹಿತಿ ಅವರಿಗಿತ್ತು, ಅನುಶ್ರೀ ಎಕ್ಸ್ಟಸಿ ಡ್ರಗ್ ಸೇವಿಸುತ್ತಿದ್ದರು ಎಂಬ ಆರೋಪಗಳನ್ನು ಕಿಶೋರ್ ಅನುಶ್ರೀ ವಿರುದ್ಧ ಮಾಡಿದ್ದಾರೆ. ಈ ಕುರಿತ ಸಂಪೂರ್ಣ ವಿಡಿಯೊ ವರದಿ ಇಲ್ಲಿದೆ.

ಇದೀಗ ಆರೋಪಿ ಕಿಶೋರ್ ಶೆಟ್ಟಿ ಟಿವಿ9ನೊಂದಿಗೆ ಮಾತನಾಡಿದ್ದು, ಚಾರ್ಜ್​ಶೀಟಿನಲ್ಲಿರುವುದು ತನ್ನ ಹೇಳಿಕೆಯಲ್ಲ. ತಾನು ಅಂತಹ ಹೇಳಿಕೆಗಳನ್ನು ನೀಡಿಲ್ಲ ಎಂದಿರುವುದು ಪ್ರಕರಣಕ್ಕೆ ಮತ್ತೊಂದು ತಿರುವು ಲಭಿಸಿದಂತಾಗಿದೆ.

ಇದನ್ನೂ ಓದಿ:

ಅನುಶ್ರೀ ಡ್ರಗ್ಸ್ ಕೇಸ್; ಚಾರ್ಜ್​ಶೀಟಿನಲ್ಲಿರುವುದು ತನ್ನ ಹೇಳಿಕೆ ಅಲ್ಲ ಎಂದ ಆರೋಪಿ ಕಿಶೋರ್ ಅಮನ್ ಶೆಟ್ಟಿ

ನವೆಂಬರ್ 1ಕ್ಕೆ ಶುಗರ್ ಡ್ಯಾಡಿ ಪುಸ್ತಕ ರಿಲೀಸ್; ಶೀಘ್ರವೇ 28 ಸೆಕೆಂಡ್​ಗಳ ಆಡಿಯೊ ಬಾಂಬ್: ಪ್ರಶಾಂತ್ ಸಂಬರಗಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada