ನಟಿ ರಮ್ಯಾ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟ ನಂತರ ಸಿನಿಮಾ ರಂಗದಿಂದ ದೂರವೇ ಉಳಿದರು. ರಾಜಕೀಯ ತೊರೆದ ನಂತರ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆ ಎನ್ನಲಾಗಿತ್ತು. ಆದರೆ, ‘ಸಿನಿಮಾ ಹಡಗು ಮುಳುಗಿದೆ, ಮತ್ತೆ ಚಿತ್ರರಂಗಕ್ಕೆ ಬರೋದಿಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದರು. ಆದರೆ, ಈಗ ಅವರು ಮತ್ತೆ ಚಿತ್ರರಂಗದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹಾಗಂತ ಅವರ ಯಾವುದೇ ಸಿನಿಮಾ ಘೋಷಣೆ ಆಗಿಲ್ಲ. ಬದಲಿಗೆ, ನೀನಾಸಂ ಸತೀಶ್ ನಟನೆಯ ಹೊಸ ಸಿನಿಮಾದ ಪೋಸ್ಟರ್ಅನ್ನು ಅವರು ರಿಲೀಸ್ ಮಾಡುತ್ತಿದ್ದಾರೆ.
‘ಕನ್ನಡದ ನಮ್ಮ ಹೆಮ್ಮೆಯ ನಟ ಸತೀಶ್ ನೀನಾಸಂ ಅವರ ‘ಪಗೈವನುಕು ಅರುಳ್ಳಾಯ್’ ಚಿತ್ರದ ಪಾತ್ರದ ಪೋಸ್ಟರ್ ಇಂದು ಸಂಜೆ 5ಕ್ಕೆ ತುಂಬಾ ಉತ್ಸಾಹದಿಂದ ಲಾಂಚ್ ಮಾಡುತ್ತಿದ್ದೇನೆ. ಮೊದಲ ಬಾರಿಗೆ ಸತೀಶ್ ನೀನಾಸಂ ಅವರು ತಮಿಳಿನಲ್ಲಿ ನಟಿಸುತ್ತಿದ್ದಾರೆ. ನಮ್ಮ ನಟರು ಬೇರೆ ಭಾಷೆಯಲ್ಲಿ ಬೆಳೆಯುತ್ತಿರುವುದು ನಮ್ಮ ಹೆಮ್ಮೆ. ಮೊದಲ ನೋಟಕ್ಕೆ ಸಂಜೆವರೆಗೆ ಕಾಯುತ್ತಿರಿ’ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ರಮ್ಯಾ ಇತ್ತೀಚೆಗೆ ಸಿನಿಮಾ ಕೆಲಸಗಳತ್ತ ಮುಖ ಮಾಡಿಲ್ಲ. ಅವರು ಈ ರೀತಿ ಪೋಸ್ಟರ್ ರಿಲೀಸ್ ಮಾಡಿದ ಉದಾಹರಣೆ ಇಲ್ಲ. ಆದರೆ, ಈಗ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿತಮ್ಮನ್ನು ತೊಡಗಿಸಿಕೊಂಡಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ, ಅವರು ಮತ್ತೇನಾದರೂ ಚಿತ್ರರಂಗಕ್ಕೆ ಮರಳುತ್ತಾರಾ ಎನ್ನುವ ಕೌತುಕ ಕೂಡ ಮೂಡಿದೆ.
ನೀನಾಸಂ ಸತೀಶ್ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೊವಿಡ್ ಕಾರಣದಿಂದ ಕೆಲಸ ಸಿನಿಮಾಗಳ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಇನ್ನೂ ಕೆಲವು ಶೂಟಿಂಗ್ ಹಂತದಲ್ಲಿವೆ.
ಇದನ್ನೂ ಓದಿ: ‘ರಮ್ಯಾ-ರಕ್ಷಿತಾ ನಡುವೆ ಆ ವಿಚಾರಕ್ಕೆ ಕಿರಿಕ್ ಆಗಿತ್ತು’; ಶೂಟಿಂಗ್ ಸಮಯದ ವಿವರ ತೆರೆದಿಟ್ಟ ಕವಿತಾ ಲಂಕೇಶ್
‘ಮಾನಸಿಕವಾಗಿ ಆ ಬಾಲಕಿಗೆ ಎಷ್ಟು ಘಾಸಿ ಆಗಿರಬಹುದು’; ಚಿಕ್ಕಮಗಳೂರು ಘಟನೆ ಬಗ್ಗೆ ಬರೆದುಕೊಂಡ ರಮ್ಯಾ