ನವೆಂಬರ್ 1ಕ್ಕೆ ಶುಗರ್ ಡ್ಯಾಡಿ ಪುಸ್ತಕ ರಿಲೀಸ್; ಶೀಘ್ರವೇ 28 ಸೆಕೆಂಡ್​ಗಳ ಆಡಿಯೊ ಬಾಂಬ್: ಪ್ರಶಾಂತ್ ಸಂಬರಗಿ

ಆ್ಯಂಕರ್ ಅನುಶ್ರೀ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಶಾಂತ್ ಸಂಬರಗಿ ಆಡಿಯೊ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ನಡುವೆ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ನವೆಂಬರ್ 1ಕ್ಕೆ ಶುಗರ್ ಡ್ಯಾಡಿ ಪುಸ್ತಕ ರಿಲೀಸ್; ಶೀಘ್ರವೇ 28 ಸೆಕೆಂಡ್​ಗಳ ಆಡಿಯೊ ಬಾಂಬ್: ಪ್ರಶಾಂತ್ ಸಂಬರಗಿ
ಪ್ರಶಾಂತ್​ ಸಂಬರಗಿ
Follow us
TV9 Web
| Updated By: shivaprasad.hs

Updated on:Sep 08, 2021 | 1:05 PM

ನಟಿ, ಸ್ಟಾರ್ ಆ್ಯಂಕರ್​ ಅನುಶ್ರೀ ಡ್ರಗ್ಸ್​ ಕೇಸ್​ ವಿಚಾರಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದಾರೆ. ಶೀಘ್ರವೇ 28 ಸೆಕೆಂಡ್​ಗಳ ಆಡಿಯೋ ಬಾಂಬ್​ ಬಿಡುಗಡೆ ಮಾಡಿ, ರಾಜಕೀಯ ವ್ಯಕ್ತಿಯ ಪ್ರಭಾವ ಬಗ್ಗೆ ಮಾಹಿತಿ ನೀಡುವೆ ಎಂದು ಅವರು ಹೇಳಿದ್ದಾರೆ. ‘‘ಮುಂದಿನ ದಿನಗಳಲ್ಲಿ ಸಾಕ್ಷಿ ಸಮೇತ ದಾಖಲೆ ರಿಲೀಸ್​ ಮಾಡಲಾಗುವುದು. ಅನುಶ್ರೀಗೆ ಬೆಂಗಳೂರಿನ ಮನೆ, ಮಂಗಳೂರಿನ ಮನೆ ಹೇಗೆ ಬಂತು? 12 ಕೋಟಿಯ ಮನೆ ಹೇಗೆ ಬಂತು ಎಂದು ಅವರು ತಿಳಿಸಬೇಕು’’ ಎಂದು ಸಂಬರಗಿ ಆಗ್ರಹಿಸಿದ್ದಾರೆ.

ನವೆಂಬರ್ 1ರಂದು ಶುಗರ್ ಡ್ಯಾಡಿ ಪುಸ್ತಕ ಬಿಡುಗಡೆ ಆಗಲಿದೆ ಹಾಗೂ ನಾಗೇಂದ್ರ ಪ್ರಸಾದ್ ಬರೆದಿರುವ ನಶೆ ನಶೆ ಹಾಡನ್ನು ಬಿಡುಗಡೆ ಮಾಡಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ. ಪುಸ್ತಕದಲ್ಲಿ ಶುಗರ್​ಡ್ಯಾಡಿ ಯಾರು ಎಂಬುದನ್ನೂ ಬಹಿರಂಗಗೊಳಿಸುತ್ತೇನೆ ಎಂದು ಅವರು ತಿಳಿಸಿದ್ಧಾರೆ. ಕರ್ನಾಟಕ ಉಡ್ತಾ ಪಂಜಾಬ್ ಆಗೊದನ್ನು ತಡೆಯಬೇಕಾಗಿದೆ. ಈ ಡ್ರಗ್ಸ್​ ಪ್ರಕರಣವನ್ನ ರೀ-ಓಪನ್ ಮಾಡಬೇಕು. ಕೊರೊನಾ ಬಂದಿರಲಿಲ್ಲ ಅಂದರೆ ಉಡ್ತಾ ಕರ್ನಾಟಕ ಆಗ್ತಿತ್ತು. ಕೊರೊನಾದಿಂದ ಡ್ರಗ್ಸ್​ ಪ್ರಕರಣಗಳು ಕಡಿಮೆಯಾಗಿವೆ ಎಂದು ಇದೇ ವೇಳೆ ಸಂಬರಗಿ ಹೇಳಿದ್ದಾರೆ.

ಚಾರ್ಜ್​ಶೀಟಿನ ಕುರಿತು ಮಾತನಾಡಿದ ಅವರು ‘‘ಒಬ್ಬರನ್ನ ತಪ್ಪಿಸಲು ಹೋಗಿ ಮತ್ತೊಬ್ಬ ಆರೋಪಿಯನ್ನ ಬಿಟ್ಟಿದ್ದಾರೆ. ಚಾರ್ಜ್ ಶೀಟ್​ನಲ್ಲಿ ಆರೋಪಿ ತರುಣ್ ಹೆಸರು ಯಾಕೆ ಇಲ್ಲ. ಅನುಶ್ರೀ ನಾಲ್ಕು ಘಂಟೆ ಪೊಲೀಸ್ ಠಾಣೆಯಲ್ಲಿ ಇದ್ದರು. ಅವರ ಹೇಳಿಕೆ ಒಂದು ಪೇಜ್ ಆದರೂ ಇರಬೇಕಲ್ಲ. ಅನುಶ್ರೀ ಅವರ ಹೇಳಿಕೆ ಚಾರ್ಜ್ ಶೀಟ್​ನಲ್ಲಿ ಇಲ್ಲ’’ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ.

ಇದನ್ನೂ ಓದಿ:

ಆ್ಯಂಕರ್ ಅನುಶ್ರೀ ಡ್ರಗ್ಸ್ ಕೇಸ್ ವಿಚಾರ; ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದ ಗೃಹ ಸಚಿವ

ಅನುಶ್ರೀ ಡ್ರಗ್ಸ್ ಕೇಸ್; ಅವರ ವಿರುದ್ಧ ಆರೋಪವಿದ್ದರೂ ಹೇರ್ ಸ್ಯಾಂಪಲ್ ಪರೀಕ್ಷೆ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಇಂದ್ರಜಿತ್

Drug Case: ಸಿಸಿಬಿ ಚಾರ್ಜ್​ಶೀಟ್​ನಲ್ಲಿ ಆಂಕರ್ ಅನುಶ್ರೀ ಹೆಸರು ಉಲ್ಲೇಖ; ಅವರು ಡ್ರಗ್ಸ್ ಸೇವಿಸುತ್ತಿದ್ದರು ಎಂದು ಆರೋಪಿ ಹೇಳಿಕೆ

(Prashanth Sambaragi press conference on Anchor Anushree Drug case)

Published On - 1:04 pm, Wed, 8 September 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್